ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಲಸಿಕೆಯಿಂದ ಏಡ್ಸ್‌: ಬೋಲ್ಸನಾರೊ ವಿಡಿಯೋ ವಿರುದ್ಧ FB ಕ್ರಮ

|
Google Oneindia Kannada News

ನವದೆಹಲಿ ಅಕ್ಟೋಬರ್ 26: ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಮತ್ತೊಮ್ಮೆ ಲಸಿಕೆಗಳ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಫೇಸ್‌ಬುಕ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ. ಬೋಲ್ಸನಾರೊ ಅವರು ಕೋವಿಡ್ -19 ಲಸಿಕೆಗಳನ್ನು ಏಡ್ಸ್‌ಗೆ ಹೋಲಿಸಿದ್ದಾರೆ. ಈ ಹೇಳಿಕೆ ಸದ್ಯ ಭಾರೀ ಆತಂಕ ಸೃಷ್ಟಿಸಿದೆ. ಈ ಕಳವಳಕಾರಿ ಹೇಳಿಕೆಯೊಂದಿಗೆ ಜೈರ್ ಫೇಸ್ ಬುಕ್ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದಾರೆಂದು ಫೇಸ್‌ಬುಕ್ ವಕ್ತಾರರು ಬ್ರೆಜಿಲಿಯನ್ ಔಟ್‌ಲೆಟ್ ಫೋಲ್ಹಾ ಡಿ ಸಾವೊ ಪಾಲೊಗೆ ತಿಳಿಸಿದ್ದಾರೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಕೊರೊನಾ ವೈರಸ್ ನಿರ್ಬಂಧಿತ ಕ್ರಮಗಳನ್ನು ಪ್ರಶ್ನಿಸಿದ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಎರಡು ಟ್ವೀಟ್‌ಗಳನ್ನು ನಿಯಮಗಳ ಉಲ್ಲಂಘನೆ ಕಾರಣಕ್ಕೆ ಟ್ವಿಟ್ಟರ್‌ ತೆಗೆದುಹಾಕಿತ್ತು. ಬೋಲ್ಸೊನಾರೊ ಕೊರೊನ ವೈರಸ್ ಅನ್ನು "ಜ್ವರ" ಎಂದು ಕರೆದಿದ್ದರು. ಇದರಿಂದಾಗಿ ಆತಂಕ ಪಡುವ ಅಗತ್ಯ ಇಲ್ಲ ಶಾಲೆಗಳು ಮತ್ತು ಅಂಗಡಿಗಳನ್ನು ಪುನಃ ತೆರೆಯಬೇಕೆಂದು ಪ್ರತಿಪಾದಿಸಿದ್ದರು. ಸ್ವಯಂ-ಪ್ರತ್ಯೇಕತೆಯು 60 ಕ್ಕಿಂತಲೂ ಹೆಚ್ಚು ವಯಸ್ಸಿನವರಿಗೆ ಮಾತ್ರ ಅಗತ್ಯವಾಗಿದೆ ಎಂದಿದ್ದರು."ವೈರಸ್ ಅನ್ನು ವಾಸ್ತವದೊಂದಿಗೆ ಎದುರಿಸೋಣ. ಇದು ಜೀವನ, ನಾವೆಲ್ಲರೂ ಒಂದು ದಿನ ಸಾಯಬೇಕು" ಎಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ನಾಲ್ಕು ವೀಡಿಯೊಗಳಲ್ಲಿ, ಬೋಲ್ಸನಾರೊ ಅವರು ಸಣ್ಣ ಜನಸಂದಣಿಯಿಂದ ಸುತ್ತುವರೆದಿದ್ದರು. ಈ ಕಾರಣಕ್ಕಾಗಿ ಟ್ವಿಟ್ಟರ್‌ ಅವರ ಟ್ವೀಟ್‌ಗಳನ್ನು ಅಳಿಸಿಹಾಕಿದೆ.

