• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನದಲ್ಲಿ ಫ್ಯಾಷನ್ ಷೋ, ಬಿಲ್ ಗೇಟ್ಸ್ ಗೆ ಸನ್ಮಾನ ಇತ್ಯಾದಿ... ಇತ್ಯಾದಿ!!

|

ಏಪ್ರಿಲ್ 21ರಂದು ಹಲವಾರು ಸುದ್ದಿಗಳ ಸಂತೆಯಲ್ಲಿ ಹಲವಾರು ಸುದ್ದಿಗಳು ನಮ್ಮ ಕಣ್ತಪ್ಪಿರುತ್ತವೆ. ಉದಾಹರಣೆಗೆ, ಪಾಕಿಸ್ತಾನದಲ್ಲಿ ಏಪ್ರಿಲ್ 21ರಂದು ನಡೆದ ಫ್ಯಾಷನ್ ಷೋ ಆರಂಭವಾಗಿದೆ. ಕರಾಚಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಹಾಗೂ ಅವರ ಪತ್ನಿ ಮೆಲಿಂಡಾ ಅವರಿಗೆ ಪ್ಯಾರಿಸ್ ನಲ್ಲಿ ಶುಕ್ರವಾರ (ಏಪ್ರಿಲ್ 21, 2017) ಲೀಜನ್ ಆಫ್ ಹಾನರ್ ಎಂಬ ಹೆಸರಿನ ಗೌರವ ಪ್ರದಾನ ಮಾಡಲಾಗಿದೆ.

ಅಮೆರಿಕದ ಪ್ರತಿಷ್ಠಿತ ಪದವಿಗೇರಿದ ಅಪ್ಪ-ಮಗ ಇಬ್ಬರೂ ಒಟ್ಟಿಗೇ ಇರುವ ಈ ಭಾವಚಿತ್ರ ಬಿಡುಗಡೆಯಾಗಿದೆ. ಈಜಿಪ್ಟ್ ನ ರಾಜಧಾನಿ ಕೈರೋದ ಎಲ್ - ಮೊಯೇಜ್ ನಲ್ಲಿ ಅಂತಾರಾಷ್ಟ್ರೀಯ ಡ್ರಮ್ಸ್ ಆ್ಯಂಡ್ ಟ್ರಾಡೀಷನಲ್ ಆರ್ಟ್ಸ್ ಸಮ್ಮೇಳನ ಆರಂಭವಾಗಿದೆ.

ಹಾಗಾಗಿ, ನಮ್ಮ ಗಮನಕ್ಕೆ ಬಾರದ ಅಂಥ ಸುದ್ದಿಗಳನ್ನು ಹೆಕ್ಕಿ ತಂದು ಇಲ್ಲಿ ನಿಮ್ಮ ಮುಂದಿಡುವ ಪ್ರಯತ್ನ ಮಾಡಿದ್ದೇವೆ.

ಪ್ಯಾರಿಸ್ ನಲ್ಲಿ ಕಾರ್ಯಕ್ರಮ

ಪ್ಯಾರಿಸ್ ನಲ್ಲಿ ಕಾರ್ಯಕ್ರಮ

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಹಾಗೂ ಅವರ ಪತ್ನಿ ಮೆಲಿಂಡಾ ಅವರಿಗೆ ಪ್ಯಾರಿಸ್ ನಲ್ಲಿ ಶುಕ್ರವಾರ (ಏಪ್ರಿಲ್ 21, 2017) ಲೀಜನ್ ಆಫ್ ಹಾನರ್ ಎಂಬ ಹೆಸರಿನ ಗೌರವ ಪ್ರದಾನ ಮಾಡಲಾಯಿತು. ಆ ಸಂದರ್ಭದಲ್ಲಿ ಮಾಧ್ಯಮಗಳಿಗೆ ಈ ದಂಪತಿ ಕಾಣಿಸಿಕೊಂಡ ಪರಿ.

ಪೊಲೀಸ್ ಅಧಿಕಾರಿಗೆ ಶ್ರದ್ಧಾಂಜಲಿ

ಪೊಲೀಸ್ ಅಧಿಕಾರಿಗೆ ಶ್ರದ್ಧಾಂಜಲಿ

ಪ್ಯಾರಿಸ್ ನ ಚಾಂಪ್ಸ್ ಎಲೀಸೀಸ್ ಬುಲೀವಾರ್ಡ್ ನಲ್ಲಿ ಏಪ್ರಿಲ್ 21ರಂದು ನಡೆದ ಐಎಸ್ಐಎಸ್ ಉಗ್ರರ ಗುಂಡಿನ ದಾಳಿಗೆ ಓರ್ವ ಪೊಲೀಸ್ ಅಧಿಕಾರಿ ಬಲಿಯಾಗಿದ್ದರು. ಅವರ ಗೌರವಾರ್ಥ ಪ್ಯಾರಿಸ್ ನಲ್ಲಿ ಏರ್ಪಡಿಸಲಾಗಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದ ವೇಳೆ ಮಹಿಳೆಯೊಬ್ಬರು ಮೃತ ಅಧಿಕಾರಿಗೆ ಪುಷ್ಪ ನಮನ ಸಲ್ಲಿಸಿದರು.

