ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Explained: ಕೊವಿಡ್-19 ರೋಗ ನಿವಾರಿಸುವುದು ಹೇಗೆ ಮೊಲ್ನುಪಿರವಿರ್ ಮಾತ್ರೆ!?

|
Google Oneindia Kannada News

ಲಂಡನ್, ನವೆಂಬರ್ 5: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಡುವುದಕ್ಕೆ ಲಂಡನ್ ಹೊಸ ಅಸ್ತ್ರ ಕಂಡುಕೊಂಡಿದೆ. ಕೊವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಮಾತ್ರೆಗಳಿಗೆ ಅನುಮೋದನೆ ನೀಡಿದ ಮೊದಲ ರಾಷ್ಟ್ರ ಯುಕೆ(ಯುನೈಟೆಡ್ ಕಿಂಗ್ ಡಮ್) ಆಗಿದೆ.
ಜಗತ್ತಿನ ಪ್ರಮುಖ ಔಷಧಿ ಉತ್ಪಾದನಾ ಸಂಸ್ಥೆ ಆಗಿರುವ ಮೆರ್ಕ್ ಕಂಪನಿ ಉತ್ಪಾದಿಸಿರುವ ಮೊಲ್ನುಪಿರವಿರ್ ಮಾತ್ರೆಗಳನ್ನು ಕೊವಿಡ್-19 ಸೋಂಕಿನ ವಿರುದ್ಧ ಚಿಕಿತ್ಸೆಗೆ ಬಳಸಲು ಅನುಮೋದನೆ ನೀಡಲಾಗಿದೆ. ಈ ಮಾತ್ರೆಗಳು ಕೊರೊನಾವೈರಸ್ ಸೋಂಕಿನಿಂದ ಬಳಲುತ್ತಿರುವ, ರೋಗ ನಿರೋಧಕ ಶಕ್ತಿಯ ಕೊರತೆಯಿಂದ ತೀವ್ರವಾಗಿ ಅಸ್ವಸ್ಥಗೊಂಡವರಿಗೆ ಚಿಕಿತ್ಸೆ ನೀಡುವುದಕ್ಕೆ ಹಾಗೂ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ತಗ್ಗಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಲಾಗುತ್ತಿದೆ.

ಕೋವಿಡ್‌ ವಿರುದ್ಧ ಮೆರ್ಕ್‌ನ ಮಾತ್ರೆ ಅನುಮೋದಿಸಿದ ವಿಶ್ವದ ಮೊದಲ ರಾಷ್ಟ್ರ ಯುಕೆಕೋವಿಡ್‌ ವಿರುದ್ಧ ಮೆರ್ಕ್‌ನ ಮಾತ್ರೆ ಅನುಮೋದಿಸಿದ ವಿಶ್ವದ ಮೊದಲ ರಾಷ್ಟ್ರ ಯುಕೆ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ತತ್ತರಿಸಿರುವ ಜಗತ್ತಿನಲ್ಲಿ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಲಸಿಕೆ ವಿತರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಇದರ ಮಧ್ಯೆ ಸೋಂಕು ತಗುಲಿದ ಜನರಿಗೆ ಉತ್ತಮ ಚಿಕಿತ್ಸೆ ನೀಡುವುದಕ್ಕೆ ಹಾಗೂ ಸೋಂಕಿತರನ್ನು ಗುಣಮುಖರಾಗಿಸಲು ಸೂಕ್ತ ಔಷಧಿಗಳನ್ನು ಸಂಶೋಧಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮೊದಲು ಅನುಮೋದನೆ ಪಡೆದಿರುವ ಮೊಲ್ನುಪಿರವಿರ್ ಮಾತ್ರೆಗಳು ಹೇಗೆ ಕೆಲಸ ಮಾಡುತ್ತದೆ.

EXPLAINED: Why Molnupiravir Tablets Being Called A Gamechanger In Fight Against Coronavirus

ಮೊಲ್ನುಪಿರವಿರ್ ಮಾತ್ರೆಯ ವೈದ್ಯಕೀಯ ಪ್ರಯೋಗ ಮತ್ತು ಸಂಶೋಧನೆಗಳು ಹೇಗೆ ನಡೆದವು, ಕೊವಿಡ್-19 ರೋಗಿಗಳಲ್ಲಿ ಮೊಲ್ನುಪಿರವಿರ್ ಮಾತ್ರೆ ಹೇಗೆ ಕೆಲಸ ಮಾಡಲಿದೆ ಎಂಬುದರ ಕುರಿತು ಒಂದು ವಿಸ್ತೃತ ವರದಿಗಾಗಿ ಮುಂದೆ ಓದಿ.

