ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರಿಯಾ ಸರ್ವಾಧಿಕಾರಿಯ ಅಣ್ಣನ ಕೊಲೆ ಸುತ್ತಾ ಮುಂದುವರಿದ ನಿಗೂಢತೆ

By Sachhidananda Acharya
|
Google Oneindia Kannada News

ಬೆಂಗಳೂರು, ಫೆಬ್ರವರಿ 19: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅಣ್ಣ ಕಿಮ್ ಜಾಂಗ್ ನಾಮ್ ಕೊಲೆಯ ನಿಗೂಢತೆಯನ್ನು ಇನ್ನೂ ಬೇಧಿಸಲು ಸಾಧ್ಯವಾಗಿಲ್ಲ.

ಇದರ ಮಧ್ಯೆ ಸ್ವತಃ ಅಣ್ಣನನ್ನೇ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೊಲೆ ಮಾಡಿದ್ದಾನೆ ಎಂದು ನೆರೆಯ ರಾಷ್ಟ್ರ ದಕ್ಷಿಣ ಕೊರಿಯಾ ಮತ್ತೊಮ್ಮೆ ಆಪಾದಿಸಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕೊಲೆಯಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾದ 5 ಜನರು ಉತ್ತರ ಕೊರಿಯನ್ನರೇ ಆಗಿದ್ದಾರೆ. ಆದರೆ ಕೊಲೆ ಮಾಡಿದ್ದು ಉತ್ತರ ಕೊರಿಯಾವೇ ಎನ್ನಲು ಬಲವಾದ ಸಾಕ್ಷ್ಯಗಳು ಮಾತ್ರ ಇನ್ನೂ ಸಿಕ್ಕಿಲ್ಲ.[ಅಣ್ಣನನ್ನೇ ವಿಷವುಣಿಸಿ ಕೊಂದ ಉತ್ತರ ಕೊರಿಯಾ ಸರ್ವಾಧಿಕಾರಿ?]

Five arrested in North Korea’s Dictator Kim Jong Un’s Brother Murder Case

ಕಿಮ್ ಜಾಂಗ್ ನಾಮ್ ಮಲೇಷ್ಯಾದ ಕೌಲಾಲಂಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫೆಬ್ರವರಿ 13ರಂದು ಸಾವನ್ನಪ್ಪಿದ್ದರು. ಅವರ ಮೇಲೆ ರಾಸಾಯನಿಕ ಸ್ಪ್ರೇ ಮಾಡಿ ಕೊಲೆ ಮಾಡಲಾಗಿತ್ತು. ಆದರೆ ಮಲೇಷ್ಯಾ ಸರಕಾರ ನಡೆಸಿದ ಮರಣೋತ್ತರ ವರದಿಯನ್ನೇ ತಿರಸ್ಕರಿಸುತ್ತಿರುವುದಾಗಿ ಹೇಳಿರುವ ಉತ್ತರ ಕೊರಿಯಾ ಮೃತ ದೇಹವನ್ನು ತನಗೊಪ್ಪಿಸುವಂತೆ ಕೇಳಿಕೊಂಡಿದೆ.

ಉತ್ತರ ಕೊರಿಯಾದಿಂದ ಗಡಿಪಾರಾಗಿ ಸರ್ವಾಧಿಕಾರಿ ತಮ್ಮನ ವಿರೋಧ ಕಟ್ಟಿಕೊಂಡಿದ್ದ ಕಿಮ್ ಜಾಂಗ್ ನಾಮ್ ಹೆಸರು ಬದಲಿಸಿಕೊಂಡು ಕಿಮ್ ಕೋಲ್ ಹೆಸರಿನಲ್ಲಿ ಜೀವಿಸುತ್ತಿದ್ದರು. ಚೀನಾದ ಆಡಳಿತಕೊಳಪಟ್ಟ ಮಕಾವ್, ಮಲೇಷ್ಯಾ ಮತ್ತು ಸಿಂಗಾಪುರಗಳಲ್ಲಿ ಓಡಾಡಿಕೊಂಡಿದ್ದ ಕಿಮ್ ಜಾಂಗ್ ನಾಮ್ ಚೀನಾದ ರಕ್ಷಣೆ ಪಡೆಯುತ್ತಿದ್ದರು ಎನ್ನಲಾಗಿದೆ.[ಪಾಕಿಸ್ತಾನ-ಅಫ್ಘಾನಿಸ್ತಾನ ಮಧ್ಯೆ 'ಉಗ್ರ' ಸಮರ]

ಕಿಮ್ ಜಾಂಗ್ ನಾಮ್ ಕೊಲೆ ಮಾಡಿದವರಿಗಾಗಿ ಮಲೇಷ್ಯಾ ಪೊಲೀಸರು ಬಲೆ ಬೀಸಿದ್ದು ಈಗಾಗಲೇ ನಾಲ್ವರನ್ನು ಬಂಧಿಸಿದ್ದಾರೆ. ಇದರಲ್ಲಿ ಓರ್ವ ಉತ್ತರ ಕೊರಿಯಾ ಪ್ರಜೆಯಾಗಿದ್ದು ಉಳಿದ ಮೂವರು ಮಲೇಷ್ಯಾ, ಇಂಡೋನೇಷ್ಯಾ, ವಿಯೆಟ್ನಾಂಗೆ ಸೇರಿದ್ದಾರೆ. ಕೃತ್ಯದಲ್ಲಿ ಇನ್ನೂ ನಾಲ್ವರು ಪಾಲ್ಗೊಂಡಿರುವ ಶಂಕೆ ಇದ್ದು ಇವರೆಲ್ಲಾ ಉತ್ತರ ಕೊರಿಯನ್ನರು ಎನ್ನಲಾಗಿದೆ. ಇವರಿಗಾಗಿ ಮಲೇಷ್ಯಾ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ವರದಿಗಳ ಪ್ರಕಾರ ಬಹಳ ಹಿಂದೆಯೇ ತನ್ನ ಅಣ್ಣನನ್ನು ಕೊಲೆ ಮಾಡುವಂತೆ ಕಿಮ್ ಜಾಂಗ್ ಗೂಢಚರರಿಗೆ ಸೂಚನೆ ನೀಡಿದ್ದರು. ಈ ಹಿಂದೆ 2011ರಲ್ಲೂ ಕಿಮ್ ಜಾಂಗ್ ನಾಮ್ ಕೊಲೆಗೆ ಪ್ರಯತ್ನ ನಡೆದಿತ್ತು. ಆದರೆ ಅವತ್ತು ಬದುಕುಳಿದಿದ್ದ ನಮ್ ಸೋಮವಾರ ಸಾವನ್ನಪ್ಪಿದ್ದಾರೆ.

ಕೊಲೆಯಲ್ಲಿ ಉತ್ತರ ಕೊರಿಯಾ ಗೂಢಚರರ ಕೈವಾಡ ಇರುವ ಸಾಧ್ಯತೆ ಇರುವುದರಿಂದ ಕೊಲೆಯನ್ನು ಸುಲಭವಾಗಿ ಬೇಧಿಸಲು ಸಾಧ್ಯವಾಗುತ್ತಿಲ್ಲ.

English summary
Kim Jong Nam was killed on February 13 after apparently being poisoned while waiting to board a flight in Kuala Lumpur International Airport, Malaysia. Nam was the half brother of North Korean leader Kim Jong Un.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X