ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲೆಂಡ್ ಒಡೆದು ಸ್ಕಾಟ್ಲೆಂಡ್ ಸ್ವತಂತ್ರವಾಗಬೇಕೆ?

By Mahesh
|
Google Oneindia Kannada News

ಲಂಡನ್, ಸೆ.15: ಬ್ರಿಟಿಷರು ತಾವು ಪ್ರಭುತ್ವ ಸಾಧಿಸಿದ ವಸಾಹತುಗಳನ್ನು ನಿರ್ವಹಿಸಲು 'ಒಡೆದು ಆಳುವ ನೀತಿ' ಯನ್ನು ಅನುಸರಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಬ್ರಿಟಿಷರಿಗೆ ಇದೇ ತಿರುಗುಬಾಣವಾಗಿದೆ. ಬ್ರಿಟನ್‌ನಿಂದ ಪ್ರತ್ಯೇಕಗೊಂಡು ಸ್ಕಾಟ್ಲೆಂಡ್ ಒಂದು ಸ್ವತಂತ್ರ ದೇಶವಾಗಬೇಕೆ? ಎಂಬ ಆನ್ ಲೈನ್ ಸಮೀಕ್ಷೆ ಸದ್ಯ ಜಾರಿಯಲ್ಲಿದೆ. ಈ ವಾರಾಂತ್ಯಕ್ಕೆ ಐತಿಹಾಸಿಕ ಜನಾಭಿಪ್ರಾಯದ ಫಲಿತಾಂಶ ಹೊರಬೀಳಲಿದ್ದು ಇಂಗ್ಲೆಂಡ್ ಹಾಗೂ ಸ್ಕಾಟ್ಲೆಂಡ್ ಪ್ರಜೆಗಳು ಕುತೂಹಲದಿಂದ ಫಲಿತಾಂಶಕ್ಕಾಗಿ ಕಾದಿದ್ದಾರೆ.

ಸೆಪ್ಟಂಬರ್ 18ರಂದು ಗುರುವಾರ ಜನಮತ ಸಂಗ್ರಹ ಬೃಹತ್ ಪ್ರಮಾಣದಲ್ಲಿ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಸಾವಿರಾರು ಜನರು ಪರ ಹಾಗೂ ವಿರುದ್ಧ ಮೆರವಣಿಗೆ ನಡೆಸಿದ್ದಾರೆ. ಆನ್ ಲೈನ್ ನಲ್ಲಿ ಸುಮಾರು ನೂರಕ್ಕೂ ಅಧಿಕ ಸಮೀಕ್ಷೆಗಳು ನಡೆದಿವೆ. ಇಂಗ್ಲೆಂಡ್ ಪರ ಹಾಗೂ ಸ್ಕಾಟ್ಲೆಂಡ್ ಪರ ಜಿದ್ದಾಜಿದ್ದಿನ ಮತದಾನ ನಡೆದಿದ್ದು ಭಾರಿ ಕುತೂಹಲ ಕೆರಳಿಸಿದೆ.

ಸ್ಕಾಟೀಷ್ ನ್ಯಾಷನಲ್ ಪಾರ್ಟಿ ನಾಯಕ ಅಲೆಕ್ಸ್ ಸಾಲ್ಮೊಂಡ್ ಅವರು ಪ್ರತ್ಯೇಕವಾದಿಗಳ ಗುಂಪಿನ ಮುಖಂಡರಾಗಿ ಜನಾಭಿಪ್ರಾಯ ಸಂಗ್ರಹದಲ್ಲಿ ತೊಡಗಿದ್ದಾರೆ. ಇದರ ವಿರುದ್ಧವಾಗಿ ಬ್ರಿಟಿಷ್ ಸಂಸ್ಥಾನದ ಮಾಜಿ ವಿತ್ತ ಸಚಿವ ಅಲಿಸ್ಟರ್ ಡಾರ್ಲಿಂಗ್ ಅವರು 'ಬೆಟರ್ ಟುಗೆದರ್ ' ಎಂಬ ಅಭಿಯಾನ ಹಮ್ಮಿಕೊಂಡು ಐಕ್ಯಮತ ಸಂದೇಶ ಸಾರುತ್ತಿದ್ದಾರೆ.

ಪ್ರತಿಭಟನೆಗಳು ಜಾರಿಯಲ್ಲಿದೆ

ಪ್ರತಿಭಟನೆಗಳು ಜಾರಿಯಲ್ಲಿದೆ

ಉತ್ತರ ಐರ್ಲೆಂಡ್ ಹಾಗೂ ಇಂಗ್ಲೆಂಡ್‌ನಿಂದ ಬಂದಿರುವ 'ಆರೆಂಜ್' ಗುಂಪಿನ ಕಾರ್ಯಕರ್ತರು ಎಡಿನ್‌ಬರ್ಗ್, ಗ್ಲಾಸ್ಗೊ ಸೇರಿದಂತೆ ಬ್ರಿಟನ್ ದೇಶವನ್ನು ಒಂದಾಗಿರಿಸಲು ಅಭಿಯಾನ ನಡೆಸಿದ್ದಾರೆ. ಸ್ಕಾಟ್ಲೆಂಡ್ ಪ್ರತ್ಯೇಕ ರಾಷ್ಟ್ರವಾಗಬೇಕೆಂದು ಪಟ್ಟು ಹಿಡಿದಿರುವ ಇನ್ನೊಂದು ಗುಂಪು ಮೆರವಣಿಗೆ ನಡೆಸಿದೆ.

