For Daily Alerts
ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಸ್ಫೋಟ: ಸಾವಿನ ಸಂಖ್ಯೆ 25 ಕ್ಕೆ ಏರಿಕೆ
ಕಾಬೂಲ್, ಏಪ್ರಿಲ್ 30: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಎರಡು ಕಡೆ ನಡೆದ ಸ್ಫೋಟದಲ್ಲಿ ಸಾವಿಗೀಡಾದವರ ಸಂಖ್ಯೆ 25 ಕ್ಕೆ ಏರಿದ್ದು, 45 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಇಲ್ಲಿನ ಶಶ್ದರಕ್ ಎಂಬಲ್ಲಿ ಸ್ಫೋಟ ಸಂಭವಿಸಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಅಫ್ಘಾನಿಸ್ತಾನದ ರಾಜಧಾನಿಯಲ್ಲಿ ಆತ್ಮಾಹುತಿ ದಾಳಿಗೆ 31 ಬಲಿ
ನಿನ್ನೆ ತಾನೇ ಅಫ್ಘಾನ್ ಮತ್ತು ಅಮೆರಿಕ ಸೇನೆ ತಾಲಿಬಾನ್ ವಿರುದ್ಧ ನಡೆಸಿದ ವಾಯುದಾಳಿಯಲ್ಲಿ 35 ಕ್ಕೂ ಹೆಚ್ಚು ಉಗ್ರರನ್ನು ಹತ್ಯೆಗೈಯ್ಯಲಾಗಿತ್ತು.
Death toll rises to 25, 45 injured in twin blasts that hit Shashdarak area in #Afghanistan's Kabul city, reports TOLO news. pic.twitter.com/w4qKmnGmuT
— ANI (@ANI) April 30, 2018
ಅಫ್ಘಾನಿಸ್ತಾನದ ಬಲ್ಖ್ ಪ್ರದೇಶದ ಚಾಹರ್ ಬೊಲಾಕ್ ಜಿಲ್ಲೆಯ ಅರ್ಜಾಂಕರ್ ಎಂಬ ಹಳ್ಳಿಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ಈ ಹಳ್ಳಿ ಈಗ ತಾಲಿಬಾನ್ ಉಗ್ರರಿಂದ ಮುಕ್ತವಾಗಿದೆ ಎಮದು ವರದಿಗಳು ತಿಳಿಸಿವೆ.