ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಪಾಕಿಸ್ತಾನಕ್ಕೆ 1 ಮಿಲಿಯನ್ ಲಸಿಕೆ ಕಾಣಿಕೆ ನೀಡಿದ ರಷ್ಯಾ

|
Google Oneindia Kannada News

ನವದೆಹಲಿ, ಆಗಸ್ಟ್ 20: ಕೊರೊನಾ ವೈರಸ್‌ ಲಸಿಕೆಯ ಪ್ರಯೋಗಕ್ಕೆ ಅನುಮತಿ ನೀಡಿರುವ ರಷ್ಯಾ, ತಮ್ಮ ಮೊದಲ ಕೋವಿಡ್ 19 ಲಸಿಕೆಯ ಒಂದು ಮಿಲಿಯನ್ ಡೋಸ್‌ಗಳನ್ನು ಪಾಕಿಸ್ತಾನಕ್ಕೆ ಉಡುಗೊರೆಯಾಗಿ ನೀಡಿದ್ದು, ವಿಶ್ವ ಆರೋಗ್ಯ ಸಂಸ್ಥೆ ಅದನ್ನು ಮೂರನೇ ಹಂತದ ಲಸಿಕೆ ಪ್ರಯೋಗ ಎಂದು ವ್ಯಾಖ್ಯಾನಿಸಿದೆ ಎಂಬ ಸಂದೇಶವೊಂದು ವಾಟ್ಸಾಪ್ ಮತ್ತು ಫೇಸ್‌ಬುಕ್‌ಗಳಲ್ಲಿ ಹರಿದಾಡುತ್ತಿದೆ.

Recommended Video

ಮತ್ತೊಂದು ಹೀನ ಘಟನೆಗೆ ಸಾಕ್ಷಿಯಾದ ಅಕ್ಷರಸ್ಥರ ನಾನು ಕೇರಳ | Oneindia Kannada

ಚೀನಾದ ಬಳಿಕ ರಷ್ಯಾವು ಪಾಕಿಸ್ತಾನಕ್ಕೆ ಹತ್ತು ಲಕ್ಷ ಕೋವಿಡ್ ಲಸಿಕೆಗಳನ್ನು ಕಾಣಿಕೆಯಾಗಿ ನೀಡಿದೆ. ಆದರೆ ಡಬ್ಲ್ಯೂಎಚ್‌ಒ ಅದನ್ನು ಮಾನವ ಪ್ರಯೋಗದ ಮೂರನೇ ಹಂತ ಎಂದು ಹೇಳಿದೆ ಎಂಬಂತಹ ಸಂದೇಶವನ್ನು ಅನೇಕ ಫೇಸ್ ಬುಕ್ ಬಳಕೆದಾರರು ಪೋಸ್ಟ್ ಮಾಡುತ್ತಿದ್ದಾರೆ.

ಸುಳ್ ಸುದ್ದಿ: ತಾಯಿಗೆ ಕೊವಿಡ್-19 ಅಂಟಿದ ವಿಷಯ ಮುಚ್ಚಿಟ್ಟರಾ ಸಂಸದರು? ಸುಳ್ ಸುದ್ದಿ: ತಾಯಿಗೆ ಕೊವಿಡ್-19 ಅಂಟಿದ ವಿಷಯ ಮುಚ್ಚಿಟ್ಟರಾ ಸಂಸದರು?

ಇದೇ ಸಂದೇಶದ ಇನ್ನೂ ಸುದೀರ್ಘ ಬರಹಗಳನ್ನೂ ಫೇಸ್‌ಬುಕ್‌ನಲ್ಲಿ ಹಲವಾರು ಮಂದಿ ಹಂಚಿಕೊಳ್ಳುತ್ತಿದ್ದಾರೆ. 'ರಷ್ಯಾವು ಪಾಕಿಸ್ತಾನಕ್ಕೆ ಒಂದು ಮಿಲಿಯನ್ ಲಸಿಕೆಗಳನ್ನು ಉಡುಗೊರೆಯಾಗಿ ನೀಡಿದೆ' ಎಂದು ಪ್ರಕಟವಾಗಿರುವ ವರದಿಯೊಂದನ್ನು ಜನರು ಹಿಂದೆ ಮುಂದೆ ನೋಡದೆ ಶೇರ್ ಮಾಡುತ್ತಿದ್ದಾರೆ. ಮುಂದೆ ಓದಿ.

