ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನ್‌ ಖಜಾನೆ ಹೊತ್ತು ಪಲಾಯನವಾದ ಅಧ್ಯಕ್ಷ ಅಬುಧಾಬಿಯಲ್ಲಿ

|
Google Oneindia Kannada News

ಕಾಬೂಲ್‌, ಆ.18: ತಾಲಿಬಾನ್‌ ಇನ್ನೇನು ಕಾಬೂಲ್‌ಗೂ ಕೂಡಾ ದಾಳಿ ಮಾಡಲಿದೆ ಎಂದು ತಿಳಿದ ಬೆನ್ನಲ್ಲೇ ದೇಶದ ಖಜಾನೆಯೊಂದಿಗೆ ಪರಾರಿಯಾದ ಮಾಜಿ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್‌ ಘನಿ ಈಗ ಯುನೈಟೆಡ್‌ ಅರಬ್‌ ಎಮಿರೆಟ್ಸ್‌ (ಯುಎಇ) ನಲ್ಲಿ ಇದ್ದಾರೆ ಎಂದು ಬುಧವಾರ ವರದಿಯೊಂದು ಉಲ್ಲೇಖ ಮಾಡಿದೆ.

Recommended Video

ಉಟ್ಟ ಬಟ್ಟೆಯಲ್ಲೇ ಹೊರಟ್ಮೇಲೆ ದುಡ್ಡೆಲ್ಲಿಂದ ತರೋಕಾಗುತ್ತೆ ಎಂದ ಅಶ್ರಫ್ | Oneindia Kannada

ಕಾಬೂಲ್‌ನ ಸುದ್ದಿ ಸಂಸ್ಥೆಯೊಂದು ಮಾಡಿದ ಸರಣಿ ಟ್ವೀಟ್‌ ಪ್ರಕಾರ, ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್‌ ಘನಿ ಕಾಬೂಲ್‌ನಿಂದ ಪಲಾಯನವಾಗಿ ಯುನೈಟೆಡ್‌ ಅರಬ್‌ ಎಮಿರೆಟ್ಸ್‌ (ಯುಎಇ) ನ ರಾಜಧಾನಿ ಅಬುಧಾಬಿಗೆ ಕಳೆದ ನಾಲ್ಕು ದಿನಗಳ ಹಿಂದೆ ತೆರಳಿದ್ದಾರೆ ಎಂದು ವರದಿ ಮಾಹಿತಿ ನೀಡಿದೆ.

'ಮೋಸಗಾರ, ಹೇಡಿ, ಮೂರ್ಖ..!'ಅಬ್ಬಬ್ಬಾ.. ಪ್ರಜೆಗಳ ಶಾಪ ಒಂದಾ.. ಎರಡಾ..?'ಮೋಸಗಾರ, ಹೇಡಿ, ಮೂರ್ಖ..!'ಅಬ್ಬಬ್ಬಾ.. ಪ್ರಜೆಗಳ ಶಾಪ ಒಂದಾ.. ಎರಡಾ..?

ಇದಕ್ಕೂ ಮುನ್ನ ಅಶ್ರಫ್‌ ಘನಿ ಅಫ್ಘಾನಿಸ್ತಾನದ ಸಮೀಪದ ದೇಶಗಳಾದ ತಜಕಿಸ್ತಾನ ಅಥವಾ ಉಜೇಕಿಸ್ತಾನಕ್ಕೆ ತೆರಳಿರಬಹುದು ಎಂದು ಊಹಿಸಲಾಗಿತ್ತು. ಹಾಗೆಯೇ ಹಲವಾರು ಮಾಧ್ಯಮಗಳು ಹೀಗೆಯೇ ವರದಿಯನ್ನು ಕೂಡಾ ಮಾಡಿದ್ದವು. ಆದರೆ ಈ ಎರಡೂ ದೇಶಗಳಿಂದ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ. ಈ ನಡುವೆ ಅಫ್ಘಾನ್‌ ಮಾಜಿ ಅಧ್ಯಕ್ಷ ಸಂಪತ್ತನ್ನು ತುಂಬಿ ಅಬುಧಾಬಿಗೆ ಪಲಾಯನವಾಗಿದ್ದಾರೆ ಎಂದು ವರದಿಯಾಗಿದೆ.