ಕೊರೊನಾವೈರಸ್ ಗುಣಪಡಿಸುವ ಔಷಧಿಗೆ ಆದ್ಯತೆ

ಕೊರೊನಾವೈರಸ್ ಗುಣಪಡಿಸುವ ಔಷಧಿಗೆ ಆದ್ಯತೆ

ವಿಶ್ವದಾದ್ಯಂತ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದಾಗಿ 50 ಲಕ್ಷಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ. ಈ ಮಧ್ಯೆ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಹಾಗೂ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಲಸಿಕೆಯನ್ನು ನೀಡಲಾಗುತ್ತಿದೆ. ಆದರೆ ಕೊವಿಡ್-19 ಸೋಂಕಿನ ರೂಪಾಂತರ ವೈರಸ್ ಹೊಸ ಆತಂಕವನ್ನು ಸೃಷ್ಟಿಸುತ್ತಿದೆ. ಇದರ ಮಧ್ಯೆ ಸೋಂಕು ಅಂಟಿಕೊಂಡ ವ್ಯಕ್ತಿಗೆ ಚಿಕಿತ್ಸೆ ನೀಡವು ಔಷಧಿಯನ್ನು ಸಂಶೋಧಿಸಿರುವುದು ಸ್ವಾಗತಾರ್ಹವಾಗಿದೆ.

ಕೊವಿಡ್-19 ಸೋಂಕಿತರಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ

ಕೊವಿಡ್-19 ಸೋಂಕಿತರಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ

ಮೊಲ್ನುಪಿರಾವಿರ್ ಎಂಬುದು ಕೊವಿಡ್-19 ರೋಗಿಯು ಮೌಖಿಕವಾಗಿ ತೆಗೆದುಕೊಳ್ಳಬಹುದಾದ ಮೊದಲ ಮಾತ್ರೆಯಾಗಿದೆ ಎಂದು ಮೆರ್ಕ್ ಹೇಳಿದೆ. ಔಷಧ ಅಭಿವೃದ್ಧಿಪಡಿಸುವಲ್ಲಿ ಯುಎಸ್-ಆಧಾರಿತ ರಿಡ್ಜ್‌ಬ್ಯಾಕ್ ಬಯೋಥೆರಪ್ಯೂಟಿಕ್ಸ್‌ನೊಂದಿಗೆ ಪಾಲುದಾರಿಕೆ ಹೊಂದಿರುವ ಕಂಪನಿಯಾಗಿದೆ. ಕೊವಿಡ್-19 ಸೋಂಕಿನ ಸೌಮ್ಯ, ಮಧ್ಯಮ ಹಾಗೂ ಸಾವಿನ ಅಪಾಯದಲ್ಲಿ ಇರುವವರ ಚಿಕಿತ್ಸೆಗೆ ಹೆಚ್ಚು ಉಪಯುಕ್ತವಾಗಿದೆ. ಮೂರು ಹಂತಗಳಲ್ಲಿ ವೈದ್ಯಕೀಯ ಪ್ರಯೋಗಗಳಿಗೆ ಒಳಗಾದ ಮಾತ್ರೆಯು ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವಿನ ಅಪಾಯವನ್ನು ತಗ್ಗಿಸುತ್ತದೆ ಎಂದು ಕಂಪನಿ ಹೇಳಿದೆ.

