ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಶಕದ ಬಳಿಕ ವಿದೇಶಿ ಅಪರಾಧಿಗೆ ಕೊನೆಗೂ ಸಿಕ್ಕಿದ್ದು ಗಲ್ಲುಶಿಕ್ಷೆ

|
Google Oneindia Kannada News

ಟೋಕಿಯೋ, ಡಿಸೆಂಬರ್.26: ಆತ 24ನೇ ವಯಸ್ಸಿನಲ್ಲಿ ಘೋರ ಅಪರಾಧವನ್ನು ಎಸಗಿದ್ದ. ಅಂದು ಮಾಡಿದ ತಪ್ಪಿಗೆ 16 ವರ್ಷಗಳ ನಂತರ ಶಿಕ್ಷೆಗೆ ಗುರಿಯಾಗಿದ್ದಾನೆ. ಸುಂದರ ಕುಟುಂಬದ ಸಂತೋಷಕ್ಕೆ ಕೊಳ್ಳಿಯಿಟ್ಟ ಅಪರಾಧಿಗೆ ದಶಕಗಳ ಬಳಿಕ ಗಲ್ಲುಶಿಕ್ಷೆ ವಿಧಿಸಲಾಗಿದೆ.

ಕಳೆದ ಹತ್ತು ವರ್ಷಗಳಲ್ಲೇ ಮೊದಲ ಬಾರಿಗೆ ವಿದೇಶಿ ಅಪರಾಧಿಗೆ ಜಪಾನ್ ನಲ್ಲಿ ಮರಣದಂಡನೆ ವಿಧಿಸಲಾಗಿದೆ. 2003ರಲ್ಲಿ ನಾಲ್ವರನ್ನು ಕೊಲೆಗೈದ ಚೀನಾ ಮೂಲದ ಅಪರಾಧಿಯನ್ನು ಇಂದು ಗಲ್ಲುಶಿಕ್ಷೆಗೆ ಗುರಿಪಡಿಸಲಾಯಿತು.

ಐದು ವರ್ಷದಲ್ಲಿ 1,245 ಕೋಟಿ ರೂ. ಆದಾಯ ಸಂಗ್ರಹಿಸಿದ ಇಸ್ರೋಐದು ವರ್ಷದಲ್ಲಿ 1,245 ಕೋಟಿ ರೂ. ಆದಾಯ ಸಂಗ್ರಹಿಸಿದ ಇಸ್ರೋ

ಚೀನಾ ಮೂಲದ ವೀ ವೀ (40) ಎಂಬ ಅಪರಾಧಿಯು 16 ವರ್ಷಗಳ ಹಿಂದೆ ತನ್ನ ಸಹಚರರನ್ನು ಸೇರಿಕೊಂಡು ಮನೆಯನ್ನು ದೋಚಿದ್ದು ಅಲ್ಲದೇ ಮನೆಯಲ್ಲಿದ್ದ ನಾಲ್ವರನ್ನು ವಿಕೃತವಾಗಿ ಕೊಲೆ ಮಾಡಿದ್ದನು. ಈ ಸಂಬಂಧ 10 ವರ್ಷಗಳ ಕಾಲ ನಡೆದ ಸುದೀರ್ಘ ವಿಚಾರಣೆ ನಂತರ ಅಪರಾಧಿಯನ್ನು ಗಲ್ಲುಶಿಕ್ಷೆ ವಿಧಿಸಲಾಯಿತು.

ಜಪಾನ್ ನ ಆ ಮನೆಯಲ್ಲಿ ಚೆಲ್ಲಿತ್ತು ನಾಲ್ವರ ನೆತ್ತರು

ಜಪಾನ್ ನ ಆ ಮನೆಯಲ್ಲಿ ಚೆಲ್ಲಿತ್ತು ನಾಲ್ವರ ನೆತ್ತರು

ಜಪಾನ್ ನ ಫುಕ್ಯೂಕಾ ಎಂಬ ಪ್ರದೇಶದಲ್ಲಿದ್ದ ಬಟ್ಟೆ ಅಂಗಡಿ ಮಾಲೀಕನ ಮನೆಗೆ ನುಗ್ಗಿದ ಅಪರಾಧಿ ವೀವೀ ಸೇರಿದಂತೆ ಮೂವರು ಅಪರಾಧಿಗಳು ನುಗ್ಗಿದ್ದರು. ಮನೆಯಲ್ಲಿದ್ದ ಹಣ-ಒಡವೆಗಳನ್ನೆಲ್ಲ ದೋಚಿದರು. ಅಲ್ಲದೇ, ಮನೆಯಲ್ಲಿದ್ದ ಪತಿ-ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಘೋರವಾಗಿ ಹತ್ಯೆಗೈದಿದ್ದರು.

