ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈ ಮರೆತವರು ಮಸಣಕ್ಕೆ: 44 ಸೆಕೆಂಡಿಗೆ ಒಬ್ಬರು ಪ್ರಾಣ ಬಿಡುತ್ತಿರುವುದು ಏಕೆ!?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 8: ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಇಳಿಮುಖವಾಗುತ್ತಿದೆ. ಹಾಗೆಂದ ಮಾತ್ರಕ್ಕೆ ಸಾಂಕ್ರಾಮಿಕ ಪಿಡುಗು ಅಂತ್ಯವಾಯಿತು ಅಂತಾ ಯಾರೊಬ್ಬರೂ ಭಾವಿಸುವಂತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದೆ.

ಜಾಗತಿಕ ಮಟ್ಟದಲ್ಲಿ ಕೊವಿಡ್-19 ಸೋಂಕಿನಿಂದಲೂ ಪ್ರತಿ 44 ಸೆಕೆಂಡಿಗೆ ಒಬ್ಬರಂತೆ ಜನರು ಸಾವಿನ ಮನೆ ಸೇರುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ನೀಡಿದ ವಾರದ ಬುಲೆಟಿನ್ ನಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ ಸಾರ್ವಜನಿಕರಿಗೆ ಕೊರೊನಾವೈರಸ್ ಬಗ್ಗೆ ಎಚ್ಚರಿಕೆಯನ್ನೂ ನೀಡಲಾಗಿದೆ.

ಭಾರತದಲ್ಲಿ ಅತಿಹೆಚ್ಚು ಬಳಕೆಯಾಗವು ಪ್ರತಿರೋಧಕ ಮಾತ್ರೆ ಯಾವುದು?ಭಾರತದಲ್ಲಿ ಅತಿಹೆಚ್ಚು ಬಳಕೆಯಾಗವು ಪ್ರತಿರೋಧಕ ಮಾತ್ರೆ ಯಾವುದು?

ಕಳೆದೊಂದು ವಾರದಲ್ಲಿ ಜಗತ್ತಿನಾದ್ಯಂತ 42 ಲಕ್ಷ ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಖಾತ್ರಿಯಾಗಿದೆ. ಅದೇ ರೀತಿ 13700 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಈ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಶೇ.05ರಷ್ಟು ಇಳಿಕೆಯಾಗಿದ್ದು, ಇದನ್ನೇ ಅಂತಿಮ ಎಂದು ತಿಳಿದುಕೊಳ್ಳುವಂತಿಲ್ಲ ಅಂತಾ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್ ತಿಳಿಸಿದ್ದಾರೆ.

ಕೋವಿಡ್-19 ಸಾವಿನ ಸಂಖ್ಯೆ ಕುಸಿದರೂ ಅಪಾಯ!

ಕೋವಿಡ್-19 ಸಾವಿನ ಸಂಖ್ಯೆ ಕುಸಿದರೂ ಅಪಾಯ!

ಕೊರೊನಾವೈರಸ್ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯು ನಿರಂತರವಾಗಿ ಇಳಿಮುಖವಾಗುತ್ತಿದೆ. ಅದಾಗ್ಯೂ, ಕೋವಿಡ್-19 ಬಗ್ಗೆ ಅಪಾಯ ತಪ್ಪಿದ್ದಲ್ಲ ಎಂದು ಟೆಡ್ರೂಸ್ ಅಧಾನೊಮ್ ಗೆಬ್ರೆಯೆಸಸ್ ಹೇಳಿದ್ದಾರೆ. ಫೆಬ್ರವರಿ ತಿಂಗಳಿನಿಂದ ಇಂದಿನವರೆಗೂ ವಾರದ ಅಂಕಿ-ಅಂಶಗಳನ್ನು ವಿಶ್ಲೇಷಿಸಿದರೆ, ಶೇ.80ರಷ್ಟು ಸಾವಿನ ಪ್ರಮಾಣವು ಕಡಿಮೆಯಾಗಿದೆ. ಆದರೂ ಸಹ ಪ್ರತಿ 44 ಸೆಕೆಂಡಿಗೆ ಒಬ್ಬರು ಕೊರೊನಾವೈರಸ್ ಸೋಂಕಿನಿಂದಲೇ ಪ್ರಾಣ ಬಿಡುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.

ಕೊರೊನಾ ಸಾವಿನ ಪ್ರಮಾಣ ಎಲ್ಲಿ ಕಡಿಮೆ, ಎಲ್ಲಿ ಹೆಚ್ಚು?

ಕೊರೊನಾ ಸಾವಿನ ಪ್ರಮಾಣ ಎಲ್ಲಿ ಕಡಿಮೆ, ಎಲ್ಲಿ ಹೆಚ್ಚು?

