ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪಕ್ಕೆ ಅವಕಾಶ ನೀಡಲ್ಲ: ಝುಕರ್ ಬರ್ಗ್

By Sachhidananda Acharya
|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 11: "ಭಾರತ ಚುನಾವಣೆ (2019ರ ಲೋಕಸಭೆ ಚುನಾವಣೆ) ಸುರಕ್ಷಿತವೆಂದು ಖಚಿತಪಡಿಸಿಕೊಳ್ಳಲು ನಾವು ಎಲ್ಲವನ್ನೂ ಮಾಡುತ್ತೇವೆ," ಹೀಗಂಥ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ಹೇಳಿದ್ದಾರೆ.

ಫೇಸ್ಬುಕ್ ಬಳಕೆದಾರರ ಮಾಹಿತಿಗಳು ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಗೆ ಸೋರಿಕೆಯಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕಾದ ಸೆನೆಟ್ ಸಮಿತಿ ಮುಂದೆ ಮಂಗಳವಾರ ಮಾರ್ಕ್ ಝುಕರ್ ಬರ್ಗ್ ವಿಚಾರಣೆಗೆ ಹಾಜರಾಗಿದ್ದರು.

ಕೇಂಬ್ರಿಜ್ ಅನಾಲಿಟಿಕಾ ಎಂಬ ಹೊಸ ಅಸ್ತ್ರದ ಸುತ್ತಮುತ್ತಕೇಂಬ್ರಿಜ್ ಅನಾಲಿಟಿಕಾ ಎಂಬ ಹೊಸ ಅಸ್ತ್ರದ ಸುತ್ತಮುತ್ತ

ಅಲ್ಲಿ ಅವರಿಗೆ ಸೆನೆಟ್ ಸದಸ್ಯರಿಂದ ಗಂಭೀರ ಪ್ರಶ್ನೆಗಳು ಎದುರಾದವು. ಈ ಸಂದರ್ಭದಲ್ಲಿ ಉತ್ತರಿಸಿದ ಝುಕರ್ ಬರ್ಗ್ "2018 ಇಡೀ ಪ್ರಪಂಚಕ್ಕೆ ಒಂದು ಪ್ರಮುಖ ವರ್ಷವಾಗಿದೆ. ಭಾರತ, ಪಾಕಿಸ್ತಾನದಂತಹ ಹಲವು ದೇಶಗಳು ಚುನಾವಣೆಗಳನ್ನು ಹೊಂದಿವೆ. ಈ ಚುನಾವಣೆಗಳು ಸುರಕ್ಷಿತವೆಂದು ಖಚಿತಪಡಿಸಿಕೊಳ್ಳಲು ನಾವು ಎಲ್ಲವನ್ನೂ ಮಾಡುತ್ತೇವೆ," ಎಂದು ಹೇಳಿದ್ದಾರೆ.

 Facebook systems do not see messages sent over WhatsApp: Zuckerberg

ಸೆನಟ್ ಮುಂದೆ ಹಾಜರಾದ ಝುಕರ್ ಬರ್ಗ್ ಮೊದಲಿಗೆ ಕ್ಷಮೆ ಕೋರಿದರು. ಫೇಸ್ಬುಕ್ ನಲ್ಲಿ ಸುಳ್ಳು ಸುದ್ದಿಗಳನ್ನು ಹರಡಲು ಮತ್ತು ಚುನಾವಣೆಗಳಲ್ಲಿ ವಿದೇಶಿ ಹಸ್ತಕ್ಷೇಪವಾಗುವುದನ್ನು ತಡೆಯಲು ಸೂಕ್ತ ಯೋಜನೆಗಳನ್ನು ರೂಪಿಸದೇ ಇದ್ದುದಕ್ಕೆ ಅವರು ಕ್ಷಮೆ ಕೋರಿದರು. ಫೇಸ್ಬುಕ್ ಸಂಸ್ಥಾಪಕನಾಗಿ, ಇಷ್ಟು ವರ್ಷ ಕಂಪನಿಯನ್ನು ಮುನ್ನಡೆಸಿದ್ದು, ಇಲ್ಲಿ ನಡೆಯುವ ಎಲ್ಲಾ ಬೆಳವಣಿಗೆಗಳಿಗೂ ನಾನೇ ಹೊಣೆ ಎಂದ ಝುಕರ್ ಬರ್ಗ್, ದತ್ತಾಂಶ ಸೋರಿಕೆಯ ನೈತಿಕ ಜವಾಬ್ದಾರಿ ಹೊತ್ತರು.

ಸುಮಾರು 5 ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ಹಲವು ವಿಚಾರಗಳ ಬಗ್ಗೆ ಝುಕರ್ ಬರ್ಗ್ ಬಾಯಿಬಿಟ್ಟರು.

ದತ್ತಾಂಶ ಸೋರಿಕೆ, ಫೇಸ್ಬುಕ್ ಗೆ ನೋಟಿಸ್ ಜಾರಿ ಮಾಡಿದ ಭಾರತದತ್ತಾಂಶ ಸೋರಿಕೆ, ಫೇಸ್ಬುಕ್ ಗೆ ನೋಟಿಸ್ ಜಾರಿ ಮಾಡಿದ ಭಾರತ

ವಾಟ್ಸಾಪ್ ನಲ್ಲಿ ಕಳುಹಿಸುವ ಸಂದೇಶಗಳಲ್ಲಿ ಫೇಸ್ಬುಕ್ ಮೂಗುತೂರಿಸುವುದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

2016ರಲ್ಲಿ ರಷ್ಯಾದ ಯೋಜನೆಯನ್ನು ಅರಿಯಲು ವಿಫಲವಾಗಿದ್ದಕ್ಕೆ ಝುಕರ್ ಬರ್ಗ್ ವಿಷಾದ ವ್ಯಕ್ತಪಡಿಸಿದರು. ಈ ಯೋಜನೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಗೆಲ್ಲುವಲ್ಲಿ ಸಹಕರಿಸಿತು ಎಂಬ ಗಂಭೀರ ಆರೋಪಗಳಿವೆ.

ಇದೇ ರೀತಿ ಝುಕರ್ ಬರ್ಗ್ ಇನ್ನೊಂದು ವಿಚಾರಣೆಯನ್ನು ಎದುರಿಸಬೇಕಾಗಿದೆ.

English summary
Facebook systems do not see the content of messages being transmitted over WhatsApp, Mark Zuckerberg has told the senators, while testifying before them in connection with Facebook's data breach scandal and foreign interference in election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X