ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಚ್ಚಿದ ಚೀನಾ, ಮತ್ತೆ ಹರಡುತ್ತಿದೆಯಾ ಸೋಂಕು?

By ಅನಿಕೇತ್
|
Google Oneindia Kannada News

ಬೀಜಿಂಗ್, ಜುಲೈ 17: ಕೊರೊನಾ ತವರೂರು ಚೀನಾದಲ್ಲಿ ಮತ್ತೆ ಸೋಂಕು ಹರಡುವ ಆತಂಕ ಮನೆ ಮಾಡಿದೆ. ಚೀನಾದ ಪಶ್ಚಿಮ ಪ್ರಾಂತ್ಯ ಶಿನ್ ಜಿಯಾಂಗ್ ರಾಜಧಾನಿ ಉರುಮ್ಕಿ ನಗರದಲ್ಲಿ ದಿಢೀರ್ ಅಂತಾ 10 ಕೊರೊನಾ ಕೇಸ್‌ಗಳು ಪತ್ತೆಯಾಗಿವೆ. 10 ಕೇಸ್‌ಗಳು ದೃಢಪಟ್ಟಿರುವ ಕುರಿತು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

Recommended Video

Twitter Hackers ಮಾಡಿದ್ದೇನು , ಕದ್ದಿದ್ದೆಷ್ಟು ? | Oneindia Kannada

10 ಪ್ರಕರಣಗಳ ಪೈಕಿ 9 ಮಂದಿ ಹೊರ ದೇಶದಿಂದ ಚೀನಾದ ಶಿನ್ ಜಿಯಾಂಗ್‌ಗೆ ಬಂದವರು. ಇನ್ನುಳಿದ ಒಬ್ಬ ಸೋಂಕಿತೆ ಉರುಮ್ಕಿ ನಿವಾಸಿಯಾಗಿದ್ದಾರೆ. ಹೀಗೆ ಸ್ಥಳೀಯರಿಗೂ ಸೋಂಕು ಹಬ್ಬಿದ ಹಿನ್ನೆಲೆಯಲ್ಲಿ ಮತ್ತೆ ಚೀನಾದಲ್ಲಿ ಕೊರೊನಾ ಸಮೂಹಕ್ಕೆ ಹರಡುವ ಆತಂಕ ಎದುರಾಗಿದೆ.

ಚೀನಾ ವಿರುದ್ಧ ಭಾರತದ ಬೆನ್ನಿಗೆ ನಿಂತಿದ್ದೇಕೆ ಅಮೆರಿಕಾ?ಚೀನಾ ವಿರುದ್ಧ ಭಾರತದ ಬೆನ್ನಿಗೆ ನಿಂತಿದ್ದೇಕೆ ಅಮೆರಿಕಾ?

ಈ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತವಾದ ಚೀನಾ ಸರ್ಕಾರ, ಉರುಮ್ಕಿಯಲ್ಲಿ ಸಾರಿಗೆ ವ್ಯವಸ್ಥೆಯನ್ನ ಸಂಪೂರ್ಣ ಬಂದ್ ಮಾಡಿದೆ. ಹಾಗೇ ಉರುಮ್ಕಿಗೆ ಬರುವ ಹಾಗೂ ಉರುಮ್ಕಿ ನಗರದಿಂದ ಹೊರ ಹೋಗುವ ಸುಮಾರು 600ಕ್ಕೂ ಹೆಚ್ಚು ವಿಮಾನಗಳ ಹಾರಾಟ ತಡೆಹಿಡಿಯಲಾಗಿದೆ. ಹಾಗೇ ಶಿನ್ ಜಿಯಾಂಗ್ ರಾಜಧಾನಿಯಲ್ಲಿ ಭಾಗಶಃ ಲಾಕ್‌ಡೌನ್ ಹೇರಲಾಗಿದ್ದು, ಮೆಟ್ರೋ ರೈಲು ವ್ಯವಸ್ಥೆಗೂ ಬ್ರೇಕ್ ಬಿದ್ದಿದೆ.

Flights cancelled after corona virus reported in Chinas Xinjiang


5 ತಿಂಗಳಲ್ಲಿ ಇದೇ ಮೊದಲ ಪ್ರಕರಣ..!

