ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುರೋಪಿಯನ್ ಒಕ್ಕೂಟದಿಂದ ಅಫ್ಘಾನಿಸ್ತಾನಕ್ಕೆ ಆರ್ಥಿಕ ನೆರವು ಘೋಷಣೆ

|
Google Oneindia Kannada News

ರೋಮ್, ಅಕ್ಟೋಬರ್ 14: ಆರ್ಥಿಕ ಸಂಕಷ್ಟದಲ್ಲಿರುವ ಅಫ್ಘಾನಿಸ್ತಾನಕ್ಕೆ ಯುರೋಪಿಯನ್ ಒಕ್ಕೂಟವು ಮಾನವೀಯ ನೆಲೆ ಮೇಲೆ 1 ಬಿಲಿಯನ್ ಯೂರೋ ನೆರವು ನೀಡಲು ನಿರ್ಧರಿಸಿದೆ.

ಜಿ20 ದೇಶಗಳ ಸಭೆ ಆಯೋಜಿಸಿದ್ದ ಇಟಲಿ ಪ್ರಧಾನಿ ಮಾರಿಯೋ ಡ್ರಾಗಿ, ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ಕೇವಲ 5 ದಿನಗಳಲ್ಲಿ ಜಿ-20 ನಾಯಕರ ಸಭೆ ಕರೆಯಬೇಕೆಂದು ಒತ್ತಾಯಿಸುತ್ತಿದ್ದರು.

 'ಕಾಬೂಲ್‌ ಹೋಟೆಲ್‌ನಿಂದ ತಕ್ಷಣ ಹೊರಡಿ'; ತನ್ನ ನಾಗರಿಕರಿಗೆ ಯುಎಸ್‌, ಯುಕೆ ಎಚ್ಚರಿಕೆ 'ಕಾಬೂಲ್‌ ಹೋಟೆಲ್‌ನಿಂದ ತಕ್ಷಣ ಹೊರಡಿ'; ತನ್ನ ನಾಗರಿಕರಿಗೆ ಯುಎಸ್‌, ಯುಕೆ ಎಚ್ಚರಿಕೆ

ಅಫ್ಘನ್‌ ನೆರವು ಕಲ್ಪಿಸವಲ್ಲಿ ಜಿ-20 ರಾಷ್ಟ್ರಗಳು ಗುರುತರ ಜವಾಬ್ದಾರಿ ಹೊಂದಿವೆ. ಈ ತುರ್ತು ಪರಿಸ್ಥಿತಿಯಲ್ಲಿ ಅಫ್ಘನ್ ಜನರಿಗೆ ನಾವು ನೆರವಾಗಬೇಕಿದೆ ಎಂದು ಡ್ರಾಗಿ ಹೇಳಿದ್ದಾರೆ.

European Union Announces 1-Billion Euro Aid Package For Afghanistan

ನಡೆದ ಜಿ20 ದೇಶಗಳ ಮುಖ್ಯಸ್ಥರು/ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಿದ್ದ ಸಭೆಯಲ್ಲಿ ಅಫ್ಘಾನಿಸ್ತಾನದ ಪುನಶ್ಚೇತನಕ್ಕೆ ಐರೋಪ್ಯ ಒಕ್ಕೂಟ ಸುಮಾರು 1.2 ಬಿಲಿಯನ್ ಯೂರೋ ನೆರವು ನೀಡಲು ಮುಂದಾಗಿದೆ.

ಇಟಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ , ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು, ಚೀನಾ ಪ್ರಧಾನಿ ಕ್ಸಿ ಜಿನ್‌ಪಿಂಗ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರತಿನಿಧಿಗಳನ್ನು ಕಳುಹಿಸಿದ್ದರು.

20 ವರ್ಷಗಳ ದೀರ್ಘ ಸಂಘರ್ಷದ ಬಳಿಕ ಅಮೆರಿಕ ನೇತೃತ್ವದ ಮೈತ್ರಿ ಪಡೆಗಳು ಅಫ್ಘಾನಿಸ್ತಾನದಿಂದ ಹಿಂದೆ ಸರಿದ ಬಳಿಕ ಅಧಿಕಾರಕ್ಕೇರಿದ ತಾಲಿಬಾನಿಗಳು ಅಂತಾರಾಷ್ಟ್ರೀಯ ಮಾನ್ಯತೆ ಬಯಸುತ್ತಿವೆ. ಹಾಗೂ ಮಾನವೀಯ ಸುರಂತಗಳಿಂದ ಪಾರಾಗಲು ಆರ್ಥಿಕ ನೆರವನ್ನು ಕೋರುತ್ತಿದೆ.