 ಸಂಪತ್ತು ಹೊತ್ತು ಅಶ್ರಫ್‌ ಘನಿ ಹೋದದ್ದು ಎಲ್ಲಿಗೆ?

ಸಂಪತ್ತು ಹೊತ್ತು ಅಶ್ರಫ್‌ ಘನಿ ಹೋದದ್ದು ಎಲ್ಲಿಗೆ?

ಕಾಬೂಲ್‌ ತಾಲಿಬಾನ್‌ಗೆ ಶರಣಾಗುತ್ತಿದ್ದಂತೆ ಅಧ್ಯಕ್ಷ ಅಶ್ರಫ್‌ ಘನಿ ತನ್ನ ಅಧಿಕಾರಿಗಳೊಂದಿಗೆ ಅಫ್ಘಾನಿಸ್ತಾನದಿಂದ ಆಗಸ್ಟ್‌ 15 ಪಲಾಯನವಾಗಿದ್ದಾರೆ. ಕಾಬೂಲ್‌ ನ್ಯೂಸ್‌ನ ಇತ್ತೀಚಿಗಿನ ವರದಿಯ ಪ್ರಕಾರ, ಹೆಲಿಕಾಪ್ಟರ್‌ ತುಂಬ ಹಣವನ್ನು ತುಂಬಿ ಕಾಬೂಲ್‌ ಅನ್ನು ತೊರೆದ ಅಶ್ರಫ್‌ ಘನಿ ಅಬುಧಾಬಿಯಲ್ಲಿ ಈಗ ನೆಲೆಸಿದ್ದಾರೆ. ಸೋಮವಾರ ಕಾಬೂಲ್‌ನ ರಷ್ಯನ್‌ ರಾಯಭಾರಿಯು ಕೂಡಾ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್‌ ಘನಿ ನಾಲ್ಕು ಕಾರು ಹಾಗೂ ಒಂದು ಹೆಲಿಕಾಪ್ಟರ್‌ ತುಂಬಾ ಹಣವನ್ನು ತುಂಬಿ ಕಾಬೂಲ್‌ನಿಂದ ಪರಾರಿಯಾಗಿದ್ದಾರೆ ಎಂದು ವರದಿ ಮಾಡಿತ್ತು.

