• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವಕಪ್: ಶಕೀರಾ,ಜೆಎಲ್ಒ-ಪಿಟ್ಬುಲ್ ಫೈಟ್

By Mahesh
|

ಫೀಫಾ ವಿಶ್ವಕಪ್ ಫುಟ್ಬಾಲ್‌ಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಸಂಗೀತ ಲೋಕದಲ್ಲಿ ಹೊಸ ಸಂಚಲನ ಉಂಟಾಗಿದೆ. ಪಾಪ್ ಗಾಯಕಿ ಶಕೀರಾ, ಜೆನ್ನಿಫರ್ ಲೊಪೇಜ್, ಪಿಟ್ ಬುಲ್ ಸೇರಿದಂತೆ ಅನೇಕ ಜನಪ್ರಿಯ ಗಾಯಕರು ಹಾಗೂ ಅವರ ತಂಡ ಪೀಫಾ ವಿಶ್ವಕಪ್ ಗೀತೆ ಹಾಡುವ ಮೂಲಕ ಅಭಿಮಾನಿಗಳಲ್ಲಿ ಕಿಚ್ಚೆಬ್ಬಿಸಿದ್ದಾರೆ.

2010ರಲ್ಲಿ ಫೀಫಾ ವಿಶ್ವಕಪ್ ಫುಟ್ಬಾಲ್‌ನ ಅಧಿಕೃತ ಹಾಡು 'ವಾಕಾ ವಾಕಾ'(ದಿಸ್ ಟೈಮ್ ಫಾರ್ ಸೌತ್ ಆಫ್ರಿಕಾ)ವನ್ನು ಹಾಡಿ ಎಲ್ಲರ ಮನಸೂರೆ ಮಾಡಿದ್ದ ಶಕೀರಾ ಈಗ 2014ರ ವಿಶ್ವಕಪ್ ನಲ್ಲಿ ವಿಶ್ವಕಪ್ ಫುಟ್ಬಾಲ್ ಹಾಡು 'ಲಾ ಲಾ ಲಾ'. ಎಂದು ಹಾಡುವ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸೆಳೆದಿದ್ದಾರೆ.

ಬ್ರೆಜಿಲ್‌ನ ಮ್ಯೂಸಿಶಿಯನ್ ಕಾರ್ಲಿನೋಸ್ ಬ್ರೌನ್ ಅವರು ಸಾಂಗ್ ರೆಕಾರ್ಡ್ ಮಾಡಿದ್ದು ಎರಡನೆ ಬಾರಿಗೆ ವಿಶ್ವಕಪ್ ಫುಟ್ಬಾಲ್ ಹಾಡು ರೆಕಾರ್ಡ್ ಮಾಡಿದ ಶಕೀರಾ ಎಲ್ಲರ ಗಮನ ಸೆಳೆದಿದ್ದಾರೆ.[ವಿಶ್ವಕಪ್ 2014 ಟೂರ್ ಗೈಡ್]

ಈ 'ಲಾ ಲಾ ಲಾ' ಆಲ್ಬಂ ಈಗಾಗಲೇ ಫುಟ್ಬಾಲ್ ಕ್ಷೇತ್ರದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಫೀಫಾ 2014ರ ವಿಶ್ವಕಪ್ ಫುಟ್ಬಾಲ್‌ನ ಐಕ್ಯಮಂತ್ರವೆನಿಸಿದ 'ಒನ್ ಲವ್, ನ್ ರಿದಂ' ಎಂಬ ಈ ಹಾಡಿನ ವೀಡಿಯೊ ಟ್ರ್ಯಾಕ್‌ನಲ್ಲಿ ಶಕೀರಾ ಕಪ್ಪು ಬಣ್ಣದ ಸ್ಕರ್ಟ್ ಹಾಗೂ ಕಪ್ಪು ಬಣ್ಣದ ಲೆದರ್ ಕ್ರಾಪ್ ಟಾಪ್‌ನಲ್ಲಿ ಮಿಂಚಿದ್ದು, ಸಖತ್ ಡಾನ್ಸ್ ಮಾಡಿದ್ದಾರೆ.

ಪ್ರತಿ ಆಲ್ಬಂನಿಂದ ಬರುವ ಹಣ ಗಳಿಕೆಯ ಅರ್ಧಕ್ಕೂ ಅಧಿಕ ಮೊತ್ತವನ್ನು ಬಡಬಗ್ಗರಿಗೆ ಹಂಚುತ್ತಿರುವ ಶಕೀರಾ ಈ ಬಾರಿ ಕೂಡಾ ಬ್ರೆಜಿಲ್ ನ ಬಡವರಿಗೆ ಕೊಡುಗೆ ನೀಡಲಿದ್ದಾರೆ. ಜೆನ್ನಿಫರ್ ಲೊಪೆಜ್, ಪಿಟ್ ಬುಲ್ ಗಾಯನದ ವಿಡಿಯೋ ಕೂಡಾ ಇಲ್ಲಿದೆ ನೋಡಿ...

