ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಸಾಕ್ಷ್ಯ: ಭಾರತದ ಮತ್ತೊಂದು ಗಡಿಯಲ್ಲಿ ಕಾಣಿಸಿಕೊಂಡ ಚೀನಾ ಸೇನೆ!

|
Google Oneindia Kannada News

ನವದೆಹಲಿ, ಮಾರ್ಚ್ 2: ಭಾರತ ಮತ್ತು ಚೀನಾದ ನಡುವಿನ ಗಡಿ ನಿಯಂತ್ರಣ ರೇಖೆ(ಎಲ್ಎಸಿ) ಬಳಿ ಚೀನಾ ಸೇನೆ ಮತ್ತು ಶಿಬಿರಗಳ ಚಿತ್ರ ಗೋಚರಿಸಿದೆ. ರಾತ್ರಿ ವೇಳೆಯಲ್ಲಿ ರೇಡಿಯೋ ತರಂಗಗಳಲ್ಲಿ ಚೀನಾದ ಶಾಶ್ವತ ಶಿಬಿರಗಳ ಬಗ್ಗೆ ಸಿಂಥೆಟಿಕ್ ಅಪರ್ಚರ್ ರಾಡಾರ್ (ಎಸ್‌ಎಆರ್) ಚಿತ್ರಗಳು ಲಭ್ಯವಾಗಿವೆ.

ಲಡಾಖ್‌ನಲ್ಲಿ ಭಾರತದ ಅತ್ಯುನ್ನತ ವಾಯುನೆಲೆಯಾದ ಡೌಲೆಟ್ ಬೇಗ್ ಓಲ್ಡಿ (ಡಿಬಿಒ) ಎದುರು ಸುಮಾರು 24 ಕಿ.ಮೀ ದೂರದಲ್ಲಿದೆ. ಪೀಪಲ್ಸ್ ಲಿಬರೇಷನ್ ಆರ್ಮಿಯ ಟಿಯಾನ್‌ವೆಂಡಿಯನ್ ಶಿಬಿರವು ಅಕ್ಸಾಯ್ ಚಿನ್‌ನಲ್ಲಿ ಇರುವ ಎಲ್ಲ ಋತುಮಾನದ ಶಿಬಿರವಾಗಿದೆ. ಈ ಶಿಬಿರವನ್ನು 1962ರ ಯುದ್ಧದ ನಂತರ ಸ್ಥಾಪಿಸಲಾಗಿದ್ದು, ಕಳೆದ ಕೆಲವು ವರ್ಷಗಳಿಂದ ಈಚೆಗೆ ನವೀಕರಣ ಮಾಡಲಾಗಿತ್ತು.

ಭಾರತದ ಗಡಿಗೆ ಹೊಸ ಕಮಾಂಡರ್ ನೇಮಿಸಿದ ಚೀನಾಭಾರತದ ಗಡಿಗೆ ಹೊಸ ಕಮಾಂಡರ್ ನೇಮಿಸಿದ ಚೀನಾ

ಇತ್ತೀಚಿಗೆ ಲಭ್ಯವಾಗಿರುವ ಚಿತ್ರಗಳು ಅದರ ಪ್ರಮುಖ ಕೇಂದ್ರ ಕಟ್ಟಡ ಹಾಗೂ ಆಗಸ್ಟ್ 2020 ರಿಂದ ಹೆಚ್ಚುವರಿಯಾದ ಸಹಾಯಕ ರಚನೆಗಳು, ಶಿಬಿರಗಳು, ವಾಹನಗಳು ಮತ್ತು ಫೆನ್ಸಿಂಗ್‌ಗಳನ್ನು ಸೂಚಿಸುತ್ತದೆ. ಈ ಕುರಿತು "ಇಂಡಿಯಾ ಟುಡೇ" ಚಿತ್ರ ಸಹಿತವಾಗಿ ಪ್ರಕಟಿಸಿರುವ ವಿಶೇಷ ಸುದ್ದಿ ಮತ್ತು ಅದರ ಕುರಿತಾದ ವರದಿಗಾಗಿ ಮುಂದೆ ಓದಿ.