ಪೋಸ್ಟ್‌ನಲ್ಲಿ ಏನಿದೆ?

ಪೋಸ್ಟ್‌ನಲ್ಲಿ ಏನಿದೆ?

'ರಷ್ಯಾದ ಉಡುಗೊರೆಯನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನದ ರಾಜತಾಂತ್ರಿಕ ಜಯ ಮತ್ತು ಭಾರತಕ್ಕೆ ಬಹಳ ಆಪ್ತರಾಗಿರುವ ದೇಶಗಳೊಂದಿಗೆ ನಾವೂ ಬಾಂಧವ್ಯವನ್ನು ಗಟ್ಟಿಗೊಳಿಸುತ್ತಿರುವ ಸಂಕೇತ ಎಂದು ಹೇಳಿಕೊಂಡಿದ್ದಾರೆ. ಆದರೆ ರಷ್ಯಾದ ಕೋವಿಡ್ ಲಸಿಕೆ ಸ್ಪುಟ್ನಿಕ್ ಅನ್ನು ಪಾಕಿಸ್ತಾನಕ್ಕೆ ನೀಡಿರುವುದು ಉಡುಗೊರೆಯಾಗಿ ಅಲ್ಲ, ಅದು ಮೂರನೇ ಹಂತದ ಮಾನವ ಪ್ರಯೋಗ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ನಂಬಿದೆ' ಎಂಬ ಬರಹಗಳು ಹರಿದಾಡುತ್ತಿವೆ.

ಇದು ಸುಳ್ಳು ಮಾಹಿತಿ

ಇದು ಸುಳ್ಳು ಮಾಹಿತಿ

ಆದರೆ ಈ ಸಂದೇಶ ತಪ್ಪುದಾರಿಗೆ ಎಳೆಯುವಂತದ್ದಾಗಿದ್ದು, ಇವುಗಳಲ್ಲಿ ಹುರುಳಿಲ್ಲ ಎಂಬುದಾಗಿ 'ಇಂಡಿಯಾ ಟುಡೆ'ಯ ಸುಳ್ಳು ಸುದ್ದಿ ಪತ್ತೆ ತಂಡ ತಿಳಿಸಿದೆ. ಪ್ರಸ್ತುತ ಸಂಗತಿಗಳನ್ನು ವ್ಯಂಗ್ಯವಾಗಿ ಹೇಳುವ ವೆಬ್ ಪೋರ್ಟಲ್ ಒಂದರಿಂದ ಈ ಹೇಳಿಕೆಯನ್ನು ಎತ್ತಿಕೊಳ್ಳಲಾಗಿದೆ. ರಷ್ಯಾ ಇನ್ನೂ ಲಸಿಕೆಯನ್ನು ಗುಂಪು ಗುಂಪಾಗಿ ಉತ್ಪಾದಿಸುವ ಕಾರ್ಯ ಆರಂಭಿಸಿಲ್ಲ. ಹಾಗೆಯೇ ರಷ್ಯಾದ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ ಎನ್ನಲಾದ ವ್ಯಾಖ್ಯಾನ ಕೂಡ ನಿಜವಲ್ಲ. ಚೀನಾ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಬಳಸಿ ಪಾಕಿಸ್ತಾನವು ಇತ್ತೀಚೆಗೆ ಮೂರನೇ ಹಂತದ ಕೋವಿಡ್ ಲಸಿಕೆ ಪ್ರಯೋಗ ಶುರುಮಾಡಿದೆ.

ಕೋವಿಡ್-19 ಲಸಿಕೆಯಿಂದ ರಷ್ಯಾ ಅಧ್ಯಕ್ಷ ಪುಟಿನ್ ಮಗಳು ಮೃತಪಟ್ಟಿದ್ದು ನಿಜವೇ?ಕೋವಿಡ್-19 ಲಸಿಕೆಯಿಂದ ರಷ್ಯಾ ಅಧ್ಯಕ್ಷ ಪುಟಿನ್ ಮಗಳು ಮೃತಪಟ್ಟಿದ್ದು ನಿಜವೇ?

