ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿಯ ಮೇಲೆ ತಲುಪದೇ ಉಳಿದಿದ್ದ ಅಂಟಾರ್ಕ್ವಿಕಾದಲ್ಲೂ ಕೊರೊನಾವೈರಸ್ ಪತ್ತೆ

|
Google Oneindia Kannada News

ಅಂಟಾರ್ಕ್ವಿಕಾ, ಡಿಸೆಂಬರ್ 24: ಕೊರೊನಾವೈರಸ್ ಇಡೀ ವಿಶ್ವವನ್ನೇ ನಲುಗಿಸಿ ಬಿಟ್ಟಿದೆ. ಇದರಿಂದ ತೊಂದರೆಗೊಳಗಾಗದೇ ಉಳಿದಿದ್ದ ಏಕೈಕ ಖಂಡವೆಂದರೆ ಅದು ಅಂಟಾರ್ಕ್ವಿಕಾ. ಆದರೆ ಈಗ ಅಲ್ಲಿಯೂ ಮೊದಲ ಪ್ರಕರಣ ಪತ್ತೆಯಾಗಿದೆ.

ಸ್ಥಳೀಯ ಮಾಧ್ಯಮದ ವರದಿಯಯ ಪ್ರಕಾರ, ಚಿಲಿಯ ಸಂಶೋಧನಾ ಕೇಂದ್ರದ 36 ಜನರಿಗೆ ಕೊರೊನಾ ಪಾಸಿಟಿವ್ ಆಗಿದೆ. ಇದರಲ್ಲಿ ಚಿಲಿಯ ಮಿಲಿಟರಿಯ 26 ಸೈನಿಕರು ಮತ್ತು 10 ನಿರ್ವಹಣಾ ಕಾರ್ಮಿಕರಲ್ಲಿ ಕೊರೊನಾ ವೈರಸ್ ಸೋಂಕು ದೃಢವಾಗಿದೆ.

ಬ್ರಿಟನ್‌ನಿಂದ ಬಂದಿಳಿದ 11 ಮಂದಿಗೆ ಕೊರೊನಾ ಪಾಸಿಟಿವ್, 50 ಜನರು ಕ್ವಾರಂಟೈನ್‌ಬ್ರಿಟನ್‌ನಿಂದ ಬಂದಿಳಿದ 11 ಮಂದಿಗೆ ಕೊರೊನಾ ಪಾಸಿಟಿವ್, 50 ಜನರು ಕ್ವಾರಂಟೈನ್‌

ಅಂಟಾರ್ಕ್ಟಿಕಾದಲ್ಲಿ, ಮೊದಲಿನಿಂದಲೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಈ ಕಾರಣದಿಂದಾಗಿ ಪ್ರವಾಸಿಗರಿಗೆ ಅಲ್ಲಿಗೆ ಹೋಗಲು ಅವಕಾಶವಿರಲಿಲ್ಲ. ಏತನ್ಮಧ್ಯೆ, ಚಿಲಿಯಿಂದ ಸರಕುಗಳನ್ನು ಹೊತ್ತುಕೊಂಡು ಅಂಟಾರ್ಕ್ಟಿಕಾಗೆ ಒಂದು ತಂಡವು ಆಗಮಿಸಿತು ಮತ್ತು ಸರಕು ಇಳಿಸಿದ ನಂತರ ಮರಳಿದರು. ಏತನ್ಮಧ್ಯೆ, ಆ ಗುಂಪಿನಲ್ಲಿದ್ದ ಕೆಲವು ಜನರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರು. ಇದರ ನಂತರ ಪರೀಕ್ಷೆ ಮುಂದುವರೆದಾಗ, ರೋಗಿಗಳ ಸಂಖ್ಯೆಯೂ 36 ಕ್ಕೆ ಏರಿತು.

First Covid-19 Cases Found In Antarctica: The Last Untouched Continent

ಚಿಲಿಯ ಸೈನ್ಯದ ಪ್ರಕಾರ, ಹೊರಡುವ ಮೊದಲು ಎಲ್ಲಾ ಸಿಬ್ಬಂದಿಯನ್ನು ಪರೀಕ್ಷಿಸಲಾಯಿತು, ನಂತರ ಅವರ ವರದಿಗಳು ಋಣಾತ್ಮಕವಾಗಿದ್ದವು. ಆದರೆ ಇದೀಗ ಕೊರೊನಾವೈರಸ್ ಮುಕ್ತ ಏಕೈಕ ಖಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅಂಟಾರ್ಕ್ವಿಕಾದಲ್ಲೂ ಕೊರೊನಾವೈರಸ್ ಕಾಣಿಸಿಕೊಂಡಿದೆ.

English summary
While the rest of the world is worrying about the new highly transmissible mutant coronavirus strain, Antarctica has recorded its first-ever COVID-19 case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X