• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫಾದರ್ಸ್ ಡೇ: ಫುಟ್ಬಾಲ್ 'ಸ್ಟಾರ್' ಅಪ್ಪಂದಿರು

By Mahesh
|

ಬ್ರೆಜಿಲ್ಲಿನಲ್ಲಿ ಫೀಫಾ ವಿಶ್ವಕಪ್ ಫುಟ್ಬಾಲ್ ಕದನಕ್ಕಾಗಿ ಸಜ್ಜಾಗಿರುವ ವಿವಿಧ ದೇಶದ ಫುಟ್ಬಾಲ್ ಆಟಗಾರರ ಬೆಂಬಲಕ್ಕೆ ಅವರ ಕುಟುಂಬ ವರ್ಗವೂ ನಿಂತಿದೆ. ಮೆಸ್ಸಿ, ರೊನಾಲ್ಡೋರಂಥ ವಿಶ್ವಖ್ಯಾತ ತಾರೆಯರ ಯಶಸ್ಸಿನ ಬಹುಪಾಲು ಅಂಶ ಅವರ ಮಕ್ಕಳಿಗೆ ಸಲ್ಲುತ್ತದೆ. ಹಲವಾರು ಫುಟ್ಬಾಲ್ ತಾರೆಯರು ತಮ್ಮ ಯಶಸ್ಸಿಗೆ 'ತಮ್ಮ ಮಕ್ಕಳ ನಗುವೇ ಕಾರಣ' ಎಂದಿದ್ದಾರೆ.

ಹಲವು ಫುಟ್ಬಾಲ್ ತಾರೆಯರು ಸಂಸಾರಸ್ಥರಾಗಿ ಕೂಡಾ ಜನಪ್ರಿಯತೆ ಉಳಿಸಿಕೊಂಡಿದ್ದಾರೆ. ಸ್ಟಾರ್ ಆಟಗಾರರ ಬಗ್ಗೆ ಅಭಿಮಾನಿಗಳ ಕ್ರೇಜ್ ಅದರಲ್ಲೂ ಮಹಿಳಾ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರ ಬಗ್ಗೆ ನೀಡಿರುವ ಸಮೀಕ್ಷಾ ವರದಿ ಬಗ್ಗೆ ಇಲ್ಲಿ ಓದಿ.. ಮೆಸ್ಸಿ ಹಾಗೂ ರೊನಾಲ್ಡೊ ಭಾರತೀಯ ಕನ್ಯೆಯರ ಅಚ್ಚುಮೆಚ್ಚು ಎನ್ನುತ್ತದೆ ಈ ಸಮೀಕ್ಷೆ.

ಇನ್ನೂ ತಮಾಷೆ ವಿಷಯವೆಂದರೆ, ಫುಟ್ಬಾಲ್ ತಾರೆಯರು ಮದುವೆಯಾಗದೆ ಕೂಡಾ ಲಿವ್ ಇನ್ ಸಂಬಂಧ ಮೂಲಕ ಮಕ್ಕಳು ಪಡೆದುಕೊಂಡಿದ್ದಾರೆ. ಆದರೆ, ಹಲವು ವರ್ಷಗಳಿಂದ ತಮ್ಮ ಗೆಳೆತಿಯರ ಜತೆ ಗಟ್ಟಿ ಸಂಬಂಧ ಹೊಂದಿದ್ದಾರೆ.

ಫುಟ್ಬಾಲ್ ತಾರೆಯರು ತಮ್ಮ ಮಕ್ಕಳು ಕೂಡಾ 'ಬ್ಯೂಟಿಫುಲ್ ಗೇಮ್' ನ ಭಾಗವಾಗಬೇಕು ಎಂದು ಬಯಸುವುದರಲ್ಲಿ ತಪ್ಪೇನಿಲ್ಲ. ಭವಿಷ್ಯದ ಬಗ್ಗೆ ಯಾರಿಗೆ ಗೊತ್ತು. ಸದ್ಯಕ್ಕೆ ಫಾದರ್ಸ್ ಡೇ ನಿಮಿತ್ತ ಫುಟ್ಬಾಲ್ ಆಟಗಾರರು ಹಾಗೂ ಅವರ ಮಕ್ಕಳ ಜತೆಗಿನ ಸುಂದರ ಚಿತ್ರಗಳನ್ನು ಇಲ್ಲಿ ನೋಡಿ...

ಲಿಯೊನೆಲ್ ಮೆಸ್ಸಿ ಹಾಗೂ ಅವರ ಮಗ

ಲಿಯೊನೆಲ್ ಮೆಸ್ಸಿ ಹಾಗೂ ಅವರ ಮಗ

ಅರ್ಜೆಂಟಿನಾದ ತಾರೆ ಲಿಯಾನೆಲ್ ಮೆಸ್ಸಿ ಅವರು ತಮ್ಮ ಮಗ ಥಿಯಾಗೋ ಜತೆ ಇರುವ ಚಿತ್ರ. ಮೆಸ್ಸಿ ಹಾಗೂ ಆತನ ಗೆಳತಿ ಅಂಟೊನೆಲ್ಲಾ ರೊಕುಜೊ ಅವರ ಪುತ್ರನಾಗಿ ಥಿಯಾಗೋ ನವಂಬರ್ 2, 2012ರಲ್ಲಿ ಜನಿಸಿದ. ಬಾರ್ಸಿಲೋನ ಪರ ಆಡುವ ಮೆಸ್ಸಿ ಪುತ್ರನ ಜತೆ ಕುಳಿತ ಚಿತ್ರ ಇದಾಗಿದೆ.

