ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದ ಕೊರೊನಾ ಲಸಿಕೆಯ ಮೊದಲ ಬ್ಯಾಚ್ ಸಿದ್ಧ, ಯಾವಾಗ ಲಭ್ಯ?

|
Google Oneindia Kannada News

ರಷ್ಯಾದ ಕೊರೊನಾ ಲಸಿಕೆಯ ಮೊದಲ ಬ್ಯಾಚ್ ಸಿದ್ಧವಾಗಿದ್ದು, ಆಗಸ್ಟ್ ಅಂತ್ಯದಲ್ಲಿ ಲಭ್ಯವಾಗಲಿದೆ. ಆಗಸ್ಟ್ 11 ರಂದು ಮಾಸ್ಕೋದ ಗಮಲೇಯ ಇನ್‌ಸ್ಟಿಟ್ಯೂಟ್ ಅಭಿವೃದ್ಧಿ ಪಡಿಸಿರುವ ಸ್ಪುಟ್ನಿಕ್ 5 ಲಸಿಕೆಗೆ ಅನುಮತಿ ದೊರೆತಿದೆ. ಸಾರ್ವಜನಿಕವಾಗಿ ಬಳಕೆಗೆ ಅನುಮತಿ ದೊರೆತಿರುವ ಮೊದಲ ಲಸಿಕೆ ಇದಾಗಿದೆ.

Recommended Video

Americaಗೆ ಹೊಟ್ಟೆ ಉರಿಸಲು #Russia ಮಾಡಿದ ಪ್ಲಾನ್ ಇದು | Oneindia Kannada

ಈ ಮೊದಲ ಸೆಪ್ಟೆಂಬರ್‌ನಲ್ಲಿ ಲಸಿಕೆ ಲಭ್ಯವಾಗಲಿದೆ, ಅಕ್ಟೋಬರ್ ವೇಳೆಗೆ ಸಾಮೂಹಿಕವಾಗಿ ಲಸಿಕೆ ಲಭ್ಯವಿದೆ ಎಂದು ಹೇಳಲಾಗಿತ್ತು.ರಷ್ಯಾವು ಅಂತಿಮ ಹಂತದ ಲಸಿಕೆಯ ಪ್ರಯೋಗ ನಡೆಸದೆಯೇ ಸಾರ್ವಜನಿಕ ಬಳಕೆಗೆ ಒಪ್ಪಿಗೆ ನೀಡಿದೆ.ಅನುಮತಿ ದೊರೆತ ವಿಶ್ವದ ಮೊದಲ ಕೊರೊನಾ ಲಸಿಕೆ ಎನ್ನುವ ಖ್ಯಾತಿಗೆ ಲಸಿಕೆ ಪಾತ್ರವಾಗಿದೆ.

ವಿಶ್ವದ ಮೊದಲ ಕೊರೊನಾ ಲಸಿಕೆ ನೋಂದಣಿ ಆಯ್ತು: ಯಾರ ಮೇಲೆ ಮೊದಲ ಪ್ರಯೋಗ?ವಿಶ್ವದ ಮೊದಲ ಕೊರೊನಾ ಲಸಿಕೆ ನೋಂದಣಿ ಆಯ್ತು: ಯಾರ ಮೇಲೆ ಮೊದಲ ಪ್ರಯೋಗ?

ಇದಕ್ಕೂ ಮುನ್ನ ಚೀನಾದಲ್ಲಿ ಲಸಿಕೆಯೊಂದಕ್ಕೆ ಅನುಮತಿ ದೊರೆತಿತ್ತು. ಆದರೆ ಅದರ ಬಳಕೆ ಸೀಮಿತವಾಗಿತ್ತು. ಪೀಪಲ್ಸ್ ಲಿಬರೇಷನ್ ಪಕ್ಷದ ಯೋಧರಿಗೆ ಮಾತ್ರ ಲಸಿಕೆ ನೀಡಲಾಗಿತ್ತು.

ಮೂರನೇ ಹಂತದ ಪ್ರಯೋಗ ನಡೆದಿಲ್ಲ

ಮೂರನೇ ಹಂತದ ಪ್ರಯೋಗ ನಡೆದಿಲ್ಲ

ಮೂರನೇ ಹಂತದ ಪ್ರಯೋಗವಿನ್ನೂ ನಡೆದಿಲ್ಲ, ಆದರೂ ಲಸಿಕೆಗೆ ಅನುಮತಿ ಸಿಕ್ಕಿದೆ, ಆದರೆ ಇದು ಕೋಟ್ಯಂತರ ಜನರ ಜೀವದ ಪ್ರಶ್ನೆ ಈ ಲಸಿಕೆಯನ್ನು ಹೇಗೆ ನಂಬುವುದು ಎಂದು ಭಾರತ, ಜರ್ಮನಿ ಸೇರಿದಂತೆ ಹಲವು ರಾಷ್ಟ್ರಗಳು ಅನುಮಾನ ವ್ಯಕ್ತಪಡಿಸಿದ್ದವು.

