ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳದ ಮೇಲೆ ಕಾಲಿರಿಸಲಿರುವ ಮೊದಲ ವ್ಯಕ್ತಿ ಮಹಿಳೆ : ನಾಸಾ

|
Google Oneindia Kannada News

ಮಂಗಳ ಗ್ರಹದ ಮೇಲೆ ಹೆಜ್ಜೆ ಗುರುತು ಮೂಡಿಸಲಿರುವ ಮೊದಲ ವ್ಯಕ್ತಿ ಓರ್ವ ಮಹಿಳೆಯಾಗಿರಲಿದ್ದಾಳೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಮುಖ್ಯಸ್ಥ ಜಿಮ್ ಬ್ರೈಡನ್‌ಸ್ಟೈನ್ ಅವರು ಹೇಳಿದ್ದಾರೆ.

ಮಂಗಳ ಗ್ರಹದ ರೋವರ್ ಅಪಾರ್ಚುನಿಟಿ ನೌಕೆಗೆ ಅಂತಿಮ ವಿದಾಯ ಮಂಗಳ ಗ್ರಹದ ರೋವರ್ ಅಪಾರ್ಚುನಿಟಿ ನೌಕೆಗೆ ಅಂತಿಮ ವಿದಾಯ

ಆದರೆ, ಆ ಮಹಿಳೆ ಯಾರು ಎಂಬುದನ್ನು ಬಹಿರಂಗಪಡಿಸದ ಜಿಮ್ ಅವರು, ಅಮೆರಿಕದ ಬಾಹ್ಯಾಕಾಶ ಸಂಸ್ಥೆಯ ಮುಂದಿನ ಹಲವಾರು ಯೋಜನೆಗಳಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ಶನಿ ಗ್ರಹದಲ್ಲಿ ಒಂದು ದಿನಕ್ಕೆ 10 ಗಂಟೆ 33 ನಿಮಿಷ 38 ಸೆಕೆಂಡ್, ಒಂದು ವರ್ಷಕ್ಕೆಷ್ಟು? ಶನಿ ಗ್ರಹದಲ್ಲಿ ಒಂದು ದಿನಕ್ಕೆ 10 ಗಂಟೆ 33 ನಿಮಿಷ 38 ಸೆಕೆಂಡ್, ಒಂದು ವರ್ಷಕ್ಕೆಷ್ಟು?

ಅವರು ಈ ಸಂಗತಿಯನ್ನು, ವಿಜ್ಞಾನ ಮತ್ತು ತಂತ್ರಜ್ಞಾನ 'ಸೈನ್ಸ್ ಫ್ರೈಡೆ' ಎಂಬ ರೇಡಿಯೋ ಶೋನಲ್ಲಿ ಬಹಿರಂಗಗೊಳಿಸಿದ್ದಾರೆ. ಅಲ್ಲದೆ, ಮಾರ್ಚ್ ತಿಂಗಳ ಕೊನೆಯಲ್ಲಿ ಸರ್ವರೂ ಮಹಿಳೆಯರು ಇರುವ ತಂಡ ಸ್ಪೇಸ್ ವಾಕ್ ಮಾಡಲಿದೆ ಎಂದು ನಾಸಾ ಇತ್ತೀಚೆಗೆ ಪ್ರಕಟಿಸಿತ್ತು.

First human to set foot on Mars likely to be a Woman : NASA

ರಾಷ್ಟ್ರೀಯ ಮಹಿಳಾ ತಿಂಗಳಾಗಿರುವ ಮಾರ್ಚ್ ನಲ್ಲಿ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ನಾಸಾ ಗುರುತಿಸಿದೆ ಮತ್ತು ನಾಸಾದಲ್ಲಿ ಹಲವಾರು ವಿಭಾಗಗಳಲ್ಲಿ ಕೆಲಸದಲ್ಲಿ ತೊಡಗಿರುವ ಮಹಿಳೆಯರನ್ನೂ ನಾಸಾ ಗುರುತಿಸಿದೆ.

ಉಂಗುರ ಕಳೆದುಕೊಳ್ಳುತ್ತಿರುವ ಶನಿಯ ಟೈಮೇ ಚೆನ್ನಾಗಿಲ್ಲವಾ?ಉಂಗುರ ಕಳೆದುಕೊಳ್ಳುತ್ತಿರುವ ಶನಿಯ ಟೈಮೇ ಚೆನ್ನಾಗಿಲ್ಲವಾ?

ನಮ್ಮಲ್ಲಿ ವಿಭಿನ್ನ ಪ್ರತಿಭೆಗಳಿರುವ ಮಹಿಳೆಯರಿದ್ದಾರೆ. ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಛಾಪು ಮೂಡಿಸಿದ್ದಾರೆ. ಇನ್ನು ಬಾಹ್ಯಾಕಾರದಲ್ಲಿಯೂ ಮಹಿಳೆಯರು ತಮ್ಮ ಪ್ರತಿಭೆ ತೋರಲಿದ್ದಾರೆ. ಸದ್ಯದಲ್ಲಿಯೇ ಮೊದಲ ಬಾರಿ ಮಹಿಳೆಯೋರ್ವಳು ಚಂದ್ರನ ಮೇಲೆ ಕಾಲಿರಿಸಲಿದ್ದಾರೆ ಎಂದೂ ಜಿಮ್ ಬ್ರೈಡನ್‌ಸ್ಟೈನ್ ಅವರು ತಿಳಿಸಿದ್ದಾರೆ.

English summary
First human to set foot on Mars likely to be a Woman : NASA
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X