ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಕೋಟ್ ದಾಳಿ ಬಗ್ಗೆ ಪ್ರತ್ಯಕ್ಷದರ್ಶಿಯಿಂದ ಸ್ಫೋಟಕ ವಿವರ

|
Google Oneindia Kannada News

ಬಾಲಕೋಟ್, ಮಾರ್ಚ್ 04: "ಬಾಲಕೋಟ್ ನಲ್ಲಿ ಉಗ್ರನೆಲೆ ಮೇಲೆ ಭಾರತ ದಾಳಿ ನಡೆಸಿದ್ದು ಸತ್ಯ. ದಾಳಿ ನಡೆದ ಕೆಲವೇ ಗಂಟೆಗಳಲ್ಲಿ 35ಕ್ಕೂ ಹೆಚ್ಚು ಉಗ್ರರ ಹೆಣವನ್ನು ಬೇರೆಡೆಗೆ ಸ್ಥಳಾಂತರಿಸಿದ್ದನ್ನು ನಾವು ಕಣ್ಣಾರೆ ಕಂಡಿದ್ದೇವೆ" ಎಂದು ಪ್ರತ್ಯಕ್ಷದರ್ಶಿಗಳು ಹೇಳಿರುವುದನ್ನು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಫೆಬ್ರವರಿ 23 ರಂದು ಬೆಳಿಗ್ಗೆ 3:30 ರ ಸುಮಾರಿಗೆ ದಾಳಿ ನಡೆದಿದ್ದು ಸತ್ಯ. ಆ ನಂತರ ಕೆಲವು ಅಂಬುಲೆನ್ಸ್ ಗಳು ಬಂದಿದ್ದನ್ನೂ ನಾವು ನೋಡಿದ್ದೇವೆ. ಉಗ್ರರ ನೆಲೆಯಲ್ಲಿ ಪಾಕಿಸ್ತಾನ ಸೇನೆಯ ಮಾಜಿ ಸಿಬ್ಬಂದಿಯೂ ಕೆಲವರಿದ್ದರು. ಅವರೆಲ್ಲರೂ ಒಂದೇ ಕಡೆ ಮಲಗಿದ್ದರು. ಆ ಸಂದರ್ಭದಲ್ಲಿ ದಾಳಿ ನಡೆದಿದ್ದು, ದಾಳಿ ನಡೆದ ಕೂಡಲೇ ಸ್ಥಳೀಯರು ಕೆಲವರು ಅಲ್ಲಿಗೆ ತೆರಳಿದ್ದರು. ಅಷ್ಟರಲ್ಲೇ ಪಾಕ್ ಸೇನೆ ಸಿಬ್ಬಂದಿ ಅಲ್ಲಿಗೆ ಆಗಮಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ದಿನದ ಮುಖ್ಯ ಸುದ್ದಿ: ಭಾರತದ ಪ್ರತೀಕಾರ ಹೇಗಿತ್ತು? ಪಾಕ್ ಪ್ರತಿಕ್ರಿಯೆ ಹೇಗಿತ್ತು?ದಿನದ ಮುಖ್ಯ ಸುದ್ದಿ: ಭಾರತದ ಪ್ರತೀಕಾರ ಹೇಗಿತ್ತು? ಪಾಕ್ ಪ್ರತಿಕ್ರಿಯೆ ಹೇಗಿತ್ತು?

ಫೆಬ್ರವರಿ 14 ರಂದು ಭಾರತದ ಸಿಆರ್ ಪಿಎಫ್ ಯೋಧರ ಮೇಲೆ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಭಾರತದ 44 ಯೋಧರು ಹುತಾತ್ಮರಾಗಿದ್ದರು. ಈ ಘಟನೆಯಿಂದ ಸಾಕಷ್ಟು ಕುದಿಯುತ್ತಿದ್ದ ಭಾರತ ಫೆಬ್ರವರಿ 26 ರಂದು ಪಾಕಿಸ್ತಾನದ ಬಾಲಕೋಟ್ ನಲ್ಲಿದ್ದ ಉಗ್ರರ ನೆಲೆಯ ಮೇಲೆ ದಾಳಿ ನಡೆಸಿತ್ತು. ಈ ಘಟನೆ ನಡೆದಿದ್ದೇ ಸುಳ್ಳು ಎಂದು ಪಾಕಿಸ್ತಾನ ಹೇಳಿತ್ತು. ಆದರೆ ಘಟನೆ ನಡೆದಿದ್ದು ಸತ್ಯ ಎಂಬುದಕ್ಕೆ ಪೂರಕ ಎಂಬಂತೆ ಪ್ರತ್ಯಕ್ಷದರ್ಶಿಗಳೇ ಮಾತನಾಡಿದ್ದನ್ನು ಕೆಲವು ಮಾಧ್ಯಮ ವರದಿ ಮಾಡಿವೆ.

ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಗಳು ನೀಡಿದ ಸ್ಫೋಟಕ ಮಾಹಿತಿ ಇಲ್ಲಿದೆ.

