ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ನೆಗೆಟಿವ್ ವರದಿಯಿಂದ ಸಿಗುವುದು ತಪ್ಪು ಭರವಸೆಯಷ್ಟೇ!

|
Google Oneindia Kannada News

ನವದೆಹಲಿ, ನವೆಂಬರ್ 19: ಭಾರತ ಸೇರಿದಂತೆ ಜಗತ್ತಿನಾದ್ಯಂತ ಒಂದಿಲ್ಲೊಂದು ಹಬ್ಬದ ಆಚರಣೆಗಳು ನಡೆಯುತ್ತಿವೆ. ಭಾರತದಲ್ಲಿ ದೀಪಾವಳಿ, ಛಠ್ ಪೂಜೆಯಂತಹ ಹಬ್ಬಗಳಿದ್ದರೆ, ಕ್ರೈಸ್ತ ಸಮುದಾಗಳು ಹೆಚ್ಚಿರುವ ದೇಶಗಳಲ್ಲಿ ಕ್ರಿಸ್ ಮಸ್ ಪೂರ್ವ ಆಚರಣೆಗಳು ಶುರುವಾಗಿವೆ. ಅದರ ಜತೆಯಲ್ಲಿಯೇ ಕೊರೊನಾ ವೈರಸ್ ಪ್ರಕರಣಗಳೂ ಹೆಚ್ಚು ಹೆಚ್ಚು ವರದಿಯಾಗುತ್ತಿವೆ. ಜನರು ಸೋಂಕಿನ ಜತೆಗೆ ಬದುಕುವುದನ್ನು ಕಲಿಯುತ್ತಿದ್ದಾರೆ.

ಒಂದೆಡೆ ಪ್ರಕರಣಗಳ ಹರಡುವಿಕೆ ಹೆಚ್ಚುತ್ತಿದ್ದರೂ, ಜನರು ಕೋವಿಡ್ 19 ನೆಗೆಟಿವ್ ವರದಿಗಳು ಸಿಕ್ಕ ಕೂಡಲೇ ಜನರ ಗುಂಪುಗಳಲ್ಲಿ ಸೇರಿಕೊಳ್ಳುತ್ತಿದ್ದಾರೆ. ಆದರೆ ಕೋವಿಡ್ 19 ನೆಗೆಟಿವ್ ಪರೀಕ್ಷೆಯ ವರದಿ ಹೊಂದಿರುವ ವ್ಯಕ್ತಿಯಿಂದ ಕೋವಿಡ್ 19 ಸೋಂಕು ಹರಡುವುದಿಲ್ಲ ಎಂಬ ಖಾತರಿಯಿದೆಯೇ? ಇಲ್ಲ ಎನ್ನುತ್ತಾರೆ ವಿಜ್ಞಾನಿಗಳು.

ಕೊರೊನಾ ಇಳಿಕೆಯಾಗುತ್ತಿದೆ ಎಂದು ಮೈಮರೆಯಬೇಡಿ: ಮುಂದಿದೆ ಭಾರೀ ಆತಂಕಕೊರೊನಾ ಇಳಿಕೆಯಾಗುತ್ತಿದೆ ಎಂದು ಮೈಮರೆಯಬೇಡಿ: ಮುಂದಿದೆ ಭಾರೀ ಆತಂಕ

ನೆಗೆಟಿವ್ ವರದಿ ಹೊಂದಿರುವ ಮಾತ್ರಕ್ಕೆ ಸುರಕ್ಷಿತ ಎಂಬ ಭಾವಿಸುವುದು ತಪ್ಪಾಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಬದಲಾಗಿ ನೆಗೆಟಿವ್ ವರದಿಗಳಲ್ಲಿ ತಮ್ಮಲ್ಲಿ ತಪ್ಪು ಭರವಸೆಯೊಂದನ್ನು ಮೂಡಿಸುತ್ತದೆಯಷ್ಟೇ. ಹೀಗಾಗಿ ಕೊರೊನಾ ವೈರಸ್ ಕಾಯಿಲೆಗೆ ಕಾರಣವಾಗುವ ಸಾರ್ಸ್-ಕೋವ್-2 ವೈರಸ್‌ಗೆ ಒಮ್ಮೆ ಒಳಗಾದ ವ್ಯಕ್ತಿಯು ಮುನ್ನೆಚ್ಚರಿಕೆಯ ಕ್ರಮವಾಗಿ ಎಲ್ಲ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಲೇಬೇಕು ಎಂದು ಸಲಹೆ ನೀಡಿದ್ದಾರೆ. ಮುಂದೆ ಓದಿ.

ನೆಗೆಟಿವ್ ಇದ್ದರೆ ಸಾಲದು

ನೆಗೆಟಿವ್ ಇದ್ದರೆ ಸಾಲದು

'ಸಾರ್ವಜನಿಕವಾಗಿ ಬೆರೆಯಲು ಪರೀಕ್ಷೆಯ ಫಲಿತಾಂಶಗಳನ್ನು ಮಾತ್ರವೇ ನಂಬಿಕೊಳ್ಳಬಾರದು. ನೀವು ತಪಾಸಣೆಗೆ ಒಳಪಟ್ಟ ಸಂದರ್ಭದಲ್ಲಿ ಪಾಸಿಟಿವ್ ಆಗಿದ್ದರೆ ಮಾತ್ರವೇ ಪರೀಕ್ಷೆ ಹೇಳಬಲ್ಲದು. ಹಾಗೆಯೇ ಕೆಲವೊಮ್ಮೆ ನೀವು ಸೋಂಕಿಗೆ ಒಳಗಾಗಿದ್ದರೂ ಅದನ್ನು ಪತ್ತೆಹಚ್ಚುವಲ್ಲಿ ವಿಫಲವಾದರೂ ಆಗಬಹುದು' ಎನ್ನುತ್ತಾರೆ ವೈರಾಲಜಿಸ್ಟ್ ಡಾ. ಆಂಜೆಲಾ ರಸ್ಮುಸ್ಸೆನ್.

