ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಪ್ಪು ತಿದ್ದಿಕೊಳ್ಳದ ಪಾಕ್, FATFನ ಬೂದುಪಟ್ಟಿಯಲ್ಲೇ ಮುಂದುವರಿಕೆ

|
Google Oneindia Kannada News

ಇಸ್ಲಾಮಾಬಾದ್, ಜೂನ್ 26: ಭಯೋತ್ಪಾದಕ ಸಂಸ್ಥೆಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪಾಕಿಸ್ತಾನವು ಎಫ್‌ಎಟಿಎಫ್‌ನ ಬೂದುಪಟ್ಟಿಯಲ್ಲೇ ಮುಂದುವರೆಸಲಾಗಿದೆ.

ಹಫೀಜ್ ಸಯೀದ್ ಮತ್ತು ಮಸೂದ್ ಅಜರ್ ಸೇರಿದಂತೆ ಮನಿ ಲಾಂಡರಿಂಗ್ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ವಿರುದ್ಧದ ಕಠಿಣ ಕ್ರಮಕೈಗೊಳ್ಳುವಂತೆ ಸೂಚಿಸಿದೆ.

ಇನ್ನು ವಿಶ್ವಸಂಸ್ಥೆ ಗೊತ್ತುಪಡಿಸಿದ ಭಯೋತ್ಪಾದಕ ಸಂಘಟನೆಗಳ ಮುಖ್ಯಸ್ಥರು ಮತ್ತು ಕಮಾಂಡರ್‌ಗಳನ್ನು ತನಿಖೆ ಮಾಡಿ ಕಾನೂನು ಕ್ರಮ ಜರುಗಿಸಲು ಎಫ್‌ಎಟಿಎಫ್ ಇಸ್ಲಾಮಾಬಾದ್‌ಗೆ ಸೂಚಿಸಿದೆ.

Imran Khan

26/11 ಮುಂಬೈ ಭಯೋತ್ಪಾದಕ ದಾಳಿ ಮತ್ತು 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್ಪಿಎಫ್ ಬಸ್ ಮೇಲೆ ಬಾಂಬ್ ದಾಳಿ ಸೇರಿದಂತೆ ಹಲವಾರು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಅಜರ್, ಸಯೀದ್ ಮತ್ತು ಲಖ್ವಿ ಭಾರತದಲ್ಲಿ ಮೋಸ್ಟ್ ವಾಂಟೆಡ್ ಭಯೋತ್ಪಾದಕರಾಗಿದ್ದಾರೆ.

'ಪಾಕಿಸ್ತಾನದಲ್ಲಿ ಅತ್ಯಾಚಾರಕ್ಕೆ ಮಹಿಳೆಯರ ಬಟ್ಟೆಗಳೇ ಕಾರಣ' : ಮತ್ತೆ ಇಮ್ರಾನ್ ಖಾನ್‌ ವಿವಾದ'ಪಾಕಿಸ್ತಾನದಲ್ಲಿ ಅತ್ಯಾಚಾರಕ್ಕೆ ಮಹಿಳೆಯರ ಬಟ್ಟೆಗಳೇ ಕಾರಣ' : ಮತ್ತೆ ಇಮ್ರಾನ್ ಖಾನ್‌ ವಿವಾದ

ಎಫ್‌ಎಟಿಎಫ್ ಅಧ್ಯಕ್ಷ ಮಾರ್ಕಸ್ ಪ್ಲೈಯರ್ ಮಾತನಾಡಿ, '' ಮನಿ ಲ್ಯಾಂಡರಿಗೆ ಅಪಾಯಗಳನ್ನು ಪರಿಶೀಲಿಸುವಲ್ಲಿ ಪಾಕಿಸ್ತಾನ ಸರ್ಕಾರ ವಿಫಲವಾಗಿದೆ. ಇದು ಭ್ರಷ್ಟಾಚಾರ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವಿಗೆ ಕಾರಣವಾಗಿದೆ. ಹೀಗಾಗಿ ಪಾಕಿಸ್ತಾನವು ಹೆಚ್ಚಿದ ಮೇಲ್ವಿಚಾರಣಾ ಪಟ್ಟಿಯಲ್ಲಿ ಮುಂದುವರಿಯುತ್ತದೆ'' ಎಂದು ಹೇಳಿದರು.

Recommended Video

ಪಿನಾಕ ರಾಕೆಟ್ ನ್ನ ಯಶಸ್ವಿಯಾಗಿ ಹಾರಿಸಲಾಗಿದೆ! | Oneindia Kannada

ವಿಶ್ವಸಂಸ್ಥೆ ಗೊತ್ತುಪಡಿಸಿರುವ ಭಯೋತ್ಪಾದಕರನ್ನು ಜೈಷ್-ಎ-ಮೊಹಮ್ಮದ್(ಜೆಎಂ) ಮುಖ್ಯಸ್ಥ ಅಜರ್, ಲಷ್ಕರ್-ಎ-ತೊಯ್ಬಾ(ಎಲ್‌ಇಟಿ) ಸಂಸ್ಥಾಪಕ ಸಯೀದ್ ಮತ್ತು ಅದರ 'ಕಾರ್ಯಾಚರಣಾ ಕಮಾಂಡರ್' ಜಕಿಯೂರ್ ರೆಹಮಾನ್ ಲಖ್ವಿ ಸೇರಿದ್ದಾರೆ.

2018 ರಲ್ಲಿ ನೀಡಲಾದ 27 ಕ್ರಿಯಾಶೀಲ ವಸ್ತುಗಳ ಪೈಕಿ 26 ಅನ್ನು ಪಾಕಿಸ್ತಾನ ಈಗ ಪೂರ್ಣಗೊಳಿಸಿದೆ. ಆದರೆ ವಿಶ್ವಸಂಸ್ಥೆ ಗೊತ್ತುಪಡಿಸಿದ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಫ್‌ಎಟಿಎಫ್ ಪಾಕಿಸ್ತಾನವನ್ನು ಕೇಳಿದೆ.

English summary
The Financial Action Task Force (FATF) on Friday retained Pakistan on its 'grey list' for failing to check money laundering, leading to terror financing, and asked Islamabad to investigate and prosecute senior leaders and commanders of UN-designated terror groups, including Hafiz Saeed and Masood Azhar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X