ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜರ್ಮನಿಯ ಗುರುದ್ವಾರದಲ್ಲಿ ಸ್ಫೋಟ, ಮೂವರಿಗೆ ಗಾಯ

By Mahesh
|
Google Oneindia Kannada News

ಎಸ್ಸೆನ್(ಜರ್ಮನಿ), ಏಪ್ರಿಲ್ 17: ಜರ್ಮನಿಯ ಪಶ್ಚಿಮ ಭಾಗದ ಎಸ್ಸೆನ್ ನಗರದ ಸಿಖ್ ಗುರುದ್ವಾರದಲ್ಲಿ ಸ್ಫೋಟ ಸಂಭವಿಸಿದೆ. ಮೂವರು ಮುಸುಕುಧಾರಿಗಳು ಸ್ಫೋಟಕ್ಕೂ ಕೆಲ ಸಮಯಕ್ಕೂ ಮುನ್ನ ಈ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು ಪತ್ತೆಯಾಗಿದೆ.

ಇದು ಉಗ್ರರ ಕೃತ್ಯ ಎಂಬುದಕ್ಕೆ ಯಾವುದೇ ಸಾಕ್ಷಿ ಸಿಕ್ಕಿಲ್ಲ. ಆದರೆ, ಉದ್ದೇಶ ಪೂರ್ವಕವಾಗಿ ಸ್ಫೋಟ ಮಾಡಲಾಗಿದೆ. ಶನಿವಾರದಂದು ಮದುವೆ ಆಯೋಜಿಸಲಾಗಿತ್ತು. [ಜರ್ಮನಿ ಕಂಪನಿಗಳಿಗೆ ಬೆಂಗಳೂರು ಅಚ್ಚುಮೆಚ್ಚು ಏಕೆ?]

Explosion at Sikh Temple, Essen in Germany

ಜೊತೆಗೆ ಬೈಸಾಕಿ ಹಬ್ಬದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಾಲೀಮು ನಡೆಸಲಾಗುತ್ತಿತ್ತು. ಸ್ಫೋಟದ ಪರಿಣಾಮ ಅತಿಥಿಗಳ ಪೈಕಿ ಮೂವರಿಗೆ ಗಂಭೀರ ಗಾಯಗಳಾಗಿವೆ.

ಸಂಪೂರ್ಣ ಕಪ್ಪು ಬಣ್ಣದ ಬಟ್ಟೆ ತೊಟ್ಟಿದ್ದ ಮುಸುಕುಧಾರಿಯೊಬ್ಬ ಗುರುದ್ವಾರದೊಳಗೆ ಸ್ಫೋಟಕವನ್ನು ಎಸೆದು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇನ್ನೊಂದು ಮೂಲದ ಪ್ರಕಾರ ಸಿಖ್ ಮಂದಿರದ ಹೊರಗಡೆ ಇರುವ ನಿಶಾನ್ ಸಾಹೀಬ್(ಸಿಖ್ಖರ ಧ್ವಜ ಸ್ತಂಭ) ಬಳಿ ಸ್ಫೋಟಕಗಳನ್ನು ಇಡಲಾಗಿತ್ತು ಎಂದು ತಿಳಿದು ಬಂದಿದೆ.

ಸ್ಫೋಟದ ತೀವ್ರತೆಗೆ ಸಿಖ್ ಮಂದಿರದ ಕಿಟಕಿಗಳು ಜಖಂಗೊಂಡಿವೆ ಘಟನೆಗೆ ಸಂಬಂಧಿಸಿದಂತೆ ಎಸ್ಸೆನ್ ಪೊಲೀಸರು ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

English summary
German police say three people have been injured in an apparently deliberate explosion at a Sikh temple in the western city of Essen, about an hour north of Cologne.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X