ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಬ್ರೆಜಿಲ್‌ನ 'ಯಾರಾ' ವೈರಸ್ ಜೀವಕ್ಕೆ ಅಪಾಯಕಾರಿಯೇ?

|
Google Oneindia Kannada News

ಬ್ರೆಜಿಲ್, ಫೆಬ್ರವರಿ 15: ಕೊರೊನಾ ವೈರಸ್‌ನಿಂದ ಆತಂಕಕ್ಕೊಳಗಾಗಿರುವ ಇಡೀ ವಿಶ್ವಕ್ಕೆ ಬ್ರೆಜಿಲ್‌ನ 'ಯಾರಾ' ವೈರಸ್ ಇನ್ನಷ್ಟು ಭೀತಿಯನ್ನುಂಟು ಮಾಡಿತ್ತು.

ಕೊರೊನಾ ರೋಗಕ್ಕಿಂತ ಯಾರಾ ವೈರಸ್ ಭಯನಾಕವಂತೆ, ಮಾರಣಾಂತಿಕವಂತೆ ಎನ್ನುವ ಊಹಾಪೋಹಗಳು ಹಬ್ಬಿದ್ದವು. ಆದರೆ ಯಾರಾ ವೈರಸ್ ಅಂದರೆ ಏನು? ಅದರಿಂದ ಅಪಾಯವೇನಾದರೂ ಇದೆಯಾ? ಸಂಪೂರ್ಣ ಮಾಹಿತಿ ಇಲ್ಲಿದೆ. ಇದುವರೆಗ ಚೀನಾದಲ್ಲಿ ಕೊರೊನಾ ರೋಗದಿಂದ ಮೃತಪಟ್ಟಿರುವ ಸಂಖ್ಯೆ 1650ಕ್ಕೆ ಏರಿಕೆಯಾಗಿದೆ.

 ಕೇವಲ ನೀರಿನಲ್ಲಿ ಕಾಣಿಸಿಕೊಳ್ಳುವ ವೈರಸ್

ಕೇವಲ ನೀರಿನಲ್ಲಿ ಕಾಣಿಸಿಕೊಳ್ಳುವ ವೈರಸ್

ಯಾರಾ ನೀರಿನಲ್ಲಿ ಕಾಣಿಸಿಕೊಳ್ಳುವ ವೈರಸ್ ಆಗಿದೆ. ಇದು ಕೇವಲ ಅಮೀಬಾಗಳಿಗೆ ಮಾತ್ರ ತೊಂದರೆಯನ್ನುಂಟು ಮಾಡುತ್ತದೆ. ಇದು ಅತಿ ಸೂಕ್ಷ್ಮ ವೈರಸ್ ಆಗಿದ್ದು, ನೀರಿನಿಂದ ಹೊರಬರುವುದಿಲ್ಲ.

ಚೀನಾದಲ್ಲಿ ಕೊರೊನಾ ವೈರಸ್‌ನಿಂದ ಮೃತಪಟ್ಟವರ ಸಂಖ್ಯೆ 1,650ಕ್ಕೆ ಏರಿಕೆಚೀನಾದಲ್ಲಿ ಕೊರೊನಾ ವೈರಸ್‌ನಿಂದ ಮೃತಪಟ್ಟವರ ಸಂಖ್ಯೆ 1,650ಕ್ಕೆ ಏರಿಕೆ

 ಯಾರಾ ವೈರಸ್ ಹೆಸರು ಬಂದಿದ್ದೇಕೆ?

ಯಾರಾ ವೈರಸ್ ಹೆಸರು ಬಂದಿದ್ದೇಕೆ?

ಈ ವೈರಸ್ ನೀರಿನಲ್ಲಿಯೇ ಇರುವ ಕಾರಣ ನೀರಿನ ತಾಯಿ(ಮದರ್ ಆಫ್ ವಾಟರ್ಸ್) ಯಾರಾ ಎಂದು ಕರೆಯಾಗುತ್ತದೆ. ಯಾರಾ ವೈರಸ್ ನೀರಿನಲ್ಲಿಯೇ ಇದ್ದು ಕೇವಲ ಅಮೀಬಾಗಳಿಗೆ ಮಾತ್ರ ತೋದಮರೆಯನ್ನುಂಟುಮಾಡುವ ಕಾರಣ ಅದಕ್ಕೆ ಯಾರಾ ಎಂಬ ಹೆಸರು ಬಂದಿದೆ.