ಬ್ರಿಟನ್ ವಿಭಜನೆ ವಿರುದ್ಧ ಅಭಿಯಾನ ಕೈಗೊಂಡಿರುವ 'ಬೆಟರ್ ಟುಗೆದರ್' ಗುಂಪಿನೊಂದಿಗೆ 'ಆರೆಂಜ್' ಗುಂಪು ಸಂಘರ್ಷಕ್ಕೆ ಇಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದೆಲ್ಲವೂ ಸ್ಕಾಟ್ಲೆಂಡ್‌ನಲ್ಲಿರುವ ವಲಸಿಗರ ಆಟ

ಇದೆಲ್ಲವೂ ಸ್ಕಾಟ್ಲೆಂಡ್‌ನಲ್ಲಿರುವ ವಲಸಿಗರ ಆಟ

ಸ್ಕಾಟ್ಲೆಂಡ್‌ನಲ್ಲಿರುವ ವಲಸಿಗರು ಬ್ರಿಟನ್ ವಿರುದ್ಧ ನಿಲುವು ವ್ಯಕ್ತಪಡಿಸಿದ್ದು, ಸ್ಕಾಟ್ಲೆಂಡ್ ನೂತನ ರಾಷ್ಟ್ರವಾಗಿ ಹೊರಹೊಮ್ಮಬೇಕೆಂಬುದು ಬಯಸಿದ್ದಾರೆ. ಸ್ಕಾಟ್ಲೆಂಡ್‌ನಲ್ಲಿ ಕಳೆದ 60 ವರ್ಷಗಳಿಂದಲೂ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಲ್ಲಿ ಪ್ರಸಕ್ತ 1.4 ಲಕ್ಷ ಏಷ್ಯನ್ ಸ್ಕಾಟ್ಸ್, 55 ಸಾವಿರ ಪೋಲೆಂಡ್‌ನವರು, 30 ಸಾವಿರ ಆಫ್ರಿಕನ್ನರು ಹಾಗೂ 7 ಸಾವಿರ ಕೆರಿಬಿಯನ್ನರು ವಾಸಿಸುತ್ತಿದ್ದಾರೆ.

ಬಲವಂತವಾಗಿ ಐರೋಪ್ಯ ಒಕ್ಕೂಟದ ಬೆಂಬಲ

ಬಲವಂತವಾಗಿ ಐರೋಪ್ಯ ಒಕ್ಕೂಟದ ಬೆಂಬಲ

ಇಂಗ್ಲೆಂಡ್ ರಾಣಿ ಎಲಿಜಬೆತ್ II ಅವರು ಸ್ಕಾಟ್ಲೆಂಡ್ ಪ್ರತ್ಯೇಕವಾಗುವುದು ಸರಿಯಲ್ಲ, ಈ ಬಗ್ಗೆ ಪುನಃ ಆಲೋಚಿಸಿ ಎಂದು ಕರೆ ನೀಡಿದ್ದಾರೆ.

ಇತರ ಐರೋಪ್ಯ ರಾಷ್ಟ್ರಗಳ ವಲಸಿಗರಿಗೆ ಸ್ಕಾಟ್ಲೆಂಡ್ ಪ್ರತ್ಯೇಕ ರಾಷ್ಟ್ರವಾಗುವುದು ಇಷ್ಟವಿಲ್ಲ. ಆದರೆ ಸ್ಕಾಟ್ಲೆಂಟ್ ಪ್ರತ್ಯೇಕ ರಾಷ್ಟ್ರವಾದರೆ ವಲಸಿಗರಿಗೆ ಅನುಕೂಲ ಕಲ್ಪಿಸುವುದಾಗಿ 'ನೋ' ಗುಂಪು ಹೇಳಿಕೊಂಡಿದೆ. ವಲಸಿಗರ ವಿರೋಧಿ ನೀತಿಯನ್ನು ಬ್ರಿಟನ್ ತಳೆದಿರುವುದರಿಂದ ಅನಿವಾರ್ಯವಾಗಿ ಐರೋಪ್ಯ ರಾಷ್ಟ್ರಗಳ ಜನರೂ ಸ್ಕಾಟ್ಲೆಂಡ್ ಪರ ಮತ ಹಾಕುವ ನಿರೀಕ್ಷೆಯಿದೆ ಎನ್ನಲಾಗಿದೆ.
ಭಾರತೀಯ ಮೂಲದವರ ಕಥೆ ಏನು?

ಭಾರತೀಯ ಮೂಲದವರ ಕಥೆ ಏನು?