ಸ್ಥಳೀಯ ಫುಟ್ಬಾಲ್ ಪಂದ್ಯ

ಸ್ಥಳೀಯ ಫುಟ್ಬಾಲ್ ಪಂದ್ಯ

ಷಿಕಾಗೋದಲ್ಲಿ ಏಪ್ರಿಲ್ 21ರಂದು ನಡೆದಿದ್ದ ಸ್ಥಳೀಯ ಫುಟ್ಬಾಲ್ ಪಂದ್ಯವೊಂದರಲ್ಲಿ ಟೊರಂಟೋ ಫುಟ್ಬಾಲ್ ಕ್ಲಬ್ ನ ಆಟಗಾರ ಎರಿಕ್ ಝವಾಲೆಟಾ ಅವರು ಎದುರಾಳಿ ತಂಡವಾದ ಷಿಕಾಗೋ ಫೈರ್ ತಂಡದ ಆಟಗಾರರ ಆಕ್ರಮಣವನ್ನು ತಡೆಯುವಲ್ಲಿ ನಿರತರಾಗಿರುವುದು.

ಲಲನೆಯರ ಹೆಜ್ಜೆ

ಲಲನೆಯರ ಹೆಜ್ಜೆ

ಪಾಕಿಸ್ತಾನದಲ್ಲಿ ಏಪ್ರಿಲ್ 21ರಂದು ನಡೆದ ಫ್ಯಾಷನ್ ಷೋ ಕಣ್ರೀ ಇದು. ಕರಾಚಿಯಲ್ಲಿ ಏರ್ಪಡಿಸಲಾಗಿದ್ದ ಈ ಶೋನಲ್ಲಿ ಅಲ್ಲಿನ ಖ್ಯಾತ ವಸ್ತ್ರ ವಿನ್ಯಾಸಕಿ ಬಂಟೋ ಕಾಜ್ಮಿ ಅವರು ಸಿದ್ಧಪಡಿಸಿದ ವಿವಿಧ ವಿನ್ಯಾಸಗಳನ್ನು ತೋರುತ್ತಿರುವ ಲಲನೆಯರ ಗುಂಪು ಇದು.

ಅಮೆರಿಕದಲ್ಲೂ ಇದೇ ಸಮಸ್ಯೆ!

ಅಮೆರಿಕದಲ್ಲೂ ಇದೇ ಸಮಸ್ಯೆ!

ವಿದ್ಯುತ್ ಅಭಾವ ಕೇವಲ ನಮ್ಮಲ್ಲಿ ಮಾತ್ರವಲ್ಲ. ವಿದೇಶಗಳಲ್ಲೂ ಇದೆ. ಅದರಲ್ಲೂ ಮುಂದುವರಿದ ದೇಶವಾದ ಅಮೆರಿಕದಲ್ಲೂ ಇದೆ. ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾದಲ್ಲಿ ವಿದ್ಯುತ್ ಅಭಾವದಿಂದಾಗಿ ತಟಸ್ಥವಾಗಿರುವ ಕೇಬಲ್ ಕಾರುಗಳ ಚಿತ್ರವಿದು.

ಅಡಗಿ ಕುಳಿತೆಯೇಕೆ?

ಅಡಗಿ ಕುಳಿತೆಯೇಕೆ?

ಧರ್ಮಶಾಲಾದಲ್ಲಿನ ಗುಡಿಸಲೊಂದರಲ್ಲಿ ಜಿಂಕೆಯ ಮರಿಯೊಂದು ಒಲೆ ಮೇಲಿಟ್ಟಿರುವ ಪಾತ್ರೆಯ ಹಿಂದೆ ಅಡಗಿ ಕುಳಿತಿದ್ದನ್ನು ಪಿಟಿಐ ಛಾಯಾಗ್ರಾಹಕನೊಬ್ಬ ಮನಮೋಹಕವಾಗಿ ಸೆರೆ ಹಿಡಿದಿದ್ದಾನೆ.

