ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ಪೂರೈಕೆಗೆ ಮುಂದಾದ ಐರೋಪ್ಯ ಒಕ್ಕೂಟ; ಭೂತಾನ್‌ಗೆ ನಿರಾಳ

|
Google Oneindia Kannada News

ಭೂತಾನ್, ಜುಲೈ 02: ಭೂತಾನ್‌ ಕೊರೊನಾ ಲಸಿಕಾ ಕಾರ್ಯಕ್ರಮ ಪೂರ್ಣಗೊಳ್ಳುವ ಗಡುವು ಸಮೀಪಿಸುತ್ತಿದ್ದು, ಐರೋಪ್ಯ ಒಕ್ಕೂಟವು, ಭೂತಾನ್‌ಗೆ ಅಗತ್ಯವಿರುವ ಆಸ್ಟ್ರಾಜೆನೆಕಾ ಲಸಿಕೆಯ ಅರ್ಧ ಮಿಲಿಯನ್ ಡೋಸ್‌ಗಳನ್ನು ಪೂರೈಸಲು ಮುಂದಾಗಿದೆ.

ಭೂತಾನ್‌ನಲ್ಲಿ ಮೊದಲ ಸುತ್ತಿನ ಕೊರೊನಾ ಲಸಿಕೆ ಅಭಿಯಾನಕ್ಕೆ ಸಾಕಷ್ಟು ಲಸಿಕೆಗಳನ್ನು ಭಾರತ ಒದಗಿಸಿತ್ತು. ಆದರೆ ಏಪ್ರಿಲ್ ತಿಂಗಳಿನಲ್ಲಿ ದೇಶದಲ್ಲಿ ಸೋಂಕು ಉಲ್ಬಣವಾದ ನಂತರ ಮುಂದಿನ ಹಂತದ ಲಸಿಕೆಗಳನ್ನು ರಫ್ತು ಮಾಡಲು ವಿಫಲವಾಯಿತು. ನಂತರ ಲಸಿಕಾ ಮೈತ್ರಿ ಕಾರ್ಯಕ್ರಮ ಸ್ಥಗಿತಗೊಂಡಿತ್ತು. ಇದೀಗ ಐರೋಪ್ಯ ಒಕ್ಕೂಟ ಲಸಿಕೆ ಪೂರೈಕೆ ಮಾಡುವುದಾಗಿ ತಿಳಿಸಿದ್ದು, ಎರಡನೇ ಸುತ್ತಿನ ಲಸಿಕಾ ಕಾರ್ಯಕ್ರಮಕ್ಕೆ ಅನುವು ಮಾಡಿಕೊಡಲಿದೆ.

ಜಾಗತಿಕ ಕೊರಾನಾನೈರಸ್ ಲಸಿಕೆ ಹಂಚಿಕೆ: ಅಮೆರಿಕಾ ಕೊಟ್ಟಿದ್ದೆಷ್ಟು, ಭಾರತಕ್ಕೆ ದಕ್ಕಿದ್ದೆಷ್ಟು? ಜಾಗತಿಕ ಕೊರಾನಾನೈರಸ್ ಲಸಿಕೆ ಹಂಚಿಕೆ: ಅಮೆರಿಕಾ ಕೊಟ್ಟಿದ್ದೆಷ್ಟು, ಭಾರತಕ್ಕೆ ದಕ್ಕಿದ್ದೆಷ್ಟು?

ಐರೋಪ್ಯ ಒಕ್ಕೂಟಗಳು ನಾಗರಿಕ ಸಂರಕ್ಷಣಾ ಕಾರ್ಯವಿಧಾನದ ಮೂಲಕ ಲಸಿಕೆ ಪೂರೈಕೆ ಮಾಡುತ್ತಿವೆ. ಮುಂದಿನ ದಿನಗಳಲ್ಲಿ ಲಸಿಕೆ ಪೂರೈಕೆ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನಿಡಿದ್ದಾರೆ.

European Union Likely To Offer Corona Vaccines To Bhutan

ಐರೋಪ್ಯ ಒಕ್ಕೂಟವು ತನ್ನ ಸದಸ್ಯ ರಾಷ್ಟ್ರಗಳಿಂದ ಲಸಿಕೆ ಸರಬರಾಜು ಪೂರೈಕೆಗೆ ಒಪ್ಪಂದ ಮಾಡಿಕೊಂಡಿದ್ದು, ಹೆಚ್ಚುವರಿ ಆಸ್ಟ್ರಾಜನೆಕಾ ಲಸಿಕೆಗಳನ್ನು ಭೂತಾನ್‌ಗೆ ರಫ್ತು ಮಾಡಲು ಈ ಒಪ್ಪಂದ ಅನುವು ಮಾಡಿಕೊಡಲಿದೆ.

ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವು 16 ವಾರಗಳು ಆಗಿದ್ದು, ಭೂತಾನ್‌ನಲ್ಲಿ ಜುಲೈ ಮಧ್ಯದಲ್ಲಿ ಈ ಅವಧಿ ಮುಗಿಯಲಿದೆ. ಇದಲ್ಲದೇ ಹಲವು ಪ್ರದೇಶಗಳಿಗೆ ಲಸಿಕೆ ತಲುಪಲು 10-11 ದಿನಗಳು ಹಿಡಿಯುತ್ತವೆ.

ಈ ವಿಷಯದಲ್ಲಿ ಭಾರತದ ನೆರವನ್ನು ಸ್ಮರಿಸಿರುವ ಭೂತಾನ್, "ಒಳ್ಳೆಯ ಸ್ನೇಹಿತನಂತೆ ಭಾರತ ನಮಗೆ ತುಂಬಾ ಸಹಾಯ ಮಾಡಿದೆ. ಮುಂದಿನ ವಾರದೊಳಗೆ ಐರೋಪ್ಯ ಒಕ್ಕೂಟದಿಂದ ಲಸಿಕೆಗಳು ದೊರೆಯುವ ನಿರೀಕ್ಷೆಯಿದೆ" ಎಂದು ತಿಳಿಸಿದೆ.

English summary
European union likely to offer corona vaccines to bhutan to complete its second round of inoculation,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X