ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆ ಮನೆಯಲ್ಲೇ ವರನನ್ನು ಹಿಡಿದು ಥಳಿಸಿದ ಹೆಂಡತಿ!

|
Google Oneindia Kannada News

ಇಸ್ಲಮಾಬಾದ್, ಫೆಬ್ರವರಿ.12: ಸುಮಧುರ ಕ್ಷಣ.. ದಾಂಪತ್ಯ ಬದುಕಿಗೆ ಕಾಲಿಡಲು ಇನ್ನೇನು ಕೆಲ ಗಂಟೆಗಳಷ್ಟೇ ಬಾಕಿ. ಅದ್ಧೂರಿ ವೇದಿಕೆಯಲ್ಲಿ ಹೊಸ ಬಟ್ಟೆಯ ತೊಟ್ಟು ಮಿರಿಮಿರಿ ಮಿಂಚುತ್ತಿದ್ದ ವರನಿಗೆ ಟೈಮ್ ಸರಿಯಾಗಿ ಕೈ ಕೊಟ್ಟಿತ್ತು.

ಮದುವೆ ಮನೆಯ ವೇದಿಕೆಯಲ್ಲೇ ವರನನ್ನು ಹಿಡಿದು ಸರಿಯಾಗಿ ಧಳಿಸಿರುವ ಘಟನೆ ಪಾಕಿಸ್ತಾನದಲ್ಲಿ ಬೆಳಕಿಗೆ ಬಂದಿದೆ. ಕರಾಚಿಯ ಸಖಿ ಹಾಸನ್ ಚೌರಂಗಿ ಪ್ರದೇಶದಲ್ಲಿ ಆಸಿಫ್ ರಫೀಕ್ ಎಂಬಾತ ಮದುವೆಗೆ ಅಣಿಯಾಗಿ ನಿಂತಿದ್ದನು.

ಅನೈತಿಕ ಸಂಬಂಧ ಹೊಂದಲು ಬಯಸುವವರಲ್ಲೇ ಬೆಂಗಳೂರಿಗರೇ ಟಾಪ್! ಅನೈತಿಕ ಸಂಬಂಧ ಹೊಂದಲು ಬಯಸುವವರಲ್ಲೇ ಬೆಂಗಳೂರಿಗರೇ ಟಾಪ್!

ಎಲ್ಲೆಲ್ಲೂ ಸಂಭ್ರಮ-ಸಡಗರ, ನೋಡ ನೋಡುತ್ತಿದ್ದಂತೆ ಮದುವೆ ಮನೆ ಎಂಬುದು ರಣರಂಗವಾಗಿ ಬಿಟ್ಟಿತು. ವಧುವಿನ ಪಕ್ಕದಲ್ಲೇ ನಿಂತಿದ್ದ ವರನು ಕಣ್ ಮುಚ್ಚಿ ಕಣ್ ಬಿಡುವುದರಲ್ಲೇ ವರನಿಗೆ ಹಿಗ್ಗಾಮುಗ್ಗಾ ಗೂಸಾ ಬೀಳುತ್ತಿತ್ತು.

ಪತಿಯ ಮದುವೆಗೆ ಬಂದ ಮೊದಲ ಪತ್ನಿ!

ಪತಿಯ ಮದುವೆಗೆ ಬಂದ ಮೊದಲ ಪತ್ನಿ!

ಇಬ್ಬರು ಪತ್ನಿಯರಿದ್ದರೂ ಕೂಡಾ ಮೂರನೇ ಮದುವೆಗೆ ಸಜ್ಜಾಗಿ ನಿಂತಿದ್ದ ಆಸಿಫ್ ರಫೀಕ್ ನನ್ನು ಮೊದಲ ಪತ್ನಿ ಮದುವೆ ಮನೆಯಲ್ಲಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾಳೆ ಎಂದು ಪಾಕಿಸ್ತಾನ್ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಮದುವೆ ಮನೆಯಲ್ಲಿ ವರನ ಬಟ್ಟೆ ಹಿಡಿದು ಎಳೆದಾಡಿ ಹಲ್ಲೆ ನಡೆಸಿರುವಂತಾ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

