ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರಿಯಾವನ್ನು ಆವರಿಸಿದ ಕೊರೊನಾ: ಮೊದಲೆರೆಡು ಪ್ರಕರಣಗಳು ಪತ್ತೆ

|
Google Oneindia Kannada News

ವಿಯೆನ್ನಾ, ಫೆಬ್ರವರಿ 26: ಆಸ್ಟ್ರಿಯಾದಲ್ಲಿ ಕೊರೊನಾದ ಮೊದಲೆರೆಡು ಪ್ರಕರಣಗಳು ಪತ್ತೆಯಾಗಿವೆ.

ಟ್ಯೋರೊಲ್ ನಲ್ಲಿ ಸುಮಾರು 24 ವರ್ಷದ ಇಬ್ಬರಲ್ಲಿ ಕೊರೊನಾ ಸೋಂಕಿರುವುದು ಖಚಿತವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಇಬ್ಬರು ಸ್ವಯಂಪ್ರೇರಿತರಾಗಿ ವೈದ್ಯಕೀಯ ಕೇಂದ್ರವನ್ನು ಸಂಪರ್ಕಿಸಿ ತಮ್ಮಲ್ಲಿ ಕಂಡುಬರುತ್ತಿರುವ ಲಕ್ಷಣಗಳ ಬಗ್ಗೆ ವಿವರಿಸಿದ್ದರು.

ಕೊರೊನಾ ವೈರಸ್: ಯಾವ ದೇಶದಲ್ಲಿ ಎಷ್ಟು ಪ್ರಕರಣ? ಸಂಪೂರ್ಣ ವಿವರಕೊರೊನಾ ವೈರಸ್: ಯಾವ ದೇಶದಲ್ಲಿ ಎಷ್ಟು ಪ್ರಕರಣ? ಸಂಪೂರ್ಣ ವಿವರ

ಅವರು ಜ್ವರದಿಂದ ಬಳಲುತ್ತಿದ್ದು ಅವರ ಸ್ಥಿತಿ ಗಂಭೀರವಾಗಿಲ್ಲ ಎಂದೂ ಹೇಳಲಾಗಿದೆ. ಅವರಿಬ್ಬರನ್ನೂ ಚಿಕಿತ್ಸಾಲಯದಲ್ಲಿ ಪ್ರತ್ಯೇಕವಾಗಿರಿಸಲಾಗಿದ್ದು ಈ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಪತ್ತೆಗೆ ಪ್ರತ್ಯೇಕ ಕ್ಲಿನಿಕ್ ತೆರೆಯಲಾಗುವುದು.

First Two Coronavirus Cases Confirmed In Austria

ಜೊತೆಗೆ ಸೋಂಕಿನ ವಿವರಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಜನರ ಸಂದೇಹಗಳಿಗೆ ಉತ್ತರಿಸಲು ಪ್ರತ್ಯೇಕ ಹಾಟ್ಲೈನ್ ಸಂಖ್ಯೆಯನ್ನೂ ಈಗಾಗಲೇ ತೆರೆಯಲಾಗಿದೆ. ಜೊತೆಗೆ ಜಿಲ್ಲಾ ಆಸ್ಪತ್ರೆಗಳಲ್ಲಿನ ನಿವಾಸಿ ವೈದ್ಯರಿಂದ ಜನರು ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

ಈಗಾಗಲೇ ಚೀನಾದಲ್ಲಿ ಕೊರೊನಾ(ಕೋವಿಡ್‌-19) ಸೋಂಕಿನಿಂದ 2 ಸಾವಿರಕ್ಕೂ ಹೆಚ್ಚಿ ಮಂದಿ ಮೃತಪಟ್ಟಿದ್ದಾರೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ.

ಕೊರೊನಾ ವೈರಸ್‌ ಭೀತಿಯು ಈಗ ಸ್ಪೇನ್‌ನ ಮ್ಯಾಡ್ರಿಡ್‌ನ‌ಲ್ಲಿ ಇಡೀ ಹೊಟೇಲ್‌ವೊಂದನ್ನೇ ನಿಗಾ ಕೇಂದ್ರವನ್ನಾಗಿಸಿದೆ. ಇಲ್ಲಿನ ಟೆನೆರೈಫ್ ಹೊಟೇಲ್‌ನಲ್ಲಿದ್ದ ಇಟಲಿ ಪ್ರವಾಸಿಗನೊಬ್ಬನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ, ಹೋಟೆಲ್‌‌ನಲ್ಲಿನ ಎಲ್ಲ ಪ್ರವಾಸಿಗರನ್ನೂ ಲಾಕ್‌ಡೌನ್‌ ಮಾಡಲಾಗಿದೆ.

ಯಾವೊಬ್ಬರೂ ತಮ್ಮ ಕೊಠಡಿಗಳಿಂದ ಹೊರ ಬರುವಂತಿಲ್ಲ ಎಂದು ಕಟ್ಟಪ್ಪಣೆ ಮಾಡಲಾಗಿದ್ದು, ಒಳಗಿರುವ ಪ್ರವಾಸಿಗರು ಆತಂಕಕ್ಕೊಳಗಾಗಿದ್ದಾರೆ. ಈ ಹೊಟೇಲ್‌ನಲ್ಲಿ ಒಟ್ಟು 467 ಕೊಠಡಿಗಳಿವೆ.

ಇಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆಯುವ ವಾರ್ಷಿಕ ಸಾಂಪ್ರದಾಯಿಕ ಉತ್ಸವವೊಂದನ್ನು ಕಣ್ತುಂಬಿಕೊಳ್ಳಲೆಂದು ಭಾರೀ ಸಂಖ್ಯೆಯ ಪ್ರವಾಸಿಗರು ಕೆನರಿ ದ್ವೀಪಕ್ಕೆ ಆಗಮಿಸಿದ್ದು, ಹೊಟೇಲ್‌ನ ಎಲ್ಲ ಕೊಠಡಿಗಳೂ ಭರ್ತಿಯಾಗಿವೆ. ಹೀಗಾಗಿ, ಕೊರೊನಾ ವ್ಯಾಪಿಸಿರುವ ಸಾಧ್ಯತೆ ಅಧಿಕವಾಗಿದೆ.

English summary
The two 24-year-olds have been quarantined in a hospital in Innsbruck, the capital of Tyrol province, which borders Italy, according to Tyrol Governor Guenther Platter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X