ಕೊರಿಯಾದ ಚೊಚ್ಚಲ ಮಹಿಳಾ ಅಧ್ಯಕ್ಷೆಯನ್ನು ಕೋರ್ಟ್ ಕಿತ್ತೊಗೆದಿದ್ಯಾಕೆ?

Subscribe to Oneindia Kannada

ಬೆಂಗಳೂರು, ಮಾರ್ಚ್ 10: ದಕ್ಷಿಣ ಕೊರಿಯಾದ ಚೊಚ್ಚಲ ಮಹಿಳಾ ಅಧ್ಯಕ್ಷೆಯನ್ನು ಬ್ರಹ್ಮಾಂಡ ಭ್ರಷ್ಟಾಚಾರ ಬಲಿ ಪಡೆದುಕೊಂಡಿದೆ. ಐತಿಹಾಸಿಕ ಬೆಳವಣಿಗೆಯಲ್ಲಿ ಅಧ್ಯಕ್ಷೆ ಪಾರ್ಕ್ ಗ್ಯುಯೇನ್ ಹ್ಯೆರನ್ನು ಅಲ್ಲಿನ ಕೋರ್ಟ್ ವಜಾ ಮಾಡಿ ಆದೇಶ ನೀಡಿದೆ.

ಈ ಸಂಬಂಧ ಶುಕ್ರವಾರ ಆದೇಶ ನೀಡಿದ 8 ಸದಸ್ಯರ ಸುಪ್ರೀಂ ಕೋರ್ಟ್ ನ್ಯಾಯಪೀಠ ಅಧ್ಯಕ್ಷೆಯನ್ನು ಪದಚ್ಯುತಗೊಳಿಸಿದೆ. 1980ರಲ್ಲಿ ದಕ್ಷಿಣ ಕೊರಿಯಾದಲ್ಲಿ ಪ್ರಜಾಪ್ರಭುತ್ವ ಆಳ್ವಿಕೆ ಬಂದ ನಂತರ ಅಧ್ಯಕ್ಷರೊಬ್ಬರನ್ನು ಪದಚ್ಯುತಗೊಳಿಸುತ್ತಿರುವ ಮೊದಲ ಬೆಳವಣಿಗೆ ಇದಾಗಿದೆ.[ಕೊರಿಯಾ ಸರ್ವಾಧಿಕಾರಿಯ ಕ್ಷಿಪಣಿ ಉಡಾವಣೆಗೆ ಬೆಚ್ಚಿಬಿದ್ದ ವಿಶ್ವ]

ನಾಟಕೀಯ ಬೆಳವಣಿಗೆ

ನಾಟಕೀಯ ಬೆಳವಣಿಗೆ

ಇದೀಗ 60 ದಿನದೊಳಗೆ ದಕ್ಷಿಣ ಕೊರಿಯಾಕ್ಕೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಬೇಕಾಗಿದೆ. ಇಂದು ರಾಜಧಾನಿ ಸಿಯೋಲ್ ನಲ್ಲಿರುವ ನ್ಯಾಯಾಲಯ ಅಧ್ಯಕ್ಷೆ ಭವಿಷ್ಯ ನಿರ್ಧರಿಸಲಿದ್ದರೆ ಹೊರಗಡೆ ಅವರ ಅಪಾರ ಅಭಿಮಾನಿಗಳು ನೆರೆದು ತಮ್ಮ ಬೆಂಬಲ ಸೂಚಿಸುತ್ತಿದ್ದರು. ಕೋರ್ಟ್ ಹೊರಗಡೆ ದೊಡ್ಡ ಪರದೆಯಲ್ಲಿ ಅವರ ಅಭಿಮಾನಿಗಳಿಗಾಗಿ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಅಧ್ಯಕ್ಷೆ ಪದಚ್ಯುತಿ ಆದೇಶ ಬರುತ್ತಿದ್ದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಆದರೆ ಅಧ್ಯಕ್ಷೆ ಪಾರ್ಕ್ ಗ್ಯುಯೇನ್ ಹ್ಯೆ ಅಭಿಮಾನಿಗಳನ್ನು ಎದುರಿಸಲು ಸಾವಿರಾರು ಪೊಲೀಸರು ಸಿದ್ಧವಾಗಿ ನಿಂತಿದ್ದರು. ಹೀಗಾಗಿ ಅಭಿಮಾನಿಗಳು ಏನೂ ಮಾಡಲು ಸಾಧ್ಯವಾಗಲಿಲಗಲ.

 ಆರೋಪ ಏನು?

ಆರೋಪ ಏನು?

65 ವರ್ಷದ ಪಾರ್ಕ್ ತನ್ನ ಗೆಳತಿ ಚೋಯಿ ಸೂನ್ ಸಿಲ್ ಹಾಗೂ ಮಾಜಿ ಪ್ರಧಾನಿಯ ಸಹಾಯಕರ ಜತೆ ಸೇರಿಕೊಂಡು ಡೀಲ್ ಕುದುರಿಸಲು ಹೊರಟಿದ್ದರು. ಈ ಡೀಲ್ ಪ್ರಕಾರ ಇವರಿಬ್ಬರು ದೊಡ್ಡ ದೊಡ್ಡ ಉದ್ಯಮಿಗಳ ಮೇಲೆ ಒತ್ತಡ ಹೇರಿ ಅಧ್ಯಕ್ಷೆಗೆ ಬೇಕಾಗಿದ್ದ ಎರಡು ಸಂಸ್ಥೆಗಳಿಗೆ ದೇಣಿಗೆ ಸಂಗ್ರಹಿಸಲು ಹೊರಟಿದ್ದರು. ಆದರೆ ಸಿಕ್ಕಿ ಬಿದ್ದಿದ್ದರಿಂದ ಇದೀಗ ಚೋಯಿ ಸೂನ್ ಸಿಲ್ ಬಂಧಿತರಾಗಿದ್ದರೆ, ಅಧ್ಯಕ್ಷೆ ಕುರ್ಚಿಯನ್ನೇ ಕಳೆದುಕೊಳ್ಳಬೇಕಾಗಿ ಬಂದಿದೆ.[ಅಣ್ಣನನ್ನೇ ವಿಷವುಣಿಸಿ ಕೊಂದ ಉತ್ತರ ಕೊರಿಯಾ ಸರ್ವಾಧಿಕಾರಿ?]

