• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮದುವೆ ಮಧ್ಯೆಯೇ ಕೆಲಸಕ್ಕೆ ಹೊರಟ ಭೂಪ, ಹೀಗೂ ಇರ್ತಾರೆ ಸ್ವಾಮೀ!

|

ಮದುವೆ ಆಗಬೇಕಾದ ದಿನಕ್ಕೆ ಎಷ್ಟು ದಿನ ಮುಂಚೆ, ಆ ನಂತರ ಎಷ್ಟು ದಿನ ರಜಾ ತೆಗೆದುಕೊಂಡಿದ್ದೀರಿ? -ಇಂಥ ಮಾತನ್ನು ನೀವು ಕೇಳಿರುವ ಸಾಧ್ಯತೆ ಇದೆ. ಆದರೆ ಅಮೆರಿಕದ ಮಿನಿಸೋಟಾದಲ್ಲಿ ಪುಣ್ಯಾತ್ಮನೊಬ್ಬ ತನ್ನ ಮದುವೆಯನ್ನು ಬಿಟ್ಟು ಕರ್ತವ್ಯಕ್ಕಾಗಿ ತೆರಳಿದ್ದಾನೆ. ಆತನಿಗೆಲ್ಲೋ ಮರೆವಿರಬೇಕು ಅಂದುಕೊಳ್ಳಬೇಡಿ.

ಜೆರೆಮಿ ಮತ್ತು ಕ್ರಿಸ್ಟಾ ಬೊರಸಾ ಸೇಂಟ್ ಪಾಲ್ ಪಾರ್ಕ್ ನಲ್ಲಿ ಮದುವೆ ಆಗಲು ನಿಶ್ಚಯಿಸಿಕೊಂಡಿದ್ದರು. ಅದು ಜೆರೆಮಿ ಕೆಲಸ ಮಾಡುವ ಅಗ್ನಿಶಾಮಕ ದಳದ ಕಚೇರಿ ಜಾಗದಲ್ಲಿ. ಇದು ಕ್ರಿಸ್ಟಾ ಆಲೋಚನೆಯಾಗಿತ್ತು. ಅದಕ್ಕೂ ಮುನ್ನ ಬೇರೆ ಕಡೆ ಮದುವೆ ಆಗುವ ಆಲೋಚನೆಯಲ್ಲಿದ್ದರೂ ಅದ್ಯಾಕೋ ಸಫಲವಾಗಲಿಲ್ಲ.

ರಾಯಲ್ ವೆಡ್ಡಿಂಗ್: ಪ್ರಿನ್ಸ್ ಹ್ಯಾರಿ-ಮೇಘನ್ ಮದುವೆ ಸಂಭ್ರಮ

ಯಾವುದಾದರೂ ತುರ್ತು ಕರೆ ಬಂದರೆ ಏನು ಮಾಡುವುದು ಎಂದು ಈ ಜೋಡಿ ಮುಂಚೆಯೇ ಆಲೋಚಿಸಿತ್ತು. ಆ ದಿನ ತಾನು ಮದುವೆಯಾಗುವ ಹುಡುಗನನ್ನು ಕೆಲಸ ಮೇಲೆ ಕಳಿಸಲು ಮೊದಲಿಗೆ ಆಕೆ ಯಾವ ಕಾರಣಕ್ಕೂ ಸಿದ್ಧವಿರಲಿಲ್ಲ. ಹೇಗಿದ್ದರೂ ಇತರರು ಇರ್ತಾರಲ್ಲ ಎಂಬ ಧೈರ್ಯ ಆಕೆಯದಾಗಿತ್ತು.

ಮದುವೆ ಕಾರ್ಯಕ್ರಮವೇನೋ ತುಂಬ ಚೆನ್ನಾಗಿ ಶುರುವಾಯಿತು. ಮದುವೆ ಪಾರ್ಟಿಯಲ್ಲಿ ಈ ಜೋಡಿ ಫೋಟೋಗಳನ್ನು ತೆಗೆದುಕೊಳ್ಳಲು ಆರಂಭಿಸಬೇಕು ಎನ್ನುವಾಗ ಅಲಾರ್ಮ್ ಮೊಳಗಲು ಆರಂಭವಾಯಿತು.ಅಲ್ಲಿಂದ ಕೆಲವು ಮೈಲು ದೂರದ ಮನೆಯಲ್ಲಿ ಅಗ್ನಿ ಅವಘಡವಾಗಿತ್ತು.

