ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಾರ್ಮುಲಾ 1: ಲೂಯಿಸ್ ಹ್ಯಾಮಿಲ್ಟನ್ ಲೀಡ್

By * ಚಿನ್ನಯ್ಯ ಮಠ, ಬೆಂಗಳೂರು
|
Google Oneindia Kannada News

ಬೆಂಗಳೂರು, ಮೇ.14: ಲೂಯಿಸ್ ಹ್ಯಾಮಿಲ್ಟನ್ ಸ್ಪಾನಿಷ್ ಗ್ರಾಂಡ್ ಪ್ರಿ ಮೊದಲ ಬಾರಿಗೆ ಗೆದ್ದು ಪ್ರಸಕ್ತ ಸಾಲಿನ ಎಫ್ 1 ಋತುವಿನಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮುಂದಿನ ವಾರದ ಮೊನಾಕೋ ಗ್ರಾಂಡ್ ಪ್ರಿ ನಲ್ಲೂ ಜಯಭೇರಿ ಬಾರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಫ್ 1 ಈ ಋತುವಿನ ಕಳೆದ ರೇಸ್ ಸಾರಾಂಶ ಇಲ್ಲಿದೆ.

ಫಾರ್ಮುಲಾ-1 ನ ಎರಡನೇ ಹಂತ ಯುರೋಪಿಯನ ಸ್ಪಾನಿಷ್ ಗ್ರಾಂಡ ಪ್ರಿ ನೊಂದಿಗೆ ಆರಂಭಗೊಂಡಿದೆ. ಕಳೆದ ರವಿವಾರ ನಡೆದ ರೇಸಿನಲ್ಲಿ ಮೆರ್ಸಿಡೀಸ್ ತಂಡದ ಲೂಯಿಸ್ ಹ್ಯಾಮಿಲ್ಟನ್ ತಮ್ಮ ತಂಡದ ಇನ್ನೊಬ್ಬ ಚಾಲಕ ನಿಕೋ ರೊಸ್ ಬರ್ಗ್ ಅವರನ್ನು ಕೊನೆಯ ಘಳಿಗೆಯವರಿಗೂ ತಮ್ಮ ಹಿಂದೆ ಇಡುವದರಲ್ಲಿ ಸಫಲರಾದರು. ಈ ವರ್ಷದಲ್ಲಿ ನಾಲ್ಕನೇ ಬಾರಿ ಗೆಲುವನ್ನು ತಮ್ಮದಾಗಿಸಿಕೊಂಡರು.

ಮೊದಲನೇ ರೇಸನ್ನು ನಿಕೋ ರೊಸೆಬೆರ್ಗ ಗೆದ್ದಿದ್ದರು. ಇಲ್ಲಿಯವರಿಗೆ ನಡೆದ ಐದು ರೇಸ್ ಗಳನ್ನು ಗೆದ್ದು ಮೆರ್ಸಿಡೀಸ್ ತಂಡ ತನ್ನ ಪ್ರಭುತ್ವವನ್ನು ಕಾಯ್ದು ಕೊಂಡುಬಂದಿದೆ. ರೆಡ್ ಬುಲ್, ಫೆರಾರಿ ಮತ್ತು ಫೋರ್ಸ್ ಇಂಡಿಯಾ ತಂಡಗಳು ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.

ಕ್ವಾಲಿಫಾಯಿಂಗ್ ನಲ್ಲಿ ಲೂಯಿಸ್ ಮೊದಲನೇ ಸ್ಥಾನ

ಕ್ವಾಲಿಫಾಯಿಂಗ್ ನಲ್ಲಿ ಲೂಯಿಸ್ ಮೊದಲನೇ ಸ್ಥಾನ

ಕ್ವಾಲಿಫಾಯಿಂಗ್ ನಲ್ಲಿ ಲೂಯಿಸ್ ಮೊದಲನೇ ಸ್ಥಾನ ಹಾಗೂ ದ್ವಿತೀಯ ಸ್ಥಾನವನ್ನು ನಿಕೋ ರೊಸೆಬರ್ಗ್ ಪಡೆದಿದ್ದರು. ರೇಸ್ ಆರಂಭದಿಂದ ಕೊನೆಯವರಿಗೂ ತಮ್ಮ ಸ್ಥಾನವನ್ನು ಲೂಯಿಸ ಉಳಿಸಿ ಕೊಂಡು ಬಂದರು. ಕೊನೆಯ ಐದು ಸುತ್ತುಗಳು ತುಂಬಾ ಕುತೂಹಲಕಾರಿ ಆಗಿದ್ದವು. ರೊಸೆಬೆರ್ಗ್ ಮತ್ತು ಲೂಯಿಸ್ ಬೇರೆ ಬೇರೆ ತಂತ್ರಗಾರಿಕೆಯನ್ನು ಆಯ್ಕೆ ಮಾಡಿಕೊಂಡಿದ್ದರು.