 ಸ್ಯಾಮ್ಸಂಗ್ ಕಂಪೆನಿಯಿಂದ ಲಂಚ

ಸ್ಯಾಮ್ಸಂಗ್ ಕಂಪೆನಿಯಿಂದ ಲಂಚ

ಅಷ್ಟೆ ಅಲ್ಲದೆ ಸಾಮ್ಸಂಗ್ ಕಂಪೆನಿಯ ಮುಖ್ಯಸ್ಥನ ಬಳಿ ಅಧ್ಯಕ್ಷೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ದೂರೂ ಇದೆ. 2015ರಲ್ಲಿ ಎರಡು ದೈತ್ಯ ಸ್ಯಾಮ್ಸಂಗ್ ಕಂಪೆನಿಗಳು ವಿಲೀನಗೊಂಡಿದ್ದವು. ಈ ಸಂದರ್ಭ ಜತೆಗೆ ನಿಂತಿದ್ದಕ್ಕೆ ಹಣ ನೀಡುವಂತೆ ಕೇಳಿಕೊಂಡಿದ್ದರು. ಇದೆಲ್ಲಾ ಬಹಿರಂಗವಾಗಿ ಅಧ್ಯಕ್ಷೆ ವಿರುದ್ಧ ದೇಶದಲ್ಲಿ ಭಾರಿ ಪ್ರತಿಭಟನೆಗಳು ಆರಂಭವಾಗಿದ್ದವು. ಕಳೆದ ಪ್ರತಿಭಟನೆಯನ್ನೂ ನಡೆಸಿದ್ದರು.

 ಸಂಸತ್ತಿನಿಂದ ಪದಚ್ಯುತಿ

ಸಂಸತ್ತಿನಿಂದ ಪದಚ್ಯುತಿ

ವಿರೋಧಿಗಳ ಜತೆ ಪರವಾಗಿರುವವರೂ ಪ್ರತಿಭಟನೆಗೆ ಇಳಿದಿದ್ದರು. ಆದರೆ ಲಕ್ಷ ಲಕ್ಷ ಜನರ ಪ್ರತಿಭಟನೆ ಮುಂದೆ ಪಾರ್ಕ್ ಅಭಿಮಾನಿಗಳು ಕಾಣದಾದರು. ಕೊನೆಗೆ ದಶಕದ ಅತೀ ದೊಡ್ಡ ಪ್ರತಿಭಟನೆಗೆ ಮಣಿದು ಅಲ್ಲಿನ ಸಂಸತ್ತು ಪಾರ್ಕ್ ರನ್ನು ಮತದಾನದ ಮೂಲಕ ಪದಚ್ಯುತಗೊಳಿಸಿತು. ಆದರೆ ಇದು ಕೋರ್ಟ್ ಮೆಟ್ಟಿಲು ಹತ್ತಿತು. ಕೊನೆಗೆ ಇದೀಗ ಕೋರ್ಟ್ ಆದೇಶ ಹೊರ ಬಂದಿದ್ದು ಪಾರ್ಕ್ ರನ್ನು ಪದಚ್ಯುತಗೊಳಿಸಿದ ಸಂಸತ್ತಿನ ತೀರ್ಮಾನವನ್ನು ಎತ್ತಿ ಹಿಡಿದಿದೆ.[ದಕ್ಷಿಣ ಕೊರಿಯಾದಲ್ಲಿ ಹಾರಾಡಿದ ಕನ್ನಡ ಬಾವುಟ]

 ತನಿಖೆ ಎದುರಿಸಬೇಕು

ತನಿಖೆ ಎದುರಿಸಬೇಕು

ಇಲ್ಲಿವರೆಗೆ ಆಕೆ ಅಧ್ಯಕ್ಷ ಹುದ್ದೆಯಲ್ಲಿದ್ದುದರಿಂದ ಆಕೆಯ ವಿರುದ್ಧ ತನಿಖೆ ಸಾಧ್ಯವಿರಲಿಲ್ಲ. ಆದರೆ ಈಗ ಪಾರ್ಕ್ ರನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ಬಂಧನ ನಡೆಸಲೂಬಹುದು. ಆಕೆಯ ವಿರುದ್ಧ ತನಿಖೆಯೂ ನಡೆಯಲಿದೆ. ಆಕೆಯ ವಿರೋಧಿಗಳು ಜೈಲಿನ ಕಂಬಿ ಹಿಂದೆ ಕೊಳ ಹಾಕಿದ ಪಾರ್ಕ್ ರನ್ನು ನೋಡಲು ಬಯಸಿದ್ದಾರೆ. ಏನಾಗುತ್ತದೋ ಕಾದು ನೊಡಬೇಕು. ಕನ್ಸರ್ವೇಟಿವ್ ಪಕ್ಷದ ಹ್ವಾಂಗ್ ನೂತನ ಕೊರಿಯಾ ಅಧ್ಯಕ್ಷರಾಗುವ ಸಾಧ್ಯತೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
South Korea's apex court has issued a verdict to remove President Park Geun-hye from office over a corruption scandal. First time in the history a South Korean president has been ousted before the end of their term since democracy replaced dictatorship in the late 1980s.
Please Wait while comments are loading...