ವಿವಿಧ ದೇಶಗಳ ಕಲಾವಿದರ ಸಮ್ಮಿಲನ

ವಿವಿಧ ದೇಶಗಳ ಕಲಾವಿದರ ಸಮ್ಮಿಲನ

ಈಜಿಪ್ಟ್ ನ ರಾಜಧಾನಿ ಕೈರೋದ ಎಲ್ - ಮೊಯೇಜ್ ನಲ್ಲಿ ಅಂತಾರಾಷ್ಟ್ರೀಯ ಡ್ರಮ್ಸ್ ಆ್ಯಂಡ್ ಟ್ರಾಡೀಷನಲ್ ಆರ್ಟ್ಸ್ ಸಮ್ಮೇಳನ ಆರಂಭವಾಗಿದೆ. ಏಪ್ರಿಲ್ 21ರಂದು ಅದರ ಉದ್ಘಾಟನೆಯಾಯಿತು. ಸುಮಾರು 23 ದೇಶಗಳ ಕಲಾವಿದರು ಅಲ್ಲಿಗೆ ಹೋಗಿದ್ದಾರೆ. ಸಮ್ಮೇಳನದ ಉದ್ಘಾಟನಾ ಸಮಾರಂಭದ ವೇಳೆ ಅವರೆಲ್ಲರೂ ಕಂಗೊಳಿಸಿದ್ದು ಹೀಗೆ.

ಸಮ್ಮೇಳನದಲ್ಲಿ ಗೌರವ

ಸಮ್ಮೇಳನದಲ್ಲಿ ಗೌರವ

ಮಹಾರಾಷ್ಟ್ರದ ಥಾಣೆಯಲ್ಲಿ ಶುಕ್ರವಾರ (ಏಪ್ರಿಲ್ 21) ನಡೆದ 29ನೇ ಸಾವರ್ಕರ್ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಪಂದ್ಯ ನೋಡಲು ಆಗಮನ

ಪಂದ್ಯ ನೋಡಲು ಆಗಮನ

ಕೋಲ್ಕತಾದಲ್ಲಿ ಶುಕ್ರವಾರ (ಏಪ್ರಿಲ್ 21) ರಾತ್ರಿ ನಡೆದ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಗುಜರಾತ್ ಲಯನ್ಸ್ ತಂಡಗಳ ನಡುವಿನ ಐಪಿಎಲ್ ಪಂದ್ಯ ವೀಕ್ಷಿಸಲು ಆಗಮಿಸಿದ್ದ ಕೋಲ್ಕತಾ ತಂಡದ ಸಹ ಮಾಲೀಕರು ಹಾಗೂ ಚಿತ್ರ ನಟಿಯಾದ ಜೂಹಿ ಚಾವ್ಲಾ.

ಬುಷ್ ಫ್ಯಾಮಿಲಿ ಅಪರೂಪದ ಭಾವಚಿತ್ರ

ಬುಷ್ ಫ್ಯಾಮಿಲಿ ಅಪರೂಪದ ಭಾವಚಿತ್ರ

ಇದೊಂದು ನಿಜಕ್ಕೂ ಅಪರೂಪದ ಫೋಟೋ. ಅಮೆರಿಕದ ಪ್ರತಿಷ್ಠಿತ ಪದವಿಗೇರಿದ ಅಪ್ಪ-ಮಗ ಇಬ್ಬರೂ ಒಟ್ಟಿಗೇ ಇರುವ ಈ ಭಾವಚಿತ್ರದಲ್ಲಿ ದ್ದಾರೆ. ಬಲಬದಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷರಾದ ಜಾರ್ಜ್ ಹರ್ಬರ್ಟ್ ವಾಕರ್ ಬುಷ್ (ಜಾರ್ಜ್ ಎಚ್.ಡಬ್ಲ್ಯೂ. ಬುಷ್) , ಜಾರ್ಜ್ ವಾಕರ್ ಬುಷ್ (ಜಾರ್ಜ್ ಡಬ್ಲ್ಯೂ ಬುಷ್) ಇದ್ದಾರೆ. ಹೂಸ್ಟನ್ ನಲ್ಲಿನ ಆಸ್ಪತ್ರೆಯೊಂದರಲ್ಲಿ ಈ ಇಬ್ಬರೂ ಇರುವ ಈ ಚಿತ್ರವನ್ನು ಜಾರ್ಜ್ ಡಬ್ಲ್ಯೂ ಬುಷ್ ಅವರ ಕಚೇರಿ ಶುಕ್ರವಾರ (ಏಪ್ರಿಲ್ 21) ಬಿಡುಗಡೆ ಮಾಡಿದೆ. ಸೀನಿಯರ್ ಬುಷ್ ಅವರು, ನಿಮೋನಿಯಾದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Many of the news generally go unnoticed by us because of our heavy schedule. Here, some such news with photoes are listed for those news hungry people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more