ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋರ್ನ್ ತಡೆಗೆ ಕೈಜೋಡಿಸಿದ ಸಾಮಾಜಿಕ ತಾಣಗಳು

|
Google Oneindia Kannada News

ನ್ಯೂಯಾರ್ಕ್‌, ಆಗಸ್ಟ್. 12: ಭಾರತದಲ್ಲಿ ಪೋರ್ನ್ ವೆಬ್ ತಾಣಗಳಿಗೆ ನಿಷೇಧ ಹೇರಿ ನಂತರ ಕೆಲ ನಿಯಮಗಳನ್ನು ಹೇರಿ ಮುಕ್ತ ಮಾಡಿರುವ ಸುದ್ದಿ ಹಳತಾಗಿಲ್ಲ. ಇದೀಗ ಸಾಮಾಜಿಕ ತಾಣಗಳಾದ ಫೇಸ್ ಬುಕ್, ಗೂಗಲ್,ಮೈಕ್ರೋಸಾಫ್ಟ್, ಯಾಹೂ ಮತ್ತು ಟ್ವಿಟ್ಟರ್ ಸಹ ಪೋರ್ನ್ ತಡೆಗೆ ಕೈಜೋಡಿಸಿವೆ.

ಇಂಗ್ಲೆಂಡ್ ನ ಇಂಟರ್ ನೆಟ್ ವಾಚ್ ಫೌಂಡೇಶನ್ (ಐಡ್ಬ್ಲೂಎಫ್‌) ಸಹಕಾರದಲ್ಲಿ ಮಕ್ಕಳ ಕುರಿತಾದ ಅಶ್ಲೀಲ ಚಿತ್ರ ತಡೆಗೆ ಮುಂದಾಗಿದೆ.

Facebook, Google, Twitter join hands against child porn

ಹೊಸ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?
ಇಲ್ಲಿ ಡಿಜಿಟಲ್ ಫಿಂಗರ್ ಪ್ರಿಂಟ್ ಟೆಕ್ನಾಲಜಿಯನ್ನು ಬಳಸಿಕೊಳ್ಳಲಾಗುತ್ತದೆ. ಯಾರೇ ಆದರೂ ಅಶ್ಲೀಲ ಚಿತ್ರಗಳನ್ನು ಅಪ್ ಲೋಡ್ ಮಾಡಿ ಟ್ಯಾಗ್ ಮಾಡಲು ಮುಂದಾದರೆ ತಕ್ಷಣ ವರದಿ ನೀಡುತ್ತದೆ.[ರಿವೇಂಜ್ ಪೋರ್ನ್' ವಿರುದ್ಧ ಮೈಕ್ರೋಸಾಫ್ಟ್ ಸಮರ]

ಟ್ಯಾಗ್ ಮಾಡಲು ಮುಂದಾದ ಚಿತ್ರವನ್ನು ನೋಂದಣಿ ಮಾಡಿಕೊಳ್ಳುವ ಐಡ್ಬ್ಲೂಎಫ್‌ ಎಲ್ಲ 5 ಕಂಪನಿಗಳಿಗೆ ಇದನ್ನು ಕಳಿಸಿ ಕೊಡುತ್ತದೆ. ಒಮ್ಮೆ ಈ ತಂತ್ರಜ್ಞಾನ ಅಳವಡಿಕೆಯಾಯಿತು ಅಂದರೆ ಅಪಲೋಡ್ ಮಾಡುವ ಪ್ರತಿ ಇಮೇಜ್ ಸಹ ಸ್ಕ್ಯಾನಿಂಗ್ ಗೆ ಒಳಪಡಬೇಕಾಗುತ್ತದೆ.

ಹೊಸ ಬೆಳವಣಿಗೆಗಳು ಮಕ್ಕಳ ಮೇಲಿನ ಶೋಷಣೆ ತಡೆಯುವುದರಲ್ಲಿ ನೆರವಾಗುವುದರಲ್ಲಿ ಅನುಮಾನವಿಲ್ಲ. ಹಿಂದೆ ರಿವೇಂಜ್ ಪೋರ್ನ್ ಬಗ್ಗೆ ಕಠಿಣ ನಿಲುವು ತಾಳಿದ್ದ ಮೈಕ್ರೋಸಾಫ್ಟ್ ಯಾವುದೇ ವ್ಯಕ್ತಿ ತನ್ನ ಮಾಜಿ ಅಥವಾ ಹಾಲಿ ಲವರ್ ಜೊತೆಗೆ ಕೂಡಿ ಕಳೆದ ಖಾಸಗಿ ವಿಡಿಯೋಗಳನ್ನು ಪೋರ್ನ್ ವೆಬ್ ಸೈಟ್ ಗೆ ಸೇರಿಸುವುದನ್ನು ಸಂಪೂರ್ಣವಾಗಿ ತಿರಸ್ಕಾರ ಮಾಡಿತ್ತು. ಇದೀಗ ಅದೇ ಹಾದಿಯಲ್ಲಿ ಸಾಗಿರುವ ಎಲ್ಲ ಪ್ರಮುಖ ಸಾಮಾಜಿಕ ಮತ್ತು ಅಂತರ್ಜಾಲ ತಾಣಗಳು ಮಕ್ಕಳ ಕುರಿತಾದ ಅಶ್ಲೀಲ ಚಿತ್ರ ಎಲ್ಲೂ ಹರಿದಾಡದಂತೆ ನೋಡಿಕೊಳ್ಳಲಿವೆ.

English summary
Silicon Valley giants Facebook, Google, Microsoft, Yahoo and Twitter are working with Britain's Internet Watch Foundation (IWF) to implement a new system that will help detect and block images of child pornography online. IWF, a charitable foundation, has introduced a new technology that enables it to tag images of sexual abuse with distinct hashes -- sort of codes that act like a digital fingerprint, The Verge reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X