ಮೊಲ್ನುಪಿರವಿರ್ ವೈದ್ಯಕೀಯ ಪ್ರಯೋಗದ ರಿಸಲ್ಟ್

ಮೊಲ್ನುಪಿರವಿರ್ ವೈದ್ಯಕೀಯ ಪ್ರಯೋಗದ ರಿಸಲ್ಟ್

775 ಜನರನ್ನು ಒಳಗೊಂಡ ಪ್ರಯೋಗದ ಪ್ರಾಥಮಿಕ ಫಲಿತಾಂಶಗಳು "ಕೋವಿಡ್ -19 ರೋಗಲಕ್ಷಣಗಳ ಐದು ದಿನಗಳಲ್ಲಿ ಔಷಧವನ್ನು ಸ್ವೀಕರಿಸಿದ ರೋಗಿಗಳು ಡಮ್ಮಿ ಮಾತ್ರೆ ಸ್ವೀಕರಿಸಿದವರಿಗೆ ಹೋಲಿಸಿದರೆ ಆಸ್ಪತ್ರೆಗೆ ದಾಖಲಾದ ಮತ್ತು ಸಾವಿನ ಅರ್ಧದಷ್ಟು ಪ್ರಮಾಣವನ್ನು ಹೊಂದಿದ್ದಾರೆ" ಎಂದು ತೋರಿಸಿದೆ. ಮೊಲ್ನುಪಿರಾವಿರ್ ಮಾತ್ರೆಗಳನ್ನು ಪಡೆದ ರೋಗಿಗಳಲ್ಲಿ ಶೇ.7.3 ಪ್ರತಿಶತದಷ್ಟು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ, ಅಥವಾ 29ನೇ ದಿನದಂದು ಸಾವನ್ನಪ್ಪಿದ್ದಾರೆ. ಪ್ಲೆಸಿಬೋ ಪಡೆದುಕೊಂಡವರೊಂದಿಗೆ ಹೋಲಿಸಿದರೆ ಶೇ.14.1ರಷ್ಟು ಜನರು ಆಸ್ಪತ್ರೆಗೆ ದಾಖಲಾಗಿದ್ದು, 8 ಮಂದಿ ಪ್ರಾಣ ಬಿಟ್ಟಿದ್ದಾರೆ. ಆದರೆ ಮೊಲ್ನುಪಿರವಿರ್ ಮಾತ್ರೆ ಸೇವಿಸಿದ ಯಾರೊಬ್ಬರೂ ಮೃತಪಟ್ಟಿರುವ ಬಗ್ಗೆ ವರದಿಯಾಗಿಲ್ಲ, ಎಂದು ಕಂಪನಿ ತಿಳಿಸಿದೆ.

ಹೇಗೆ ಕೆಲಸ ಮಾಡುತ್ತೆ ಮೊಲ್ನುಪಿರವಿರ್ ಮಾತ್ರೆಗಳು?

ಹೇಗೆ ಕೆಲಸ ಮಾಡುತ್ತೆ ಮೊಲ್ನುಪಿರವಿರ್ ಮಾತ್ರೆಗಳು?

ಮೊಲ್ನುಪಿರಾವಿರ್ ಮಾತ್ರೆಗಳು ಯಾಂತ್ರಿಕ ವ್ಯವಸ್ಥೆಯಲ್ಲಿ ದೋಷಗಳನ್ನು ಪರಿಚಯಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. mRNA ರೀತಿಯನ್ನು ಒಳಗೊಂಡಿರುತ್ತದೆ. ಕೊವಿಡ್-19 ಸೋಂಕು ತಗುಲಿದ ವ್ಯಕ್ತಿಯ ದೇಹದಲ್ಲಿರುವ ರೋಗಾಣುಗಳನ್ನು ನಕಲು ಮಾಡುವ ಮೂಲಕ ಮೂಲ ರೋಗಾಣುಗಳನ್ನು ವಂಚಿಸುತ್ತದೆ. ಮೂಲರೋಗಾಣುಗಳ ಜೊತೆಗೆ ಔಷಧಿಯು ನಕಲು ಮಾಡಿದ ರೋಗಾಣುಗಳು ಸೇರಿಸುವ ಕೆಲಸವನ್ನು ಮಾಡುತ್ತದೆ. ಇದರಿಂದ ಮೂಲ ರೋಗಾಣುಗಳ ಸಂತಾನೋತ್ಪತ್ತಿ ಕುಸಿಯುತ್ತದೆ. ಅಂತಿಮವಾಗಿ ರೂಪಾಂತರ ಅಥವಾ ಯಾವುದೋ ರೋಗಾಣುವಿನ ಪ್ರಮಾಣವು ಕಡಿಮೆಯಾಗುತ್ತದೆ. ಇದರಿಂದ ಮಾತ್ರೆಯು ರೋಗದ ತೀವ್ರತೆಯನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ ಎಂದು ಯುಕೆ ಔಷಧಿ ನಿಯಂತ್ರಣ ಪ್ರಾಧಿಕಾರ ತಿಳಿಸಿದೆ.
"ಭಾರತದ ಮು ಮತ್ತು ಗಾಮಾದಲ್ಲಿ ಮೊದಲು ಗುರುತಿಸಲಾದ ಡೆಲ್ಟಾದಂತಹ ಅತ್ಯಂತ ಸಾಮಾನ್ಯವಾದ ಸಾರ್ಸ್-ಕೋವಿ-2 ರೂಪಾಂತರಗಳ ವಿರುದ್ಧ ಮೊಲ್ನುಪಿರಾವಿರ್ ಮಾತ್ರೆಗಳು ಸಕ್ರಿಯವಾಗಿ ಕೆಲಸ ಮಾಡುತ್ತದೆ ಎಂಬುದು ಪೂರ್ವ ವೈದ್ಯಕೀಯ ಪ್ರಯೋಗ ಮತ್ತು ಅಂಕಿ-ಅಂಶಗಳಿಂದ ಗೊತ್ತಾಗುತ್ತದೆ," ಎಂದು ಮೆರ್ಕ್ ಹೇಳಿದೆ.

