ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

102 ದಿನಗಳ ಬಳಿಕ ಮೊದಲ ಕೊರೊನಾವೈರಸ್ ಸೋಂಕು!

|
Google Oneindia Kannada News

ವೆಲ್ಲಿಂಗ್ಟನ್, ಆಗಸ್ಟ್.11: ಕೊರೊನಾವೈರಸ್ ಸೋಂಕು ಹರಡುವಿಕೆಗೆ ನ್ಯೂಜಿಲ್ಯಾಂಡ್ ನಲ್ಲಿ ತೆಗೆದುಕೊಂಡ ಸಮರೋಪಾದಿ ಕ್ರಮಗಳು ಇಡೀ ಜಗತ್ತಿನ ಮಾದರಿಯಾಗಿವೆ. ಕಳೆದ 102 ದಿನಗಳಿಂದ ದೇಶದಲ್ಲಿ ಒಂದೇ ಒಂದು ಸೋಂಕಿತ ಪ್ರಕರಣಗಳು ವರದಿಯಾಗಿಲ್ಲ.

ನ್ಯೂಜಿಲ್ಯಾಂಡ್ ನಲ್ಲಿ ಬರೋಬ್ಬರಿ 102 ದಿನಗಳ ನಂತರ ಮಂಗಳವಾರ ಒಂದು ಕೊರೊನಾವೈರಸ್ ಸೋಂಕಿತ ಪ್ರಕರಣವು ಪತ್ತೆಯಾಗಿದೆ. ಸೋಂಕಿನ ಮೂಲ ಯಾವುದು ಎಂದು ಇನ್ನೂ ಪತ್ತೆಯಾಗಿಲ್ಲ. ದೇಶದಲ್ಲಿ ಸದ್ಯ 22 ಸಕ್ರಿಯ ಪ್ರಕರಣಗಳಷ್ಟೇ ಇರುವುದು ಸ್ಪಷ್ಟವಾಗಿದೆ.

ನ್ಯೂಜಿಲೆಂಡಿನಲ್ಲಿ ಮತ್ತೆ ಕೊವಿಡ್ 19 ಪಾಸಿಟಿವ್ ಸೋಂಕುನ್ಯೂಜಿಲೆಂಡಿನಲ್ಲಿ ಮತ್ತೆ ಕೊವಿಡ್ 19 ಪಾಸಿಟಿವ್ ಸೋಂಕು

ದೇಶದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಐಸೋಲೇಷನ್ ಮತ್ತು ಕ್ವಾರೆಂಟೈನ್ ಕ್ರಮಗಳನ್ನು ಶಿಸ್ತುಬದ್ಧವಾಗಿ ಜಾರಿಗೊಳಿಸಲಾಗಿದೆ. ನ್ಯೂಜಿಲ್ಯಾಂಡ್ ನಲ್ಲಿ ಇದುವರೆಗೂ 1570 ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 1526 ಮಂದಿ ಗುಣಮುಖರಾಗಿದ್ದಾರೆ. ಉಳಿದಂತೆ 22 ಸಕ್ರಿಯ ಪ್ರಕರಣಗಳಿದ್ದರೆ, ಇದುವರೆಗೂ ಮಹಾಮಾರಿಗೆ 22 ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.

First Coronavirus Case Found After 102 Days In New-Zealand

ಆಸ್ಟೇಲಿಯಾದಿಂದ ಬಂದಿದ್ದ ವ್ಯಕ್ತಿಗೆ ಸೋಂಕು:

ಕಳೆದ ಜುಲೈ.30ರಂದು ಆಸ್ಟ್ರೇಲಿಯಾದ ಮೆಲ್ಬರ್ನ್ ನಿಂದ ನ್ಯೂಜಿಲೆಂಡ್ ಗೆ ಆಗಮಿಸಿದ ವ್ಯಕ್ತಿಯಲ್ಲಿ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ಅತಿಹೆಚ್ಚು ಕೊವಿಡ್-19 ಸೋಂಕಿತರಿಗೆ ಹೋಮ್ ಕ್ವಾರೆಂಟೈನ್ ನಲ್ಲಿ ಇರಿಸಿಯೇ ಸೂಕ್ತ ತಪಾಸಣೆ ಮತ್ತು ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಸವಾಲಿನ ಸಂದರ್ಭದಲ್ಲೂ ಸೂಕ್ತ ರೀತಿ ಆರೋಗ್ಯ ಸೇವೆಯನ್ನು ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಆರೋಗ್ಯ ಇಲಾಖೆಯ ಡೈರೆಕ್ಟರ್ ಜನರಲ್ ಆಗಿರುವ ಅಶ್ಲೇ ಭೂಮ್ ಫೀಲ್ಡ್ ಧನ್ಯವಾದ ತಿಳಿಸಿದ್ದಾರೆ.

English summary
First Coronavirus Case Found After 102 Days In New-Zealand. Only 22 Active Cases In Nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X