ಕೊವಿಡ್-19 ಲಸಿಕೆ ಖರೀದಿಯಲ್ಲಿ ಭ್ರಷ್ಟಾಚಾರ

ಕಳೆದ ನಾಲ್ಕು ತಿಂಗಳಿಂದ ಹಿಂದೆ ಬ್ರೆಜಿಲ್ ಅಧ್ಯಕ್ಷ ಜೈರ್ ಜೈರ್ ಬೋಲ್ಸನಾರೋ ಕೊವಿಡ್-19 ಲಸಿಕೆ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆ ಖರೀದಿಗೆ ದುಬಾರಿ ಬೆಲೆ ನೀಡಿದ್ದಾರೆ ಎಂಬ ವಿಚಾರ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

 Facebook pulls Jair Bolsonaro’s video claiming Covid vaccine causes AIDS

ಜಗತ್ತಿನಲ್ಲೇ ಮೂರನೇ ದುಬಾರಿ ಕೊರೊನಾವೈರಸ್ ಲಸಿಕೆ ಎನಿಸಿರುವ ಕೊವ್ಯಾಕ್ಸಿನ್ ಖರೀದಿಯಲ್ಲಿ ಅಕ್ರಮ ನಡೆದಿದೆ. ಭಾರತೀಯ ಕಂಪನಿ ಜೊತೆಗಿನ ಒಪ್ಪಂದದ ಬಗ್ಗೆ ಹಲವು ಪ್ರಶ್ನೆಗಳ ಜೊತೆಗೆ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ. ಬ್ರೆಜಿಲ್ ನಲ್ಲಿ ರಾತ್ರೋರಾತ್ರಿ 'Covaxin Gate' ಎಂಬ ವಿಚಾರ ಟ್ರೆಂಡ್ ಅನ್ನು ಹುಟ್ಟು ಹಾಕಿತು. ಕೊವ್ಯಾಕ್ಸಿನ್ ಲಸಿಕೆ ಹಾಗೂ ಬ್ರೆಜಿಲ್ ಅಧ್ಯಕ್ಷರ ಸುತ್ತಲೂ ಸುತ್ತಿಕೊಂಡಿರುವ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿವೆ.

ಸಂಸದೀಯ ಆಯೋಗದಿಂದ ವಿಚಾರಣೆ ಬ್ರೆಜಿಲ್ ಸರ್ಕಾರವು ಕಡಲಾಚೆ ಇರುವ ಭಾರತದಿಂದ ಕೊವ್ಯಾಕ್ಸಿನ್ ಲಸಿಕೆಯನ್ನು ಖರೀದಿಸುವುದಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ತೀರ್ಮಾನಕ್ಕೆ ಸಂಬಂಧಿಸಿದಂತೆ ಸಂಸದೀಯ ಆಯೋಗದ ಎದುರು ವಿಚಾರಣೆಯನ್ನು ಎದುರಿಸಿತು. ಈ ವಿಚಾರಣೆ ನಡೆದ ವೈಖರಿಯನ್ನು ಇಡೀ ದೇಶವೇ ಸಾಮಾಜಿಕ ಜಾಲತಾಣಗಳ ಮುಖೇನ ವೀಕ್ಷಿಸಿತು.

ಬ್ರೆಜಿಲ್‌ನಲ್ಲಿ ಭ್ರಷ್ಟಾಚಾರ ಬಯಲಾಗಿದ್ದು ಹೇಗೆ?

ಬ್ರೆಜಿಲ್ ಫೆಡರಲ್ ಡೆಪ್ಯೂಟಿ ಲೂಯಿಸ್ ಮಿರಿಂಡಾ ಹಾಗೂ ಆತನ ಸಹೋದರ ಹಾಗೂ ಆರೋಗ್ಯ ಇಲಾಖೆಯ ಆಮದು ವಿಭಾಗದ ಮುಖ್ಯಸ್ಥ ರಿಕಾರ್ಡೋ ಆರೋಪದ ಬೆನ್ನಲ್ಲೇ ವಿಷಯ ಚರ್ಚೆಗೆ ಬಂದಿದೆ. "ಕಳೆದ ಮಾರ್ಚ್ 20ರಂದು ನಾವು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೋ ಅನ್ನು ಭೇಟಿ ಮಾಡಿದ್ದೆವು. ಅಂದು ಲಸಿಕೆ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಿಂಗಪುರ ಮೂಲದ ಮಾಡಿಸನ್ ಬಯೋಟೆಕ್ ಕಂಪನಿಗೆ 35 ದಶಲಕ್ಷ ಡಾಲರ್ ಹಣವನ್ನು ಮುಂಗಡವಾಗಿ ನೀಡುವಂತೆ ಪ್ರಸ್ತಾಪಿಸಿದೆವು. ಭಾರತ್ ಬಯೋಟೆಕ್ ಕಂಪನಿ ಜೊತೆ 2 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಗಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ, ಸಿಂಗಾಪೂರ್ ಮೂಲದ ಮಾಡಿಸನ್ ಬಯೋಟೆಕ್ ಈ ಒಪ್ಪಂದದ ಭಾಗವಾಗಿಲ್ಲ. ಭಾರತೀಯ ಕಂಪನಿ ಜೊತೆಗಿನ ಲಸಿಕೆ ಖರೀದಿ ಒಪ್ಪಂದದ ಒಟ್ಟು ಮೌಲ್ಯ 300 ದಶಲಕ್ಷ ಡಾಲರ್ ಆಗಲಿದ್ದು, ಅದರಲ್ಲಿ 35 ದಶಲಕ್ಷ ಕೋಟಿ ಡಾಲರ್ ಹಣವನ್ನು ಮುಂಗಡವಾಗಿ ಅಂಗಸಂಸ್ಥೆ ಆಗಿರುವ ಮಾಡಿಸನ್ ಬಯೋಟೆಕ್ ಕಂಪನಿಗೆ ನೀಡುವಂತೆ ತಿಳಿಸಿದ್ದೆವು," ಎಂದು ಸಂದರ್ಶನದಲ್ಲಿ ಉಲ್ಲೇಖಿಸಿದ್ದಾರೆ.