ಕೇವಲ ಎರಡು ತಿಂಗಳಲ್ಲಿ ಎರಡು ಹಂತದಲ್ಲಿ ಪ್ರಯೋಗ

ಕೇವಲ ಎರಡು ತಿಂಗಳಲ್ಲಿ ಎರಡು ಹಂತದಲ್ಲಿ ಪ್ರಯೋಗ

ಕೇವಲ ಎರಡೇ ತಿಂಗಳಲ್ಲಿ ಒಂದು ಮತ್ತು ಎರಡನೇ ಹಂತದ ಪ್ರಯೋಗ ನಡೆಸಲಾಗಿದೆ. ಸಾಮಾನ್ಯವಾಗಿ ಲಸಿಕೆ ಅಭಿವೃದ್ಧಿಗೆ ಆರೆಂಟು ತಿಂಗಳು ಅಥವಾ ವರ್ಷಗಳೇ ತಗುಲುತ್ತವೆ. ಆದರೆ ಈ ಲಸಿಕೆ ಮಾತ್ರ ಇಷ್ಟು ಬೇಗ ಅಭಿವೃದ್ಧಿ ಪಡಿಸಲಾಗಿದೆ ಎಂದು ಪ್ರಶ್ನಿಸಿದ್ದರು.

ಒಟ್ಟು ಲಸಿಕೆಗಳು ಎಷ್ಟು?

ಒಟ್ಟು ಲಸಿಕೆಗಳು ಎಷ್ಟು?

ಇಡೀ ವಿಶ್ವದಲ್ಲಿ 160 ಲಸಿಕೆಗಳ ಪ್ರಿ-ಕ್ಲಿನಿಕಲ್ ಟ್ರಯಲ್ ಅಥವಾ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. 29 ಲಸಿಕೆಗಳ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. ಆರು ಲಸಿಕೆಗಳು ಅಂತಿಮ ಹಂತದಲ್ಲಿದೆ, ಮಾನವನ ಮೇಲೆ ಪ್ರಯೋಗದ ಅಂತಿಮ ಘಟ್ಟದಲ್ಲಿದೆ ಸುಮಾರು 8 ಲಸಿಕೆಗಳು ಭಾರತದಲ್ಲಿ ಅಭಿವೃದ್ಧಿಯಾಗುತ್ತಿವೆ, ಎರಡು ಲಸಿಕೆಗಳು ಎರಡನೇ ಹಂತವನ್ನು ತಲುಪಿವೆ.

ಉತ್ಪಾದನಾ ಒಪ್ಪಂದವಿಲ್ಲ

ಉತ್ಪಾದನಾ ಒಪ್ಪಂದವಿಲ್ಲ

ಎಲ್ಲಾ ರೀತಿಯ ಕಾಯಿಲೆಗಳಿಗೆ ಶೇ. 50 ರಷ್ಟು ಲಸಿಕೆಗಳು ಭಾರತದಲ್ಲೇ ತಯಾರಾಗುತ್ತದೆ. ಕೊರೊನಾ ಸೋಂಕಿಗೆ ಹೆಚ್ಚಿನ ಪ್ರಮಾಣದ ಲಸಿಕೆಗಳನ್ನು ಅವರು ಎಲ್ಲಿ ಅಭಿವೃದ್ಧಿಪಡಿಸಿದರೂ ಭಾರತದಲ್ಲಿಯೂ ಉತ್ಪಾದಿಸಬಹುದಾಗಿದೆ ಎಂದು ನಿರೀಕ್ಷಿಸಲಾಗಿದೆ. ಈಗಾಗಲೇ ಲಸಿಕೆ ತಯಾರಿಸುತ್ತಿರುವ ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ತಮ್ಮ ಲಸಿಕೆಯನ್ನು ಸಾಮೂಹಿಕವಾಗಿ ಉತ್ಪಾದಿಸಲು ಒಪ್ಪಂದ ಮಾಡಿಕೊಂಡಿದೆ. ಭಾರತದಲ್ಲಿ ರಷ್ಯಾದ ಲಸಿಕೆ ಉತ್ಪಾದನೆಗೆ ಈಗ ಯಾವುದೇ ಒಪ್ಪಂದವಿಲ್ಲ.

English summary
The first batch of the Russian vaccine for novel Coronavirus has been produced, according to a report in Reuters news agency. Russia had, on August 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X