ಸಮುದ್ರಕ್ಕೆ ಎಸೆದರು ನಾಲ್ವರ ಮೃತದೇಹ

ಸಮುದ್ರಕ್ಕೆ ಎಸೆದರು ನಾಲ್ವರ ಮೃತದೇಹ

ಇಬ್ಬರು ಮಕ್ಕಳು ಸೇರಿದಂತೆ ನಾಲ್ವರನ್ನು ಕೊಲೆಗೈದ ಅಪರಾಧಿ ವೀವೀ ನಂತರ ನಡೆಸಿದ್ದು ಮಾತ್ರ ಘನಘೋರ ಕೃತ್ಯ. ಎಲ್ಲ ಮೃತದೇಹಗಳಿಗೆ ಕಲ್ಲುಗಳನ್ನು ಕಟ್ಟಿದ ಅಪರಾಧಿ ಅವುಗಳನ್ನು ಸಮುದ್ರಕ್ಕೆ ಎಸೆದು ಸಾಕ್ಷಿನಾಶಕ್ಕೆ ಪ್ರಯತ್ನಿಸಿದ್ದರು. ಈ ವೇಳೆಯಲ್ಲಿ ಅಪರಾಧಿಗೆ ಚೀನಾ ಮೂಲದ ಮತ್ತಿಬ್ಬರು ಅಪರಾಧಿಗಳು ಕೈ ಜೋಡಿಸಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.

ದುಷ್ಕೃತ್ಯಕ್ಕೆ ಸಹಕರಿಸಿದ ಇಬ್ಬರಿಗೂ ಶಿಕ್ಷೆ

ದುಷ್ಕೃತ್ಯಕ್ಕೆ ಸಹಕರಿಸಿದ ಇಬ್ಬರಿಗೂ ಶಿಕ್ಷೆ

ವೀವೀ ಜೊತೆಗೆ ನಾಲ್ವರ ಕೊಲೆಗೆ ಸಹಕರಿಸಿದ ಇಬ್ಬರು ಅಪರಾಧಿಗಳಿಗೆ ಚೀನಾದಲ್ಲೇ ಶಿಕ್ಷೆ ವಿಧಿಸಲಾಗಿದೆ ಎಂದು ಜಪಾನಿನ ಖೋದ್ಯೋ ಸುದ್ದಿ ಸಂಸ್ಥೆಯು ವರದಿ ಮಾಡಿದೆ. ಇಬ್ಬರು ಅಪರಾಧಿಗಳ ಪೈಕಿ ಒಬ್ಬನಿಗೆ ಗಲ್ಲುಶಿಕ್ಷೆ ವಿಧಿಸಿದ್ದರೆ, ಮತ್ತೊಬ್ಬ ಅಪರಾಧಿಗೆ ಜೀವಾವಧಿ ಶಿಕ್ಷೆಯನ್ನು ನೀಡಲಾಗಿದೆ.

ಸೂಕ್ತ ತನಿಖೆ ಬಳಿಕವೇ ಗಲ್ಲುಶಿಕ್ಷೆ

ಸೂಕ್ತ ತನಿಖೆ ಬಳಿಕವೇ ಗಲ್ಲುಶಿಕ್ಷೆ

ಅಪರಾಧಿಗಳಿಗೆ ಮರಣದಂಡನೆ ವಿಧಿಸಬಾರದು ಎಂದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಇದರ ಪರವಾಗಿರುವ ಜಪಾನ್ ದೇಶವು ಸುಮ್ಮನೆ ಅಪರಾಧಿಗೆ ಗಲ್ಲುಶಿಕ್ಷೆ ವಿಧಿಸಿಲ್ಲ. 10 ವರ್ಷಗಳ ಸುದೀರ್ಘ ತನಿಖೆ ನಂತರವೇ ಅಪರಾಧಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ ಎಂದು ಜಪಾನ್ ನ ಜಸ್ಟೀಸ್ ಮಿನಿಸ್ಟರ್ ಮಸಾಕೋ ಮಾರಿ ಸ್ಪಷ್ಟಪಡಿಸಿದ್ದಾರೆ.

ಚಿತ್ರಕೃಪೆ: ಖೋದ್ಯೋ ನ್ಯೂಸ್ - 4

English summary
First Foreigner Executes After 10 Years History In Japan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X