ಇಬ್ಬರ ನಡುವೆ ಇದ್ದ ಅಂತರ ಕೆಲವೇ ಸೆಕಂಡ್

ಇಬ್ಬರ ನಡುವೆ ಇದ್ದ ಅಂತರ ಕೆಲವೇ ಸೆಕಂಡ್

ರೋಸ್ ಬರ್ಗ್ ಲೂಯಿಸ್ ರನ್ನು ಹಿಂದಿಕ್ಕುವ ಸರ್ವ ಪ್ರಯತ್ನ ಮಾಡಿದರು ಆದರೆ ಲೂಯಿಸ್ ತಮ್ಮ ಅನುಭವ ಸಂಪೂರ್ಣವಾಗಿ ಬಳಸಿಕೊಂಡು ರೇಸ್ ಗೆದ್ದರು. ರೇಸ್ ಮುಗಿದಾಗ ಇಬ್ಬರ ನಡುವೆ ಇದ್ದ ಅಂತರ ಕೇವಲ 0.6 ಸೆಕೆಂಡ್ ಗಳು ಮಾತ್ರ.

ರೆಡ್ ಬುಲ್ ವೆಟ್ಟೆಲ್ ನಾಲ್ಕನೇ ಸ್ಥಾನ

ರೆಡ್ ಬುಲ್ ವೆಟ್ಟೆಲ್ ನಾಲ್ಕನೇ ಸ್ಥಾನ

ಮೂರನೇ ಮತ್ತು ನಾಲ್ಕನೆ ಸ್ಥಾನಗಳನ್ನು ರೆಡ್ ಬುಲ್ ನ ಡೇನಿಯಲ್ ಹಾಗು ವೆಟ್ಟೆಲ್ಪಡೆದುಕೊಂಡರು. ವೆಟ್ಟೆಲ್ ಹದಿನೈದನೇ ಸ್ಥಾನದಿಂದ ಆರಂಭಮಾಡಿದ್ದರು, ಅವರ ಮೂರು ಬಾರಿ ತಮ್ಮ ಟೈಯರ್ ಗಳನ್ನು ಬದಲಾಯಿಸುವ ನಿರ್ಧಾರ ಬೇರೆ ಕಾರುಗಳನ್ನು ಹಿಂದೆ ಹಾಕುವುದರಲ್ಲಿ ಸಹಾಯವಾಯಿತು. ಹೊಸ ಟೈಯರ್ ಗಳು ವೇಗವಾಗಿ ಹೋಗಲು ಅವರಿಗೆ ತುಂಬಾ ಸಹಾಯ ಮಾಡಿದವು.

ಫೋರ್ಸ್ ಇಂಡಿಯಾಗೆ ಅಂಕ ಸಿಗಲಿಲ್ಲ

ಫೋರ್ಸ್ ಇಂಡಿಯಾಗೆ ಅಂಕ ಸಿಗಲಿಲ್ಲ

ವಿಲಿಯಂಸ್ ತಂಡದ ಬೊಟ್ಟಾಸ್ ಐದನೇ ಸ್ಥಾನ ಪಡೆದುಕೊಂಡರು. ಇವರ ಹಿಂದೆ ಫೆರಾರಿ ತಂಡದ ಅಲಾನ್ಸೊ ಹಾಗು ಕಿಮಿ ಕ್ರಮವಾಗಿ ಆರನೇ ಮತ್ತು ಏಳನೇ ಸ್ಥಾನ ಪಡೆದುಕೊಂಡರು. ಸ್ಪೇನ್ ದೇಶದವರೇ ಆದ ಅಲಾನ್ಸೊ ಸ್ಥಳೀಯ ದರ್ಶಕರ ನೆಚ್ಚಿನ ಚಾಲಕರಾಗಿದ್ದರು. ಲೋಟಸನ ರೊಮೇನ ಎಂಟನೇ ಸ್ಥಾನ ಪಡೆದುಕೊಂಡರು. ವಿಜಯ್ ಮಲ್ಯವರ ಫೋರ್ಸ್ ಇಂಡಿಯಾದ ಪೆರೆಜ್ ಮತ್ತು ಹಲ್ಕನ್ ಬೆರ್ಗ್ ಕ್ರಮವಾಗಿ ಒಂಬತ್ತನೇ ಮತ್ತು ಹತ್ತನೇ ವರಾಗಿ ರೇಸ್ ಮುಗಿಸಿದರು.