 ಯಾವುದೇ ಮನುಷ್ಯರಲ್ಲಿ ಕಾಣಿಸಿಕೊಂಡಿರುವ ನಿದರ್ಶನವಿಲ್ಲ

ಯಾವುದೇ ಮನುಷ್ಯರಲ್ಲಿ ಕಾಣಿಸಿಕೊಂಡಿರುವ ನಿದರ್ಶನವಿಲ್ಲ

ಯಾರಾ ವೈರಸ್ ಶೇ.90ರಷ್ಟು ಭಾಗ ಅಮೀಬಾಗಳಲ್ಲಿ ಕಾಣಿಸಿಕೊಂಡಿವೆಯೇ ವಿನಃ ಮನುಷ್ಯರಲ್ಲಿ ಪತ್ತೆಯಾಗಿಲ್ಲ. ಇದರಿಂದ ಯಾರ ಜೀವಕ್ಕೂ ಅಪಾಯವಿಲ್ಲ. ಕೊರೊನಾ ವೈರಸ್ ರೀತಿಯ ಮನುಷ್ಯರಿಗೆ ಮರಣವನ್ನು ತಂದೊಡ್ಡುವ ವೈರಸ್ ಇದಲ್ಲ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. 90 ರಷ್ಟು ಯಾರವೈರಸ್ ವಂಶವಾಹಿಗಳನ್ನು ಈ ಹಿಂದೆ ಯಾವ ವೈರಸ್‌‌ಗಳಲ್ಲೂ ನೋಡಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ವೈರಸ್ ಈ ಹಿಂದೆ ತಿಳಿದಿರುವ ಯಾವುದೇ ವೈರಸ್ ಅನ್ನು ಹೋಲುವಂತಿಲ್ಲ.

 ಈ ವೈರಸ್ ಕಾಣಿಸಿಕೊಂಡಿದ್ದು 2020ರಲ್ಲಿ

ಈ ವೈರಸ್ ಕಾಣಿಸಿಕೊಂಡಿದ್ದು 2020ರಲ್ಲಿ

ಡೈಲಿ ಮೇಲ್ ವರದಿಯ ಪ್ರಕಾರ, ಈ ವೈರಸ್ ಅನ್ನು ಜನವರಿ 2020 ರಲ್ಲಿ ಮಾತ್ರ ಡಾಕ್ಯುಮೆಂಟ್ ಮಾಡಿದ್ದಾರೆ. ಇದ್ದಕ್ಕಿದ್ದಂತೆ ವಿಜ್ಞಾನಿಗಳಿಗೆ ಬ್ರೆಜಿಲ್‌ನ ಕೃತಕ ಸರೋವರದಲ್ಲಿ ಸಿಕ್ಕಿದೆ. ಈ ವೈರಸ್‌ನಲ್ಲಿ ಒಟ್ಟು 74 ಜೀನ್‌ಗಳು ಪತ್ತೆಯಾಗಿವೆ. ಬ್ರೆಜಿಲಿಯನ್ ಫೆಡರಲ್ ಯೂನಿವರ್ಸಿಟಿ ಮಿನಾಸ್ ಗೆರೈಸ್ ಪ್ರಕಾರ, ಈ ಸಮಯದಲ್ಲಿ ಈ ವೈರಸ್‌ನಿಂದ ಮನುಷ್ಯರಿಗೆ ಯಾವುದೇ ತೊಂದರೆಯಿಲ್ಲ. ಈ ವೈರಸ್ ಅಮೀಬಾ ನಡುವೆ ಮಾತ್ರ ವಾಸಿಸುತ್ತದೆ ಮತ್ತು ಇದುವರೆಗಿನ ಮಾಹಿತಿಯ ಪ್ರಕಾರ, ಮನುಷ್ಯರು ಅದರಿಂದ ಸೋಂಕಿಗೆ ಒಳಗಾಗುವುದಿಲ್ಲ ಎಂದಿದ್ದಾರೆ.

English summary
In a lake in Brazil, researchers have discovered a virus that they find unusual and intriguing. Called Yaravirus, it has a “puzzling origin and phylogeny”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X