ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಕಾಬೂಲ್ ವಿಮಾನ ನಿಲ್ದಾಣದ ಗೇಟ್ ಬಳಿ ಹೋಗದಿರಿ": ಪ್ರಜೆಗಳಿಗೆ ಅಮೆರಿಕಾ ಸಂದೇಶ

|
Google Oneindia Kannada News

ಕಾಬೂಲ್, ಆಗಸ್ಟ್ 26: ಕಾಬೂಲ್‌ನ ಹಮೀದ್ ಕರ್ಜಾಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಏರ್ ಪೋರ್ಟ್ ಗೇಟ್ ಸುತ್ತಮುತ್ತಲು ತೆರಳದಂತೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ತನ್ನ ಪ್ರಜೆಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಏರ್ ಪೋರ್ಟ್ ಗೇಟ್ ಬಳಿ ಸಂಭವಿಸಿದ ಸರಣಿ ಸ್ಫೋಟದ ಹಿನ್ನೆಲೆ ಪ್ರಜೆಗಳಿಗೆ ಯುಎಸ್ ಈ ಸಂದೇಶ ರವಾನಿಸಿದೆ. "ವಿಮಾನ ನಿಲ್ದಾಣ ಮತ್ತು ಸುತ್ತಮುತ್ತಲು ಪ್ರದೇಶದಲ್ಲಿ ಭಾರಿ ಸ್ಫೋಟ ಹಾಗೂ ಗುಂಡಿನ ದಾಳಿ ನಡೆಸುವ ಅಪಾಯವಿದೆ. ಈ ವೇಳೆಯಲ್ಲಿ ಯುಎಸ್ ಪ್ರಜೆಗಳು ವಿಮಾನ ನಿಲ್ದಾಣ ಹಾಗೂ ಏರ್ ಪೋರ್ಟ್ ಗೇಟ್ ಬಳಿ ತೆರಳದಂತೆ ಜಾಗೃತರಾಗಿರಿ," ಎಂದು ಯುಎಸ್ ರಾಯಭಾರಿ ಕಚೇರಿ ಸಂದೇಶ ರವಾನಿಸಿದೆ.

Breaking: ಕಾಬೂಲ್ ಏರ್‌ಪೋರ್ಟ್ ಬಳಿ ಸರಣಿ ಬಾಂಬ್ ಸ್ಫೋಟ: 13 ಮಂದಿ ಸಾವು Breaking: ಕಾಬೂಲ್ ಏರ್‌ಪೋರ್ಟ್ ಬಳಿ ಸರಣಿ ಬಾಂಬ್ ಸ್ಫೋಟ: 13 ಮಂದಿ ಸಾವು

"ವಿಮಾನ ನಿಲ್ದಾಣದ ಅಬ್ಬಿ ಗೇಟ್, ಪೂರ್ವ ಗೇಟ್ ಮತ್ತು ಉತ್ತರ ಭಾಗದ ಗೇಟ್ ಬಳಿಯಿರುವ ಯುಎಸ್ ಪ್ರಜೆಗಳು ತಕ್ಷಣವೇ ಅಲ್ಲಿಂದ ವಾಪಸ್ ಹೋಗಿ," ಎಂದು ಎಚ್ಚರಿಕೆ ನೀಡಲಾಗಿತ್ತು. ಯುಎಸ್ ರಾಯಭಾರ ಕಚೇರಿಯು ಹೆಚ್ಚಿನ ಜನಸಂದಣಿಯಲ್ಲಿರುವಾಗ ತಮ್ಮ ಸುತ್ತಮುತ್ತಲಿನ ಚಟುವಟಿಕೆ ಬಗ್ಗೆ ಜಾಗೃತರಾಗಿರಲು ತನ್ನ ನಾಗರಿಕರಿಗೆ ನಿರ್ದೇಶನ ನೀಡಿತು. "ಕರ್ಫ್ಯೂಗಳಿಗೆ ಸಂಬಂಧಿಸಿದ ಚಲನೆಯ ನಿರ್ಬಂಧಗಳನ್ನು ಒಳಗೊಂಡಂತೆ ಸ್ಥಳೀಯ ಅಧಿಕಾರಿಗಳ ಸೂಚನೆಗಳನ್ನು ಅನುಸರಿಸಿ" ಎಂದು ಯುಎಸ್ ರಾಯಭಾರ ಕಚೇರಿ ಹೇಳಿದೆ.