 ಸಂಪತ್ತು ಹೊತ್ತು ಹೋದ ಘನಿ ವಿರುದ್ದ ಕಿಡಿ

ಸಂಪತ್ತು ಹೊತ್ತು ಹೋದ ಘನಿ ವಿರುದ್ದ ಕಿಡಿ

ಯುಎಸ್‌ನ ಮಾಧ್ಯಮ ವರದಿಯು ರಾಯಭಾರಿ ನಿಖಿತ ಇಶ್ಚೆಂಕ್ ಹೇಳಿಕೆಯನ್ನು ವರದಿ ಮಾಡಿತ್ತು. ಈ ಅಫ್ಘಾನಿಸ್ತಾನ ಪ್ರಾಂತ್ಯದ ಅಳಿವು ಹೇಗೆ ನಿರ್ಧರಿತವಾಗಿದೆ ಎಂದು ಅಧ್ಯಕ್ಷ ಅಶ್ರಫ್‌ ಘನಿ ಅಫ್ಘಾನಿಸ್ತಾನದಿಂದ ಪಲಾಯನವಾದ ರೀತಿಯನ್ನು ನೋಡಿ ನಿರ್ಧಾರ ಮಾಡಬಹುದು. ನಾಲ್ಕು ಕಾರುಗಳ ತುಂಬಾ ಹಣವನ್ನು ತುಂಬಿ ಅಶ್ರಫ್‌ ಘನಿ ಪರಾರಿಯಾಗಿದ್ದಾರೆ. ಹಾಗೆಯೇ ಹೆಲಿಕಾಪ್ಟರ್‌ನಲ್ಲಿ ಹಣವನ್ನು ತುಂಬಿ ಹೋಗುವ ಯತ್ನವನ್ನು ಮಾಡಿದ್ದಾರೆ. ಆದರೆ ಎಲ್ಲಾ ಹಣವೂ ತುಂಬಿಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ ಸ್ವಲ್ಪ ಹಣವು ಡಾಂಬರು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಹರಡಿತ್ತು," ಎಂದು ಹೇಳಿದ್ದಾರೆ. ಅಶ್ರಫ್‌ ಘನಿ ಪಲಾಯನವಾದ ಬಳಿಕ ರಕ್ಷಣಾ ಸಚಿವ ಬಿಸ್ಮಿಲ್ಲಾ ಮೊಹಮ್ಮದಿ ಟ್ವೀಟ್‌ ಮೂಲಕ ಅಶ್ರಫ್‌ ಘನಿ ವಿರುದ್ದ ವಾಗ್ದಾಳಿ ನಡೆಸಿದ್ದರು. "ನಮ್ಮ ಬೆನ್ನ ಹಿಂದೆ ಅವರು ತಮ್ಮ ಕೈ ಚಳಕ ತೋರಿಸಿದರು, ಈ ದೇಶವನ್ನು ಮಾರಾಟ ಮಾಡಿದರು," ಎಂದು ಹೇಳಿ ಆ ಶ್ರೀಮಂತ ಮನುಷ್ಯ ಹಾಗೂ ಆತನ ಗ್ಯಾಂಗ್‌ಗೆ ಒಳೆಯದಾಗದು ಎಂದು ಅಶ್ರಫ್‌ ಘನಿ ಹಾಗೂ ಆತನ ಅಧಿಕಾರಿಗಳಿಗೆ ಶಾಪ ಹಾಕಿದ್ದರು.

ತಾಲಿಬಾನ್‌ 'ಗುಲಾಮಗಿರಿಯ ಸಂಕೋಲೆಗಳನ್ನು ಮುರಿದಿದೆ' ಎಂದ ಪಾಕ್‌ ಪ್ರಧಾನಿ!ತಾಲಿಬಾನ್‌ 'ಗುಲಾಮಗಿರಿಯ ಸಂಕೋಲೆಗಳನ್ನು ಮುರಿದಿದೆ' ಎಂದ ಪಾಕ್‌ ಪ್ರಧಾನಿ!

 ಪಲಾಯನದ ಬಳಿಕ ಅಶ್ರಫ್‌ ಹೇಳಿದ್ದೇನು?

ಪಲಾಯನದ ಬಳಿಕ ಅಶ್ರಫ್‌ ಹೇಳಿದ್ದೇನು?

ಅಫ್ಘಾನ್‌ ಅಧ್ಯಕ್ಷ ಅಶ್ರಫ್‌ ಘನಿ ತನ್ನ ದೇಶವನ್ನು ತೊರೆದು ಪಲಾಯನವಾದ ಬಳಿಕ ತನ್ನ ಮೊದಲ ಹೇಳಿಕೆಯನ್ನು ತನ್ನ ಈ ಪಲಾಯನವನ್ನು ಸಮರ್ಥಿಸಿಕೊಂಡಿದ್ದಾರೆ. ನನಗೆ ಬೇರೆ ಯಾವುದೇ ಆಯ್ಕೆ ಇರಲಿಲ್ಲ ಎಂದು ಬೇರೆ ಅಶ್ರಫ್‌ ಘನಿ ಹೇಳಿಕೊಂಡಿದ್ದಾರೆ. ತಜಕಿಸ್ತಾನದಲ್ಲಿ ಇರುವುದಾಗಿ ಪಿನ್‌ ಮಾಡಲಾದ ಫೇಸ್‌ ಬುಕ್‌ ಫೋಸ್ಟ್‌ನಲ್ಲಿ ಬರೆದ 72 ವರ್ಷದ ಅಶ್ರಫ್‌ ಘನಿ, ತಾನು ಅಫ್ಘಾನಿಸ್ತಾನಕ್ಕಾಗಿ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇನೆ ಹಾಗೂ ದೇಶದ ಅಭಿವೃದ್ದಿಗಾಗಿ ರೂಪಿಸಲಾದ ಯೋಜನೆಗಳಿಗೆ ಕೊಡುಗೆ ನೀಡುವುದಾಗಿ ಹೇಳಿದ್ದರು.