ಸ್ಕಾಟ್ಲೆಂಡ್‌ನಲ್ಲಿ ಸಿಖ್ ಸಮುದಾಯದ 10 ಸಾವಿರ ಜನರು ವಾಸಿಸುತ್ತಿದ್ದಾರೆ. 1947ರಲ್ಲಿ ಭಾರತ-ಪಾಕಿಸ್ತಾನ ವಿಭಜನೆಯ ವೇಳೆ ಉಂಟಾದ ಕಷ್ಟನಷ್ಟಗಳು ಬ್ರಿಟನ್- ಸ್ಕಾಟ್ಲೆಂಡ್ ವಿಭಜನೆಯಿಂದಲೂ ಉಂಟಾಗಲಿವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಈ ನಡುವೆ ಸ್ಕಾಟ್ ಲಂಡ್ ನಲ್ಲಿರುವ ಎರಡು ದೊಡ್ಡ ಬ್ಯಾಂಕಿಂಗ್ ಸಂಸ್ಥೆಗಳಾದ ರಾಯಲ್ ಬ್ಯಾಂಕ್ ಆಫ್ ಸ್ಕಾಟ್ ಲ್ಯಾಂಡ್ ಹಾಗೂ ಲಾಯ್ಡ್ಸ್ ಬ್ಯಾಂಕಿಂಗ್ ಸಮೂಹ ಸ್ಕಾಟ್ಲೆಂಡ್ ಪ್ರತ್ಯೇಕಗೊಂಡರೆ ಇಂಗ್ಲೆಂಡ್ ಗೆ ಸ್ಥಳಾಂತರಗೊಳ್ಳುವುದಾಗಿ ಹೇಳಿವೆ. ಆದರೆ, ಭಾರತ ಮೂಲದ ಉದ್ಯಮಿಗಳು ಸ್ಕಾಟ್ ಲಂಡ್ ನಲ್ಲೇ ನೆಲೆಸುವುದಾಗಿ ಹೇಳಿದ್ದಾರೆ.

ಇಲ್ಲಿ ತನಕದ ಸಮೀಕ್ಷೆ ಬಲಾ ಬಲ ಹೇಗಿದೆ

ಇಲ್ಲಿ ತನಕದ ಸಮೀಕ್ಷೆ ಬಲಾ ಬಲ ಹೇಗಿದೆ

ಇದುವರೆಗೆ ವಿವಿಧ ಸಂಸ್ಥೆಗಳು ನಡೆಸಿರುವ ಸಮೀಕ್ಷೆಯಲ್ಲಿ ಸ್ಕಾಟ್ಲೆಂಡ್ ಪ್ರತ್ಯೇಕ ರಾಷ್ಟ್ರವಾಗುವಂತೆ ಶೇ.46 ಜನರು ಮತ ಚಲಾಯಿಸಿದ್ದರೆ, ಬ್ರಿಟನ್ ಅವಿಭಜಿತವಾಗಿ ಉಳಿಯಬೇಕೆಂದು ಶೇ.47 ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ7 ರಷ್ಟು ಜನ ನಮಗೆ ಗೊತ್ತಿಲ್ಲ ಎಂದಿದ್ದಾರೆ. ಇದೆಲ್ಲವೂ ಸೆಪ್ಟೆಂಬರ್ ತಿಂಗಳ ಸಮೀಕ್ಷೆ ವರದಿಯಾಗಿದೆ. ಫೆಬ್ರವರಿ 2013ರಿಂದ ಸೆಪ್ಟೆಂಬರ್ 2014ರ ತನಕ ಈ ಸಮೀಕ್ಷೆ ನಡೆಯಲಿದೆ.

ಇದು 2012ರಲ್ಲಿ ಆದ ಒಪ್ಪಂದ

ಇದು 2012ರಲ್ಲಿ ಆದ ಒಪ್ಪಂದ

ಅಕ್ಟೋಬರ್ 2012ರಲ್ಲಿ ಬ್ರಿಟಿಷರ ಪ್ರಧಾನಿ ಡೇವಿಡ್ ಕೆಮರೂನ್ ಹಾಗೂ ಸ್ಕಾಟ್ಲೆಂಡ್ ನ ಪ್ರಥಮ ಸಚಿವ ಅಲೆಕ್ಸ್ ಸಾಲ್ಮೊಂಡ್ ಅವರ ಜೊತೆ ಎಡಿನ್ ಬರೋ ಒಪ್ಪಂದ ಏರ್ಪಟ್ಟಿತು. ಅದರಂತೆ 2014ರ ಚಳಿಗಾಲದಲ್ಲಿ ಸ್ಕಾಟ್ಲೆಂಡಿಗೆ ಪ್ರತ್ಯೇಕ ರಾಷ್ಟ್ರ ಸ್ಥಾನಮಾನ ನೀಡುವ ಬಗ್ಗೆ ಒಪ್ಪಂದಕ್ಕೆ ಬರಲಾಯಿತು. ಅದರಂತೆ should Scotland be an independent country ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಲಾಯಿತು.

English summary
The future of Scotland and the United Kingdom looked uncertain on Sunday, five days before a historic referendum on independence, as polls showed the rival campaigns running desperately close.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X