• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುರೋಪಿಯನ್ ಪ್ರಜೆಗೆ ಮೊದಲ ಕೊವಿಡ್-19 ಲಸಿಕೆ ಸಿಗುವುದು ಯಾವಾಗ?

|

ನವದೆಹಲಿ, ನವೆಂಬರ್.25: ಯುರೋಪಿಯನ್ ಒಕ್ಕೂಟದ ರಾಷ್ಟ್ರದಲ್ಲಿ ಕೊರೊನಾವೈರಸ್ ಸೋಂಕಿಗೆ ಲಸಿಕೆ ಯಾವಾಗ ಸಿಗುತ್ತದೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಡಿಸೆಂಬರ್ ಕೊನೆ ವಾರದಲ್ಲಿ ಯುರೋಪ್ ರಾಷ್ಟ್ರದ ಮೊದಲ ಪ್ರಜೆಯ ಮೇಲೆ ಕೊವಿಡ್-19 ಲಸಿಕೆ ಪ್ರಯೋಗಿಸಲಾಗುತ್ತದೆ ಎಂದು ಯುರೋಪಿಯನ್ ಆಯೋಗದ ಅಧ್ಯಕ್ಷ ಉರ್ಸುಲಾ ವೊನ್-ದೆರ್-ಲಿಯೆನ್ ಬುಧವಾರ ತಿಳಿಸಿದ್ದಾರೆ.

ಯುರೋಪ್ ರಾಷ್ಟ್ರಗಳಲ್ಲೂ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಟ್ಟಹಾಸ ಮಿತಿ ಮೀರುತ್ತಿದೆ. ಪ್ರತಿನಿತ್ಯ 3,000ಕ್ಕೂ ಹೆಚ್ಚು ಮಂದಿ ಕೊವಿಡ್-19 ಸೋಂಕಿನಿಂದಲೇ ಪ್ರಾಣ ಬಿಡುತ್ತಿದ್ದಾರೆ. ಕೊವಿಡ್-19 ನಿಯಮಗಳನ್ನು ಯಾವುದೇ ಕಾರಣಕ್ಕೂ ಸಡಿಲಿಸುವಂತಿಲ್ಲ ಎಂದು ಹೇಳಿದ್ದಾರೆ.

ಭಾರತೀಯರು ಕೊರೊನಾ ಲಸಿಕೆಗೆ ಎಷ್ಟು ಸನಿಹದಲ್ಲಿದ್ದಾರೆ? ಇಲ್ಲಿದೆ ಮಾಹಿತಿ

ವಿಶ್ವದಾದ್ಯಂತ ಡಿಸೆಂಬರ್.25ರಂದು ಕ್ರಿಸ್ ಮೆಸ್ ಆಚರಣೆ ಬೆನ್ನಲ್ಲೇ ಕೊರೊನಾವೈರಸ್ ಮೂರನೇ ಅಲೆ ಸೃಷ್ಟಿಯಾಗುವ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆ ನಿಗಾ ವಹಿಸಬೇಕಾದ ಅಗತ್ಯವಿದೆ ಎಂದು ಯುರೋಪಿಯನ್ ಆಯೋಗದ ಅಧ್ಯಕ್ಷ ಉರ್ಸುಲಾ ವೊನ್-ದೆರ್-ಲಿಯೆನ್ ಎಚ್ಚರಿಕೆ ನೀಡಿದ್ದಾರೆ.

ಆರು ಕಂಪನಿಗಳ ಜೊತೆ ಲಸಿಕೆಗೆ ಒಪ್ಪಂದ:

ಕೊರೊನಾವೈರಸ್ ಸೋಂಕಿನ ಸಂಶೋಧನೆ ಮತ್ತು ಉತ್ಪಾದನೆ ಪ್ರಕ್ರಿಯೆಯಲ್ಲಿ ತೊಡಗಿರುವ ಆರು ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಡಿಸೆಂಬರ್ ಕೊನೆಯ ವಾರದಲ್ಲಿ ಯುರೋಪ್ ರಾಷ್ಟ್ರದ ಮೊದಲ ಪ್ರಜೆಗೆ ಕೊವಿಡ್-19 ಸೋಂಕಿನ ಲಸಿಕೆಯನ್ನು ನೀಡಲಾಗುತ್ತದೆ. ಲಸಿಕೆಯು ತುಂಬಾ ಅವಶ್ಯಕ ಮತ್ತು ಅನಿವಾರ್ಯವಾದ ಹಿನ್ನೆಲೆಯಲ್ಲಿ ಯಾವ ಪ್ರಮಾಣದಲ್ಲಿ ಯಾರಿಗೆ ಹೆಚ್ಚು ಕೊವಿಡ್-19 ಲಸಿಕೆ ನೀಡುವ ಪ್ರಕ್ರಿಯೆಯಲ್ಲಿ ಆದ್ಯತೆ ನೀಡಬೇಕು ಎನ್ನುವುದರ ಕುರಿತು ತೀರ್ಮಾನಿಸಲಾಗುತ್ತದೆ ಎಂದು ಯುರೋಪಿಯನ್ ಆಯೋಗದ ಅಧ್ಯಕ್ಷ ಉರ್ಸುಲಾ ವೊನ್-ದೆರ್-ಲಿಯೆನ್ ಬುಧವಾರ ತಿಳಿಸಿದ್ದಾರೆ.

   Rohit Sharma ಹಾಗು Ishant Sharma ಟೆಸ್ಟ್ ಸರಣಿಯಿಂದಲೂ ವಾಪಾಸ್ | Oneindia Kannada

   ವಿಶ್ವದಲ್ಲಿ 6,00,86,074 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಮಹಾಮಾರಿಗೆ ಈವರೆಗೂ 14,13,775 ಜನರು ಪ್ರಾಣ ಬಿಟ್ಟಿದ್ದಾರೆ. ಜಗತ್ತಿನಲ್ಲಿ ಈವರೆಗೂ 4,15,33,235 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ. ಅತಿಹೆಚ್ಚು ಕೊರೊನಾವೈರಸ್ ಸೋಂಕಿತರು ಮತ್ತು ಸಾವಿನ ಸಂಖ್ಯೆಯು ಹೆಚ್ಚಾಗಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕಾ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ.

   English summary
   Coronavirus Vaccine: First European Union Citizens May Be Vaccinated Against Coronavirus By December End.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X