• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವಕಪ್: ಸ್ಪೇನ್ ವಿರುದ್ಧ ಸೇಡು ತೀರಿಸಿಕೊಂಡ ಡಚ್ಚರು

By Mahesh
|

ಸಾಲ್ವಡಾರ್, ಜೂ.14: 2010ರ ವಿಶ್ವಕಪ್ ಫೈನಲ್ ಪಂದ್ಯ ಸೋತಿದ್ದ ನೆದರ್ಲೆಂಡ್ ತಂಡ ನಾಲ್ಕು ವರ್ಷಗಳ ನಂತರ ಬ್ರೆಜಿಲ್ಲಿನಲ್ಲಿ ತನ್ನ ಸೇಡು ತೀರಿಸಿಕೊಂಡಿದೆ. ಹಾಲಿ ಚಾಂಪಿಯನ್ ಸ್ಪೇನ್ ತಂಡ 1-5 ಹೀನಾಯ ಸೋಲು ಕಂಡು ತಲೆ ತಗ್ಗಿಸಿದೆ.

2010 ರಲ್ಲಿ ಏಕೈಕ ಗೋಲು ಹೊಡೆದಿದ್ದ ಸ್ಪೇನ್ 20104ರಲ್ಲಿ ಹಾಲೆಂಡ್ ವಿರುದ್ಧ ಪಂದ್ಯದಲ್ಲೂ ಏಕೈಕ ಗೋಲು ಗಳಿಸಲು ಮಾತ್ರ ಸಾಧ್ಯವಾಯಿತು. ವಿವಾದಿತ ಫಾರ್ವರ್ಡ್ ಡಿಯಾಗೋ ಕೋಸ್ಟಾ ಮೂಲಕ ಸಿಕ್ಕ ಪೆನಾಲ್ಟಿ(27ನೇ ನಿಮಿಷ )ಯನ್ನು ಗೋಲಾಗಿ ಕ್ಸಾವಿ ಅಲಾನ್ಸೊ ಪರಿವರ್ತಿಸಿ ಲೀಡ್ ತಂದುಕೊಟ್ಟರು. ಆದರೆ, ಮುಂದೆ ನಡೆದಿದ್ದೆಲ್ಲ ಇತಿಹಾಸ. ರಾಬಿ, ರಾಬೆನ್ ಜೋಡಿ ದಾಳಿಗೆ ಸಿಲುಕಿದ ಸ್ಪೇನ್ ಗೂಳಿಗಳು ನಲುಗಿ ಬಿಟ್ಟರು. [ಕೋಸ್ಟಾ ದೇಶದ್ರೋಹಿಯೇ?]

ಪಂದ್ಯದ 44ನೇ ನಿಮಿಷದಲ್ಲಿ ರಾಬಿನ್ ವಾನ್ ಪರ್ಸಿ ಹೆಡ್ ಮಾಡುವ ಮೂಲಕ ಅದ್ಭುತ ಗೋಲು ಹೊಡೆದು ಮಧ್ಯಂತರ ವಿರಾಮ ಹಾಡಿದರು. ಎರಡನೇ ಅವಧಿಯಲ್ಲಿ ಸ್ಪೆನ್ ಆಕ್ರಮನಕಾರಿ ಆಟ ಮರೆತ್ತಿದ್ದು ಹಾಲೆಂಡ್ ಗೆ ವರವಾಯಿತು. ವ್ರಿಜ್(65), ರಾಬೆನ್(80ನೇ ನಿಮಿಷ), ವ್ಯಾನ್ ಪರ್ಸಿ(44, 72) ನಾಲ್ಕು ಗೋಲು ಬಾರಿಸಿದ ಡಚ್ಚರು ಅಂತಿಮವಾಗಿ ಪಂದ್ಯವನ್ನು 5-1 ಅಂತರದಿಂದ ಗೆದ್ದು ಬೀಗಿದರು.