Explosion in Kabul Airport: US Embassy issues alert Message to Americans

20ಕ್ಕೂ ಹೆಚ್ಚು ಮಂದಿ ಸಾವು:

ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನ ಹಮೀದ್ ಕರ್ಜಾಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಗೇಟ್ ಬಳಿ ರಾತ್ರಿ 9 ಗಂಟೆ ಸುಮಾರಿಗೆ ಎರಡು ಸರಣಿ ಬಾಂಬ್ ಸ್ಫೋಟ ಸಂಭವಿಸಿದೆ. ಈ ವೇಳೆ ನಾಲ್ಕು ಅಮೆರಿಕನ್ ಸೇನಾ ಯೋಧರು ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 52ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

"ಅಬ್ಬೆ ಗೇಟ್‌ನ ಸ್ಫೋಟವು ಒಂದು ಪೂರ್ವನಿಯೋಜಿತ ದಾಳಿಯ ಪರಿಣಾಮವಾಗಿದೆ ಎಂದು ನಾವು ದೃಢೀಕರಿಸಬಹುದು. ಅದು ಹಲವಾರು ಯುಎಸ್ ಮತ್ತು ನಾಗರಿಕರ ಸಾವು-ನೋವುಗಳಿಗೆ ಕಾರಣವಾಗಿದೆ. ಅಬ್ಬೆಯಿಂದ ಸ್ವಲ್ಪ ದೂರದಲ್ಲಿರುವ ಬ್ಯಾರನ್ ಹೋಟೆಲ್ ಅಥವಾ ಸಮೀಪದಲ್ಲಿ ನಾವು ಇನ್ನೊಂದು ಸ್ಫೋಟವನ್ನು ದೃಢಪಡಿಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದನ್ನು ನಾವು ಮುಂದುವರಿಸುತ್ತೇವೆ "ಎಂದು ಪೆಂಟಗನ್ ಹೇಳಿದೆ.

ವಿಮಾನ ನಿಲ್ದಾಣದ ಪ್ರಯಾಣಿಕರನ್ನು ಗುರಿಯಾಗಿಸಿ ದಾಳಿ:

ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ಉಗ್ರರು ಹಿಡಿತ ಸಾಧಿಸುತ್ತಿದ್ದಂತೆ ಇಡೀ ದೇಶದಲ್ಲಿ ನರಕ ಸದೃಶ್ಯ ವಾತಾವರಣ ಸೃಷ್ಟಿಯಾಗಿದೆ. ಇಡೀ ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ಕೈವಶವಾಗಿದ್ದು, ವಿಮಾನ ನಿಲ್ದಾಣವೊಂದು ಮಾತ್ರ ಅಮೆರಿಕಾ ಸೇನಾ ಪಡೆಯ ನಿಯಂತ್ರಣದಲ್ಲಿದೆ. ಈ ಹಿನ್ನೆಲೆ ತಾಲಿಬಾನ್ ಕ್ರೌರ್ಯಕ್ಕೆ ತಲುಗಿದ ಸಾವಿರಾರು ಪ್ರಜೆಗಳು ದೇಶವನ್ನು ತೊರೆದು ಹೋಗುವುದಕ್ಕಾಗಿ ಹಾತೊರೆಯುತ್ತಿದ್ದಾರೆ. ಸಾವಿರಾರು ಮಂದಿ ವಿಮಾನ ನಿಲ್ದಾಣದಲ್ಲಿ ನೆರೆದಿರುವುದನ್ನು ಸಹಿಸದ ಉಗ್ರರು ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಈ ಬಾಂಬ್ ಸ್ಫೋಟ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

English summary
Explosion in Kabul Airport: US Embassy issues alert Message to Americans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X