ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್ನಿನಲ್ಲಿ 'ವಾಟಾಳ್' ಮಾದರಿ 'ಕೌ'ತುಕ ಪ್ರತಿಭಟನೆ

By Mahesh
|
Google Oneindia Kannada News

ಲಂಡನ್, ಆಗಸ್ಟ್ 10: ಈ ರೀತಿ ಪ್ರತಿಭಟನೆ ಮಾಡೋದು ನಮ್ಮ ವಾಟಾಳ್ ನಾಗರಾಜ್ ಅವರು ಎತ್ತಿದ ಕೈ ಎಂದು ಸುದ್ದಿ ಓದಿದ ಮೇಲೆ ನಿಮಗೂ ಅನಿಸಬಹುದು.

ವಿಷಯ ಇಷ್ಟೇ. ವೆಸ್ಟ್ ಮಿಡ್ ಲ್ಯಾಂಡ್ ನ ಸ್ಟಾಫರ್ಡ್ ನ ಎಎಸ್ ಡಿಎ ಸೂಪರ್ ಮಾರ್ಕೆಟಿನಲ್ಲಿ ಎರಡು ಭಾರಿ ಗಾತ್ರದ ಹಸುಗಳನ್ನು ಪೆರೇಡ್ ಮಾಡಿಸಲಾಯಿತು. ಜೊತೆಗೆ ಬಂದಿದ್ದ ರೈತನೊಬ್ಬ ತಮ್ಮ ಪ್ರತಿಭಟನೆಯ ಉದ್ದೇಶವನ್ನು ಅಲ್ಲಿದ್ದ ಗ್ರಾಹಕರಿಗೆ ವಿವರಿಸಿದ. ಆಮೇಲೆ ಪೊಲೀಸ್ ರಕ್ಷಣೆಯಲ್ಲಿ ಹಸುಗಳನ್ನು ಸೂಪರ್ ಮಾರ್ಕೆಟ್ ನಿಂದ ಹೊರಕ್ಕೆ ಬಿಡಲಾಯಿತು.

Falling Milk prices British farmers Protest take cows into supermarket

ಹಾಲಿನ ದರ ಇಳಿಕೆ, ರೈತರಿಗೆ ಸೂಕ್ತ ಬೆಂಬಲ ಬೆಲೆ ಸಿಗದ ಕಾರಣ ಸುಮಾರು 70ಕ್ಕೂ ಅಧಿಕ ಮಂಡಿ ರೈತರು ಭಾನುವಾರ ಇದ್ದಕ್ಕಿದ್ದಂತೆ ಸೂಪರ್ ಮಾರ್ಕೆಟ್ ಗೆ ಎಂಟ್ರಿ ಕೊಟ್ಟರು. ಜೊತೆಗೆ ತಾವು ಸಾಕುವ ಹಸುಗಳನ್ನು ಕರೆ ತಂದಿದ್ದರು.

ಹಾಲಿನ ದರ ಹೀಗೆ ಇಳಿಕೆಯಾದರೆ ನಮಗೆ ಕಷ್ಟವಾಗುತ್ತದೆ. ವಾಲ್ ಮಾರ್ಟ್ ಮಾಲೀಕತ್ವದ ಎಎಸ್ ಡಿಎ ಸೂಪರ್ ಮಾರ್ಕೆಟ್ ನಾಲ್ಕು ಪಿಂಟ್ ಗಳ ಹಾಲಿಗೆ 89 ಪೆನ್ಸ್ ನೀಡುತ್ತಿದ್ದಾರೆ.

ಹಾಲು ಉತ್ಪಾದನೆಗೆ 30 ರಿಂದ 35 ಪೆನ್ಸ್ ಖರ್ಚಾಗುತ್ತದೆ. ಅದರೆ, ನಮಗೆ 23.01ಪೆನ್ಸ್ ಪ್ರತಿ ಲೀಟರ್ ಗಳಿಗೆ ಸಿಗುತ್ತಿರುವ ಮೊತ್ತ [One pence is equal to .80 rupees. ] ಯಾವುದಕ್ಕೂ ಸಾಧ್ಯವಿಲ್ಲ ಎಂದಿದ್ದಾರೆ. ಹಸುಗಳ ಪೆರೇಡ್ ವಿಡಿಯೋ ತುಣುಕು ನೋಡಿ ಕೃಪೆ: ದಿ ಗಾರ್ಡಿಯನ್

English summary
Two cows are paraded through the aisles of an Walmart owned Asda store in Stafford as part of a protest against the falling price farmers are paid for milk. About 70 campaigners descend on the West Midlands store telling shoppers that low prices are unsustainable.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X