ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಫೇಸ್‌ಬುಕ್, ಗೂಗಲ್, ಟ್ವಿಟ್ಟರ್

|
Google Oneindia Kannada News

ಇಸ್ಲಾಮಾಬಾದ್, ಫೆಬ್ರವರಿ 29: ಪಾಕಿಸ್ತಾನಕ್ಕೆ ಫೇಸ್‌ಬುಕ್, ಟ್ವಿಟ್ಟರ್, ಗೂಗಲ್ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

ಸಾಮಾಜಿಕ ಮಾಧ್ಯಮಗಳಿಗೆ ಪಾಕಿಸ್ತಾನ ಸರ್ಕಾರ ಅನುಮೋದಿಸಿರುವ ಹೊಸ ನಿಬಂಧನೆಗಳಿಗೆ ಫೇಸ್‌ಬುಕ್, ಗೂಗಲ್ ಮತ್ತು ಟ್ವಿಟ್ಟರ್ ವಿರೋಧವನ್ನು ವ್ಯಕ್ತಪಡಿಸಿದ್ದಷ್ಟೇ ಅಲ್ಲದೆ ಸೇವೆ ಸ್ಥಗಿತಗೊಳಿಸುತ್ತೇವೆ ಎನ್ನುವ ಎಚ್ಚರಿಕೆಯನ್ನೂ ನೀಡಿದೆ.

ಫೇಸ್ ಬುಕ್ ನಲ್ಲಿ ಪರಿಚಯಿಕೊಂಡ ಮಹಿಳೆಯು ವಂಚಿಸಿದ ಮೊತ್ತ ಎರಡು ಕೋಟಿ ಫೇಸ್ ಬುಕ್ ನಲ್ಲಿ ಪರಿಚಯಿಕೊಂಡ ಮಹಿಳೆಯು ವಂಚಿಸಿದ ಮೊತ್ತ ಎರಡು ಕೋಟಿ

ಹೊಸ ನಿಯಮದ ಪ್ರಕಾರ ಸಾಮಾಜಿಕ ಮಾಧ್ಯಮ ಕಂಪನಿಗಳು ಇಸ್ಲಾಮಾಬಾದ್‌ನಲ್ಲಿ ಕಡ್ಡಾಯವಾಗಿ ಕಚೇರಿ ತೆರೆಯಬೇಕು, ಮಾಹಿತಿ ಸಂಗ್ರಹಕ್ಕೆ ಡೇಟಾ ಸರ್ವರ್ ಸಿದ್ಧಪಡಿಸಬೇಕು ಹಾಗೂ ಸರ್ಕಾರ ಗುರುತಿಸಿರುವ ವಿಷಯಗಳನ್ನು ತೆಗೆದು ಹಾಕಬೇಕಾಗುತ್ತದೆ. ಸರ್ಕಾರದ ಈ ನಿಯಮಗಳನ್ವಯ ಕಾರ್ಯಾಚರಿಸದಿದ್ದರೆ ಹೆಚ್ಚಿನ ಮೊತ್ತದ ದಂಡ ತೆರೆಬೇಕಾಗುತ್ತದೆ ಅದರ ಜೊತೆಗೆ ಸೇವೆಯನ್ನೂ ಸ್ಥಗಿತಗೊಳಿಸಲಾಗುತ್ತದೆ.

Facebook Google Twitter And Others Threaten To Suspend Services In Pakistan

ಸಾಮಾಜಿಕ ಮಾಧ್ಯಮಗಳ ಕುರಿತ ಹೊಸ ನಿಯಮಗಳು ಮತ್ತು ನಿಬಂಧನೆಗಳನ್ನು ಪರಿಷ್ಕೃತಗೊಳಿಸುವಂತೆ ಏಷ್ಯಾ ಇಂಟರ್‌ನೆಟ್ ಮೈತ್ರಿಕೂಟ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ಗೆ ಪತ್ರ ಬರೆದಿತ್ತು.

ಸಂಶಯಾಸ್ಪದ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡು ಬಂದರೆ , ಅವರ ಖಾತೆಗಳ ಮಾಹಿತಿ ತಡಕಾಡಲು ಕಾನೂನು ಸಹಕಾರ ನೀಡಲಿದೆ. ಸರ್ಕಾರದೊಂದಿಗೆ ಕಂಪನಿಗಳು ಸಹಕರಿಸದಿದ್ದರೆ 21.65 ಕೋಟಿ ದಂಡ ವಿಧಿಸಬಹುದು ಅಥವಾ ಸೇವೆ ಸ್ಥಗಿತಗೊಳಿಸಬಹುದಾಗಿದೆ.

English summary
In an unprecedented development, a coalition comprising of global technology and social media behemoths like Facebook, Google and Twitter among others have threatened to suspend services across the Islamic Republic of Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X