ಮಕ್ಕಳ ಜತೆ ನೇಮಾರ್ ಹಾಗೂ ಮೆಸ್ಸಿ

ಮಕ್ಕಳ ಜತೆ ನೇಮಾರ್ ಹಾಗೂ ಮೆಸ್ಸಿ

ಬ್ರೆಜಿಲ್ಲಿನ ಸ್ಟಾರ್ ಆಟಗಾರ ನೆಮಾರ್ ಡ ಸಿಲ್ವ ಸ್ಯಾಂಟೋಸ್ ಜ್ಯೂನಿಯರ್ ಹಾಗೂ ಅರ್ಜೆಂಟಿನಾದ ಲಿಯಾನೆಲ್ ಮೆಸ್ಸಿ ಅವರು ತಮ್ಮ ಮಕ್ಕಳೊಂದಿಗೆ ನೀಡಿರುವ ಪೋಸ್. ಸ್ಪೇನಿನ ಬಾರ್ಸಿಲೋನ ಕ್ಲಬ್ ಪರ ಇಬ್ಬರು ಆಡುತ್ತಾರೆ.

ಜೂನಿಯರ್ ರೊನಾಲ್ಡೊ

ಜೂನಿಯರ್ ರೊನಾಲ್ಡೊ

ಪೋರ್ಚುಗೀಸ್ ಕ್ರಿಶ್ಚಿಯನ್ ರೊನಾಲ್ಡೋ ಅವರ ಪುತ್ರನಿಗೆ ಜ್ಯೂನಿಯರ್ ಎಂದೆ ಕರೆಯಲಾಗುತ್ತದೆ. ರೊನಾಲ್ಡೋ ಪುತ್ರನಿಗೆ ತನ್ನ ತಾಯಿ ಯಾರು ಎಂಬುದು ಇನ್ನೂ ತಿಳಿದಿಲ್ಲ. ಅಪ್ಪನ ತದ್ರೂಪಿನಂತೆ ಕಾಣುವ ಜ್ಯೂನಿಯರ್ ತನ್ನ ಅಪ್ಪನಿಗೆ ಸಿಕ್ಕ ಫುಟ್ಬಾಲ್ ನ ಅತ್ಯುನ್ನತ ಗೌರವ ಪ್ರಶಸ್ತಿಯೊಂದಿಗೆ ಇರುವುದನ್ನು ಕಾಣಬಹುದು. ಚಿತ್ರದಲ್ಲಿ ಪೀಲೆ ಅವರು ಕೂಡಾ ಇದ್ದಾರೆ. [ಅಪ್ಪ ರೋನಾಲ್ಡೊನ ರಹಸ್ಯ ಕಥೆ ಇಲ್ಲಿ ಓದಿ]

ಜರ್ಮನಿ ತಾರೆ ಮೆಸುಟ್ ಓಜಿಲ್

ಜರ್ಮನಿ ತಾರೆ ಮೆಸುಟ್ ಓಜಿಲ್

ಟರ್ಕಿ ಮೂಲದವರಾದ ಮೆಸುಟ್ ಓಜಿಲ್ ಜರ್ಮನಿ ಹಾಗೂ ಇಂಗ್ಲೀಷ್ ಪ್ರೀಮಿಯರ್ ಲೀಗ್ ನಲ್ಲಿ ಆರ್ಸೆನಲ್ ಪರ ಆಡುವ ಫುಟ್ಬಾಲ್ ತಾರೆ. ಖಾಸಗಿ ಬದುಕಿನ ಬಗ್ಗೆ ಹೆಚ್ಚು ಪ್ರಚಾರ ನೀಡಲು ಇಷ್ಟಪಡದ ಓಜಿಲ್ ಗಂಡು ಮಗುವೊಂದರ ಹೆಮ್ಮೆಯ ತಂದೆ ಎಂದು ಮಾತ್ರ ಹೇಳಿಕೊಂಡಿದ್ದಾರೆ.

ಮಗನ ಜತೆ ನೇಮಾರ್ ಜ್ಯೂ.

ಮಗನ ಜತೆ ನೇಮಾರ್ ಜ್ಯೂ.