 ಡೆಪ್ಸಾಂಗ್ ಗಡಿ ಪ್ರದೇಶದಲ್ಲಿ ಸೇನೆಗಳ ನಡುವೆ ಸಂಘರ್ಷ

ಡೆಪ್ಸಾಂಗ್ ಗಡಿ ಪ್ರದೇಶದಲ್ಲಿ ಸೇನೆಗಳ ನಡುವೆ ಸಂಘರ್ಷ

ಭಾರತೀಯ ಮತ್ತು ಚೀನಾದ ಪೂರ್ವ ಭಾಗದ ಲಡಾಖ್‌ನ ಗಾಲ್ವಾನ್ ಮತ್ತು ಪಾಂಗೊಂಗ್ ತ್ಸೊ ಪ್ರದೇಶದಿಂದ ಹಂತಹಂತವಾಗಿ ಎರಡೂ ಕಡೆಗಳಿಂದ ಪಡೆಗಳನ್ನು ಹಿಂತೆಗೆದುಕೊಳ್ಳುವುದರ ಮೂಲಕ ಸುದೀರ್ಘ ಅವಧಿಯ ಸಂಘರ್ಷ ಕೊನೆಗೊಳ್ಳುತ್ತಿದೆ. ಇದರ ಮಧ್ಯೆ ಲಡಾಖ್‌ನ ಡೆಪ್ಸಾಂಗ್ ಪ್ರದೇಶದಲ್ಲಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ದೀರ್ಘಕಾಲದ ಸಂಘರ್ಷ ಮುಂದುವರಿಯುತ್ತದೆ.

Video: ಗಲ್ವಾನ್ ಘರ್ಷಣೆ ಕುರಿತು ಚೀನಾದಿಂದ ವಿಡಿಯೋ ಬಿಡುಗಡೆVideo: ಗಲ್ವಾನ್ ಘರ್ಷಣೆ ಕುರಿತು ಚೀನಾದಿಂದ ವಿಡಿಯೋ ಬಿಡುಗಡೆ

 ಭಾರತದ ಹತ್ತಿರದ ಗಡಿಗಳಲ್ಲಿ ಚೀನಾ ಪಡೆ ವಾಹನ

ಭಾರತದ ಹತ್ತಿರದ ಗಡಿಗಳಲ್ಲಿ ಚೀನಾ ಪಡೆ ವಾಹನ

ಚೀನಾದ ಸೇನಾಪಡೆಗಳು ಮತ್ತು ಟ್ಯಾಂಕರ್ ಗಳನ್ನು ಭಾರತದ ಗಡಿ ಪ್ರದೇಗಳ ಹತ್ತಿರಕ್ಕೆ ತರುತ್ತಿರುವುದು ಗೋಚರಿಸಿದೆ. ಇತ್ತೀಚಿನ ಅಂದರೆ ಕಳೆದ ಫೆಬ್ರವರಿ 25ರ ರಾತ್ರಿ ಯುಎಸ್ ಮೂಲದ ಬಾಹ್ಯಾಕಾಶ ಸಂಸ್ಥೆ ಕ್ಯಾಪೆಲ್ಲಾ ಸ್ಪೇಸ್‌ನ ಎಸ್‌ಎಆರ್ ವಾಣಿಜ್ಯ ಉಪಗ್ರಹಗಳು ಹೈ-ರೆಸಲ್ಯೂಶನ್ ಚಿತ್ರಣವನ್ನು ಸೆರೆಹಿಡಿದಿದೆ. ಟಿಯಾನ್ವೆಂಡಿಯನ್ ಶಿಬಿರದಲ್ಲಿ ಪೀಪಲ್ಸ್ ಆಫ್ ಲಿಬರೇಷನ್ ಆರ್ಮಿಯು ತನ್ನ ವಾಯು ರಕ್ಷಣಾ ವ್ಯವಸ್ಥೆ, ಸಂಗ್ರಹಣೆ, ಹೆಚ್ಚುವರಿ ಆಶ್ರಯ ಮತ್ತು ಸೇನಾ ಬಲವರ್ಧನೆಗಾಗಿ ಈ ಪ್ರದೇಶದಲ್ಲಿ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ.