ವಿಶ್ವ ಆರೋಗ್ಯ ಸಂಸ್ಥೆಯು ನೀಡಿರುವ ತನ್ನ ಸಾಂಕ್ರಾಮಿಕ ವರದಿಯಲ್ಲಿ, ಆಗ್ನೇಯ ಏಷ್ಯಾ, ಯುರೋಪ್ ಮತ್ತು ಮಧ್ಯಪ್ರಾಚ್ಯದಲ್ಲಿ COVID-19 ಸಾವಿನ ಸಂಖ್ಯೆಯು ಕಡಿಮೆಯಾಗಿದೆ. ಆದರೆ ಆಫ್ರಿಕಾ, ಅಮೆರಿಕಗಳು ಮತ್ತು ಪಶ್ಚಿಮ ಪೆಸಿಫಿಕ್‌ನಲ್ಲಿ ಹೆಚ್ಚಾಗಿದೆ ಎಂದು ಹೇಳಿದೆ. "ಕೊರೊನಾವೈರಸ್ ಇನ್ನೂ ಮುಕ್ತಾಯವಾಗಿಲ್ಲ. ರೋಗಾಣು ಇನ್ನೂ ಕಾಲೇಚಿತ ಮಾದರಿಯಲ್ಲಿ ನೆಲೆಗೊಂಡಿಲ್ಲ. ಅಲ್ಲದೇ ಅದು ವಿಕಸನಗೊಳ್ಳುವ ಅಪಾಯವಿದ್ದು, ಅದಕ್ಕಾಗಿಯೇ ನಿರಂತರ ಕಣ್ಗಾವಲು ಇಡುವ ಅಗತ್ಯವಿದೆ. ಈ ರೋಗ ನಿರ್ಣಯ ಮತ್ತು ಚಿಕಿತ್ಸೆ ಹಾಗೂ ಲಸಿಕೆಗೆ ಸಂಬಂಧಿಸಿದಂತೆ ಎಲ್ಲ ರೀತಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ," ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ಸಮಿತಿಯ ಪ್ರಮುಖ ಮಾರಿಯಾ ವ್ಯಾನ್ ಕೆರ್ಖೋವ್ ತಿಳಿಸಿದ್ದಾರೆ.

ವಿಶ್ವದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಎಷ್ಟಿದೆ?

ವಿಶ್ವದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಎಷ್ಟಿದೆ?

ಪ್ರಪಂಚದಲ್ಲಿ ಇದುವರೆಗೂ 612,233,872 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಖಾತ್ರಿಯಾಗಿದೆ. ಅದೇ ರೀತಿ 6,510,251 ಜನರು ಕೋವಿಡ್-19 ಸೋಂಕಿನಿಂದ ಸಾವಿನ ಮನೆ ಸೇರಿದ್ದಾರೆ ಎಂಬುದು ದೃಢಪಟ್ಟಿದೆ. ಕೊರೊನಾ ವೈರಸ್ ರೋಗಕ್ಕೆ ಚಿಕಿತ್ಸೆ ಪಡೆದುಕೊಂಡು 590,053,796 ಮಂದಿ ಗುಣಮುಖರಾಗಿದ್ದಾರೆ. ಇದರ ಹೊರತಾಗಿ ಇನ್ನೂ 15,669,825 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂಬುದು ಜಾಗತಿಕ ಅಂಕಿ-ಅಂಶಗಳಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಅಂಕಿ-ಅಂಶಗಳೇ ವಿಶ್ವ ಆರೋಗ್ಯ ಸಂಸ್ಥೆಯ ಆತಂಕಕ್ಕೂ ಕಾರಣವಾಗಿವೆ.

ಮಂಕಿಪಾಕ್ಸ್ ಸೋಂಕಿನ ಬಗ್ಗೆ ಮೈ ಮರೆಯದಿರಿ

ಮಂಕಿಪಾಕ್ಸ್ ಸೋಂಕಿನ ಬಗ್ಗೆ ಮೈ ಮರೆಯದಿರಿ

"ಅಮೆರಿಕದಲ್ಲಿನ ಕೆಲವು ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಈ ರೋಗ ಮತ್ತು ಸೋಂಕಿನ ಲಕ್ಷಣ ಹಾಗೂ ತಪಾಸಣೆಯ ಕೊರತೆಯಿಂದ ಸೋಂಕಿನ ಅಧಿಕೃತ ಅಂಕಿ-ಸಂಖ್ಯೆಗಳು ಲಭ್ಯವಾಗುತ್ತಿಲ್ಲ. ಈಗ ಯುರೋಪ್‌ನಲ್ಲಿ ಮಂಕಿಪಾಕ್ಸ್‌ನ ಸಂಖ್ಯೆಯು ಇಳಿಮುಖ ಆಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕಳೆದ ವಾರ ಅಮೆರಿಕದಿಂದ ವರದಿಯಾದ ಪ್ರಕರಣಗಳು ಸಹ ನಿರಾಕರಿಸಿದರೂ, ಆ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗದ ಬಗ್ಗೆ ದೃಢವಾದ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಕಷ್ಟ," ಎಂದು WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್ ಹೇಳಿದ್ದಾರೆ.

English summary
Every 44 Seconds One Person Dying Due To COVID; Monkeypox Cases also be Most Dangerous, says World Health Organisation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X