ಕೊವಿಡ್-19 ಸೋಂಕಿತರಿಗೆ ಲಗೆವ್ರಿಯೊ ಔಷಧಿ

ಕೊವಿಡ್-19 ಸೋಂಕಿತರಿಗೆ ಲಗೆವ್ರಿಯೊ ಔಷಧಿ

ಯುಕೆ ಔಷಧಿ ನಿಯಂತ್ರಣ ಪ್ರಾಧಿಕಾರವು, ಲಗೆವ್ರಿಯೊ ಎಂದೂ ಕರೆಯಲ್ಪಡುವ ಮಾತ್ರೆ, ಕೋವಿಡ್ -19ರ ರೋಗನಿರ್ಣಯ ಮತ್ತು ರೋಗಲಕ್ಷಣಗಳ ಪ್ರಾರಂಭದ ನಂತರದ ಆರಂಭಿಕ ಹಂತಗಳಲ್ಲಿ ಬಳಸಬಹುದು. "ಸೌಮ್ಯದಿಂದ ಮಧ್ಯಮ ಕೋವಿಡ್ -19 ಲಕ್ಷಣಗಳನ್ನು ಹೊಂದಿರುವ ಜನರಲ್ಲಿ ಮತ್ತು ಕನಿಷ್ಠ ಜನರಲ್ಲಿ ಅದರ ಬಳಕೆಯನ್ನು ಅಧಿಕೃತಗೊಳಿಸಿದೆ." ಸ್ಥೂಲಕಾಯತೆ, ಮಧುಮೇಹ, ಹೃದ್ರೋಗ, ಅಥವಾ 60 ವರ್ಷಕ್ಕಿಂತ ಮೇಲ್ಪಟ್ಟವರು, ತೀವ್ರವಾದ ಅನಾರೋಗ್ಯ ಹೊಂದಿರುವವರಿಗಾಗಿ ಅಭಿವೃದ್ಧಿಪಡಿಸಿದ ಔಷಧಿಯಾಗಿದೆ.
"ವೈದ್ಯಕೀಯ ಪ್ರಯೋಗಗಳ ಅಂಕಿ-ಅಂಶಗಳ ಆಧಾರದ ಮೇಲೆ, ಸೋಂಕಿನ ಆರಂಭಿಕ ಹಂತಗಳಲ್ಲಿ ತೆಗೆದುಕೊಂಡಾಗ ಲಗೆವ್ರಿಯೊ ಹೆಚ್ಚು ಪರಿಣಾಮಕಾರಿಯಾಗಿದೆ. ಆದ್ದರಿಂದ ಕೋವಿಡ್ -19 ಸೋಂಕು ತಗುಲಿದ ನಂತರ ಮತ್ತು ರೋಗಲಕ್ಷಣಗಳು ಪ್ರಾರಂಭವಾದ ಐದು ದಿನಗಳಲ್ಲಿ ಸಾಧ್ಯವಾದಷ್ಟು ಬೇಗ ಅದರ ಬಳಕೆಯನ್ನು MHRA ಶಿಫಾರಸು ಮಾಡುತ್ತದೆ."

