ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕ ಸಂಕಷ್ಟ: ನೇಪಾಳದಲ್ಲಿ ಪರ್ವತಾರೋಹಣ, ಚಾರಣಕ್ಕೆ ಮತ್ತೆ ಅವಕಾಶ

|
Google Oneindia Kannada News

ಕಠ್ಮಂಡು, ನವೆಂಬರ್ 03: ಕೊರೊನಾ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನೇಪಾಳ ಇದೀಗ ಪರ್ವತಾರೋಹಣ, ಚಾರಣಕ್ಕೆ ಮತ್ತೆ ಅವಕಾಶ ಕಲ್ಪಿಸಿದೆ.

ನೇಪಾಳಕ್ಕೆ ಭೇಟಿ ನೀಡುವ ಮುನ್ನ ಕೆಲವು ನಿಯಮಗಳು ಕಡ್ಡಾಯವಾಗಿರಲಿದೆ. ತಮ್ಮ ದೇಶದಿಂದ ಹೊರಡುವಾಗ ಕೊರೊನಾ ಪರೀಕ್ಷೆ ಮಾಡಿಸಿ, ನೆಗೆಟಿವ್ ವರದಿಯನ್ನು ತಂದಿರಬೇಕು. ನೇಪಾಳಕ್ಕೆ ಬಂದವರು ಕಠ್ಮಂಡುವಿನಲ್ಲಿ ಒಂದು ವಾರದ ಕಾಲ ಕ್ವಾರಂಟೈನ್‌ನಲ್ಲಿರಬೇಕು.

 ಕಾಸರಕೋಡ ಇಕೋ ಬೀಚ್ ಗೆ ನ.1ರಂದು ದಾಖಲೆಯ ಪ್ರವಾಸಿಗರು ಕಾಸರಕೋಡ ಇಕೋ ಬೀಚ್ ಗೆ ನ.1ರಂದು ದಾಖಲೆಯ ಪ್ರವಾಸಿಗರು

ನಂತರ ಕೊರೊನಾ ಪರೀಕ್ಷೆ ಮಾಡಿಸಿದ ಬಳಿಕವಷ್ಟೇ ಪ್ರವಾಸಕ್ಕೆ ಅನುಮತಿ ದೊರೆಯಲಿದೆ.

Facing Economic Woes, Nepal Reopens To Adventurers

ವಿದೇಶಿ ಪ್ರವಾಸಿಗರು ನೇಪಾಳದ ಆದಾಯದ ಮೂಲವಾಗಿದ್ದಾರೆ., ಕೊರೊನಾ ಸಾಂಕ್ರಾಮಿಕದ ಕಾರಣ ಪ್ರವಾಸೋದ್ಯಮ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಈ ಉದ್ಯಮವನ್ನೇ ನಂಬಿ ಬದುಕುತ್ತಿದ್ದ 80 ಸಾವಿರಕ್ಕೂ ಅಧಿಕ ಮಂದಿಯ ಜೀವನ ಸಂಕಷ್ಟಕ್ಕೀಡಾಗಿತ್ತು.

ಎಲ್ಲಾ ಪ್ರವಾಸಿಗರಿಗೂ ನೇಪಾಳ ಪ್ರವೇಶಕ್ಕೆ ಅನುಮತಿ ನೀಡುತ್ತಿಲ್ಲ. ಪೂರ್ವಾನುಮತಿಯೊಂದಿಗೆ ಬರುವಂತಹ ಪರ್ವತಾರೋಹಿಗಳಿಗೆ ಮತ್ತು ಚಾರಣಿಗರಿಗೆ ಮಾತ್ರ ಅವಕಾಶ ನೀಡುತ್ತೇವೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

ಅಡುಗೆಯವರು, ಸ್ಥಳೀಯ ಪ್ರವಾಸಿ ಮಾರ್ಗದರ್ಶಿ, ಪೋರ್ಟರ್, ಸಹಾಯಕರು, ಕಾರು ಚಾಲಕರು, ಹೀಗೆ ಪ್ರವಾಸೊಗರೊಂದಿಗೆ ತೆರಳುವ ಪ್ರತಿಯೊಬ್ಬರೂ ಕೊರೊನಾ ಪರೀಕ್ಷೆ ಮಾಡಿಸಿರಬೇಕು.

ಕೊವಿಡ್ 19 ಮಾರ್ಗಸೂಚಿ ಮತ್ತು ನಿರ್ಬಂಧಗಳೊಂದಿಗೆ ಚಾರಣ, ಪರ್ವತಾರೋಹಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರಸಿದ್ಧ ಪರ್ವತಗಳನ್ನು ಏರಬಯಸುವ ನಿಯಮಿತ ಸಂಖ್ಯೆಯ ಚಾಣಿಗರಿಗೆ ಸರ್ಕಾರ ಅವಕಾಶ ನೀಡಲು ಮುಂದಾಗಿದೆ.

English summary
Adventurers looking to scale Nepal's Himalayan peaks and trek its mountain trails can finally do so for the first time in seven months, as the country reopens to foreigners even as the coronavirus pandemic has left it short of hospital beds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X