ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲ್ಯಾಕ್ ಲಿಸ್ಟ್: ಪಾಕಿಸ್ತಾನಕ್ಕೆ ಎಫ್ಎಟಿಎಫ್ ನೀಡಿದ ಅಂತಿಮ ಗಡುವು

|
Google Oneindia Kannada News

ನವದೆಹಲಿ, ಜೂನ್ 22: ಉಗ್ರರ ದಮನಕ್ಕೆ ಮುಂದಾಗದಿದ್ದರೆ, ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎನ್ನುವ ಖಡಕ್ ವಾರ್ನಿಂಗ್ ಅನ್ನು ಎಫ್ಎಟಿಎಫ್ (ಫೈನಾನ್ಸಿಯಲ್ ಆಕ್ಷನ್ ಟಾಸ್ಕ್ ಫೋರ್ಸ್) ಪಾಕಿಸ್ತಾನಕ್ಕೆ ನೀಡಿದೆ.

ಅಮೆರಿಕಾದ ಫ್ಲೋರಿಡಾದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ ನೀಡಲಾಗಿದ್ದು, ಇದೇ ಅಕ್ಟೋಬರ್ ತಿಂಗಳೊಳಗೆ ತನ್ನ ದೇಶದಲ್ಲಿ ನಡೆಯುವ ಎಲ್ಲಾ ಉಗ್ರ ಚಟುವಟಿಕೆ, ಹಣ ವರ್ಗಾವಣೆ ಮುಂತಾದ ಭಯೋತ್ಪಾಕ ಸಂಬಂಧ ಕೆಲಸವನ್ನು ಹತ್ತಿಕ್ಕುವ ಕ್ರಿಯಾಯೋಜನೆಯನ್ನು ಸಿದ್ದಪಡಿಸುವಂತೆ ಪಾಕಿಸ್ತಾನಕ್ಕೆ ಸೂಚಿಸಿದೆ.

ಈಗಾಗಲೇ ಪಾಕಿಸ್ತಾನ ಗ್ರೇ ಪಟ್ಟಿಯಲ್ಲಿದ್ದು, ಅಕ್ಟೋಬರ್ ತಿಂಗಳ ಗಡುವಿನೊಳಗೆ ಸಭೆಯ ನಿರ್ಧಾರದಂತೆ ಕ್ರಮ ತೆಗೆದುಕೊಳ್ಳದಿದ್ದರೆ, ಶಾಸ್ವತವಾಗಿ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎನ್ನುವ ಎಚ್ಚರಿಕೆಯನ್ನು ನೀಡಲಾಗಿದೆ.

FATF global body strong warning to Pakistan on action plan against terrorist

ಪಾಕಿಸ್ತಾನದಿಂದ ಉಗ್ರ ಕೃತ್ಯ ನಡೆಸುತ್ತಿರುವ ಜಾಗತಿಕ ಉಗ್ರ ಅಜರ್ ಮಸೂದ್, ಹಫೀಜ್ ಸಯೀದ್ ಮುಂತಾದ ಭಯೋತ್ಪಾದಕರ ವಿರುದ್ದ ಯಾವುದೇ ಕೇಸ್ ದಾಖಲಾಗಲಿಲ್ಲ ಎನ್ನುವ ವಿಚಾರವನ್ನು ಸಭೆಯಲ್ಲಿ ಹಲವು ದೇಶದ ಸದಸ್ಯರು ಪ್ರಸ್ತಾವಿಸಿದರು.

ಉಗ್ರ ಕೃತ್ಯ ನಡೆಸುತ್ತಿರುವವರಿಗೆ ಹಣದ ಮೂಲ ಯಾವುದು ಎನ್ನುವ ವಿಚಾರವನ್ನು ಇನ್ನೂ ಯಾಕೆ ಪತ್ತೆಹಚ್ಚಿಲ್ಲ ಎಂದು ಸದಸ್ಯರು ಪಾಕಿಸ್ತಾನದ ಅಧಿಕಾರಿಗಳನ್ನು ಪ್ರಶ್ನಿಸಿದರು ಎಂದು ವರದಿಯಾಗಿದೆ.

ಪಾಕಿಸ್ತಾನದ ನೆಲದಿಂದ ಪ್ರಾಯೋಜಿತ ಉಗ್ರ ಕೃತ್ಯದ ಬಗ್ಗೆ ದಾಖಲೆ ಸಮೇತ ಭಾರತ ದೂರು ಸಲ್ಲಿಸಿದ್ದರಿಂದ, ಪಾಕಿಸ್ತಾನವನ್ನು ಇನ್ನೂ ಗ್ರೇ ಪಟ್ಟಿಯಲ್ಲೇ ಮುಂದುವರಿಸಲಾಗಿದೆ.

English summary
FATF (Financial Action Task Force) global body strong warning to Pakistan on action plan against terrorist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X