ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಫ್‌ಡಿಐ ಹೂಡಿಕೆ, ಭಾರತಕ್ಕೆ ಸಿಗಲಿದೆ ಲಾಭದ ಹೊದಿಕೆ

|
Google Oneindia Kannada News

ಲಂಡನ್‌, ನವೆಂಬರ್, 14: ಭಾರತಕ್ಕೆ ಹರಿದು ಬರುತ್ತಿರುವ ವಿದೇಶಿ ಬಂಡವಾಳ ಹೂಡಿಕೆ ಪ್ರಮಾಣ ಶೇ. 40 ರಷ್ಟು ಏರಿಕೆ ಕಂಡಿದ್ದು, ಎಲ್ಲ ಭಾರತೀಯರು ಇದರ ಲಾಭದ ಫಲವನ್ನು ಅನುಭವಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಲಂಡನ್‌ ನ ವೆಂಬ್ಲೆ ಕ್ರೀಡಾಂಗಣದಲ್ಲಿ 60 ಸಾವಿರಕ್ಕೂ ಅಧಿಕ ಜನರನ್ನು ಉದ್ದೇಶಿಸಿ ಮಾತನಾಡಿದರು. ಭಾರತದ ಸಂಸ್ಕೃತಿ, ಸಂಪ್ರದಾಯ, ವೈವಿಧ್ಯತೆಯನ್ನು ಪ್ರಸ್ತಾಪಿಸುತ್ತಲೇ ತಮ್ಮ ಮಾತು ಮುಂದುವರಿಸಿದರು. ಬ್ರಿಟನ್ ಸಹ ಮೋದಿ ಅವರ ಮೇಕ್ ಇನ್ ಇಂಡಿಯಾಕ್ಕೆ ಪೂರಕವಾಗಿ ಸ್ಪಂದಿಸಿದ್ದು ಭಾರತದಲ್ಲಿ 90 ಸಾವಿರ ಕೋಟಿ ರೂ. ಹೂಡಿಕೆ ಮಾಡುವುದಾಗಿ ತಿಳಿಸಿದೆ. ಅಲ್ಲದೇ ಭಾರತ-ಬ್ರಿಟನ್‌ ಅನೇಕ ಒಪ್ಪಂದಗಳಿಗೆ ಸಹಿ ಮಾಡಿವೆ.[ನರೇಂದ್ರ ಮೋದಿ ಬ್ರಿಟನ್ ಪ್ರವಾಸ: ಚಿತ್ರಗಳಲ್ಲಿ]

modi

ನರೇಂದ್ರ ಮೋದಿ ಭಾಷಣದ ಹೈಲೈಟ್ಸ್
* ದ್ವಿಪಕ್ಷೀಯ ಮಾತುಕತೆಯಲ್ಲಿ ವ್ಯಾಪಾರ, ರಕ್ಷಣೆ ಸೇರಿದಂತೆ ಮಹತ್ವದ ಒಪ್ಪಂದಕ್ಕೆ ಬರಲಾಗಿದ್ದು ಮುಂದಿನ ದಿನಗಳಲ್ಲಿ ಇದರ ಲಾಭ ಎರಡು ರಾಷ್ಟ್ರಗಳ ಜನರಿಗೆ ಸಿಗಲಿದೆ.[ವಿದೇಶಿ ಬಂಡವಾಳದಲ್ಲಿ ನಾವೇ ನಂಬರ್ 1]
* ಮೇಕ್‌ ಇನ್‌ ಇಂಡಿಯಾ, ರೈಲ್ವೆ, ಮೂಲಸೌಕರ್ಯ ಕ್ಷೇತ್ರಗಳಲ್ಲಿ ಬ್ರಿಟನ್‌ ಹೂಡಿಕೆ ಮಾಡಲಿದ್ದು ಒಪ್ಪಂದಕ್ಕೆ ಸಹಿ ಹಾಕಲಿದ್ದೇವೆ.
* ಎರಡು ದೇಶಗಳ ಉದ್ಯಮ ವಲಯದ ಅಭಿವೃದ್ಧಿಗೆ ಪೂರಕವಾದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು.
* ನಾಗರಿಕ ಪರಮಾಣು ಒಪ್ಪಂದ, ಮಿಲಿಟರಿ ತಂತ್ರಜ್ಞಾನದಲ್ಲಿ ಸಹಭಾಗಿತ್ವ ಮತ್ತು ಸೈಬರ್ ಭದ್ರತೆ ಕುರಿತಂತೆ ವಿವಿಧ ಕ್ಷೇತ್ರಗಳಲ್ಲಿ ಒಟ್ಟು 9 ಬಿಲಿಯನ್ ಪೌಂಡ್ಸ್ ಒಪ್ಪಂದಗಳಿಗೆ ಪರಸ್ಪರ ಎರಡು ದೇಶದ ಪ್ರಮುಖರು ಸಹಿ ಹಾಕಿದ್ದಾರೆ.

English summary
Prime Minister Narendra Modi on Friday said that the fact that the world's confidence in India is increasing is proved by the fact that foreign direct investment into India has increased by 40 percent. "FDI into India has increased by 40 percent. It shows the increasing international confidence in India," Modi said in Hindi in his much-awaited address to 60,000 wildly cheering British Indians at the iconic Wembley Stadium.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X