ಇದಕ್ಕೂ ಮುನ್ನ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೋ ಗುಟೆರಸ್ ಬರಗಾಲ ಹಾಗೂ ಬಡತನದಿಂದ ತತ್ತರಿಸಿರುವ ಅಫ್ಘಾನಿಸ್ತಾನಕ್ಕೆ ಉದಾರವಾಗಿ ದೇಣಿಗೆಯನ್ನು ನೀಡುವಂತೆ ಅವರು ಜಗತ್ತಿನಾದ್ಯಂತ ರಾಷ್ಟ್ರಗಳಿಗೆ ಕರೆ ನೀಡಿದ್ದರು.

ಇದೇ ವೇಳೆ ಅವರು ತಾಲಿಬಾನ್ ಆಡಳಿತವು ಅಫ್ಘಾನ್ ಮಹಿಳೆಯರು ಹಾಗೂ ಹಕ್ಕುಗಳನ್ನು ರಕ್ಷಿಸುವ ಬಗ್ಗೆ ನೀಡಿರುವ ಭರವಸೆಯನ್ನು ಮುರಿದಿದೆಯೆಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಅಫ್ಘನ್ನರಿಗೆ ನೆರವಾಗಿ ಬೆಂಬಲ ನೀಡಲು ಹಾಗೂ ಅಫ್ಘಾನಿಸ್ತಾನದಲ್ಲಿ ಮಾನವೀಯ ನೆರವಿನ ಕಾರ್ಯಾಚರಣೆಯಲ್ಲಿ ತೊಡಗಿರುವ ಅಂತಾರಾಷ್ಟ್ರೀಯ ಸಂಘಟನೆಗಳಿಗಾಗಿ ನೀಡಲಾಗುತ್ತಿದೆಯೇ ಹೊರತು ತಾಲಿಬಾನ್ ಮಧ್ಯಂತರ ಸರ್ಕಾರಕ್ಕಲ್ಲವೆಂದು ಡೆರ್‌ಲಿಯೆನ್ ಸ್ಪಷ್ಟಪಡಿಸಿದರು. ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ನೀಡಲು ಯುರೋಪ್ ಒಕ್ಕೂಟವು ನಿರಾಕರಿಸಿದೆ.

ತಾಲಿಬಾನ್ ಅಧಿಕಾರಿಗಳ ಜತೆ ಯಾವುದೇ ಮಾತುಕತೆ ನಡೆಸಲು ರೂಪಿಸಲಾದ ಪೂರ್ವಶರತ್ತುಗಳ ಬಗ್ಗೆ ಯುರೋಪ್ ಒಕ್ಕೂಟವು ಸ್ಪಷ್ಟತೆಯನ್ನು ಹೊಂದಿದೆ ಎಂದರು.
ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವುದನ್ನು ಅಲ್ಲಿಂದ ಬರುತ್ತಿರುವ ವರದಿಗಳೇ ಹೇಳುತ್ತಿವೆ. ಆದರೆ ತಾಲಿಬಾನ್‌ನ ಕೃತ್ಯಗಳಿಗಾಗಿ ಅಫ್ಘಾನಿಸ್ತಾನದ ಜನತೆ ಬೆಲೆ ತೆರಬಾರದೆಂಬುದೇ ಯುರೋಪ್ ಒಕ್ಕೂಟದ ಆಶಯವಾಗಿದೆ.

ತಾಲಿಬಾನ್ ಆಡಳಿತದ ಬಳಿಕ ಅಫ್ಘಾನಿಸ್ತಾನಕ್ಕೆ ವಿದೇಶಿ ನೆರವು ಬಹುತೇಕ ಕಡಿತಗೊಂಡಿದ್ದು, ಆ ದೇಶದ ಆರ್ಥಿಕತೆ ಪಾತಾಳಕ್ಕೆ ಹೋಗಿದೆ. ಚಳಿಗಾಲ ಸಮೀಪಿಸುತ್ತಿದ್ದಂತೆ ಆಹಾರ ವಸ್ತುಗಳ ಬೆಲೆ ಏರಿಕೆ ಹಾಗೂ ನಿರುದ್ಯೋಗ ಸಮಸ್ಯೆ ಉಲ್ಬಣಿಸುವುದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ಹೇಳಿದರು.