ತಾರೆಗಳ ಜತೆ ಶಕೀರಾ ಕೂಡಾ ಸಕತ್ ಸ್ಟೆಪ್ಸ್

ತಾರೆಗಳ ಜತೆ ಶಕೀರಾ ಕೂಡಾ ಸಕತ್ ಸ್ಟೆಪ್ಸ್

ವಿಶ್ವಕಪ್ ಫುಟ್ಬಾಲ್‌ನ ಥಮ್ ಗೀತೆಯನ್ನು 37ರ ಹರೆಯದ ಕೊಲಂಬಿಯಾದ ಪಾಪ್ ತಾರೆ ಶಕೀರಾ ಹಾಡಿದ್ದು, ಅದರ ವೀಡಿಯೊ ಫ್ಯೂಚರ್‌ಗಳನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ.

ವಿಶ್ವಶ್ರೇಷ್ಠ ಫುಟ್ಬಾಲಿಗರಾದ ಬ್ರೆಝಿಲ್‌ನ ಕಾರ್ಲಿನೋಸ್ ಬ್ರೌನ್, ಲಿಯೋನೆಲ್ ಮೆಸ್ಸಿ, ಸೆಸ್ಕ್ ಫ್ಯಾಬ್ರಿಗ್ಸ್, ಎರಿಕ್ ಅಬಿದಲ್, ನೆಯ್ಮಾರ್, ಜೇಮ್ಸ್ ರಾಡ್ರಿಗ್ಸ್, ಸರ್ಜಿಯೋ ಅಗ್ವೆರೊ, ಫಾಲ್ಕೊ ಅಲ್ಲದೆ ಶಕೀರಾ ಅವರ ದೀರ್ಘಕಾಲದ ಬಾಯ್‌ಫ್ರೆಂಡ್ ಕಮ್ ಪತಿ ಸ್ಪೇನ್‌ನ ಜೆರಾಲ್ಡ್ ಪಿಕ್ ಕೂಡ ಶಕೀರಾ ಜತೆ ಸ್ಟೆಪ್ಸ್ ಹಾಕಿದ್ದಾರೆ

ವೈವಿಧ್ಯಮಯ ವಿಶ್ವಕಪ್ ಆಶಯ ಗೀತೆ

ಕೊಲಂಬಿಯಾ ಮೂಲದ ಹಾಟ್ ಪಾಪ್ ಸಿಂಗರ್ ಇಸಬೆಲ್ ಮೆಬರಕ್ ರಿಪೊಲ್ ಅಲಿಯಾಸ್ ಶಕೀರಾ ಅವರ ಪ್ರತಿ ಗೀತೆಯಲ್ಲೂ ವೈವಿಧ್ಯತೆ ಎದ್ದು ಕಾಣುತ್ತದೆ, ತಾರೆಗಳ ಜತೆ ಸ್ಥಳೀಯ ಕಲಾವಿದರನ್ನು ಬಳಸಿಕೊಳ್ಳುವುದು ಶಕೀರಾ ಸ್ಟೈಲ್

ರಾಷ್ಟ್ರಧ್ವಜಗಳನ್ನೂ ವೀಡಿಯೊದಲ್ಲಿ ಅಳವಡಿಸಲಾಗಿದೆ

ರಾಷ್ಟ್ರಧ್ವಜಗಳನ್ನೂ ವೀಡಿಯೊದಲ್ಲಿ ಅಳವಡಿಸಲಾಗಿದೆ

ಶಕೀರಾ-ಜೆರಾಲ್ಡ್ ಅವರ 16 ತಿಂಗಳ ಪುತ್ರ ಮಿಲನ್ ಕೂಡ ಈ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದಾನೆ. ಮಿಲನ್ ಫುಟ್ಬಾಲ್ ಚೆಂಡನ್ನು ಕಾಲಿನಿಂದ ಒದೆಯುವ ದೃಶ್ಯವನ್ನು ಈ ಆಲ್ಬಂನಲ್ಲಿ ಸೆರೆ ಹಿಡಿಯಲಾಗಿದೆ. ಜತೆಗೆ ಈ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಎಲ್ಲ ದೇಶಗಳ ರಾಷ್ಟ್ರಧ್ವಜಗಳನ್ನೂ ವೀಡಿಯೊದಲ್ಲಿ ಅಳವಡಿಸಲಾಗಿದೆ.