ಸೋಂಕು ಇದ್ದರೂ ಪತ್ತೆಯಾಗದು

ಸೋಂಕು ಇದ್ದರೂ ಪತ್ತೆಯಾಗದು

ವೈರಸ್‌ಗೆ ತುತ್ತಾದ ವ್ಯಕ್ತಿಯು ಕೋವಿಡ್ ಕಾಯಿಲೆಯ ವಾಸ್ತವ ಲಕ್ಷಣಗಳನ್ನು ಕಾಣಲು ಕೆಲವು ದಿನಗಳೇ ಬೇಕಾಗುತ್ತದೆ. ವ್ಯಕ್ತಿಯು ಕೋವಿಡ್ ಸೋಂಕಿಗೆ ಒಳಗಾದ ಕೆಲವೇ ಸಮಯದಲ್ಲಿ ಪರೀಕ್ಷೆಗೆ ಒಳಪಟ್ಟರೂ ಪರೀಕ್ಷೆಯ ಫಲಿತಾಂಶವು ದೇಹದಲ್ಲಿನ ವೈರಸ್ ಅಸ್ತಿತ್ವವನ್ನು ಪತ್ತೆಹಚ್ಚುವಲ್ಲಿ ವಿಫಲವಾಗಬಹುದು.

ಕ್ರಿಸ್‌ಮಸ್‌ಗೂ ಮುನ್ನ ಬರಲಿದೆ ಫೈಜರ್ ಕೊರೊನಾ ವೈರಸ್ ಲಸಿಕೆಕ್ರಿಸ್‌ಮಸ್‌ಗೂ ಮುನ್ನ ಬರಲಿದೆ ಫೈಜರ್ ಕೊರೊನಾ ವೈರಸ್ ಲಸಿಕೆ

14 ದಿನ ಬೇಕಾಗಬಹುದು

14 ದಿನ ಬೇಕಾಗಬಹುದು

ಕೋವಿಡ್ 19 ಪರೀಕ್ಷೆಯಲ್ಲಿ ವೈರಸ್ ಇರುವುದು ಪತ್ತೆಯಾಗಬೇಕೆಂದರೆ ಅದು ವ್ಯಕ್ತಿಯ ದೇಹದೊಳಗೆ ಮತ್ತಷ್ಟು ವೈರಸ್‌ಗಳನ್ನು ಉತ್ಪತ್ತಿ ಮಾಡಬೇಕಾಗುತ್ತದೆ. ಕೋವಿಡ್ ವೈರಸ್‌ನ ಉತ್ಪತ್ತಿಯ ಅವಧಿ 14 ದಿನಗಳವರೆಗೂ ಇರುತ್ತದೆ. ಅದಕ್ಕೂ ಮೊದಲು ಪರೀಕ್ಷೆಗೆ ಒಳಪಟ್ಟ ವ್ಯಕ್ತಿಯಲ್ಲಿ ನೆಗೆಟಿವ್ ಎಂದೇ ವರದಿ ಬರಬಹುದು ಮತ್ತು ಯಾವುದೇ ಲಕ್ಷಣಗಳು ಕೂಡ ಕಾಣಿಸದೆ ಇರಬಹುದು ಎನ್ನುತ್ತಾರೆ ಪರಿಣತರು.

ಒಂದು ವಾರ ಕ್ವಾರೆಂಟೈನ್ ಆಗಿರಿ

ಒಂದು ವಾರ ಕ್ವಾರೆಂಟೈನ್ ಆಗಿರಿ

ಪರೀಕ್ಷೆಯು ಮುಗಿದ ಬಳಿಕವೂ ವ್ಯಕ್ತಿಯು ವೈರಸ್ ಜತೆಗೆ ಸಂಪರ್ಕಕ್ಕೆ ಬರುವ ಎಲ್ಲ ಸಾಧ್ಯತೆಗಳಿರುತ್ತವೆ. ಹೀಗಾಗಿ ಒಮ್ಮೆ ವೈರಸ್‌ಗೆ ಒಳಗಾದ ವ್ಯಕ್ತಿಯು ಅದರ ಹರಡುವಿಕೆಯನ್ನು ತಗ್ಗಿಸಲು ಗುಣಮುಖರಾದ ಕನಿಷ್ಠ ಒಂದು ವಾರಗಳವರೆಗಾದರೂ ಸ್ವಯಂ ಕ್ವಾರೆಂಟೈನ್‌ಗೆ ಒಳಗಾಗಬೇಕು ಎಂದು ಸಲಹೆ ನೀಡಿದ್ದಾರೆ.

ಎರಡು ದಿನ ಶಾಲೆಗೆ ಹೋದ 72 ವಿದ್ಯಾರ್ಥಿಗಳಿಗೆ ಕೊರೊನಾವೈರಸ್!ಎರಡು ದಿನ ಶಾಲೆಗೆ ಹೋದ 72 ವಿದ್ಯಾರ್ಥಿಗಳಿಗೆ ಕೊರೊನಾವೈರಸ್!

English summary
Experts warns people not to take part in gatherings when you gets Covid-19 negative reports as the test result may not be accurate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X