ಮೊಲ್ನುಪಿರವಿರ್ ಮಾತ್ರೆಯು ಹೇಗೆ ಸಹಕಾರಿ?

ಮೊಲ್ನುಪಿರವಿರ್ ಮಾತ್ರೆಯು ಹೇಗೆ ಸಹಕಾರಿ?

ಕೋವಿಡ್-19 ಅನ್ನು ಗುಣಪಡಿಸಲು ಇಲ್ಲಿಯವರೆಗೆ ಬಳಸಲಾಗುತ್ತಿರುವ ಎಲ್ಲಾ ಪ್ರಮುಖ ಚಿಕಿತ್ಸೆಗಳು ಇಂಟ್ರಾವೆನಸ್ ಡಿಪ್ ಅಥವಾ ಇಂಜೆಕ್ಷನ್ ಮೂಲಕ ನೀಡಬೇಕಾಗಿತ್ತು. ಇದರರ್ಥ ರೋಗಿಯು ಚಿಕಿತ್ಸೆಯನ್ನು ಪಡೆಯಲು ವೈದ್ಯಕೀಯ ವೃತ್ತಿಪರರು ಅಥವಾ ವೈದ್ಯರನ್ನೇ ಅವಲಂಬಿಸಬೇಕಾಗಿತ್ತು. ಮೊಲ್ನುಪಿರಾವಿರ್ ಮಾತ್ರೆ ಆಗಿರುವುದರಿಂದ ಅದನ್ನು ಜನರೇ ಸ್ವಾವಲಂಬಿಯಾಗಿ ಬಳಸುವುದಕ್ಕೆ ಸಾಧ್ಯವಿದೆ. ಈ ಮಾತ್ರೆಗಳನ್ನು ಸೇವಿಸುವುದಕ್ಕೆ ಯಾವುದೇ ವೈದ್ಯರು ಅಥವಾ ವೃತ್ತಿಪರರ ಅವಶ್ಯಕತೆ ಇರುವುದಿಲ್ಲ.
"ವೈರಸ್ ವ್ಯಾಪಕವಾಗಿ ಹರಡುವುದು ಮುಂದುವರಿದಿದೆ. ಈ ಹಂತದಲ್ಲಿ ಜನರು ಆಸ್ಪತ್ರೆಗಳನ್ನು ಅವಲಂಬಿಸದಂತೆ ಮನೆಗಳಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬೇಕಿದೆ. ಲಭ್ಯವಿರುವ ಚಿಕಿತ್ಸಾ ವಿಧಾನಗಳನ್ನು ಹಾಗೂ ಆಂಟಿವೈರಲ್ ಚಿಕಿತ್ಸೆಗಳನ್ನು ಪಡೆದುಕೊಳ್ಳುವುದು ತೀರಾ ಅಗತ್ಯ ಎನಿಸುತ್ತದೆ, ಎಂದು ರಿಡ್ಜ್ಬ್ಯಾಕ್ ಬಯೋಥೆರಪಿಟಿಕ್ಸ್ನ CEO ವೆಂಡಿ ಹಾಲ್ಮನ್ ಹೇಳಿದ್ದಾರೆ. "ಮನೆಗಳಲ್ಲಿ ಕೋವಿಡ್ -19 ಹರಡುವುದನ್ನು ತಡೆಗಟ್ಟುವುದಕ್ಕೆ ಅಗತ್ಯವಿರುವ ಔಷಧಿಯನ್ನು ಅನ್ವೇಷಿಸಲಾಗುತ್ತಿದೆ ಎಂದು ಕಂಪನಿಯು ಹೇಳಿದೆ.

ಮೊಲ್ನುಪಿರವಿರ್ ಮಾತ್ರೆಗಳು ಸಿಗುವುದು ಯಾವಾಗ?

ಮೊಲ್ನುಪಿರವಿರ್ ಮಾತ್ರೆಗಳು ಸಿಗುವುದು ಯಾವಾಗ?