ವಲ್ಡ್ ಫುಡ್ ಪ್ರೋಗ್ರಾಂ-ಡಬ್ಲ್ಯೂಎಫ್‌ಪಿ ಸಹಾಯ

ವಲ್ಡ್ ಫುಡ್ ಪ್ರೋಗ್ರಾಂ-ಡಬ್ಲ್ಯೂಎಫ್‌ಪಿ ಸಹಾಯ

ವಿಶ್ವ ಆಹಾರ ಕಾರ್ಯಕ್ರಮ (ವಲ್ಡ್ ಫುಡ್ ಪ್ರೋಗ್ರಾಂ-ಡಬ್ಲ್ಯೂಎಫ್‌ಪಿ) ಎಂಬ ಹಸಿವಿನಿಂದ ಬಳಲುತ್ತಿರುವವರಿಗೆ ಸಹಾಯ ಮಾಡುವ, ಹೋರಾಡುವ ಸಂಸ್ಥೆ ವಿಶ್ವದಾದ್ಯಂತ ಅತ್ಯುತ್ತಮ ಕೆಲಸ ಮಾಡುತ್ತಿದ್ದು, ಅದಕ್ಕೆ ನೆರವಾಗುವ ನಿಟ್ಟಿನಲ್ಲಿ ಲಾ ಲಾ ಲಾ (ಬ್ರೆಜಿಲ್ 2014) ತಂಡ ಈ ರೀತಿ ಸಹಾಯ ಮಾಡುತ್ತಿದೆ ಎಂದು ಶಕೀರಾ ಹೇಳಿದ್ದಾರೆ.

ಪಿಟ್ ಬುಲ್ ವಿ ಆರ್ ಒನ್ ಹಾಡು

ಪಿಟ್ ಬುಲ್ ವಿ ಆರ್ ಒನ್ ಹಾಡಿನಲ್ಲಿ ಹಾಲಿವುಡ್ ನಟಿ ಹಾಗೂ ಪಾಪ್ ಗಾಯಕಿ ಜೆನ್ನಿಫರ್ ಲೋಪೇಜ್ ಕೂಡಾ ಕಾಣಿಸಿಕೊಂಡು ಜನಪ್ರಿಯತೆ ಹೆಚ್ಚಿಸಿದ್ದಾರೆ.

ಹಾಟ್ ಪಾಪ್ ತಾರೆ ಗ್ರೇಟ್ ದಾನಿ

ಹಾಟ್ ಪಾಪ್ ತಾರೆ ಗ್ರೇಟ್ ದಾನಿ

Pies Descalzos Foundation ಎಂಬ ದತ್ತಿ ಸಂಸ್ಥೆ ಸ್ಥಾಪಿಸಿರುವ ಶಕೀರಾ, ತನ್ನ ದುಡಿಮೆಯ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಯಥೇಚ್ಛವಾಗಿ ಬಳಸುತ್ತಿದ್ದಾರೆ. ಯುನಿಸೆಫ್ ನ ಗುಡ್ ವಿಲ್ ನ ರಾಯಭಾರಿಯಾಗಿರುವ ಶಕೀರಾ, ಮಕ್ಕಳ ಶಿಕ್ಷಣ, ಆರೋಗ್ಯದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದ್ದಾರೆ.

ಒಂದು ಅಂದಾಜಿನ ಪ್ರಕಾರ ಶಕೀರಾ ಕನಿಷ್ಟವೆಂದರೂ 55,000ಡಾಲರ್ ನಷ್ಟು ಹಣವನ್ನು ಒಂದು ವರ್ಷದ ದಾನ ಧರ್ಮಕಾರ್ಯಗಳಿಗೆ ಮೀಸಲಿಡುತ್ತಾರೆ. ಹೆಚ್ಚಿನ ಓದಿಗೆ ಇಲ್ಲಿ ಕ್ಲಿಕ್ ಮಾಡಿ

rn

ವಿಶ್ವಕಪ್ 2014ರ ಮತ್ತೊಂದು ಥೀಮ್ ಸಾಂಗ್

ಲಾ ಕೋಪಾ ಡಿ ಟೊಡೋಸ್ ಹೆಸರಿನ ಮತ್ತೊಂದು ಥೀಮ್ ಸಾಂಗ್

rn

ವಿಶ್ವಕಪ್ ಫುಟ್ಬಾಲ್‌ನ ಅಧಿಕೃತ ಹಾಡು

2010ರ ಫೀಫಾ ವಿಶ್ವಕಪ್ ಫುಟ್ಬಾಲ್‌ನ ಅಧಿಕೃತ ಹಾಡು 'ವಾಕಾ ವಾಕಾ'(ದಿಸ್ ಟೈಮ್ ಫಾರ್ ಸೌತ್ ಆಫ್ರಿಕಾ)ವನ್ನು ಶಕೀರಾ ಹಾಡಿದ್ದರು. ಅಂದು ಆ ಹಾಡು ಭರ್ಜರಿ ಯಶಸ್ಸು ಗಳಿಸಿತ್ತು.

English summary
The biggest rivalry of the World Cup may not even be on the field, but in the competitive world of commercial music. Jennifer Lopez (J-Lo, Jenny from the Block, etc.) and Pitbull (Lil' Chico, Mr. 305, Dog-Man) after the dynamic musical duo released their official World Cup song, "We Are One (Ole Ola).”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X