 ಗಲ್ವಾನ್ ಸಂಘರ್ಷದ ನಂತರದಲ್ಲಿ ಸೇನಾ ಶಿಬಿರ ರಚನೆ

ಗಲ್ವಾನ್ ಸಂಘರ್ಷದ ನಂತರದಲ್ಲಿ ಸೇನಾ ಶಿಬಿರ ರಚನೆ

ಭಾರತ ಮತ್ತು ಚೀನಾ ಪಡೆ ಯೋಧರ ನಡುವೆ ಗಾಲ್ವಾನ್ ನದಿ ಕಣಿವೆಯಲ್ಲಿ ನಡೆದ ಮುಖಾಮುಖಿ ಸಂಘರ್ಷದ ನಂತರದಲ್ಲಿ ಗಡಿ ಪ್ರದೇಶವು ಬೂದಿ ಮುಚ್ಚಿದ ಕೆಂಡದಂತೆ ಆಗಿತ್ತು. ತದನಂತರದಲ್ಲಿ ಕಳೆದ ಜುಲೈ ತಿಂಗಳಿನಲ್ಲಿ ಮೊದಲ ಬಾರಿಗೆ ಹೊಸ ಶಿಬಿರಗಳು ಮತ್ತು ಆಶ್ರಯ ತಾಣಗಳನ್ನು ಹೆಚ್ಚುವರಿಯಾಗಿ ನಿರ್ಮಾಣ ಮಾಡಿರುವುದು ಕಂಡು ಬಂದಿತ್ತು. ಶಿಬಿರದಲ್ಲಿ ಮುಖ್ಯವಾಗಿ ಎರಡು ಅಂತಸ್ತಿನ ಕಟ್ಟಡ ಮತ್ತು ಹಲವಾರು ತಾತ್ಕಾಲಿಕ ಶಿಬಿರಗಳು ಮತ್ತು ಆಶ್ರಯಗಳಿಂದ ಆವೃತವಾಗಿದ್ದು, ಹೊಸ ಕಟ್ಟಡಗಳು, ವೀಕ್ಷಣಾ ಶಿಬಿರಗಳು ಮತ್ತು ಗೋಪುರಗಳನ್ನು ಸಹ ಇತ್ತೀಚಿನ ಚಿತ್ರಗಳಲ್ಲಿ ಕಾಣಬಹುದು.

Video: ಲಡಾಖ್ ಗಡಿಯಲ್ಲಿ ಭಾರತೀಯ ಯೋಧರಿಗಾಗಿ ವಿಶೇಷ ಟೆಂಟ್!Video: ಲಡಾಖ್ ಗಡಿಯಲ್ಲಿ ಭಾರತೀಯ ಯೋಧರಿಗಾಗಿ ವಿಶೇಷ ಟೆಂಟ್!

