ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಶವಪೆಟ್ಟಿಗೆ ರಹಸ್ಯ ಬಯಲು

|
Google Oneindia Kannada News

ನವದೆಹಲಿ, ಏಪ್ರಿಲ್ 29: ವಿಶ್ವದ ಬಲಿಷ್ಠ ರಾಷ್ಟ್ರಗಳಿಗೆ ಸವಾಲು ಹಾಕಿರುವ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಇನ್ನಿಲ್ಲ ಎಂಬ ಸುದ್ದಿ ಹಾಗೂ ಅದಕ್ಕೆ ಸಂಬಂಧಪಟ್ಟ ಚಿತ್ರಗಳು ಸಾಮಾಜಿಕ ಜಾಲ ತಾಣಗಳಲ್ಲಿ ಅತ್ಯಂತ ವೇಗವಾಗಿ, ಅತಿ ಹೆಚ್ಚು ಹಂಚಿಕೆಯಾಗಿವೆ. ಆದರೆ, ಈ ಚಿತ್ರಗಳ ಸತ್ಯಾಸತ್ಯತೆ ಬಗ್ಗೆ ತಲೆಕೆಡಿಸಿಕೊಂಡವರು ಕಡಿಮೆ.

ಇತ್ತೀಚೆಗೆ ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರಿಗೆ ಬ್ರೈನ್ ಡೆಡ್ ಆಗಿದೆ. ಕೋಮಾಕ್ಕೆ ಜಾರಿ ನಂತರ ಮೃತರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು, ವದಂತಿಗಳು ಹರಡುತ್ತಿವೆ. ಅಸಲಿಗೆ ಈ ಕಿಮ್ ಜಾಂಗ್ ಉನ್ ಬದುಕಿತ್ತಿದ್ದಾರೆಯೇ, ಬದುಕಿದ್ದರೆ ಎಲ್ಲಿದ್ದಾರೆ, ಅಥವಾ ಮೃತಪಟ್ಟಿದ್ದರೆ ಯಾಕೆ ಅದನ್ನು ಗೌಪ್ಯವಾಗಿ ಇರಿಸಲಾಗಿರುವುದರಿಂದ ಯಾವುದನ್ನು ಇದು ಹೀಗೆ ಎಂದು ಹೇಳಲು ಆಗುತ್ತಿಲ್ಲ. ಆದರೆ, ಶವಪೆಟ್ಟಿಗೆಯಲ್ಲಿರುವ ಉನ್ ಚಿತ್ರ ಮಾತ್ರ ನಕಲಿ ಎಂದು ಸ್ಪಷ್ಟವಾಗಿ ಹೇಳಬಹುದು.

ಕಿಮ್ ಜಾಂಗ್ ಉನ್ ಸಾವು ಬದುಕಿನ ಸುದ್ದಿ! ಆ ರೈಲು ಕೊಟ್ಟಿತಾ ಸುಳಿವು?ಕಿಮ್ ಜಾಂಗ್ ಉನ್ ಸಾವು ಬದುಕಿನ ಸುದ್ದಿ! ಆ ರೈಲು ಕೊಟ್ಟಿತಾ ಸುಳಿವು?

ಕಳೆದ ಕೆಲವು ದಿನಗಳಿಂದ ಉತ್ತರ ಕೊರಿಯಾದ ಸಾರ್ವಜನಿಕ ಕಾರ್ಯಕ್ರಮ, ಸಭೆ, ಸಮಾರಂಭ ಭಾಗವಹಿಸುತ್ತಿದ್ದ ಹಾಗೂ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕಿಮ್ ಇದ್ದಕ್ಕಿದ್ದಂತೆ ತೆರೆ ಮರೆಗೆ ಸರಿದಂತೆ ಗೋಚರಿಸುತ್ತಿದೆ. ಅನುವಂಶೀಯ ಆಡಳಿತ ಇರುವ ದೇಶದಲ್ಲಿ ತಮ್ಮ ತಂದೆಯ ಮರಣಾನಂತರ ಮೂರನೇ ತಲೆಮಾರಿನ ನಾಯಕರಾಗಿ 2011ರಲ್ಲಿ ಕಿಮ್ ಜಾಂಗ್ ಉನ್ ಅಧಿಕಾರ ಸ್ವೀಕರಿಸಿದ್ದರು.

