ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೆಕ್ಸಿಟ್ ಗೆ ಜ. 31ರ ತನಕ ಕಾಲಾವಕಾಶ ನೀಡಿದ ಯುರೋಪಿಯನ್ ಒಕ್ಕೂಟ

|
Google Oneindia Kannada News

ಬ್ರಸೆಲ್ಸ್, ಅಕ್ಟೋಬರ್ 28: ಯುರೋಪಿಯನ್ ಒಕ್ಕೂಟವು ಸೋಮವಾರ ಬ್ರೆಕ್ಸಿಟ್ ಗೆ ಮುಂದಿನ ವರ್ಷದ ಜನವರಿ 31ನೇ ತಾರೀಕಿನ ತನಕ ಕಾಲಾವಧಿ ವಿಸ್ತರಿಸಿದೆ. ಇನ್ನೇನು ಮೂರು ದಿನದಲ್ಲಿ ಬ್ರೆಕ್ಸಿಟ್ ಅಂತಿಮವಾಗಬೇಕಾಗಿತ್ತು. ಇದೀಗ ಅವಧಿ ವಿಸ್ತರಣೆ ಆಗಿದೆ.

ಯುರೋಪಿಯನ್ ಕೌನ್ಸಿಲ್ ನ ಅಧ್ಯಕ್ಷ ಡೊನಾಲ್ಡ್ ಟಸ್ಕ್ ಟ್ವಿಟ್ಟರ್ ನಲ್ಲಿ, ಯುರೋಪಿಯನ್ ಒಕ್ಕೂಟದ ಇಪ್ಪತ್ತೇಳು ದೇಶಗಳು ಯು. ಕೆ. ಮನವಿಯನ್ನು ಒಪ್ಪಿಕೊಂಡಿವೆ. ಬ್ರೆಕ್ಸಿಟ್ ಗೆ ಮುಂದಿನ ವರ್ಷದ ಜನವರಿ 31ರ ತನಕ ವಿಸ್ತರಣೆಗೆ ಒಪ್ಪಿವೆ. ಲಿಖಿತ ಪ್ರಕ್ರಿಯೆ ಮೂಲಕ ನಿರ್ಧಾರ ಅಧಿಕೃತಗೊಳಿಸಲಾಗುವುದು ಎಂದಿದ್ದಾರೆ.

ಬ್ರೆಕ್ಸಿಟ್: ಶನಿವಾರದಂದು ಅಂತಿಮ ಅನುಮೋದನೆ ಎಂದ ಪ್ರಧಾನಿ ಬೊರಿಸ್ಬ್ರೆಕ್ಸಿಟ್: ಶನಿವಾರದಂದು ಅಂತಿಮ ಅನುಮೋದನೆ ಎಂದ ಪ್ರಧಾನಿ ಬೊರಿಸ್

ಇದರ ಅರ್ಥ ಜನವರಿಯೊಳಗೆ ಬ್ರೆಕ್ಸಿಟ್ ಒಪ್ಪಂದಕ್ಕೆ ಯು. ಕೆ. ಪ್ರಧಾನಿ ಬೋರಿಸ್ ಜಾನ್ಸನ್ ಬರಬಹುದು. ಅದಕ್ಕೆ ಯಾವ ತಕರಾರು ಇರುವುದಿಲ್ಲ. ಅಕ್ಟೋಬರ್ 31ಕ್ಕೆ ಬ್ರೆಕ್ಸಿಟ್ ಗೆ ಅಂತಿಮ ದಿನ ಆಗಿತ್ತು. ಅದಕ್ಕೆ ಸಂಬಂಧಿಸಿದಂತೆ ಸಹಿ ಹಾಕಲು ಯುರೋಪಿಯನ್ ಒಕ್ಕೂಟದ ಅಧಿಕಾರಿಗಳು ಸೇರಿದ್ದ ವೇಳೆ ಟಸ್ಕ್ ಈ ಘೋಷಣೆ ಮಾಡಿದ್ದಾರೆ.

Europe Union Approves Brexit Extension Up To January 31, 2020

ಯುರೋಪಿಯನ್ ಒಕ್ಕೂಟದಿಂದ ಹೊರಗೆ ಬರಲು ಯು. ಕೆ.ಗೆ ಇದ್ದ ಗಡುವು ಕಳೆದ ಮೂರು ವರ್ಷದಲ್ಲಿ ಇದು ಎರಡನೇ ಬಾರಿಗೆ ಮುಂದಕ್ಕೆ ಹೋಗಿದೆ. ಇನ್ನು ಇದೇ ವಿಚಾರಕ್ಕೆ ಡಿಸೆಂಬರ್ ಹನ್ನೆರಡನೇ ತಾರೀಕು ಚುನಾವಣೆ ನಡೆಯಬೇಕು ಎಂದು ಜಾನ್ಸನ್ ಬಯಸಿದ್ದಾರೆ. ಆದರೆ ಈ ತೀರ್ಮಾನಕ್ಕೆ ಮೂರನೇ ಎರಡರಷ್ಟು ಜನಪ್ರತಿನಿಧಿಗಳ ಬೆಂಬಲ ಸಿಗುವ ಸಾಧ್ಯತೆ ಇಲ್ಲ.

ಇನ್ನು ವಿರೋಧ ಪಕ್ಷಗಳು ಚುನಾವಣೆಯು ಡಿಸೆಂಬರ್ ಒಂಬತ್ತನೇ ತಾರೀಕು ನಡೆಸಲು ಯೋಜನೆ ರೂಪಿಸುತ್ತಿವೆ.

English summary
President of the European Council, Donald Tusk Monday tweeted that European Union member states have accepted United Kingdom’s request for a Brexit flextension until 31 January
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X