ಜೀವ ಭಯದಲ್ಲಿ ದೇಶಬಿಟ್ಟು ಅಧ್ಯಕ್ಷನೇ ಎಸ್ಕೇಪ್! ಅರಮನೆ ತಾಲಿಬಾನ್ ಪಾಲು!ಜೀವ ಭಯದಲ್ಲಿ ದೇಶಬಿಟ್ಟು ಅಧ್ಯಕ್ಷನೇ ಎಸ್ಕೇಪ್! ಅರಮನೆ ತಾಲಿಬಾನ್ ಪಾಲು!

"ತಾಲಿಬಾನ್ ಒಂದು ಹಂತಕ್ಕೆ ನನ್ನನ್ನು ತೆಗೆದುಹಾಕುವಂತೆ ಮಾಡಿತು. ತಾಲಿಬಾನ್ ಇಲ್ಲಿ ಎಲ್ಲಾ ಕಾಬೂಲ್‌ ಜನರ ಮೇಲೆ ದಾಳಿ ಮಾಡಲು ಬಂದಿದ್ದಾರೆ. ಈ ದಾಳಿಯಿಂದಾಗಿ ಉಂಟಾಗುವ ರಕ್ತದ ಹೊಳೆಯನ್ನು ತಪ್ಪಿಸಲು ನಾನು ಕಾಬೂಲ್‌ ತೊರದು ಬರುವುದೇ ಉತ್ತಮ ಎಂದು ನಾನು ಭಾವಿಸಿದೆ," ಎಂದು ಅಶ್ರಫ್‌ ಘನಿ ಹೇಳಿಕೊಂಡಿದ್ದಾರೆ.

 ಹಂಗಾಮಿ ಅಧ್ಯಕ್ಷ

ಹಂಗಾಮಿ ಅಧ್ಯಕ್ಷ

ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್‌ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್‌ ಘನಿ ಪಲಾಯನವಾದ ಬಳಿಕ ಅಫ್ಘಾನಿಸ್ತಾನದ 'ಕಾನೂನುಬದ್ಧ ಉಸ್ತುವಾರಿ ಅಧ್ಯಕ್ಷ' ಎಂದು ತಮ್ಮ ಹಕ್ಕು ಚಲಾಯಿಸಲು ಮುಂದೆ ಬಂದರು. ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್‌ ಸಂವಿಧಾನದಲ್ಲಿ ಉಲ್ಲೇಖ ಮಾಡಲಾಗಿರುವ ಅಂಶಗಳನ್ನು ಉಲ್ಲೇಖ ಮಾಡಿ, ಸೇವೆ ಸಲ್ಲಿಸುತ್ತಿರುವ ಅಧ್ಯಕ್ಷರ ಅನುಪಸ್ಥಿತಿ, ತಪ್ಪಿಸಿಕೊಳ್ಳುವಿಕೆ, ರಾಜೀನಾಮೆ ಅಥವಾ ಸಾವಿನ ಸಂದರ್ಭದಲ್ಲಿ, ಉಪಾಧ್ಯಕ್ಷರು ಹಂಗಾಮಿ ಅಧ್ಯಕ್ಷರಾಗುತ್ತಾರೆ ಎಂದು ಹೇಳಿದ್ದರು. ಹಾಗೆಯೇ "ನಾನು ಪ್ರಸ್ತುತ ನನ್ನ ದೇಶದೊಳಗಿದ್ದೇನೆ ಮತ್ತು ನಾನು ಕಾನೂನುಬದ್ಧ ಉಸ್ತುವಾರಿ ಅಧ್ಯಕ್ಷನಾಗಿದ್ದೇನೆ," ಎಂದು ಕೂಡಾ ಅಫ್ಘಾನ್‌ನ ಉಪಾಧ್ಯಕ್ಷ ಅಮರುಲ್ಲಾ ಸಲೇಹ್‌ ಹೇಳಿಕೊಂಡಿದ್ದರು.

(ಒನ್‌ಇಂಡಿಯಾ ಸುದ್ದಿ)

English summary
Afghanistan Crisis: Ex-Afghan President Ashraf Ghani Settles In Abu Dhabi After Fleeing Kabul says report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X