 ಡೆಪ್ಸಾಂಗ್ ಪ್ರದೇಶದ ಮೇಲೆ ಲಕ್ಷ್ಯ ಕೇಂದ್ರೀಕರಿಸಿದ ಚೀನಾ

ಡೆಪ್ಸಾಂಗ್ ಪ್ರದೇಶದ ಮೇಲೆ ಲಕ್ಷ್ಯ ಕೇಂದ್ರೀಕರಿಸಿದ ಚೀನಾ

ಪ್ಯಾಂಗಾಂಗ್ ತ್ಸೋ ಸರೋವರದ ವಿಷಯ ಒಂದು ಹಂತಕ್ಕೆ ತಲುಪಿದ ನಂತರದಲ್ಲಿ ಚೀನಾದ ಗಮನ ಇದೀಗ ಡೆಪ್ಸಾಂಗ್ ಮೇಲೆ ನೆಟ್ಟಿದೆ. 2013ರಿಂದ ಮಾತುಕತೆ ಹಂತದಲ್ಲಿರುವ ಚೀನಾದಿಂದ 18 ಕಿಲೋ ಮೀಟರ್ ದೂರದಲ್ಲಿ ಇರುವ ಡೆಪ್ಸಾಂಗ್ ಬಯಲು ಪ್ರದೇಶದ ಮೇಲೆ ಲಕ್ಷ್ಯ ವಹಿಸಿದೆ. ಡೆಪ್ಸಾಂಗ್ ಬಯಲು ಪ್ರದೇಶ ಚೀನಾದ ಪಶ್ಚಿಮ ಹೆದ್ದಾರಿ ಜಿ219 ಗೆ ಹತ್ತಿರದಲ್ಲಿದೆ. ಶಿಯೋಕ್ ನದಿಯ ಉತ್ತರಕ್ಕೆ 16,000 ಅಡಿ ದೂರದಲ್ಲಿರುವ ಡೆಪ್ಸಾಂಗ್ ಭಾರತದ ಪಾಲಿಗೆ ಆಯಕಟ್ಟಿನ ಪ್ರದೇಶವಾಗಿದೆ. ಡೌಲೆಟ್ ಬೇಗ್ ಓಲ್ಡಿ ಮತ್ತು ಕರಕೋರಮ್ ಪಾಸ್ ನ ಉತ್ತರ ಭಾಗಕ್ಕೆ ಬರಲಿದೆ.

 ಗಸ್ತು ತಿರುಗುವುದಕ್ಕೆ ನಿರ್ಬಂಧ ಹೇರಿದ ಚೀನಾ

ಗಸ್ತು ತಿರುಗುವುದಕ್ಕೆ ನಿರ್ಬಂಧ ಹೇರಿದ ಚೀನಾ

ಡೆಪ್ಸಾಂಗ್ ಬಯಲು ಪ್ರದೇಶದಿಂದ ಪಶ್ಚಿಮದಲ್ಲಿ ಇರುವ ಸಿಯಾಚಿನ್ ಹಿಮನದಿ ಭಾರತೀಯ ನಿಯಂತ್ರಣದಲ್ಲಿದೆ. 2013 ರಲ್ಲಿ ಚೀನಿಯರು 18 ಕಿ.ಮೀ ಒಳಗೆ ನುಸುಳಿದ್ದರಿಂದ ವೈ ಜಂಕ್ಷನ್ ಪ್ರದೇಶದಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿಯು ಈ ಪ್ರದೇಶದಲ್ಲಿ ಭಾರತೀಯ ಪಡೆಯು ಗಸ್ತು ತಿರುಗುವುದಕ್ಕೆ ನಿರ್ಬಂಧಿಸಿದೆ. ಇದಲ್ಲದೇ, 10,11, 11 ಎ, 12 ಮತ್ತು 13 ರ ಪ್ರದೇಶಗಳಲ್ಲಿ ನಿಯಮಿತವಾಗಿ ಗಸ್ತು ತಿರುಗುವುದನ್ನು ನಿರ್ಬಂಧಿಸಲಾಗಿದೆ.

ಭಾರತದ ಮೇಲೆ ಚೀನಾ 'ವಿದ್ಯುತ್ ಯುದ್ಧ'!: ಆಘಾತಕಾರಿ ಸಂಗತಿ ಬಹಿರಂಗಭಾರತದ ಮೇಲೆ ಚೀನಾ 'ವಿದ್ಯುತ್ ಯುದ್ಧ'!: ಆಘಾತಕಾರಿ ಸಂಗತಿ ಬಹಿರಂಗ

English summary
Exclusive News: Night-Time Satellite Images Show Chinese Army Buildup In Depsang.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X