Netherlands destroy defenders Spain 5-1

ಸ್ಪೇನ್ ಎಡವಿದ್ದು ಹೇಗೆ?: ಸ್ಪೇನ್ ಆಕ್ರಮಣಕಾರ ಕೊರತೆ ಎದುರಿಸಿದ್ದು ಹಾಗೂ ಭದ್ರತಾ ಪಡೆ ಕಡೆಗಣಿಸಿದ್ದು ಎಡವಲು ಕಾರಣವಾಯಿತು. ಈ ಹುಳುಕನ್ನು ಗುರುತಿಸಿದ ಡಚ್ ಫಾರ್ವರ್ಡ್ ಆಟಗಾರರು ಸುಲಭವಾಗಿ ರಕ್ಷಣಾ ಪಡೆ ಛೇದಿಸಿ ಮುನ್ನುಗಿ ಗೋಲು ಗಳಿಸಿದರು. ಇಲ್ಲದಿದ್ದರೆ ನಂ.1 ಗೋಲಿ ಐಕಾರ್ ಕ್ಯಾಸಿಲಾಸ್ ಇಷ್ಟು ಕಳಪೆ ಪ್ರದರ್ಶನ ನೀಡಲು ಸಾಧ್ಯವಿರಲಿಲ್ಲ.

ಡೇವಿಡ್ ವಿಲ್ಲಾ ಅಥವಾ ಟೊರೆಸ್ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ತಂಡದಲ್ಲಿ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ನಿಜವಾಯಿತು. ಟೊರೆಸ್ ಮೈದಾನಕ್ಕೆ ಬದಲಿ ಆಟಗಾರನಾಗಿ ಇಳಿದಿದ್ದು 62ನೆ ನಿಮಿಷದ ನಂತರ... ಆ ವೇಳೆಗಾಗಲಿ ಡಚ್ಚರು ಡಿಚ್ಚಿ ಹೊಡೆಯಲು ಆರಂಭಿಸಿದ್ದರು. ಸ್ಪೇನ್ ಮುಂಪಡೆಯಲ್ಲಿ ಇನಿಯಾಸ್ಟಗೆ ಸೂಕ್ತ ಬೆಂಬಲ ಇರಲಿಲ್ಲ ಹೀಗಾಗಿ ದಾಳಿ ಮಾಡಲು ಸಾಧ್ಯವಾಗಲಿಲ್ಲ. [ತಂತ್ರಗಾರಿಕೆ ಹೇಗಿತ್ತು?]

ಸ್ಪೇನ್ vs ನೆದರ್ಲೆಂಡ್ ಅಂಕಿ ಅಂಶ:

* ಗೋಲ್ ಪೋಸ್ಟ್ ನತ್ತ ಒದ್ದಿದ್ದು(ಆನ್ ಟಾರ್ಗೆಟ್): ಸ್ಪೇನ್ 9(6) >> ನೆದರ್ಲೆಂಡ್ 6(11)

* ಫೌಲ್ಸ್: ಸ್ಪೇನ್ 5 >> ನೆದರ್ಲೆಂಡ್ 18

* ಕಾರ್ನರ್: ಸ್ಪೇನ್ 4 >> ನೆದರ್ಲೆಂಡ್ 1

* ಚೆಂಡಿನ ಹಿಡಿತ: ಸ್ಪೇನ್ 57% >> ನೆದರ್ಲೆಂಡ್ 43%

* ಆಫ್ ಸೈಡ್ : ಸ್ಪೇನ್ 5 >> ನೆದರ್ಲೆಂಡ್ 5

* ಹಳದಿ ಕಾರ್ಡ್: ಸ್ಪೇನ್ 1 >> ನೆದರ್ಲೆಂಡ್ 3

English summary
The Netherlands, who lost to Spain in the final of the 2010 World Cup in South Africa, took a sweet revenge at the Arena Fonte Nova here on Friday when they trounced the defending champions 5-1 in their opening match of the 2014 Fifa World Cup.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more