ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾಕ್ ನಲ್ಲಿ ಮೊದಲ ಕೊರೊನಾ ವೈರಸ್ ಸೋಂಕಿತ ಪ್ರಕರಣ ಪತ್ತೆ

|
Google Oneindia Kannada News

ಬಾಗ್ದಾರ್, ಫೆಬ್ರವರಿ.24: ಚೀನಾದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್ ಇರಾಕ್ ನಲ್ಲೂ ಪತ್ತೆಯಾಗಿದೆ. ದಕ್ಷಿಣ ಭಾಗದ ನಜಫ್ ನಗರದಲ್ಲಿ ಮೊದಲ ಬಾರಿಗೆ ಸೋಂಕಿತ ಪ್ರಕರಣ ಪತ್ತೆಯಾಗಿರುವ ಬಗ್ಗೆ ಆರೋಗ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ನಜಫ್ ನಗರದಲ್ಲಿ ವಾಸವಿದ್ದ ಇರಾನ್ ವಿದ್ಯಾರ್ಥಿಯಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವ ಬಗ್ಗೆ ಆರೋಗ್ಯ ಸಚಿವಾಲಯ ತಿಳಿಸಿದೆ. ಈಗಾಗಲೇ ಇರಾನ್ ಮತ್ತು ಇರಾಕ್ ನಡುವಿನ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ.

ಕೇರಳದಲ್ಲಿ ಕೊರೊನಾ ಸೋಂಕಿತರೆಲ್ಲ ಗುಣಮುಖ: ವಿಶ್ವಕ್ಕೆ ಮಾದರಿಯಾದ ಭಾರತ ಕೇರಳದಲ್ಲಿ ಕೊರೊನಾ ಸೋಂಕಿತರೆಲ್ಲ ಗುಣಮುಖ: ವಿಶ್ವಕ್ಕೆ ಮಾದರಿಯಾದ ಭಾರತ

ಕೊರೊನಾ ವೈರಸ್ ಸೋಂಕಿತ ವಿದ್ಯಾರ್ಥಿಯು ಇರಾನ್ ಮೂಲದವನು ಎನ್ನಲಾಗಿದೆ. ಎರಡು ರಾಷ್ಟ್ರಗಳ ನಡುವಿನ ಸಂಪರ್ಕ ಸ್ಥಗಿತಗೊಳ್ಳುವ ಮೊದಲೇ ಇರಾಕ್ ಗೆ ಈತನು ಆಗಮಿಸಿದ್ದ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

 First Coronavirus Infected Case Find In Iraq

ವೈದ್ಯಕೀಯ ತಪಾಸಣೆ ವೇಳೆ ಸ್ಪಷ್ಟ:

ಇರಾನ್ ಮೂಲದ ವಿದ್ಯಾರ್ಥಿಯಲ್ಲಿ ಕೊರೊನಾ ವೈರಸ್ ಸೋಂಕಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ವೈದ್ಯಕೀಯ ತಪಾಸಣೆ ವೇಳೆ ವಿದ್ಯಾರ್ಥಿಯಲ್ಲಿ ಮಾರಕ ಸೋಂಕು ಇರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆ ವಿದ್ಯಾರ್ಥಿಯನ್ನು ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು, ಇರಾನ್ ನಲ್ಲಿ 12 ಮಂದಿ ಕೊರೊನಾ ವೈರಸ್ ಗೆ ಪ್ರಾಣ ಬಿಟ್ಟಿದ್ದು, 61 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇರಾನ್ ನಲ್ಲಿ ಸಾವಿನ ಸಂಖ್ಯೆಯು 50ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಇರಾಜ್ ಹರಿರ್ಚಿ ತಿಳಿಸಿದ್ದಾರೆ.

English summary
First Coronavirus Infected Case Find In Iraq. Iran Based Student Infected From Deadly Virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X