ನೇಮಾರ್ ಹಾಗೂ ಅವರ ಹಳೆ ಗೆಳತಿ ಕರೊಲಿನಾ ನೊಗ್ಯುರಿಯಾ ಡಾಂಟಸ್ ಗೆ ಹುಟ್ಟಿದ ಮಗು ಡೇವಿಡ್ ಲುಕ್ಕಾ ಡ ಸಿಲ್ವ. 2011ರಲ್ಲಿ ನೇಮಾರ್ 19 ನೇ ವರ್ಷವಾಗಿದ್ದಾಗಲೇ ಅಪ್ಪನಾಗುವ ಯೋಗ ಲಭಿಸಿತ್ತು. ಈಗ ಹೊಸ ಗೆಳತಿ ಜತೆ ಇರುವ ನೇಮಾರ್ ತಮ್ಮ ಪುತ್ರನನ್ನು ಬಾರ್ಸಿಲೋನ ಕ್ಲಬ್ ನ ಸದಸ್ಯ ಮಾಡುವ ಆಸೆ ಇರಿಸಿಕೊಂಡಿದ್ದಾರೆ.

ಬೊಟೆಂಗ್ ತಮ್ಮ ಪುತ್ರನ ಜತೆ

ಬೊಟೆಂಗ್ ತಮ್ಮ ಪುತ್ರನ ಜತೆ

ಘಾನಾ ಮೂಲದ ಕೆವಿನ್ ಪ್ರಿನ್ಸ್ ಬೊಟೆಂಗ್ ಅವರು ಹೆರ್ಥಾ, ಶಲ್ಕೆ ಮುಂತಾದ ಜರ್ಮನ್ ಕ್ಲಬ್ ಅಲ್ಲದೆ ಘಾನಾ ತಂಡದ ಪ್ರಮುಕ ಆಟಗಾರ. ತನ್ನ ಪುತ್ರ ಜೆರಾಮಿ ಜತೆಗಿನ ಚಿತ್ರ. ಪತ್ನಿ ಈಗ ವಿಚ್ಛೇದನ ಪಡೆದಿರುವುದರಿಂದ ಎರಡು ವಾರಕ್ಕೊಮ್ಮೆ ಮಾತ್ರ ಪುತ್ರನನ್ನು ಕಾಣುವ ಭಾಗ್ಯ ಮಾತ್ರ ಪಡೆದುಕೊಂಡಿದ್ದಾರೆ.

ಸ್ಪಾನಿಷ್ ತಾರೆ ಫರ್ನಾಂಡೋ ಟೊರೆಸ್

ಸ್ಪಾನಿಷ್ ತಾರೆ ಫರ್ನಾಂಡೋ ಟೊರೆಸ್

ಸ್ಪಾನಿಷ್ ತಾರೆ ಫರ್ನಾಂಡೋ ಟೊರೆಸ್ ಅವರು ತಮ್ಮ ಪುತ್ರನ ಜತೆಗಿನ ಚಿತ್ರ. ಇಂಗ್ಲೀಷ್ ಪ್ರಿಮಿಯರ್ ಲೀಗ್ ನಲ್ಲಿ ಚೆಲ್ಸಿ ಪರ ಆಡುವ ಟೊರೆಸ್ ಅವರು ತಮ್ಮ ಗೆಳತಿ ಒಲಾಲ್ಲಾ ಡೊಮಿನ್ ಗೇಜ್ ಲಿಸ್ಟೆ ಅವರಿಂದ 2009ರಲ್ಲಿ ನೋರಾ ಎಂಬ ಪುತ್ರಿ ಹಾಗೂ 2010ರಲ್ಲಿ ಲಿಯೋ ಎಂಬ ಪುತ್ರನನ್ನು ಪಡೆದುಕೊಂಡಿದ್ದಾರೆ.

ಗೆರಾಡ್ ಪಿಕೆ- ಶಕೀರಾ ಪುತ್ರ

ಗೆರಾಡ್ ಪಿಕೆ- ಶಕೀರಾ ಪುತ್ರ

ಸ್ಪಾನೀಷ್ ಫುಟ್ಬಾಲ್ ಆಟಗಾರ ಗೆರಾರ್ಡ್ ಪಿಕೆ ಹಾಗೂ ಪಾಪ್ ಗಾಯಕಿ ಶಕೀರಾ ಅವರ ನಡುವೆ ದಕ್ಷಿಣ ಆಫ್ರಿಕಾದಲ್ಲಿ ವಾಕಾ ವಾಕಾ ಹಾಡಿನ ಮೂಲಕ ಪರಿಚಯವಾಗಿ ಪ್ರೇಮವಾಗಿ ಬೆಳೆಯಿತು. 2013ರಲ್ಲಿ ಇವರಿಗೆ ಜನಿಸಿದ ಪುತ್ರನ ಹೆಸರು ಮಿಲನ್.. ಇದೇ ಕಂದ ಈಗಿನ ಫೀಫಾ ವಿಶ್ವಕಪ್ 2014 ಆಶಯ ಗೀತೆ 'ಲಲಾ ಲಾಲಾಲ ಲಾಲ' ಹಾಡಿನಲ್ಲಿ ತನ್ನ ತಾಯಿ ಜತೆ ಕಾಣಿಸಿಕೊಂಡಿದ್ದಾನೆ ಕೂಡಾ.. [ನೀವು ನೋಡಿ ಒಮ್ಮೆ]

English summary
On Father's Day 2014, we are celebrating this special bond that fathers share with their sons. The way a father tries to bring up his son in his own image. Here are some really touching images of our favourite footballers, Fifa world cup stars with their sons on Father's Day 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X