ಪಾಕಿಸ್ತಾನದ ಹೆಸರು ಉಲ್ಲೇಖವಿಲ್ಲ

ಪಾಕಿಸ್ತಾನದ ಹೆಸರು ಉಲ್ಲೇಖವಿಲ್ಲ

ರಷ್ಯಾ ಕಂಡುಹಿಡಿದಿರುವ ಸ್ಪುಟ್ನಿಕ್ ವಿ ಲಸಿಕೆಯ ಸಾಮೂಹಿಕ ಉತ್ಪಾದನೆಯು ಸೆಪ್ಟೆಂಬರ್‌ನಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಅದರ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗವು ಆಗಸ್ಟ್ 12ರಂದು ಆರಂಭವಾಗಿತ್ತು. ವೆಬ್‌ಸೈಟ್ ಒಂದರ ಪ್ರಕಾರ ರಷ್ಯಾದ 2,000ಕ್ಕೂ ಹೆಚ್ಚು ಜನರು, ಯುಎಇ ಮತ್ತು ಸೌದಿ ಅರೇಬಿಯಾ ಹಾಗೂ ಲ್ಯಾಟಿನ್ ಅಮೆರಿಕದ ರಾಷ್ಟ್ರಗಳಾದ ಬ್ರೆಜಿಲ್ ಮತ್ತು ಮೆಕ್ಸಿಕೋದ ಕೆಲವು ಜನರ ಮೇಲೆ ಇದರ ಪ್ರಯೋಗ ನಡೆಯಲಿದೆ. ಇದರಲ್ಲಿ ಪಾಕಿಸ್ತಾನದ ಹೆಸರನ್ನು ಎಲ್ಲಿಯೂ ಉಲ್ಲೇಖಿಸಿಲ್ಲ.

ವಿಡಂಬನಾತ್ಮಕ ಸುದ್ದಿ ಪ್ರಕಟಿಸುವ ತಾಣ

ವಿಡಂಬನಾತ್ಮಕ ಸುದ್ದಿ ಪ್ರಕಟಿಸುವ ತಾಣ

'ದಿ ಫಾಕ್ಸಿ' ಎಂಬ ವೆಬ್‌ಸೈಟ್‌ನಲ್ಲಿ ಆಗಸ್ಟ್ 14ರಂದು ಲೇಖನವೊಂದು ಪ್ರಕಟವಾಗಿತ್ತು. 'ಚೀನಾದ ಬಳಿಕ ಪಾಕಿಸ್ತಾನಕ್ಕೆ ರಷ್ಯಾ ಒಂದು ಮಿಲಿಯನ್ ಲಸಿಕೆಗಳನ್ನು ಉಡುಗೊರೆಯಾಗಿ ನೀಡಿದೆ: ಡಬ್ಲ್ಯೂ ಎಚ್‌ಒ ಇದನ್ನು ಮೂರನೇ ಹಂತದ ಮಾನವ ಪ್ರಯೋಗ ಎಂದು ಕರೆದಿದೆ' ಎಂಬ ಶೀರ್ಷಿಕೆ ಹೊಂದಿತ್ತು. ಫೇಸ್‌ಬುಕ್‌ನಲ್ಲಿ ಹರಿದಾಡಿದ ಪೋಸ್ಟ್ ಇದೇ ಲೇಖನದ ಶೀರ್ಷಿಕೆಯಷ್ಟೇ. 'ದಿ ಫಾಕ್ಸಿ' ಎಂಬ ವೆಬ್‌ಸೈಟ್ ತನ್ನದು ವಿಡಂಬನೆಯ ಸಂಗತಿಗಳನ್ನು ಹಂಚಿಕೊಳ್ಳುವ ತಾಣ ಎಂದು ಹೇಳಿಕೊಂಡಿದೆ. ಹೀಗಾಗಿ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿರುವ ಈ ಪೋಸ್ಟ್‌ನಲ್ಲಿ ಯಾವುದೇ ಸತ್ಯವಿಲ್ಲ ಎನ್ನುವುದು ಖಚಿತವಾಗಿದೆ.

Fact Check: ಬೆಂಗಳೂರಿನಲ್ಲಿ ಸೀಲ್ ಡೌನ್ ಮಾಡುವುದಿಲ್ಲವೇ?Fact Check: ಬೆಂಗಳೂರಿನಲ್ಲಿ ಸೀಲ್ ಡೌನ್ ಮಾಡುವುದಿಲ್ಲವೇ?

English summary
A fake news post is circulating on social media that, Russia has gifted 1 million doses of COVID vaccine to Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X