ಜೆರೆಮಿ ಅಲ್ಲಿಂದ ಹೊರಡಬೇಕಿತ್ತು. ಫೋಟೋ ಷೂಟಿಂಗ್ ಮುಗಿಸಬೇಕು ಅಂತಿದ್ದ ತನ್ನ ಪತ್ನಿಯ ಕಡೆಗೆ ನೋಡಿದ. ಅದೇ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಇತರ ಉದ್ಯೋಗಿಗಳಿಗೂ ಬೇರೆ ತುರ್ತು ಕರೆ ಬಂದಿತ್ತು. ಕ್ರಿಸ್ಟಾಗೆ ಪರಿಸ್ಥಿತಿ ಅರ್ಥವಾಯಿತು. ಆತನ ಕಡೆ ನೋಡುತ್ತಾ, "ನೀವು ಹೊರಡಿ. ಅವರಿಗೆ ಸಹಾಯ ಮಾಡಿ ಮತ್ತು ನಿಮಗೆ ಯಾವಾಗ ಸಾಧ್ಯವೋ ವಾಪಸ್ ಬನ್ನಿ" ಎಂದು ಕಳಿಸಿಕೊಟ್ಟಿದ್ದಾಳೆ.

ವಿಡಿಯೋ:ಸಂತ್ರಸ್ತರಿಗಾಗಿ ಎರಡೆಕರೆ ಜಮೀನು ದಾನ ಮಾಡಿದ ಪೂಣಚ್ಚ ಮಾತು ಕೇಳಿ!

"ನನ್ನ ಜೀವನದ ಬಾಕಿ ಆಯುಷ್ಯವನ್ನು ಅವರ ಜತೆ ಕಳೆಯಲು ಸಮಯವಿದೆ. ಆದರೆ ಕಷ್ಟದಲ್ಲಿ ಇರುವವರಿಗೆ ಈ ಕ್ಷಣದಲ್ಲಿ ಅವರ ನೆರವು ಬೇಕು" ಎಂದು ಆಕೆ ಹೇಳಿದ್ದಾರೆ. ಇನ್ನೂ ಒಂದು ಸಂಗತಿ ಏನೆಂದರೆ, ಕ್ರಿಸ್ಟಾಳ ಸಂಬಂಧಿಗಳು ಎರಡು ವರ್ಷದ ಹಿಂದೆ ಸಂಭವಿಸಿದ ಅಗ್ನಿ ಅವಘಡವೊಂದರಲ್ಲಿ ಮೃತಪಟ್ಟಿದ್ದರು. ಆಕೆಗೆ ಜೆರೆಮಿಯ ಕೆಲಸದ ಪ್ರಾಮುಖ್ಯ ತುಂಬ ಚೆನ್ನಾಗಿ ಗೊತ್ತಿತ್ತು.

ಜೆರೆಮಿ ತನ್ನ ಕರ್ತವ್ಯ ಮುಗಿಸಿ ಮದುವೆ ಪಾರ್ಟಿಗೆ ಹಿಂತಿರುಗಿದ. ಆಗಿನ್ನೂ ತಡವಾಗಿರಲಿಲ್ಲ. ಕ್ರಿಸ್ಟಾ ಜತೆಗೆ ಮನಸಾರೆ ನೃತ್ಯ ಮಾಡಿದ. "ಕ್ರಿಸ್ಟಾ ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಳು. ಇದರಿಂದ ನಮ್ಮ ಮಧ್ಯೆ ಬಾಂಧವ್ಯ ಇನ್ನಷ್ಟು ಗಟ್ಟಿಯಾಯಿತು" ಎಂದು ಆತ ಹೇಳಿಕೊಂಡಿದ್ದಾನೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Duty comes first, even on the day of wedding! The conjugal lives of Jeremy and Krista Bourasa started earlier this month with the groom, a firefighter by profession, taking a leave on Wedding day to reach out a family in distress.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more