 ಸಾಮಾಜಿಕ ಜಾಲತಾಣದಲ್ಲಿ ಕಿಮ್ ಟ್ರೆಂಡ್

ಸಾಮಾಜಿಕ ಜಾಲತಾಣದಲ್ಲಿ ಕಿಮ್ ಟ್ರೆಂಡ್

ಸಾಮಾಜಿಕ ಜಾಲತಾಣದಲ್ಲಿ #KIMJONGUNDEAD ಹ್ಯಾಶ್ ಟ್ಯಾಗ್ ಸಖತ್ ಟ್ರೆಂಡಿಂಗ್ ಆಗಿತ್ತು. ಆದರೆ ಇದುವರೆಗೂ ಯಾವುದೇ ಮಾಧ್ಯಮವೂ ಕೂಡಾ ಕಿಮ್ ಜಾಂಗ್ ಉನ್ ಸಾವಿನ ಕುರಿತು ವಿಶ್ವಾಸಾರ್ಹ ವರದಿಯನ್ನು ಪ್ರಕಟಿಸಿಲ್ಲ. ಕಳೆದ 2014ರಲ್ಲಿ 36 ವರ್ಷದ ಕಿಮ್ ಜಾಂಗ್ ಉನ್ ಕೆಲವು ತಿಂಗಳುಗಳ ಕಾಲ ಮಾಧ್ಯಮಗಳಿಂದ ದೂರ ಉಳಿದಿದ್ದರು. ನಂತರದಲ್ಲಿ ಕಾಣಿಸಿಕೊಂಡ ಕಿಮ್ ಜಾಂಗ್ ಉನ್ ಕೈಯಲ್ಲಿ ಊರುಗೋಲು ಹಿಡಿದುಕೊಂಡು ನಡೆದಾಡುತ್ತಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಅಂದು ಕಿಮ್ ಜಾಂಗ್ ಉನ್ ಅವರ ಆರೋಗ್ಯದಲ್ಲಿನ ಬದಲಾವಣೆಯ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆಯಾಯಿತು.

 ರೆಸಾರ್ಟ್ ಕೌಂಟಿಯಲ್ಲಿದ್ದಾರೆಯೇ ಕಿಮ್?

ರೆಸಾರ್ಟ್ ಕೌಂಟಿಯಲ್ಲಿದ್ದಾರೆಯೇ ಕಿಮ್?

ಉತ್ತರ ಕೊರಿಯಾ ರಾಜಧಾನಿ ಪ್ಯೊಂಗ್ಯಾಂಗ್ ನ ಹ್ಯಾಂಗ್ ಸನ್ ಪ್ರದೇಶದಲ್ಲಿ ಇರುವ ರೆಸಾರ್ಟ್ ಕೌಂಟಿಯಲ್ಲಿ ಕಿಮ್ ಜಾಂಗ್ ಉನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೊಜ್ಜು, ಆಯಾಸ ಹಾಗೂ ಅತಿಯಾದ ಧೂಮಪಾನದಿಂದ ಅನಾರೋಗ್ಯಕ್ಕೆ ತುತ್ತಾದ ಕಿಮ್ ಜಾಂಗ್ ಉನ್ ರಿಗೆ ಹೃದಯರಕ್ತನಾಳ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಏಪ್ರಿಲ್ 12ರ ವೇಳೆಗೆ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದೆ ಎಂದು ವರದಿಯಾಗಿದೆ.

ಕಿಮ್ ಜೊಂಗ್ ಹಿಂದಿನ ಶಕ್ತಿ ಸೋದರಿ ಯೋ ಜಂಗ್!ಕಿಮ್ ಜೊಂಗ್ ಹಿಂದಿನ ಶಕ್ತಿ ಸೋದರಿ ಯೋ ಜಂಗ್!

 ವೈರಲ್ ಆಗಿರುವ ಚಿತ್ರದಲ್ಲಿ ಏನಿದೆ?

ವೈರಲ್ ಆಗಿರುವ ಚಿತ್ರದಲ್ಲಿ ಏನಿದೆ?

ಶವಪೆಟ್ಟಿಗೆಯಲ್ಲಿ ಉನ್ ಅವರನ್ನು ಮಲಗಿಸಲಾಗಿದ್ದು, ಕೆಂಪು ಬಣ್ಣದ ಹೊದಿಕೆ ಹಾಕಲಾಗಿದೆ. ತಲೆಗೆ ಬಿಳಿಬಟ್ಟೆ ಸುತ್ತಿರುವ ದಿಂಬು ಇರಿಸಲಾಗಿದೆ. ಆದರೆ, ಈ ಚಿತ್ರದಲ್ಲಿರುವುದು ಕಿಂಗ್ ಜೊಂಗ್ ಉನ್ ಅಲ್ಲ. ಬದಲಿಗೆ ಅವರ ತಂದೆ ಕಿಮ್ ಜೊಂಗ್ II ಅಂತಿಮನಮನ ಸಂದರ್ಭದ ಚಿತ್ರವಾಗಿದೆ. 2011ರಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದರು. ಅವರ ಅಂತಿಮ ವಿಧಿ ವಿಧಾನದ ಸಂದರ್ಭದ ಚಿತ್ರಗಳು ಮತ್ತೊಮ್ಮೆ ಈ ರೀತಿ ದುರ್ಬಳಕೆಯಾಗುತ್ತಿವೆ.