ಅಫ್ಘಾನಿಸ್ತಾನದಲ್ಲಿ ಭೀಕರವಾದ ಮಾನವೀಯ ಹಾಗೂ ಸಾಮಾಜಿಕ ಆರ್ಥಿಕ ಪತನ ಉಂಟಾಗುವುದನ್ನು ತಪ್ಪಿಸಲು ಯುರೋಪ್ ಒಕ್ಕೂಟವು ನೆರವು ಪ್ಯಾಕೇಜ್‌ನ್ನು ಘೋಷಿಸಿದೆ.

ಇಟಲಿಯ ಆತಿಥ್ಯದಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಯುರೋಪಿಯನ್ ಕಮಿಷನ್‌ನ ಅಧ್ಯಕ್ಷ ಉರ್ಸುಲಾ ವಾನ್‌ ಡೆರ್‌ಲಿಯೆನ್ ಅವರು ಈ ಘೋಷಣೆ ಮಾಡಿದ್ದಾರೆ.

ಅಫ್ಘಾನಿಸ್ತಾನದ ಕಾಬೂಲ್‌ನ ಹೊಟೇಲ್‌ನಿಂದ ತಕ್ಷಣ ಹೊರಡುವಂತೆ ಯುನೈಟೆಡ್‌ ಸ್ಟೇಟ್ಸ್‌ ಹಾಗೂ ಬ್ರಿಟನ್‌ ತನ್ನ ನಾಗರಿಕರಿಗೆ ಸೂಚನೆ ನೀಡಿದೆ. ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಮಸೀದಿಯೊಂದರ ಮೇಲೆ ಬಾಂಬ್‌ ದಾಳಿ ನಡೆದು ಈ ದಾಳಿಯ ಹೊಣೆಯನ್ನು ಐಎಸ್‌ಐಎಸ್‌ ಗುಂಪು ಹೊತ್ತ ಬಳಿಕ ಈ ಎಚ್ಚರಿಕೆಯನ್ನು ಯುಎಸ್‌ ಹಾಗೂ ಬ್ರಿಟನ್‌ ಕಾಬೂಲ್‌ನಲ್ಲಿ ಇರುವ ತನ್ನ ನಾಗರಿಕರಿಗೆ ನೀಡಿದೆ.

ಅಫ್ಘಾನಿಸ್ತಾನದಲ್ಲಿ ಯುಎಸ್‌ ತನ್ನ ಸೇನೆಯನ್ನು ಹಿಂದಕ್ಕೆ ಪಡೆದ ಬಳಿಕ ಆಗಸ್ಟ್‌ನಲ್ಲಿ ತಾಲಿಬಾನ್‌ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಬಳಿಕ ಅಫ್ಘಾನಿಸ್ತಾನದಲ್ಲಿ ಹಲವಾರು ಹಲವಾರು ಬಾಂಬ್‌ ದಾಳಿಗಳು ನಡೆದಿದೆ.

ಉತ್ತರ ಅಫ್ಘಾನಿಸ್ತಾನದ ಮಸೀದಿಯೊಂದರಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ದೋಸ್ತ್ ಮೊಹಮ್ಮದ್ ಅವರು ಹೇಳಿರುವ ಪ್ರಕಾರ ಶಿಯಾ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದ್ದು, ದಾಳಿಯಲ್ಲಿ ಬಹುತೇಕರು ಮೃತಪಟ್ಟಿದ್ದಾರೆ. ಸ್ಫೋಟದಲ್ಲಿ ಅಲ್ಪಸಂಖ್ಯಾತ ಸಮುದಾಯದ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ

English summary
G20 leaders gathered Tuesday for a virtual summit focused on addressing the looming humanitarian crisis in Afghanistan, with the EU kicking off proceedings by announcing a one-billion-euro ($1.2-billion-euro) aid package.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X