6 ವರ್ಷಗಳ ಹಿಂದಿನ ಮದುವೆ ಮಹಿಮೆ

6 ವರ್ಷಗಳ ಹಿಂದಿನ ಮದುವೆ ಮಹಿಮೆ

ಕಳೆದ ಫೆಬ್ರವರಿ.12ರ ಸೋಮವಾರ ನಡೆಯುತ್ತಿದ್ದ ಮದುವೆ ರಿಸೆಪ್ಷನ್ ಹಿಂದೆ ಒಂದು ಸೀಕ್ರೆಟ್ ಅಡಗಿದೆ. ಇದೇ ಆಸಿಫ್ ರಫೀಕ್ ಎಂಬ ಆಸಾಮಿ ಕಳೆದ 2014ರಲ್ಲೇ ಮದಿಹಾ ಎಂಬ ಯುವತಿಯನ್ನು ಮದುವೆಯಾಗಿದ್ದನು. ಅದಾಗಿಯೂ ಆಕೆಗೆ ವಂಚಿಸಿ ಮೂರನೇ ಮದುವೆಗೆ ಸಜ್ಜಾಗಿದ್ದನು ಎಂದು ಆರೋಪಿಸಲಾಗಿದೆ.

ಮೊದಲ ಪತ್ನಿಯನ್ನು ಒಪ್ಪಿಸಿ ಎರಡನೇ ಮದುವೆ

ಮೊದಲ ಪತ್ನಿಯನ್ನು ಒಪ್ಪಿಸಿ ಎರಡನೇ ಮದುವೆ

ಮದಿಹಾ ಎಂಬಾಕೆ ಜೊತೆ ಮೊದಲನೇ ಮದುವೆ, ಸೋಮವಾರ ನಡೆಯುತ್ತಿದ್ದದ್ದು ಮೂರನೇ ಮದುವೆಯಾಗಿತ್ತು. ಇದರ ಗ್ಯಾಪ್ ನಲ್ಲೇ ಆಸಿಫ್ ಎಂಬ ಆಸಾಮಿ ಎರಡನೇ ಮದುವೆಯನ್ನೂ ಆಗಿದ್ದನು. ಜಿನ್ನಾ ವಿಶ್ವವಿದ್ಯಾಲಯದಲ್ಲಿ ಉದ್ಯೋಗ ಮಾಡುತ್ತಿದ್ದ ಯುವತಿಯನ್ನು ಮದುವೆಯಾಗಿದ್ದನು ಎಂದು ಮದಿಹಾ ದೂರಿದ್ದಾರೆ. ಇನ್ನು, ಎರಡನೇ ಮದುವೆಯ ಬಳಿಕವೂ ತಮ್ಮ ಜೊತೆಗೆ ಇರುವುದಾಗಿ ಆಸಿಫ್ ಮಾತು ಕೊಟ್ಟಿದ್ದ ಎಂಬುದು ಮೊದಲ ಪತ್ನಿ ಮದಿಹಾ ವಾದವಾಗಿದೆ.

ಪತಿ-ಪತ್ನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಖಾಕಿ

ಪತಿ-ಪತ್ನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಖಾಕಿ

ಈ ಹಿಂದೆಯೂ ಕೂಡಾ ಮದಿಹಾ ಹಾಗೂ ಆಕೆ ಸಂಬಂಧಿಕರು ತಮ್ಮ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ನಾನು ಆಕೆಯಿಂದ ವಿಚ್ಛೇಧನ ಪಡೆದುಕೊಂಡಿದ್ದೆನು. ಡೈವರ್ಸ್ ಪಡೆದ ಬಳಿಕ ನಾನೆಷ್ಟು ಬೇಕಾದರೂ ಮದುವೆ ಆಗಬಹುದು. ಅದನ್ನು ಪ್ರಶ್ನಿಸುವ ಅಧಿಕಾರ ಆಕೆಗಿಲ್ಲ ಎಂಬುದು ಆಸಿಫ್ ವಾದವಾಗಿದೆ. ಇಬ್ಬರ ವಾದವನ್ನು ಆಲಿಸಿದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

English summary
First Wife Thrashed The Husband, Who Going To 3rd Marriage In Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X