"ಮೊಲ್ನುಪಿರಾವಿರ್ ಮಾತ್ರೆಯನ್ನು ಇದೀಗ ಅಪಾಯದಲ್ಲಿ ಉತ್ಪಾದಿಸಲಾಗುತ್ತಿದೆ. 2021ರ ಅಂತ್ಯದ ವೇಳೆಗೆ 10 ಮಿಲಿಯನ್ ಕೋರ್ಸ್‌ಗಳ ಮಾತ್ರೆಗಳನ್ನು ಹೊಂದುವ ನಿರೀಕ್ಷೆಯಿದೆ. ಆ ದೇಶದ ಔಷಧೀಯ ನಿಯಂತ್ರಣ ಪ್ರಾಧಿಕಾರದಿಂದ ತುರ್ತು ಅನುಮೋದನೆ ಪಡೆದ ನಂತರ ಸುಮಾರು 1.7 ಮಿಲಿಯನ್ ಮಾತ್ರೆಗಳನ್ನು ಪೂರೈಸಲು ಯುಎಸ್ ಸರ್ಕಾರದೊಂದಿಗೆ ಈಗಾಗಲೇ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ವಿಶ್ವಾದ್ಯಂತ ಇತರ ಸರ್ಕಾರಗಳೊಂದಿಗೆ ಮೊಲ್ನುಪಿರವಿರ್‌ಗಾಗಿ ಪೂರೈಕೆ ಮತ್ತು ಖರೀದಿ ಒಪ್ಪಂದಗಳನ್ನು ಮಾಡಿಕೊಂಡಿದೆ.

ಮೊಲ್ನುಪಿರವಿರ್ ಮಾತ್ರೆ ಬೆಲೆ ಎಷ್ಟು ಎಂಬುದು ನಿರ್ಧಾರವಾಗಿಲ್ಲ

ಮೊಲ್ನುಪಿರವಿರ್ ಮಾತ್ರೆ ಬೆಲೆ ಎಷ್ಟು ಎಂಬುದು ನಿರ್ಧಾರವಾಗಿಲ್ಲ

ಮೊಲ್ನುಪಿರವಿರ್ ಮಾತ್ರೆಗಳ ಬೆಲೆಗೆ ಸಂಬಂಧಿಸಿದಂತೆ ವಿವರಗಳು ತಕ್ಷಣವೇ ಲಭ್ಯವಿಲ್ಲ. ಆದರೆ "ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ಹಲವು ರಾಷ್ಟ್ರಗಳು ಹಣಕಾಸು ಒದಗಿಸುವ ಸಾಮರ್ಥ್ಯವನ್ನು ಹೊಂದಿವೆ. ವಿಶ್ವ ಬ್ಯಾಂಕ್ ದೇಶದ ಆದಾಯದ ಮಾನದಂಡಗಳ ಆಧಾರದ ಮೇಲೆ ಬೆಲೆಯ ವಿಧಾನವನ್ನು ಜಾರಿಗೆ ತರಲು ಯೋಜಿಸಿದೆ ಎಂದು ಮೆರ್ಕ್ ಹೇಳಿದೆ. ಪ್ರಪಂಚದ ಎಲ್ಲಾ ಭಾಗಗಳಿಗೆ ಔಷಧದ ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು, ಜೆನೆರಿಕ್ ಔಷಧಿ ತಯಾರಕರೊಂದಿಗೆ ಪರವಾನಗಿ ಒಪ್ಪಂದ ಮಾಡಿಕೊಂಡಿದೆ ಎಂದು ಕಂಪನಿ ತಿಳಿಸಿದೆ. ಕೊರೊನಾವೈರಸ್ ರೋಗಿಗಳು ಐದು ದಿನಗಳವರೆಗೆ ದಿನಕ್ಕೆ ಎರಡು ಬಾರಿ ಮೊಲ್ನುಪಿರವಿರ್ ನಾಲ್ಕು ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

Recommended Video

ರವೀಂದ್ರ ಜಡೇಜಾ ಕೊಟ್ಟ ಉತ್ತರಕ್ಕೆ ಫುಲ್‌ ಕಕ್ಕಾಬಿಕ್ಕಿಯಾದ ಪತ್ರಕರ್ತ | Oneindia Kannada

English summary
EXPLAINED: Why Molnupiravir Tablets Being Called A 'Gamechanger' In Fight Against Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X