 Facebook pulls Jair Bolsonaro’s video claiming Covid vaccine causes AIDS

ಕೊವ್ಯಾಕ್ಸಿನ್ ಲಸಿಕೆ ಒಂದು ಡೋಸ್ 15 ಡಾಲರ್ ಬ್ರೆಜಿಲ್ ಪ್ರಜೆಗಳಿಗೆ ಕೊರೊನಾವೈರಸ್ ಲಸಿಕೆಯನ್ನು ವಿತರಿಸಬೇಕು ಎಂಬ ದೃಷ್ಟಿಯಲ್ಲಿ ಜೈರ್ ಬೋಲ್ಸನಾರೋ ಮಾಡಿಕೊಂಡಿರುವ ಒಪ್ಪಂದವು ಹಗರಣವಾಗಿ ರೂಪ ತೆಳೆದಿದೆ. ಕೇವಲ ಒಂದು ಡೋಸ್ ಕೊವ್ಯಾಕ್ಸಿನ್ ಲಸಿಕೆಗೆ 15 ಡಾಲರ್ ನೀಡುವ ಅಗತ್ಯವಿತ್ತೇ ಎಂಬ ಪ್ರಶ್ನೆ ದೇಶವ್ಯಾಪಿ ಕೇಳಿ ಬರುತ್ತಿದೆ. ಬ್ರೆಜಿಲ್ ಅಧ್ಯಕ್ಷರ ಒಂದೇ ಒಂದು ನಿರ್ಧಾರದ ದೇಶದ ಮಾಧ್ಯಮಗಳಿಗೆ ದಿನಪೂರ್ತಿ ಆಹಾರವಾಗಿ ಬಿಟ್ಟಿದೆ.

ಇದಾದ ಬಳಿಕ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಮತ್ತೊಮ್ಮೆ ಲಸಿಕೆಗಳ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಫೇಸ್‌ಬುಕ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ. ಬೋಲ್ಸನಾರೊ ಅವರು ಲೈವ್‌ಸ್ಟ್ರೀಮ್ ಸಮಯದಲ್ಲಿ ಕೋವಿಡ್ -19 ಲಸಿಕೆಗಳನ್ನು ಏಡ್ಸ್‌ಗೆ ಹೋಲಿಸಿದ್ದಾರೆ. ಫೇಸ್‌ಬುಕ್ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದಾರೆ.

"ಕೋವಿಡ್ -19 ಬ್ರೆಜಿಲ್‌ನಲ್ಲಿ 606,000 ಕ್ಕೂ ಹೆಚ್ಚು ಜನರನ್ನು ಕೊಂದಿದೆ" ಎಂದು ಬ್ರೆಜಿಲ್ ಆರೋಗ್ಯ ಸಚಿವ ಲೂಯಿಜ್ ಹೆನ್ರಿಕ್ ಮಾಂಡೆಟ್ಟಾ ತಿಳಿಸಿದ್ದಾರೆ.

English summary
Brazilian President Jair Bolsonaro has once again violated Facebook guidelines by making false claims about vaccines. Bolsonaro has linked Covid-19 vaccines to AIDS during a livestream and the internet went berserk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X