ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್ ನಂತರ ದಕ್ಷಿಣ ಆಫ್ರಿಕಾ ಸರದಿ; ಐದು ದೇಶಗಳ ವಿಮಾನ ರದ್ದು

|
Google Oneindia Kannada News

ದಕ್ಷಿಣ ಆಫ್ರಿಕಾ, ಡಿಸೆಂಬರ್ 22: ಬ್ರಿಟನ್ ನಲ್ಲಿ ಹೊಸ ರೂಪಾಂತರದ ಕೊರೊನಾ ವೈರಸ್ ಪತ್ತೆಯಾಗಿರುವ ಬೆನ್ನಲ್ಲೇ ದಕ್ಷಿಣ ಆಫ್ರಿಕಾದಲ್ಲೂ ಸೋಂಕು ಪತ್ತೆಯಾಗಿದೆ.
ಈಸ್ಟರ್ನ್ ಕೇಪ್ ನಲ್ಲಿ ಸೋಂಕು ಪತ್ತೆಯಾಗಿದ್ದು, ಈ ಬೆಳವಣಿಗೆಯಿಂದ ಆತಂಕಗೊಂಡಿರುವ ಹಲವು ದೇಶಗಳು ದಕ್ಷಿಣ ಆಫ್ರಿಕಾದಿಂದ ವಿಮಾನಯಾನವನ್ನು ತಕ್ಷಣವೇ ರದ್ದುಗೊಳಿಸಿವೆ.

ಕೊರೊನಾ ವೈರಸ್ ನ ಹೊಸ ರೂಪಾಂತರ 501.v2 ಪತ್ತೆಯಾಗಿರುವ ವರದಿಯಾಗುತ್ತಿದ್ದಂತೆ ಐದು ದೇಶಗಳು ದಕ್ಷಿಣ ಆಫ್ರಿಕಾದಿಂದ ವಿಮಾನಯಾನವನ್ನು ಸ್ಥಗಿತಗೊಳಿಸಿವೆ.

ಬ್ರಿಟನ್ ನಿಂದ ಬಂದ 6 ಮಂದಿಯಲ್ಲಿ ಕೊರೊನಾ ವೈರಸ್ ಪತ್ತೆಬ್ರಿಟನ್ ನಿಂದ ಬಂದ 6 ಮಂದಿಯಲ್ಲಿ ಕೊರೊನಾ ವೈರಸ್ ಪತ್ತೆ

ಜರ್ಮನಿ, ಟರ್ಕಿ, ಇಸ್ರೇಲ್, ಸ್ವಿಡ್ಜರ್ಲೆಂಡ್ ಹಾಗೂ ಸೌದಿ ಅರೇಬಿಯಾ, ಕೊರೊನಾ ವೈರಸ್ ರೂಪಾಂತರ 501.v2 ಹರಡುವಿಕೆಯನ್ನು ತಡೆಗಟ್ಟಲು ಸೋಮವಾರದಿಂದಲೇ ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ಘೋಷಿಸಿವೆ.

Five Countries Ban Flights From South Africa Ahead Of New Coronavirus Variant

ಜರ್ಮನಿ ಮೊಟ್ಟ ಮೊದಲ ಬಾರಿಗೆ ವಿಮಾನಯಾನ ರದ್ದುಗೊಳಿಸಿ ಆದೇಶ ಹೊರಡಿಸಿದ್ದು, ಜನವರಿ 1ರವರೆಗೂ ಜರ್ಮನಿ, ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ವಿಮಾನಗಳು ಹಾರಾಡುವುದಿಲ್ಲ ಎಂದು ತಿಳಿಸಿದೆ. ಇಸ್ರೇಲ್ ಕೂಡ ಭಾನುವಾರದಿಂದಲೇ ವಿಮಾನಗಳನ್ನು ರದ್ದುಗೊಳಿಸಿ ದಕ್ಷಿಣ ಆಫ್ರಿಕಾದಿಂದ ಮರಳುತ್ತಿರುವ ನಾಗರಿಕರಿಗೆ ಕ್ವಾರಂಟೈನ್ ಕಡ್ಡಾಯಗೊಳಿಸಿದೆ.

ದೇಶದ ಯುವಜನರಲ್ಲಿ ಯಾವುದೇ ಲಕ್ಷಣಗಳಿಲ್ಲದೇ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ಹೊಸ ರೂಪಾಂತರದಿಂದ ಭೀತಿ ಇನ್ನಷ್ಟು ಹೆಚ್ಚಿದೆ ಎಂದು ದಕ್ಷಿಣ ಆಫ್ರಿಕಾ ಆರೋಗ್ಯ ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ.

English summary
Five countries ban flights from South Africa ahead of new Coronavirus variant. Germany, Turkey, Israel, Switzerland and Saudi Arabia are among the countries that have announced the banning of flights,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X