• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಷ್ಯಾದ ಸ್ಪುಟ್ನಿಕ್ 5 ಕೊರೊನಾ ಲಸಿಕೆಯ ಮೊದಲ ಬ್ಯಾಚ್ ಬಿಡುಗಡೆ

|

ಮಾಸ್ಕೋ, ಸೆಪ್ಟೆಂಬರ್ 08: ವಿಶ್ವದ ಮೊಟ್ಟ ಮೊದಲ ಕೊರೊನಾ ಲಸಿಕೆ ಎನಿಸಿಕೊಂಡಿರುವ ರಷ್ಯಾದ ಸ್ಪುಟ್ನಿಕ್ 5 ಲಸಿಕೆಯ ಮೊದಲ ಬ್ಯಾಚ್ ಬಿಡುಗಡೆಯಾಗಿದೆ.

   Sputnik V Vaccine ಎಲ್ಲಾ ಪ್ರಯೋಗಗಳಲ್ಲೂ ಯಶಸ್ಸು ,Russiaದ ಮತ್ತೊಂದು ಮೈಲುಗಲ್ಲು | Oneindia Kannada

   ಲಸಿಕೆಯನ್ನು ರಷ್ಯಾದ ಗಮಲೇಯ ನ್ಯಾಷನಲ್ ರೆಸರ್ಚ್ ಸೆಂಟರ್ ಆಫ್ ಎಪಿಡೆಮಿಯಾಲಜಿ ಆಂಡ್ ಮೈಕ್ರೋಬಯೋಲಜಿ ಹಾಗೂ ರಷ್ಯಾದ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ ಈ ಲಸಿಕೆ ಉತ್ಪಾದಿಸಿವೆ.

   ಭಾರತದೊಂದಿಗೆ ಕೊರೊನಾ ಲಸಿಕೆಯ ಸಂಪೂರ್ಣ ಮಾಹಿತಿ ಹಂಚಿಕೊಂಡ ರಷ್ಯಾ

   ಈ ಲಸಿಕೆಯು ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತದೆ.ರಷ್ಯಾದ ಆರೋಗ್ಯ ಸಚಿವಾಲಯವು ಆಗಸ್ಟ್ 11 ರಂದು ಸ್ಪುಟ್ನಿಕ್ 5 ಲಸಿಕೆಯನ್ನು ನೋಂದಣಿ ಮಾಡಿತ್ತು. ರಷ್ಯಾದಿಂದ ಲಸಿಕೆ ತರಿಸಿಕೊಳ್ಳುವ ಪ್ರಯತ್ನದಲ್ಲಿ ನಾವಿದ್ದೇವೆ. ರಷ್ಯಾದಲ್ಲಿ ಬಯೋಟೆಕ್ನಾಲಜಿ ವಿಭಾಗದ ಕಾರ್ಯದರ್ಶಿ ರೇಣು ಸ್ವರೂಪ್, ಭಾರತೀಯ ರಾಯಭಾರಿ ಡಿಬಿ ವೆಂಕಟೇಶ್ ವರ್ಮ ಅವರ ಬಳಿ ಮಾತುಕತೆ ನಡೆಸುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ.

   ಸಮಗ್ರ ದತ್ತಾಂಶವನ್ನು ನೀಡಲಾಗಿದ್ದು, ಭಾರತದಲ್ಲಿ ಮೂರನೇ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ಕೋರಿದ್ದಾರೆ. ಭಾರತದಿಂದ ಅನುಮೋದನೆ ಸಿಕ್ಕಿದ ನಂತರ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಭಾರತದಲ್ಲಿ ಆರಂಭವಾಗುತ್ತದೆ.

   ಸ್ಪುಟ್ನಿಕ್ 5 ವೆಬ್‌ಸೈಟ್ ಮಾಹಿತಿ ಪ್ರಕಾರ ಸೌದಿ ಅರೇಬಿಯಾ, ಯುಎಇ, ಬ್ರೆಜಿಲ್ ಮತ್ತು ಫಿಲಿಪೈನ್ಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ರಷ್ಯಾ ಮುಂದಾಗಿದೆ.

   ರಷ್ಯಾದಿಂದ ಲಸಿಕೆ ತರಿಸಿಕೊಳ್ಳುವ ಪ್ರಯತ್ನದಲ್ಲಿ ನಾವಿದ್ದೇವೆ. ರಷ್ಯಾದಲ್ಲಿ ಬಯೋಟೆಕ್ನಾಲಜಿ ವಿಭಾಗದ ಕಾರ್ಯದರ್ಶಿ ರೇಣು ಸ್ವರೂಪ್, ಭಾರತೀಯ ರಾಯಭಾರಿ ಡಿಬಿ ವೆಂಕಟೇಶ್ ವರ್ಮ ಅವರ ಬಳಿ ಮಾತುಕತೆ ನಡೆಸುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ.

   English summary
   The first batch of Sputnik V vaccine against coronavirus, developed by Russia's Gamaleya National Research Center of Epidemiology and Microbiology and RDIF has been released into civil circulation, regional deliveries are planned in the nearest future, the Russian Health Ministry informs.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X