35 ಹೆಣಗಳ ಸ್ಥಳಾಂತರ

35 ಹೆಣಗಳ ಸ್ಥಳಾಂತರ

"ನಾವು ಸ್ಥಳಕ್ಕೆ ತೆರಳುತ್ತಿದ್ದಂತೆಯೇ ಹಲವು ಅಂಬುಲೆನ್ಸ್ ಗಳು, ಸೇನಾ ವಾಹನಗಳು ಅಲ್ಲಿದ್ದವು. ಸುಮಾರು 35 ಕ್ಕೂ ಹೆಚ್ಚು ಹೆಣಗಳನ್ನು ವಾಹನಗಳ ಮೂಲಕ ಬೇರೆಡೆಗೆ ಸ್ಥಳಾಂತರಿಸಿದ್ದನ್ನು ನಾವು ಕಣ್ಣಾರೆ ಕಂಡೆವು. ಸತ್ತವರ ಸಂಖ್ಯೆ ಇನ್ನೂ ಹೆಚ್ಚಿದ್ದಿರಬಹುದಾದರೂ, ನಮಗೆ ತೀರಾ ಹತ್ತಿರ ಹೋಗಿ ನೋಡುವುದಕ್ಕೆ ಅವಕಾಶ ಇರಲಿಲ್ಲ"- ಪ್ರತ್ಯಕ್ಷದರ್ಶಿಗಳು

ಮೊಬೈಲ್ ಫೋನ್ ಕಿತ್ತುಕೊಂಡರು!

ಮೊಬೈಲ್ ಫೋನ್ ಕಿತ್ತುಕೊಂಡರು!

ಅದಾಗಲೇ ಪಾಕ್ ಸೇನೆ ಅಲ್ಲಿ ಠಿಕಾಣಿ ಹೂಡಿತ್ತು. ಪೊಲೀಸರಿಗೂ ಅಲ್ಲಿಗೆ ಬರುವುದಕ್ಕೆ ಅವಕಾಶ ನೀಡದೆ ಮಿಲಿಟರಿಯವರೇ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರು. ಸ್ಥಳಕ್ಕೆ ಆಗಮಿಸಿದ್ದ ವೈದ್ಯಕೀಯ ಸಿಬ್ಬಂದಿಗಳಿಂದ ಅವರ ಪೋನ್ ಅನ್ನೂ ಕಿತ್ತುಕೊಳ್ಳಲಾಯ್ತು- ಪ್ರತ್ಯಕ್ಷದರ್ಶಿ

ಹದಿನೈದು ವರ್ಷದಿಂದ ಭಾರತದ ಕಣ್ಣು ಬಾಲಾಕೋಟ್ ಮೇಲಿತ್ತು!ಹದಿನೈದು ವರ್ಷದಿಂದ ಭಾರತದ ಕಣ್ಣು ಬಾಲಾಕೋಟ್ ಮೇಲಿತ್ತು!

12 ಆತ್ಮಾಹುತಿ ದಾಳಿಕೋರರ ಸಾಲು ಸಮಾಧಿ!

12 ಆತ್ಮಾಹುತಿ ದಾಳಿಕೋರರ ಸಾಲು ಸಮಾಧಿ!

ಆತ್ಮಾಹುತಿ ದಾಳಿಕೋರರಾಗಿ ತರಬೇತಿ ಪಡೆಯುತ್ತಿದ್ದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ 12 ಮಂದಿಮರದ ಹಲಗೆಯಿಂದ ಮಾಡಿದ ಒಂದೇ ಗುಡಿಸಿಲಿನಲ್ಲಿ ಸಾಲಾಗಿ ಮಲಗಿದ್ದರು ಅನ್ನಿಸುತ್ತೆ. ಅವರೆಲ್ಲರೂ ಈ ದಾಳಿಯಲ್ಲಿ ಸತ್ತಿದ್ದಾರೆ. ಅವರ ಹೆಣಗಳು ಸಾಲಾಗಿ ಬಿದ್ದಿದ್ದವು - ಪ್ರತ್ಯಕ್ಷದರ್ಶಿ

ಏರ್ ಸ್ಟ್ರೈಕ್ ನಂತರ ಬಾಲಕೋಟ್ ಜೈಷ್ ತಾಣ ಏನಾಗಿದೆ? ಚಿತ್ರ ನೋಡಿಏರ್ ಸ್ಟ್ರೈಕ್ ನಂತರ ಬಾಲಕೋಟ್ ಜೈಷ್ ತಾಣ ಏನಾಗಿದೆ? ಚಿತ್ರ ನೋಡಿ

ಬೆದರಿಕೆ ಒಡ್ಡಿದ್ದ ಪಾಕ್ ಸೇನೆ

ಬೆದರಿಕೆ ಒಡ್ಡಿದ್ದ ಪಾಕ್ ಸೇನೆ

ಪ್ರತ್ಯಕ್ಷದರ್ಶಿಗಳು ಅಲ್ಲಿ ನೆರೆದಿದ್ದನ್ನು ಕಂಡ ಪಾಕ್ ಸೇನೆ, ಅಲ್ಲಿ ನಡೆದಿದ್ದೇನನನ್ನೂ ಬೇರೆಲ್ಲೂ ಹೇಳಬಾರದೆಂದು ನಮಗೆ ಬೆದರಿಕೆ ಒಡ್ಡಿತ್ತು. ಅದಕ್ಕೆಂದೇ ಅವರು ಮಾಧ್ಯಗಳಿಗೆ ಪ್ರತಿಕ್ರಿಯೆ ನೀಡಲೂ ಭಯಪಡುತ್ತಿದ್ದಾರೆ ಎಂದು ಈ ವರದಿ ತಿಳಿಸಿದೆ.

English summary
Air strike on Balakot terror camp, Eye witnesses say, They saw more than 35 bodies of terrorists were transported from Balakot terror camp to somewhere else within few hours of Air strike by india.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X