ಚೀನಾದಲ್ಲಿ ಕಳೆದ ಡಿಸೆಂಬರ್‌ನಲ್ಲಿ ಕೊರೊನಾ ವೈರಸ್ ಪತ್ತೆಯಾಗಿತ್ತು. ನಂತರ ಇಡೀ ವಿಶ್ವಕ್ಕೆ ಈ ಡೆಡ್ಲಿ ವೈರಸ್ ಹಬ್ಬಿದೆ. ಆದರೂ ಕೊರೊನಾ ಸೋಂಕು ಚೀನಾದಲ್ಲಿ ನಿಯಂತ್ರಣಕ್ಕೆ ಬಂದಿತ್ತು. ಈ ಹೊತ್ತಲ್ಲೇ ಮತ್ತೆ ವೈರಸ್ ಹರಡುತ್ತಿರೋದು ಆತಂಕ ಮೂಡಿಸಿದೆ. ಚೀನಾದ ಹುವಾನ್‌ನಲ್ಲಿ ಸೋಂಕು ಹರಡಿದ್ದರೂ ಇತರ ಪ್ರದೇಶಗಳಿಗೆ ಹಬ್ಬಿರಲಿಲ್ಲ.

ಕೊವಿಡ್19 ನಡುವೆ ಆರ್ಥಿಕವಾಗಿ ಮತ್ತೆ ಬಲಿಷ್ಠವಾಗುತ್ತಿದೆ ಚೀನಾಕೊವಿಡ್19 ನಡುವೆ ಆರ್ಥಿಕವಾಗಿ ಮತ್ತೆ ಬಲಿಷ್ಠವಾಗುತ್ತಿದೆ ಚೀನಾ

ಬೀಜಿಂಗ್‌ನಲ್ಲಿ ಕೆಲ ಕೇಸ್‌ಗಳೂ ವರದಿಯಾಗಿದ್ದನ್ನು ಬಿಟ್ಟರೆ ಶಿನ್ ಜಿಯಾಂಗ್ ಪ್ರಾಂತ್ಯ ಸೋಂಕಿನಿಂದ ಸಂಪೂರ್ಣ ಮುಕ್ತವಾಗಿತ್ತು. ಆದರೆ ಕಳೆದ 5 ತಿಂಗಳಲ್ಲೇ ಮೊದಲ ಬಾರಿಗೆ ಶಿನ್ ಜಿಯಾಂಗ್ ಪ್ರಾಂತ್ಯದಲ್ಲಿ ಕೊರೊನಾ ಪತ್ತೆಯಾಗಿರುವುದು ಚೀನಾ ಸರ್ಕಾರದ ಬೆವರಿಳಿಸಿದೆ.

ಸಂಪದ್ಭರಿತ ಟ್ರಿಲಿಯನ್ ಡಾಲರ್ ಜಾಗಕ್ಕಾಗಿ ವರ್ಲ್ಡ್ ವಾರ್..?ಸಂಪದ್ಭರಿತ ಟ್ರಿಲಿಯನ್ ಡಾಲರ್ ಜಾಗಕ್ಕಾಗಿ ವರ್ಲ್ಡ್ ವಾರ್..?

ಆರ್ಥಿಕ ಸ್ಥಿತಿ ಸುಧಾರಿಸುವ ಹೊತ್ತಲ್ಲೇ ಆಘಾತ

ಇನ್ನು ಕೊರೊನಾ ವೈರಸ್ ಹಬ್ಬಿದ ನಂತರ ಚೀನಾ ಆರ್ಥಿಕ ಸ್ಥಿತಿ ಜರ್ಜರಿತವಾಗಿತ್ತು. ಆದರೆ ಇದಾದ ಬಳಿಕ ಕೊರೊನಾ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದ ಚೀನಾ, ಮತ್ತೆ ಅಭಿವೃದ್ಧಿಯತ್ತ ಸಾಗುತ್ತಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಹಳ್ಳ ಹಿಡಿದಿದ್ದ ಚೀನಾ ಜಿಡಿಪಿ, 2ನೇ ತ್ರೈಮಾಸಿಕದಲ್ಲಿ ಶೇಕಡ 3.2ರಷ್ಟು ಅಭಿವೃದ್ಧಿ ಸಾಧಿಸಿತ್ತು. ಆದರೆ ಮತ್ತೆ ಸೋಂಕು ಉಲ್ಬಣಿಸುತ್ತಿರುವುದು ಡ್ರ್ಯಾಗನ್ ನಾಡಿಗೆ ಮತ್ತೊಂದು ಕಂಟಕದ ಮುನ್ಸೂಚನೆ ನೀಡಿದೆ.

English summary
Hundreds of flights to and from Urumqi cancelled after the region reported the first confirmed case of coronavirus in about five months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X