ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್ಬುಕ್ ಸಂಸ್ಥಾಪಕ ಝುಕರ್ ಬರ್ಗ್ ಖಾತೆಗೂ 'ಕೇಂಬ್ರಿಡ್ಜ್ ಅನಾಲಿಟಿಕಾ' ಕನ್ನ!

By Sachhidananda Acharya
|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 12: ತನ್ನ ಖಾಸಗಿ ಮಾಹಿತಿಗಳೂ ಕೇಂಬ್ರಿಡ್ಜ್ ಅನಾಲಿಟಿಕಾಗೆ ಸೋರಿಕೆಯಾಗಿದೆ ಎಂದು ಸ್ವತಃ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ಹೇಳಿದ್ದಾರೆ. ಅಮೆರಿಕಾದ ಸೆನೆಟ್ ನ ವಾಣಿಜ್ಯ ಮತ್ತು ನ್ಯಾಯಾಂಗ ಸಮಿತಿ ಮುಂದೆ ಬುಧವಾರ ಎರಡನೇ ದಿನದ ವಿಚಾರಣೆಗೆ ಹಾಜರಾದ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ.

ಬಳಕೆದಾರರ ಖಾಸಗಿ ಮಾಹಿತಿಗೆ ಸಂಬಂಧಿಸಿದ ಹಲವು ಪ್ರಶ್ನೆಗಳಿಗೆ ಇದೇ ಸಂದರ್ಭದಲ್ಲಿ ಝುಕರ್ ಬರ್ಗ್ ಉತ್ತರ ನೀಡಿದರು. ಬಳೆದಾರರ ಮಾಹಿತಿ ಸಂಗ್ರಹಿಸಿ ಅವುಗಳನ್ನು ಬಳಕೆ ಮಾಡಲು ಯಾವ ಮಿತಿ ಹೇರಿಕೊಂಡಿದ್ದೀರಿ ಎಂಬ ಪ್ರಶ್ನೆಯನ್ನು ಸಮಿತಿ ಸದಸ್ಯರು ಝುಕರ್ ಬರ್ಗ್ ಮುಂದಿಟ್ಟರು.

ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪಕ್ಕೆ ಅವಕಾಶ ನೀಡಲ್ಲ: ಝುಕರ್ ಬರ್ಗ್ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪಕ್ಕೆ ಅವಕಾಶ ನೀಡಲ್ಲ: ಝುಕರ್ ಬರ್ಗ್

ಇದಕ್ಕೆ ಉತ್ತರಿಸಿದ ಝುಕರ್ ಬರ್ಗ್ ನಿಗಾ ಇಡುವುದಕ್ಕೂ ಫೇಸ್ಬುಕ್ ಗ ವ್ಯತ್ಯಾಸ ಇದೆ. "ಬಳಕೆದಾರರು ಅವರು ಬಯಸಿದರೆ ಫೇಸ್ಬುಕ್ ನ್ನು ತೊರೆಯಬಹುದು. ತಮಗೆ ಬೇಕಾದಾಗ ಫೇಸ್ಬುಕ್ ಮಾಹಿತಿಯನ್ನು ಬಳಕೆದಾರರು ಡಿಲೀಟ್ ಮಾಡಬಹುದು," ಎಂದು ಹೇಳಿದರು.

Facebook CEO says his data too was compromised by Cambridge Analytica

ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ಮತ್ತು ಅದನ್ನು ನಾವು ಬಳಸುವ ಪ್ರಕ್ರಿಯೆಯನ್ನು ಫೇಸ್ಬುಕ್ ಮಿತಿಗೊಳಿಸುತ್ತಿದೆ. ಪ್ರೈವಸಿ ಪ್ರೊಟೆಕ್ಟಿವ್ ಆಯ್ಕೆಯನ್ನು ನಾವು ಬದಲಾಯಿಸುತ್ತಿದ್ದೇವೆ ಎಂದು ಝುಕರ್ ಬರ್ಗ್ ಹೇಳಿದ್ದಾರೆ.

ಕೇಂಬ್ರಿಜ್ ಅನಾಲಿಟಿಕಾ ಎಂಬ ಹೊಸ ಅಸ್ತ್ರದ ಸುತ್ತಮುತ್ತಕೇಂಬ್ರಿಜ್ ಅನಾಲಿಟಿಕಾ ಎಂಬ ಹೊಸ ಅಸ್ತ್ರದ ಸುತ್ತಮುತ್ತ

ಇದೇ ವೇಳೆ ಭಯೋತ್ಪಾದಕ ಸಂಘಟನೆಯಂಥವರು ಫೇಸ್ಬುಕ್ ದತ್ತಾಂಶಗಳನ್ನು ನಾಶ ಮಾಡಿದರೆ ಏನು ಮಾಡುವುದು ಎಂಬ ಪ್ರಶ್ನೆ ಝುಕರ್ ಬರ್ಗ್ ಗೆ ಎದುರಾಯಿತು. ಇದಕ್ಕೆ ಉತ್ತರಿಸಿದ ಅವರು, ಯಾವುದೇ ಕ್ರಿಮಿನಲ್ ಮತ್ತು ಉಗ್ರ ಸಂಘಟನೆಗಳು ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಒಟ್ಟಾರೆ ನಾವು ಯಾವುದೇ ದ್ವೇಷ ಹರಡುವ ಗುಂಪುಗಳನ್ನು ಫೇಸ್ಬುಕ್ ನಲ್ಲಿ ಬಿಡುವುದಿಲ್ಲ ಎಂದಿದ್ದಾರೆ.

English summary
Facebook CEO Mark Zuckerberg admitted that his personal information was also breached by Cambridge Analytica before before the US Senate’s Commerce and Judiciary committee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X