ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಕ್ಷ್ಯ ಚಿತ್ರ ಮಾಡುವಾಗಲೇ ಕೊಲಂಬಿಯಾದಲ್ಲಿ ಚಿತ್ರಕರ್ಮಿಯನ್ನು ಗುಂಡಿಟ್ಟು ಹತ್ಯೆ

|
Google Oneindia Kannada News

ಬಗೋಟಾ (ಕೊಲಂಬಿಯಾ), ಮೇ 10: ಕೊಲಂಬಿಯಾದ ಈಶಾನ್ಯ ಭಾಗದಲ್ಲಿ ನಡೆದ ಹಿಂಸಾಚಾರದ ಸಂತ್ರಸ್ತರ ಬಗ್ಗೆ ಸಾಕ್ಷ್ಯಚಿತ್ರ ತೆಗೆಯುವ ವೇಳೆ ಚಿತ್ರಕರ್ಮಿ ಗುರುವಾರ ಗುಂಡಿಟ್ಟು ಕೊಲ್ಲಲಾಗಿದೆ. ಮಾರಿಸಿಯೋ ಲೆಜಾಮ ಹತ್ಯೆಗೆ ಈಡಾದವರು. ಆ ದೇಶದಲ್ಲಿನ ನಾಗರಿಕ ಯುದ್ಧದಲ್ಲಿ ಸಂತ್ರಸ್ತರಾದವರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿತ್ತು.

ಆ ವೇಳೆ ಅರೌಕಿಟ ಪಟ್ಟಣದಲ್ಲಿ ನಾಲ್ವರು ಶಸ್ತ್ರಧಾರಿಗಳಿಂದ ಗುಂಡಿನ ದಾಳಿಯಾಗಿ, ಮೃತ ಪಟ್ಟಿದ್ದಾರೆ. ಸಾಕ್ಷ್ಯ ಚಿತ್ರಕ್ಕೆ 'ಮೇಯೋ' ಎಂದು ಹೆಸರಿಡಲಾಗಿದೆ. ಅದನ್ನು ಅರೌಕ ಇಲಾಖೆ ಪ್ರದೇಶದಲ್ಲಿ ಹತ್ಯೆಯಾದ ನರ್ಸ್ ಗೆ ಅರ್ಪಿಸಲಾಗಿದೆ. ಈ ಸ್ಥಳವು ವೆನಿಜುವೆಲಾದ ಜತೆ ಗಡಿಯನ್ನು ಹಂಚಿಕೊಳ್ಳಲಿದ್ದು, ಕಳ್ಳ ಸಾಗಣೆ ಹಾಗೂ ಮಾದಕ ವಸ್ತು ಸಾಗಣೆಗೆ ಕುಖ್ಯಾತಿ ಪಡೆದಿದೆ.

Film maker shot dead in Colombia while shooting documentary

ಅಂದಾಜು ಸಾವಿರದ ಏಳು ನೂರು ಎಫ್ ಎಆರ್ ಸಿ ಭಿನ್ನಮತೀಯರು ಹಾಗೂ ನ್ಯಾಷನಲ್ ಲಿಬರೇಷನ್ ಆರ್ಮಿ ಹೋರಾಟಗಾರರು ಈಗಲೂ ಕೊಲಂಬಿಯಾದಲ್ಲಿ ಸಕ್ರಿಯರಾಗಿದ್ದಾರೆ. ಸರಕಾರದ ಜತೆಗೆ ಕ್ರಾಂತಿಕಾರಿಗಳು ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿದ್ದರು. ಆದರೆ ಅದನ್ನು ಎಫ್ ಎಆರ್ ಸಿ ನಿರಾಕರಿಸಿತ್ತು. ಇದೆಲ್ಲ ಎರಡೂವರೆ ವರ್ಷದ ಹಿಂದೆ. ಈಗಿನ ಹತ್ಯೆಗೆ ಆ ನಿರ್ಧಾರವೇ ಕಾರಣ ಎಂದು ಆರೋಪಿಸಲಾಗಿದೆ.

English summary
Mauricio Lezama- a Colombian film-maker was shot dead on Thursday while making a documentary 'Mayo'. This documentary on the victims of violence in the northeast of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X