ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಕೊವಿಡ್19ನಿಂದಾಗಿ ರಸ್ತೆಯಲ್ಲಿ ನೋಟು ಚೆಲ್ಲಾಪಿಲ್ಲಿ!

|
Google Oneindia Kannada News

ರೋಮ್, ಏಪ್ರಿಲ್ 1: ರಸ್ತೆಯ ಬದಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕರೆನ್ಸಿ ನೋಟುಗಳುಳ್ಳ ಚಿತ್ರವೊಂದು ಜನಪ್ರಿಯ ಚಾಟಿಂಗ್ ಅಪ್ಲಿಕೇಷನ್ ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ.

Recommended Video

ಲಾಕ್ ಡೌನ್ ಆದೇಶದವರೆಗೆ ರಾಜ್ಯದಲ್ಲಿ ಉಚಿತ ಹಾಲು ಪೂರೈಕೆಗೆ BSY ಸೂಚನೆ | Free Milk | KMF | Bangalore

"ಸಾವಿನಿಂದ ನಮ್ಮನ್ನು ಉಳಿಸಲಾಗದ ಈ ಕರೆನ್ಸಿ ನೋಟು ಉಪಯೋಗವಿಲ್ಲ, ಎಂದು ಇಟಲಿಯ ಜನರು ರಸ್ತೆಗಳಲ್ಲಿ ನೋಟುಗಳನ್ನು ಎಸೆದಿದ್ದಾರೆ. ನೀವು ಸ್ಥಿತಿವಂತರಾದರೆ, ಇದೇ ಹಣವನ್ನು ಅಗತ್ಯವಿದ್ದವರಿಗೆ ನೀಡಿ ಸೇವೆ ಸಲ್ಲಿಸಿ, ಇದು ಮಾನವೀಯತೆಗೆ ಉದಾಹರಣೆ" ಎಂಬ ಸಂದೇಶ ಕೂಡಾ ಚಿತ್ರದ ಜೊತೆಗೆ ನಿಮಗೆ ಸಿಗಲಿದೆ.

ಈ ಕೊರೊನಾ ವೆಬ್ ತಾಣಗಳು ಫೇಕ್ ಎಂದ ಸೈಬರ್ ಕ್ರೈಂ ಸೆಲ್ಈ ಕೊರೊನಾ ವೆಬ್ ತಾಣಗಳು ಫೇಕ್ ಎಂದ ಸೈಬರ್ ಕ್ರೈಂ ಸೆಲ್

ಏನಿದರ ಸತ್ಯಾಸತ್ಯತೆ: ಇದನ್ನು ಗೂಗಲ್ ಸರ್ಚ್ ಇಂಜಿನ್ ನ ರಿವರ್ಸ್ ಸರ್ಚ್ ಮೂಲಕ ಹುಡುಕಿದಾಗ ಇದು ಇಟಲಿಯ ರಸ್ತೆಯಲ್ಲ, ಇದು ಈಗ ಎಸೆದ ಹಣವಲ್ಲ ಎಂದು ತಿಳಿದು ಬಂದಿದೆ. ವೆನಿಜುವೆಲಾ ರಾಷ್ಟ್ರದ ಕರೆನ್ಸಿ ಬೊಲಿವಾರ್ ಫುಯೆರ್ಟ್ ಬದಲಿಗೆ ಹೊಸ ಕರೆನ್ಸಿ ತಂದಾಗ ಆಗಸ್ಟ್ 2018ರಲ್ಲಿ ತೆಗೆದ ಚಿತ್ರ ಇದಾಗಿದೆ. ಹಳೆಯ ಬಳಕೆಗೆ ಯೋಗ್ಯವಲ್ಲದ ಕರೆನ್ಸಿಯನ್ನು ವೆನಿಜುವೆಲಾದ ರಸ್ತೆಯಲ್ಲಿ ಎಸೆಯಲಾಗಿತ್ತು.

Fact Check: People in Italy are not throwing their money on the streets due to COVID-19

ಸ್ನೊಪೆಸ್.ಕಾಂನಲ್ಲಿ ಈ ಬಗ್ಗೆ ವರದಿ ಬಂದಾಗ ಇದೇ ಚಿತ್ರವನ್ನು ಬಳಸಲಾಗಿತ್ತು. ಆಗ ಕೂಡಾ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗ್ತಿತು. ಇದು ವೆನಿಜುವೆಲಾದ ರಸ್ತೆ, ಇಲ್ಲಿ ಹಣವನ್ನು ಚರಂಡಿಗೆ, ರಸ್ತೆಗೆ ಎಸೆಯಲಾಗಿದೆ, ಅವಕ್ಕೆ ಬೆಲೆಯೇ ಇಲ್ಲ, ಸೋಷಿಯಲಿಸಂಗೆ ಸ್ವಾಗತ ಎಂದು ಬರೆಯಲಾಗಿತ್ತು. ಹಾಗಾಗಿ, ಈಗ ಬರುತ್ತಿರುವ ವಾಟ್ಸಾಪ್ ಸಂದೇಶಗಳಿಗೂ ಕೊರೊನಾ ದೆಸೆಯಿಂದ ಉಂಟಾಗಿ ಆರ್ಥಿಕ ದುಃಸ್ಥಿತಿಗೂ ಸಂಬಂಧವಿಲ್ಲ.

English summary
Fact Check: A photograph is being shared on WhatsApp that shows money being thrown on the streets of Italy due to COVID19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X