ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನಕ್ಕೆ ಮತ್ತೊಂದು ಸರ್ಜಿಕಲ್ ದಾಳಿಯ ಭಯ

|
Google Oneindia Kannada News

ಇಸ್ಲಾಮಾಬಾದ್, ಡಿಸೆಂಬರ್ 10: ಭಾರತ ಮತ್ತೆ ಸರ್ಜಿಕಲ್ ದಾಳಿ ಮಾಡಬಹುದು ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.

ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತರ ಅನಿರ್ಧಿಷ್ಟಾವಧಿ ಪ್ರತಿಭಟನೆಯಿಂದ 'ಗಮನವನ್ನು ಬೇರೆಡೆ ಸೆಳೆಯಲು' ಭಾರತ ಸರ್ಕಾರವು ತಮ್ಮ (ಪಾಕಿಸ್ತಾನ) ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಬಹುದು ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

2016ರಲ್ಲಿ ನಡೆದಿದ್ದೇ ಮೊದಲ ಸರ್ಜಿಕಲ್ ಸ್ಟ್ರೈಕ್: ಸೇನೆ ಹೇಳಿಕೆಯಿಂದ ಕಾಂಗ್ರೆಸ್‌ಗೆ ಮುಜುಗರ2016ರಲ್ಲಿ ನಡೆದಿದ್ದೇ ಮೊದಲ ಸರ್ಜಿಕಲ್ ಸ್ಟ್ರೈಕ್: ಸೇನೆ ಹೇಳಿಕೆಯಿಂದ ಕಾಂಗ್ರೆಸ್‌ಗೆ ಮುಜುಗರ

ಇದೇ ಹಿನ್ನೆಲೆಯಲ್ಲಿ ಭಾರತದ ಗಡಿಯಲ್ಲಿರುವ ಸೈನಿಕರಿಗೆ ಅತ್ಯಂತ ಎಚ್ಚರಿಕೆಯಿಂದ ಇರುವಂತೆ ಅಲ್ಲಿನ‌ ಸರ್ಕಾರ ಸೂಚಿಸಿದೆ. ಅದನ್ನು ಮಾಧ್ಯಮಗಳು ವರದಿ ಮಾಡಿವೆ.

Fearing A Surgical Strike By India, Pakistani Army Put On High Alert

ಭಾರತದ ಗಡಿಯಲ್ಲಿರುವ ಸೈನಿಕರಿಗೆ ಅತ್ಯಂತ ಎಚ್ಚರಿಕೆಯಿಂದ ಇರುವಂತೆ ಅಲ್ಲಿನ‌ ಸರ್ಕಾರ ಸೂಚಿಸಿದೆ ಎಂದು ತಿಳಿಸಿವೆ. ಪಾಕಿಸ್ತಾನ ಮಾಧ್ಯಮಗಳು ಹೀಗೆ ವರದಿ ಮಾಡಿರುವುದು, ಪಾಕಿಸ್ತಾನ ಸರ್ಕಾರ ಭಾರತದ ಮೇಲೆ ಈ ರೀತಿ ಅನುಮಾನ ಪಡುತ್ತಿರುವುದಕ್ಕೆ ಕಾರಣ ಹೀಗಿದೆ.

ರೈತರ ಅನಿರ್ದಿಷ್ಟಾವಧಿ ಪ್ರತಿಭಟನೆಯಿಂದ ಗಮನವನ್ನು ಬೇರೆಡೆ ಸೆಳೆಯಲು' ಭಾರತ ಸರ್ಕಾರವು ಪಾಕಿಸ್ತಾನ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಬಹುದು ಎಂದು ಸೇನೆಗೆ ಸೂಚಿಸಿದೆ ಎಂದು ಪಾಕಿಸ್ತಾನದ ಪ್ರಮುಖ ಪತ್ರಿಕೆ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್' ವರದಿ ಮಾಡಿದೆ.

ಅಲ್ಪಸಂಖ್ಯಾತರು, ರೈತ ಚಳುವಳಿ ಮತ್ತು ಕಾಶ್ಮೀರದ ವಿಷಯಕ್ಕೆ ಸಂಬಂಧಿಸಿದಂತೆ ಭಾರತವು ಸಾಕಷ್ಟು ಒತ್ತಡಕ್ಕೆ ಸಿಲುಕಿದೆ ಎಂದು ವಿವರಿಸಿದೆ.

ಪಾಕಿಸ್ತಾನದ ಸೇನೆ ಭಾರತ-ಪಾಕಿಸ್ತಾನ ಗಡಿಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಿದೆ ಎಂದು ಹಲವಾರು ವಿಶ್ವಾಸಾರ್ಹ ಮೂಲಗಳು ಬಹಿರಂಗಪಡಿಸಿರುವುದಾಗಿ 'ಪಾಕಿಸ್ತಾನದ ಪತ್ರಿಕೆ ಜಿಯೋ ನ್ಯೂಸ್' ಸಹ ವರದಿ ಮಾಡಿದೆ.

ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫಹಾದ್ ಚೌಧರಿ ಅವರು ಭಾರತದಲ್ಲಿ ನಡೆಯುತ್ತಿರುವ ರೈತರ ಆಂದೋಲನದ ಬಗ್ಗೆ ಟ್ವೀಟ್ ಮಾಡಿದ್ದು, "ನಿರ್ದಯ ಮೋದಿ ಸರ್ಕಾರವು ಪಂಜಾಬ್ ರೈತರಿಗೆ ಬಗ್ಗುವುದಿಲ್ಲ.‌ ಸರ್ಕಾರವು ರೈತರನ್ನು ವಿಭಜಿಸಲು ಪ್ರಯತ್ನಿಸಬಹುದುಎಂದಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ಸಾಧ್ಯತೆಯಿಂದಾಗಿ, ಪಾಕಿಸ್ತಾನವು ಭಾರತದ ಗಡಿಯಲ್ಲಿರುವ ಸೈನಿಕರ ಬಗ್ಗೆ ಹೆಚ್ಚಿನ ಎಚ್ಚರಿಕೆ ನೀಡಿದೆ ಎಂದು ಮಿಲಿಟರಿ ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆಗಳು ಉಲ್ಲೇಖಿಸಿವೆ.

ಬೆಂಗಳೂರಿನ ಸರ್ಜಾಪುರ ಮುಖ್ಯರಸ್ತೆ ಬಳಿ 3 ಹಾಗೂ 4 BHK ಐಷಾರಾಮಿ ಅಪಾರ್ಟ್ಮೆಂಟ್. ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ

ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ದುರ್ಬಲಗೊಳಿಸಲು ಭಾರತದ ನರೇಂದ್ರ ಮೋದಿ ಸರ್ಕಾರ ಏನು ಬೇಕಾದರೂ ಮಾಡಬಹುದು ಎಂದು ಹೇಳಿದೆ.

ತನ್ನ ಆಂತರಿಕ ಮತ್ತು ಬಾಹ್ಯ ಸಮಸ್ಯೆಗಳಿಂದ ಬಳಲುತ್ತಿರುವ ಭಾರತ ಸರ್ಕಾರ ಗಮನವನ್ನು ಬೇರೆಡೆ ಸೆಳೆಯಲು ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಬಹುದು.

English summary
The Pakistani army has been put on high alert as they fear an attack by the Indian army. Media reports n Pakistan has claimed that the army has been put on high alert since a strike by India is anticipated. Reports also claimed that the attack is being used as a diversion for internal issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X