 ಚಿತ್ರದ ರಹಸ್ಯ ಬಯಲಾಗಿದ್ದು ಹೇಗೆ?

ಚಿತ್ರದ ರಹಸ್ಯ ಬಯಲಾಗಿದ್ದು ಹೇಗೆ?

ಕಿಮ್ ಅಸ್ತಿತ್ವದ ಬಗ್ಗೆ ಅಧಿಕೃತ ಮಾಹಿತಿ ಸದ್ಯಕ್ಕೆ ಸಿಕ್ಕಿದ್ದು, ಹಾಲಿಡೇ ರೆಸಾರ್ಟ್ ನಿರ್ಮಾಣದ ಬಗ್ಗೆ ಕಿಮ್ ಬರೆದಿರುವ ಪತ್ರವೊಂದನ್ನು ಬಿಡುಗಡೆ ಮಾಡಲಾಗಿದೆ. ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರಿಗೂ ಸಂದೇಶ ಕಳಿಸಿದ್ದಾರೆ ಎನ್ನಲಾಗಿದೆ. 2011ರ ಕಿಮ್ ಜೊಂಗ್ II ಅಂತಿಮ ಚಿತ್ರವು 2017ರಲ್ಲೂ ಟ್ರೆಂಡ್ ಆಗಿತ್ತು. ಈಗಲೂ ಟ್ರೆಂಡ್ ನಲ್ಲಿರುವ ಚಿತ್ರವೂ ಕಿಮ್ ಉನ್ ತಂದೆಯವರದ್ದೇ ಆಗಿದೆ ಎಂದು ಗೂಗಲ್ ರಿವರ್ಸ್ ಸರ್ಚ್ ಮೂಲಕ ತಿಳಿದು ಬಂದಿದೆ.

ಹೆಚ್ಚು ಟ್ರೆಂಡ್ ಆಗಲು ಏನು ಕಾರಣ?

ಹೆಚ್ಚು ಟ್ರೆಂಡ್ ಆಗಲು ಏನು ಕಾರಣ?

ಈ ಚಿತ್ರವನ್ನು ಜಪಾನ್ ದೇಶದ ಸುದ್ದಿ ಜಾಲ ಸಂಸ್ಥೆ ಜೆಎನ್ಎನ್ ಹಾಗೂ ಹಾಂಗ್ ಕಾಂಗ್ ಸ್ಯಾಟಲೈಟ್ ಟಿವಿ ಪ್ರಸಾರವನ್ನು ಮಾಡಿದ್ದರಿಂದ ಸುದ್ದಿ ಇನ್ನಷ್ಟು ವೇಗವಾಗಿ ಹಬ್ಬಲು ಕಾರಣವಾಯಿತು ಎಂದು ತಿಳಿದು ಬಂದಿದೆ. ಕಿಮ್ ಉನ್ ಅನಾರೋಗ್ಯ ಇರುವುದು ದೃಢವಾಗಿದ್ದು, ಏಪ್ರಿಲ್ 11ರ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ, ಏಪ್ರಿಲ್ 15ರಂದು ಉತ್ತರ ಕೊರಿಯಾ ಸಂಸ್ಥಾಪಕ, ಕಿಮ್ ಉನ್ ಅವರ ಅಜ್ಜ ಕಿಮ್ II ಜೊಂಗ್ ಅವರ 108ನೇ ಹುಟ್ಟುಹಬ್ಬ ಸಮಾರಂಭದಲ್ಲೂ ಕಿಮ್ ಉನ್ ಇರಲಿಲ್ಲ. ಹೀಗಾಗಿ, ಸಹಜವಾಗಿ ಸುದ್ದಿ ಪ್ರಸಾರ, ಸಾಮಾಜಿಕ ಜಾಲ ತಾಣಗಳ ವರದಿಗಳು ಹೆಚ್ಚಿನ ಪ್ರಮಾಣದಲ್ಲಿ ಹಂಚಿಕೆಯಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

English summary
With absolutely no clarity on North Korean leader, Kim Jong Un, rumours have sparked off about his whereabouts and health.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X