ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking news: ಎರಡು ಎಕ್ಸ್ ಪ್ರೆಸ್ ರೈಲು ಡಿಕ್ಕಿ, 30 ಮಂದಿ ಮೃತ

|
Google Oneindia Kannada News

ಇಸ್ಲಾಮಾಬಾದ್, ಜೂನ್ 7: ದಕ್ಷಿಣ ಪಾಕಿಸ್ತಾನದಲ್ಲಿ ಸೋಮವಾರ ಬೆಳಗ್ಗೆ ಎರಡು ಎಕ್ಸ್ ಪ್ರೆಸ್ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ 30ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.

ಸಿಂಧ್ ಪ್ರಾಂತ್ಯದ ಘೋಟ್ಕಿಯಲ್ಲಿರುವ ದಹಾರ್ಕಿ ರೈಲಿ ನಿಲ್ದಾಣ ಹಾಗೂ ರೇತಿಯಲ್ಲಿರುವ ನಿಲ್ದಾಣದ ನಡುವೆ ಈ ಡಿಕ್ಕಿ ನಡೆದಿದೆ. ಸರ್ ಸೈಯದ್ ಎಕ್ಸ್ ಪ್ರೆಸ್ ರೈಲು ಹಾಗೂ ಮಿಲಾತ ಎಕ್ಸ್ ಪ್ರೆಸ್ ರೈಲು ನಡುವೆ ಅಪಘಾತವಾಗಿದೆ ಎಂದು ಎಆರ್‌ವೈ ನ್ಯೂಸ್ ವರದಿ ಮಾಡಿದೆ. ಘಟನೆ ನಂತರ ಈ ಭಾಗದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಗಾಯಗೊಂಡವರನ್ನು ಘೋಟ್ಕಿ, ಧಾರ್ಕಿ, ಓಬಾರೋ ಹಾಗೂ ಮಿರ್ಪುರ್ ಮಾಥೆಲೋ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಘೋಟ್ಲಿ ಡಿಸಿ ಉಸ್ಮಾನ್ ಅಬ್ದುಲ್ಲಾ ಹೇಳಿದ್ದಾರೆ.

Express Trains collide in Southern Pakistan, atleast 30 dead

ಘಟನಾ ಸ್ಥಳಕ್ಕೆ ಸ್ಥಳೀಯ ಗ್ರಾಮಸ್ಥರು, ಪೊಲೀಸರು, ರಕ್ಷಣಾ ಪಡೆ ಧಾವಿಸಿದ್ದು, ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗಳಿಗೆ ಸೇರಿಸಿದ್ದಾರೆ. ಘಟನೆಗೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಸಿಗ್ನಲ್ ವ್ಯವಸ್ಥೆಯ ದೋಷವೇ ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ ಎಂದು ಘೋಟ್ಕಿ ಜಿಲ್ಲಾ ಪೊಲೀಸ್ ವರಿಷ್ಠ ಉಸ್ಮಾನ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ.

ಗಾಯಗೊಂಡವರನ್ನು ಘೋಟ್ಕಿ, ಧಾರ್ಕಿ, ಓಬಾರೋ ಹಾಗೂ ಮಿರ್ಪುರ್ ಮಾಥೆಲೋ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಘೋಟ್ಲಿ ಡಿಸಿ ಉಸ್ಮಾನ್ ಅಬ್ದುಲ್ಲಾ ಹೇಳಿದ್ದಾರೆ.

"ರೈಲುಗಳ ಅವಶೇಷಗಳಿಂದ 30 ಶವಗಳನ್ನು ಹೊರ ತೆಗೆಯಲಾಗಿದೆ. 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸಾವು ನೋವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಸುಮಾರು 13 ರಿಂದ 14 ಬೋಗಿಗಳು ಜಖಂಗೊಂಡಿವೆ. 6 ರಿಂದ 8 ಸಂಪೂರ್ಣ ನಜ್ಜುಗುಜ್ಜಾಗಿವೆ. ಇನ್ನು ಅನೇಕ ಮಂದಿ ರೈಲಿನಡಿಯಲ್ಲಿ ಸಿಲುಕಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ'' ಎಂದು ಜಿಯೋ ನ್ಯೂಸ್ ಜೊತೆ ಮಾತನಾಡುತ್ತಾ ತಿಳಿಸಿದರು.

English summary
At least 30 people died and several sustained injuries as Sir Syed Express train collided with Millat Express between Reti and Daharki railway stations in Ghotki, reports Pakistan's ARY News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X