2014ರ ಎಫ್ 1 ಋತುವಿನಲ್ಲಿ ಎಷ್ಟು ರೇಸ್

2014ರ ಎಫ್ 1 ಋತುವಿನಲ್ಲಿ ಎಷ್ಟು ರೇಸ್

2014ರ ಮಾರ್ಚ ತಿಂಗಳಲ್ಲಿ ಆರಂಭಗೊಂಡ ಪ್ರಸಕ್ತ ಋತುವಿನಲ್ಲಿ ಒಟ್ಟು 19 ರೇಸ್ ಗಳಿಂದ ಕೂಡಿದೆ. ಇಲ್ಲಿಯವರಿಗೆ 5 ರೇಸ್ ಗಳು ಮುಗಿದಿದ್ದು. ಇನ್ನು 14 ರೇಸ್ ಗಳು ನವೆಂಬರ್ ತಿಂಗಳವರೆಗೆ ಬರಲಿವೆ. ಮುಂದಿನ ರೇಸ್ ಇದೆ ತಿಂಗಳ 25 ರಂದು ಮೊನಾಕೋನಲ್ಲಿ ನಡೆಯಲಿದೆ. ಇದು ಪ್ರಸಕ್ತ ಋತುವಿನ ಮೊದಲ ನಗರಗಳ( ಸ್ಟ್ರೀಟ್ ರೇಸ್ ) ರಸ್ತೆ ಮೇಲೆ ನಡೆಯುವ ರೇಸ್ ಆಗಲಿದೆ.

ಅಂಕಗಳಿಗೆ ಅನುಗುಣವಾಗಿ ವರ್ಷದ ಚಾಲಕ

ಅಂಕಗಳಿಗೆ ಅನುಗುಣವಾಗಿ ವರ್ಷದ ಚಾಲಕ

ಋತುವಿನ ಕೊನೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಚಾಲಕನಿಗೆ ವರ್ಷದ ಚಾಲಕ ಎಂದು ಘೋಷಿಸಲಾಗುತ್ತದೆ. ಹಾಗೆಯೇ ಅತ್ಯಧಿಕ ಅಂಕಗಳನ್ನು ಪಡೆದ ತಂಡಕ್ಕೆ ತಂಡ ಪ್ರಶಸ್ತಿ ನೀಡಲಾಗುತ್ತದೆ. ತಂಡಗಳಿಗೆ ನಿಡುವ ಪ್ರಶಸ್ತಿ ಮೊತ್ತವು ಅವುಗಳ ಗಳಿಸಿದ ಅಂಕಗಳಿಗೆ ಅನುಗುಣವಾಗಿರುತ್ತದೆ.

ರೇಸ್ ನ ಮೊದಲ ಹತ್ತು ಸ್ಥಾನಗಳು

ರೇಸ್ ನ ಮೊದಲ ಹತ್ತು ಸ್ಥಾನಗಳು

ರೇಸ್ ನ ಮೊದಲ ಹತ್ತು ಸ್ಥಾನಗಳು ಈ ಕೆಳಗಿನಂತೆ ಇವೆ
1. ಲೂಯಿಸ ಹ್ಯಾಮಿಲ್ಟನ್
2. ನಿಕೋ ರೋಸೆಬರ್ಗ
3. ಡೇನಿಯಲ್ ರಿಕ್ಯಾರ್ಡೊ
4. ಸೆಬಾಸ್ಟಿಯನ್ ವೆಟ್ಟೆಲ್
5. ವಲ್ತೆರ್ರಿ ಬೊಟ್ಟಾಸ
6. ಫೆರ್ನಾಂಡೊ ಅಲನ್ಸೊ
7. ಕಿಮಿ ರೈಕನ
8. ರೊಮೇನ ಗ್ರೊಸಜೆಅನ್
9. ಸರ್ಜಿಯೋ ಪೆರೆಜ್
10. ನಿಕೋ ಹಲ್ಕನಬೆರ್ಗ

English summary
Lewis Hamilton took his fourth straight victory for Mercedes and moved into a three-point championship lead over team mate Nico Rosberg after resisting the German in a thrilling climax in Spain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X